ದಾಸನು ನಾ ನಿನ್ನಯ ಬೇಸರಿಸದ ಸೇವಾ
ವಾಸುದೇವನೆ ಮಾಡುವ ಮನವಾ
ವಾಸುಕಿಶಯನ ನೀ ನೀಡು ದೃಢವಾ ಪ
ಭಾಸುರಾಂಗಿಯ ಶ್ರೀಶನೆ ಬಡ
ದಾಸನ ಸೇವೆಯು ಮನಕ್ಹ್ಯಾಂಗೆ ಬಂತು
ಶ್ರೀಶನ ಕೌಸ್ತುಭಕೆ ಆಶೆ ತಂತು ಅ. ಪ.
ಅನುಗಾಲದ ನಿನ್ನ ನಾಮದ ಸ್ಮರಣೆಯಾ
ಮನಸಿಜ ಪಿತಗೆ ಮೆಚ್ಚು ಬಾ
ಧ್ಯಾನ ಕೇಳಲು ಕಿವಿ ನಿಮಿರಿಸಿದಾ
ಘನ ಪ್ರಲ್ಹಾದನ ಸ್ಮರಣೆಗೆ ನಿಂತಿರ್ದಾ-
ಘನ ಸಂಪ್ರೀತನ ಎನ್ನೊಳ್ಯಾಂಗ ಕರುಣಿಸಿದಾ
ಮೇಣ್ ಕರಣದಿಂದ ಗಾಯನ ಎನ್ನಯ ಕಾಯಜ ಪಿತಾ
ನಿನಗೆ ಶ್ರಾವ್ಯವಾದುದು ಅರಿಯೆನು ನಾ 1
ಮೇಣ್ ಪ್ರೀಯವಾದುದು ಹರಿಯೇ ಸುರ
ಮಾನಿಯೆ ಮಾಯೆಯ ಹರಿದು ರಕ್ಷಿಸೇಯಾ
ನಿನ್ನ ಮನಕಾನಂದವಾಗುವುದಯ್ಯಾ 2
ಮತಿವಂತನೆ ನೀ ಮಾಡುವ ಹರಿಪೂಜೆ
ಚಿತ್ತಜಪಿತ ಹರಿಗಾಯ್ತು ಕೇಳ್ ಮುದದಿ ಹೃದಯ ತುಂಬೀತು
ಅತಿ ಮಾನಿನಿಯೆ ವಿಧಿಪೂಜಿತನಿಗೆ ಸರಿ
ಪಾತೆನ್ನ ಪೂಜೆಯಾಯ್ತು ಶ್ರೀ-
ಪತಿ ಶ್ರೀಹರಿಯ ಮನಕೆ ಬಂದೀತು 3
ಮಾನವ ನಿನ್ನಯ ಹರಿಧ್ಯಾನವ ರಮಾಧ-
ವನು ತಾ ಕೈಕೊಂಡಾ
ತನ್ನ ಹೃದಯಾರವಿಂದದೆಡೆಗೆ ಸೆಳೆಕೊಂಡಾ
ಮುನಿಶುಕ ಮುಖ್ಯರ ಧ್ರುವಾದಿ ಭಕ್ತರಾ
ಮನಗೊಂಡ ಹರಿಯೆನ್ನ ಧ್ಯಾನಕಿಂಬುಗೊಂಡಾ
ಮನದೊಳಗೆಂತು ಆತುಕೊಂಡಾ 4
ಪುರುಷೋತ್ತಮ ಹರಿ ಪರಮ ದಯಾರ್ಣವ
ಕರುಣದಿ ನಿನ್ನ ಕೈಪಿಡಿದಾ ನಿಜದಾಸನೆಂದೊಡಬಡಿದಾ
ವರಮಹಾಲಕುಮಿಯೆ ಸಿರಿಹರಿಸತಿಯೆ
ಅನುದಿನ ಎನ್ನ ಮನದಿ ನೆಲೆಸೆ 5