ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಿಮ್ಮಾಕ ನಿನಗ್ಯಾಕೆ ಎಲೆ ಎಲೆ ಜಮ್ಮಾಸಿ ಜರ ತಿಳಿಕೊ ಪ ದಿಮ್ಮಾಕ ನಿನಗ್ಯಾಕೆ ಛೀಮಾರಿ ನಿನ್ನ ದಿಮ್ಮಾಕ ಮುರಿಲಿಕ್ಕೆ ಗುಮ್ಮವ್ವ ನಿಂತಾಳೆ ಅ.ಪ ಸೊಕ್ಕಿನಿಂದ ನಡೆವಿ ಮುಂದಿಂದು ಲೆಕ್ಕಕ್ಕೆ ತರದಿರುವಿ ಫಕ್ಕನೊಯ್ದೆಮನವರು ಉಕ್ಕಿನ ಪ್ರತಿಮೆಯ ತೆಕ್ಕೆಯೊಳಾನಿಸಿ ನಿನ್ನ ಒಕ್ಕಲಿಕ್ಕುವರವ್ವ 1 ತಾರತಿಗಡಿ ತುಸು ವಿ ಚಾರಮಾಡಿನೋಡು ಘೋರ ಯಮದೂತರು ಹಾರೆ ಕಾಸಿ ಯೋನಿ ದ್ವಾರದಿ ಸೇರಿಸಿ ಘೋರ ಬಡಿವರವ್ವ 2 ಪಾಮರಳಾದಲ್ಲೆ ಮುಂದಿನ ಕ್ಷೇಮವ ಮರೆತಲ್ಲೇ ಭೂಮಿಸುಖಕೆ ಮೆಚ್ಚಿ ತಾಮಸದಲಿ ಬಿದ್ದು ಸ್ವಾಮಿ ಶ್ರೀರಾಮನ ಪ್ರೇಮಕ್ಕೆ ದೂರಾದಿ 3
--------------
ರಾಮದಾಸರು
ನಂಬಿದೆ ನಿನಪಾದ ಅಂಬುಜಾಕ್ಷನ ಪ್ರಿಯಬೆಂಬಿಡದಲೆ ಯೆನ್ನ | ಕಾಯೋ |ಬೆಂಬಿಡದಲೆ ಯನ್ನ ಕಾಯೆಂದು ನಿನ್ನನುಹಂಬಲಿಸೂವೆ ಮೋಹನ್ನರಾಯಾ ಪ ದೋಷರಾಶಿಯನೀಗಿ | ದಾಸನ್ನ ಮಾಡಿದಋಷ್ಯಂಶರಾಗಿಹ ನಿಮ್ಮಾ |ಋಷ್ಯಂಶರು ವಿಜಯ ದಾಸರ ಪ್ರೇಮಕ್ಕೆಆಶ್ರಯನಾಗಿಪ್ಪ ಮೋಹನ್ನ 1 ಹೆಮ್ಮೆಯ ಪಡುವೆ ನಾ ನಿಮ್ಮವರವನೆಂದುದುರ್ಮಮತೆಯ ನೀಗೋ ಎನ್ನಾ |ದುರ್ಮಮತೆಯು ನೀಗಿ | ಭರ್ಮಗರ್ಭನ ಪಿತನಪೇರ್ಮೆ ದೊರಕಿಸೊ ಎನಗೆ ಮುನ್ನಾ 2 ಅಂಬುಜಾಂಬನಂಘ್ರಿ | ಅಂಬುಜ ತೋರೆಂದುಹಂಬಲಿಸಿ ಬೇಡುವೆ ನಿನಗೆ |ಹಂಬಲಿಸಿ ಬೇಡುವೆ | ಶಂಬರಾರಿಯ ತೇಜನಂಬಿ ಬಂದಿಹೆ ನಿನ್ನ ಅಡಿಗೇ 3 ವಿಷಯಧುಯ್ಯಲಿನಿಂದ | ಕ್ಲೇಶವಧಿಕವಯ್ಯ ವಿಷದಂತೆ ಕಾಣಿಸೊ ಜೀಯ |ವಿಷದಂತೆ ಕಾಣಿಸಿ | ಶೇಷವಿಲ್ಲಾಧಾಂಗೆ |ದೋಷವಳಿಸಿ ಕಾಯೊ ಜೀಯಾ 4 ನಿನ್ನ ವಂಶಜನಾಗಿ | ನಿನ್ನವರವನಾಗಿಉನ್ನಂತ ಮಹಿಮ ಶ್ರೀಹರಿಯಾ |ಉನ್ನಂತ ಮಹಿಮನು | ಅನ್ನಂತನ ಪಾದಕಾಣದಿದ್ದವನಿರೆ ವ್ಯರ್ಥ 5 ಪಂಚಾಶದ್ವತ್ಸರ | ಹಂಚಿಪೋಗುವ ಮುನ್ನಪಂಚರೂಪಾತ್ಮಕ ಹರಿಯಾ |ಪಂಚರೂಪಾತ್ಮ ವಿ | ರಿಂಚಿಪಿತನ ಪಾದಹಂಚಿಕಿಂದಲಿ ತೋರೊ ಮೋಹನ್ನ 6 ಉರುಗಾದ್ರಿವಾಸ ವಿಠಲಾತ್ಮಕನು ಶಿರಿಗುರುಗೋವಿಂದ ವಿಠ್ಠಲನ |ಗುರಗೋವಿಂದ ವಿಠಲನ ಚರಣಾರವಿಂದವತೋರಿ ಪೊರೆ ನಮ್ಮ ಹಿರಿಯಾ 7
--------------
ಗುರುಗೋವಿಂದವಿಠಲರು
ನಾ ಮಾಡಿದತಿಶಯ ಅಪರಾಧ ಅಹಾ ಸ್ವಾಮಿದ್ರೋಹವೆ ಮಾಡಿದೆ ಪ ನೇಮವಿಲ್ಲದೆ ಪಾಪ ಕಾಮಿಸಿ ಮಾಡಿ ಹರಿ ಪ್ರೇಮಕ್ಕೆ ದೂರಾದೆ ಪಾಮರತನದಿ ಅ.ಪ ಗುರುನಿಂದೆ ಮಾಡಿದೆ ಸ್ಮರಿಸಿದೆನನುದಿನ ಸ್ಮರಿಸಬಾರದ ಸ್ತ್ರೀಯರ ಶರಣಜನರು ಕಂಡು ಶಿರವ ಬಾಗದೆ ಮಹ ಗರುವದಿಂ ಚರಿಸಿದೆ ಪರಿಪರಿ ಜಗದಿ 1 ಲಕ್ಷಿಸದೆ ಪರರರ್ಥ ಭಕ್ಷಿಸಿ ಇಲ್ಲೆನುತ ಪಕ್ಷಿಗಮನನ ಸಾಕ್ಷಿಟ್ಟು ಲಕ್ಷದಶಶತಪಾಪ ಲಕ್ಷ್ಯವಿಲ್ಲದೆ ಗೈದು ಶಿಕ್ಷೆಗೆ ಗುರಿಯಾದೆ ಮೋಕ್ಷವನರಿಯದೆ 2 ಪಿತಮಾತೆಯರ ನೂಕಿ ಇತರರ ಜತೆಯೊಳು ಮತಿಗೆಟ್ಟು ಮಮತಿಟ್ಟಿಹೆ ಮಿತಿಯಿಲ್ಲದನೃತ ಕ್ಷಿತಿಯೊಳು ಸರಿಧರ್ಮ ಹಿತಚಿಂತನಿನಿತಿಲ್ಲದತಿಭ್ರಷ್ಟನಾದೆ 3 ಮಣಿದು ದೈನ್ಯೆಂಬರಿಗೆ ಘನಹಾಸ್ಯಗೈಯುತ ಮನವ ನೋಯ್ಸಿದೆ ಬೆನ್ನ್ಹಚ್ಚಿ ಕನಿಕರೆಂಬುದು ಎನ್ನ ಕನಸಿನೊಳಿನಿತಿಲ್ಲ ಮನಸಿನಂತ್ವರ್ತಿಸಿ ಘನಕರ್ಮಿಯಾದೆ 4 ಇಂತು ಪಾಪಿಗೆ ಸುಖವೆಂತು ತ್ರಿಜಗದೊಳು ಕಂತುಜನಕ ಶ್ರೀರಾಮ ಭಕ್ತವತ್ಸಲ ನೆಂಬ ಬಿರುದು ವಹಿಸಿದಿ ಎನ್ನ ದೆಂಥ ತಪ್ಪಿರೆ ಕ್ಷಮಿಸಿ ಸಂತಸದಿಂ ಪೊರೆ 5
--------------
ರಾಮದಾಸರು
