ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಜೀವ ನಯನೆಯ ಪೂಜೆ ಮಾಡುವ ಬನ್ನಿರೆ ಪ. ಪೂಜೆ ಮಾಡುವ ಬನ್ನಿ ಮೂಜಗದಂಬೆಯ ರಾಜರಾಜೇಶ್ವರಿಯ ಪದರಾಜೀವಗಳಿಗೆರಗಿ ವಿನಯದಿ ಅ.ಪ. ಸನ್ನುತಾಂಗಿಯರೆಲ್ಲರೂ ಬನ್ನಿರೆ ಸಂ ಪನ್ನ ಗುಣಯುತರು ಚಿನ್ನದ ಕಲಶದೋಳ್ ತುಂಬಿದ ಪನ್ನೀರಿಂ ಸೆನ್ನಿಯಂ ತೊಳೆದು ಸಿರಿಪದ ವನ್ನು ಸಂಸ್ಮರಿಸಿ ಹರಿಯನು 1 ಪ್ರೇಮಗೌರವವೆಂಬ ಹೇಮಾಂಬರವ ಭಾಮಿನಿಗಳವಡಿಸುವ ಭಾವರಾಗದ ಕುಂಕುಮ ತಿದ್ದಿಫಾಲದೆ ಭಾವನಾಯೋಗದೊಳ್ ನಲಿಯುತ 2 ಗುರುಗಳಾಣತಿಯಂದದಿ ಶ್ರೀಪಾದದಿ ಶರಣು ಬೇಡಿರೆ ಮೋದದಿ ವರಶೇಷಗಿರೀಶನ ಕರುಣಾರೂಪಿಣಿಯೆನಿಪ ಭರಿತ ಮಾನಸರಾಗಿ ಸಂತತೆ 3
--------------
ನಂಜನಗೂಡು ತಿರುಮಲಾಂಬಾ