ಮಂಗಳಾಂಬಕೀ ವರಲಕ್ಷ್ಮೀ ಮಂಗಳಂ ಜಯ ಪ
ಅಂಗಜಾದಿ ಪ್ರೇಮಜನನಿ ಭೃಂಗವೇಣಿಯೆ ಜಯ ಅ.ಪ.
ಬಿಂಬರದನವಸನ ಭೂಷ್ಯೆ ಅಂಬುಜಾಂಬಕಿ
ಅಂಬ ಪಾಹಿಮಾಂ ಜಯ 1
ಕುಂಕುಮಾಕ್ತ ಫಾಲಶೋಭೆ ಕಿಂಕಿಣೀರವೆ
ಪಂಕಜಾತ ಶೋಭಮಾನ ಹಸ್ತಪಲ್ಲವೆ ಜಯ 2
ರತ್ನನಿಚಯ ಭಾಸಮಾನ ರತ್ನಕಿಂಕಿಣೀ
ರತ್ನರಾಜಪುತ್ರಿ ಕಮಲೆ ಭಕ್ತವತ್ಸಲೆ ಜಯ 3
ನಿತ್ಯ ನಿನ್ನನು
ಯತ್ನದಿಂದ ಧೇನುನಗರ ವಾಸೆ ಪಾಲಿಸು 4