ಶ್ರೀ ತುಳಸಿ ದೇವಿ
ತಾಯಿ ಶ್ರೀ ತುಳಸೀಯೆ | ಕಾಯೆ ಭಕ್ತರ ಪ್ರೀಯೆಕಾಯೆ ಶ್ರೀಹರಿ ಜಾಯೆ | ತಾಯೆ ವರವ ನೀಯೇ ಪ
ಪಾದ | ತೋಯಜ ಕಾಂಬುವದಾಯವಿತ್ತೆನ್ನ ನೀ | ಪ್ರೀಯದಿಂದಲಿ ಕಾಯೇ ಅ.ಪ.
ಅಮೃತ ಕಲಶಹರಿಯು ಉದುಭವಿಸಲು | ವರ ಧನ್ವಂತ್ರೀಯೂ ||ಹರುಷೋದ್ರೇಕದಿ ನಯನ | ವರಬಿಂದು ಉದುರಲುಶಿರಿ ತುಳಸಿ ಎನಿಸೀದೆ | ಶರಣರ್ಗೆ ಗತಿ ಕೊಡುವ 1
ಓಲಗ ಗೈವರು 2
ಕಲುಷ ಸುಜನ | ಮಲಗಳ ಕಳೆದೂ |ಆಲವ ಭೋದರೆ ಶಾಸ್ತ್ರ | ವಲಿಸಿ ಕೀರ್ತಿಪ ನರಗೆನೆಲೆಯ ಕಾಣಿಪ ತನ್ನ | ಚೆಲುವ ವೈಕುಂಠದಿ 3
ಕರುಣಿಸು ಹರಿಪಾದ | ವರ ಪದ್ಮ ದ್ವಯದಲ್ಲಿನಿರುತ ಭಕುತಿಯನ್ನೆ | ವರಗುಣ ಸಂಪನ್ನೆ |ಕರವೀರ ಪುರದರಿಸಿ | ವರ ಸನ್ನಿಧಾನಕ್ಕೆನಿರುತದಿ ಸತ್ಪಾತ್ರೆ | ಪರಮ ಪಾವನ ಗಾತ್ರೆ 4
ಹಂಬಲೊಂದೆನಗುಂಟು | ಜಾಂಬುವತಿಯೆ ತುಳಸಿಇಂಬಿಟ್ಟು ಸಲಹುವೆ | ನೆಂಬ ಮತಿಯು ಇರೇ |ಬಿಂಬನು ಗುರು ಗೋ | ವಿಂದ ವಿಠಲ ಪಾದಅಂಬುಜದ್ವಯ ತೋರಿ | ಸಂಭ್ರಮದಲ್ಲಿ ಇರಿಸೆ 5