ಭಗವಂತನ ಸಂಕೀರ್ತನೆ ಅನುದಿನ ನೆನೆಯಲೊ ಹನುಮನಿಗತಿ ಪ್ರಿಯ ಪರಮ ಪಾವನ ರಾಮನಾಮ ಪ ಇನಕುಲ ಭೂಷಣ ಮುನಿಜನ ತೋಷಣ ಜಾನಕಿರಮಣನ ನಾಮ ಅ.ಪ ಗೌತಮ ಸತಿಯೆ ಪುನೀತಳ ಮಾಡಿ ಪ್ರ- ಖ್ಯಾತಿ ಪೊಂದಿದ ದಿವ್ಯನಾಮ ಶೀತಲ ಕಿರಣ ಭೂಷಣನ ಧನುವ ಮುರಿದು ಸೀತೆಯ ಪೊಂದಿದ ನಾಮ 1 ಜನಕನ ವಚನವನುಳಿಸುವ ನೆವದಲಿ ವನವಾಸ ಮಾಡಿದನ ನಾಮ ವನದಲಿ ಖರದೂಷಣ ಮುಖ ದನುಜರ ಹನನ ಮಾಡಿದ ದಿವ್ಯನಾಮ2 ಶರಭಂಗಮುನಿಗೆ ಪರಮ ಪದವನಿತ್ತ ಪರಮ ಪವಿತ್ರನ ನಾಮ ನಾಸಿಕ ಕರ್ಣ ಮುರಿಸಿದವನ ಶುದ್ಧ ನಾಮ 3 ಭೂಮಿಜೆಯನು ಮೋಸದಿಂದ ಅಗಲಿಸಿದ ಮಾರೀಚನ ಕೊಂದ ನಾಮ ಸ್ವಾಮಿಯ ಪ್ರೇಮಕ್ಕೆ ಮಡಿದ ಜಟಾಯುಗೆ ಅಭಯ ಹಸ್ತವನಿತ್ತ ನಾಮ 4 ಆ ಮಹಾ ಹನುಮನ ಕಾಮಿತದಂತೆ ಮಹೇಂದ್ರ ಸುತನ ಕೊಂದ ನಾಮ ಕಮಲ ಸುಹೃದತನಯನಿಗೆ ಸಾಮ್ರಾಜ್ಯವನಿತ್ತ ನಾಮ 5 ಪರಿಪರಿವಾರದಿಂ ಶರಧಿಯೊಳ್ ಸೇತು ಬಂಧನವ ಮಾಡಿದ ರಾಮನಾಮ ದುರುಳ ರಾವಣ ಮುಖ ರಕ್ಕಸರನೆ ಕೊಂದು ಧರಣಿ ಸುತೆಯ ಕಂಡ ನಾಮ6 ಶರಣವ ಪೊಂದಿದ ಭಕುತ ವಿಭೀಷಣಗೆ ತರುಣಿ ಸೀತೆ ಲಕ್ಷ್ಮಣರಿಂದ ಕೂಡಿ ಪು ಷ್ಪಕವನೇರಿದ ಸಾಧು ನಾಮ 7 ಉರುತರ ತಪದಲಿ ನಿರತನಾದ ತಮ್ಮ ಭರತನ ಉಳಿಸಿದ ನಾಮ ದೊರೆತನವೊಂದಿ ಸಕಲ ಸುಜನರುಗಳಿಗೆ ಪರತರ ಸುಖವಿತ್ತ ನಾಮ 8 ತನ್ನ ಭಕುತರೊಳು ಉನ್ನತನೆನಿಸಿದ ಘನ್ನಮಾರುತಿಗೊಲಿದ ನಾಮ ಪ್ರ ಸನ್ನನಾಗಿ ಸಂತತ ಇವನಿಗೆ ತನ್ನ ಸಹ ಭೋಗ ಸುಖವಿತ್ತ ನಾಮ 9
--------------
ವಿದ್ಯಾಪ್ರಸನ್ನತೀರ್ಥರು
ಮಾರಿ ಬೇರೆಂದೇಕೆ ಹಲುಬುವರು ಜಗದಿ ನಾರಿಯೇ ಮಕ್ಕಮಾರ್ಯೆಂದೆನ್ನಬಾರದೆ ಪ ಹಿತದೋರಿ ಮನಸೆಳೆದು ಮತಿಗೆಡಿಸಿ ವಿಧವಿಧ ದು ಷ್ಕøತ ಪೇಳಿ ಬಂಧುಗಳ ಹಿತವನೆ ಮರೆಸಿ ಸತತ ಬೆನ್ನ್ಹತ್ತಿ ಬಿಡದೆ ಕ್ಷಿತಿಮೇಲೆ ಅತಿಯಾಗಿ ವ್ಯಥೆಬಡಿಪ ಮಾರಿ ನಿಜಸ್ಥಿತಿ ವಿಚಾರಿಸದೆ 1 ಮನೆ ಧನ ಗುಣ ಸುಲಿದು ಘನತೆಯನು ಕೆಡಿಸಿ ಮ ತ್ತನುಕೂಲವನು ಇತ್ತು ತನುಶಕ್ತಿ ಹೀರಿ ಕುಣಿಕುಣಿಸಿ ಜಗದೊಳಗೆ ಬಿನಗುರಲಿ ಬಿನುಗೆನಿಸಿ ಘನ ಬಾಧಿಸುವ ಮಾರಿದಿನಿಸು ಕಾಣದಲೆ 2 ಸ್ವಾಮಿ ಶ್ರೀರಾಮನ ಪ್ರೇಮಕ್ಕೆ ದೂರೆನಿಸಿ ಭುವಿಯೊಳು ಮುಕ್ತಿಕಾಮಿನಿಯ ತೊರೆಸಿ ನೇಮವಿಲ್ಲದ ಕಷ್ಟ ನೇಮಿಯೊಳಳಿಸಲಿಕೆ ಯಮನೊಶಕೆ ಕೊಡುವಂಥ ಈ ಮಾರಿನೊದೆಯದೆ 3
--------------
ರಾಮದಾಸರು
ಸಾಕೊ ರಂಗ ಅರಸುತನ ಯಾಕೊ ಯಾಕೊಗೋಕುಲದ ಗೊಲ್ಲರು ನುಗಿಸಿ ಗಲ್ಲವ ಹಿಂಡಿಕಾಕು ಮಾಡಿದ್ದು ನಿನಗೆ ಬೇಕೊ ಬೇಕೊ ಪ. ರುದ್ರ ಬ್ರಹ್ಮ ಹತ್ಯಾಕಾರ ಕ್ಷುದ್ರ ಬಲೀಂದ್ರನು ಕದ್ದೊಯ್ದ ಸುವರ್ಣ ಮುಕುಟವಕದ್ದೊಯ್ದ ಸುವರ್ಣ ಮುಕುಟವ ಬಲರಾಮ ಮಧ್ಯಪಾನಿ ಎಂದು ನುಡಿದನು ನುಡಿದನು 1 ಮಗನ ಮಗನು ಬಲು ಕೊಂಡೆಗಾರನಾದ ಮಗಳ ಮಗ ನಿನ್ನ ಹಣಿಗಚ್ಚಿದ ಮಗಳ ಮಗ ನಿನ್ನ ಹಣಿಗಚ್ಚಿದ್ದು ಕಂಡುನಗತಾರೊ ನಿನ್ನ ಸರಿಯವರು ಸರಿಯವರು2 ಶುಕ ಪಿತೃದ್ರೋಹಿ ಪ್ರಲ್ಹಾದ ಭ್ರಾತೃದ್ರೋಹಿ ವಿಭೀಷಣಭ್ರಾತೃದ್ರೋಹಿ ವಿಭೀಷಣ ಇವರು ಮುಖ್ಯಪಾತ್ರರೊ ನಿನ್ನ ಕರುಣಕೆ ಕರುಣಕೆ3 ಸ್ವಾಮಿದ್ರೋಹಿ ಅಕ್ರೂರ ಗುರು ದ್ರೋಹಿ ಪ್ರಲ್ಹಾದ ಬ್ರಾಹ್ಮಣರ ದ್ರೋಹಿಗಳು ಯಾದವರು ಬ್ರಾಹ್ಮಣರ ದ್ರೋಹಿಗಳು ಯಾದವರು ನಿನ್ನ ಮುಖ್ಯಪ್ರೇಮಕ್ಕೆ ವಿಷಯರೊ ವಿಷಯರೊ4 ದುರುಳ ಶಿಶುಪಾಲನ ಸಭೆಯೊಳು ಬೈದದ್ದುಸರಿಬಂತೆ ರಾಮೇಶನ ಮನಸಿಗೆ ಮನಸಿಗೆ 5
--------------
ಗಲಗಲಿಅವ್ವನವರು