ಒಟ್ಟು 16 ಕಡೆಗಳಲ್ಲಿ , 3 ದಾಸರು , 15 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(3) ರೇವಣ್ಣ ಸಿದ್ದೇಶ್ವರ ಯತಿಗಳು ಬೆಂಗಳೂರು ಭೇಟಿ ಯೋಗಿಶೇಖರನಾಗಿ ಬೆಳಗುವ ಜಗದೊಳಗೆ ತಾ ನಿಜ ಪ ನಾಗಭೂಷಣನಡಿಗಳಂ ಪಿಡಿದಾಗ ಹೊಂದಿದನದ್ವಯಂ ಪದ ಜೋಗಿ ಜಂಗಮದೊಡೆಯ ನಮ್ಮಯ ರೇವಣಾಶಿದ್ಧೇಶ್ವರನೆ 1 ತಾನಿಹ ಶೈವಗಿರಿಯೊಳು ದೀನಜನಮಂದಾರ ಮುನಿಮಹ 2 ಅಂತರಾತ್ಮನೊಳಿಂತು ಹೊಂದಿಪ ರೆಂತು ಲೋಕೋಪಕಾರ ರಾಗಿಯು ಅಂತು ದಯಮಾಡಿರುವ ನೋಡಿ ಅ ನಂತ ಮಹಿಮನೆ ರುದ್ರಮುನಿ 3 ತತ್ಸ್ವರೂಪನು ತೋರಿ ಭುವನಕೆ ಸತ್ಸಹಾಯಕನಾದ ನಮ್ಮಯ ಮತ್ಸ್ಯಮೂರುತಿ ಪ್ರಿಯನೆ ಮುನಿಮಹಾ 4 ತಿರ್ಗಿ ಲೋಕಕೆ ಬಾರದಂದದಿ ಸ್ವರ್ಗಲೋಕದೊಳಿರುವ ಮುನಿಮಹಾ 5 ಭುವನದೊಳಗವತರಿಸಿಯಿರುತಿಹ ಸುಮನ ಸತ್ಯಸಮಾಜ ಭೋಜನೆ ತಾ ನಿವನೆನೆ ಹೊಳೆವ ಮುನಿಮಹಾ 6 ಬರುವ ಭಕ್ತರಿಗಾಗಿ ತನ್ನೊಳ ಗಿರುವ ಪರತತ್ವವನು ಭಕ್ತರ ಕರದುಕೊಡುವುದು ಕಂಡುಕೊಳ್ಳಿರೊ ತರುಣಿಮಣಿಯನು ಧರಸಿ ಧರೆಯೊಳು 7 ಪ್ರಣವಲಿಂಗದೊಳೈಕ್ಯಮಾಗುವ ಕಂಚಿವರದನ ಪ್ರೀಯನಾಗಿಯು 8
--------------
ಚನ್ನಪಟ್ಟಣದ ಅಹೋಬಲದಾಸರು
ಅರುಣಾನುಜ ವೈರಿಯಾ ಭರಣನ ಮಿತ್ರನ ತೋರೇ ಪ ಉರಗಾ ಹರಿಧ್ವಜಪಿತನಾ | ಅರಿಪಿತ ಸಂಹಾರಕನಾ | ಗಿರಿಜಾವಲ್ಲಭರಿಯನಾ | ಶರಗರ್ಭನನುತನ ತೋರೆ 1 ಶೂರರಾಯನಂದನಾ | ಅರಸಿ ಯಣ್ಣನ ಮದನನಾ | ಮೈರೋಚನ ಆತ್ಮಜನಾ | ವರದನ ತಂದು ತೋರೆ 2 ಗಿರಿ ರಿಪುತನು ಸಂಭವನಾ | ಅರಸಿಯಣ್ಣನನುಜನಾ | ಗುರುವರ ಮಹಿಪತಿ ಪ್ರೀಯನಾ | ಹರಿಣಾನೇತ್ರನೀ ತೋರೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎಲೆ ದೇವಿ ಇಂತು ಚಿಂತೆಯು ಯಾಕ| ಸುಲಭದಿ ತಂದು ತೋರುವೆ ನಿನ್ನರಸನಾ ಪ ನಳಿನಗಳಲಿ ಅಪರಾಧವಾಯಿತೆಂದು| ಮುಳಿದು ಬಿಂಕದಿ ಅಳಿಮೊರೆದು ತಾನೆದ್ದು| ಕಲಸಾರುವೇನೇ ನಿನ್ನಯ ತನುಗುಪವ| ತೊಲಗಿಬಿಟ್ಟು ನಿಲ್ಲುವನೇನೇ ರಂಗಾ1 ಹಣ್ಣಾಗಿ ರಂಜಿಸತಿಹಾ ಚೂತದ ಫಲವನ್ನು| ತ್ಯಜಿಸಿ ಬಂದ ತಪ್ಪಾಯಿತೆಂದು| ಉಣಲೋಲ್ಲದೇ ಶುಕಬಿಟ್ಟು ಪೋಪದೇನೇ| ಪೊಂಬಣ್ಣಾಧರಸವಿಯಾ ಬಿಟ್ಟು ನಿಲ್ಲುವನೇ2 ಘನ್ನ ಚಿಂತೆಯಬಿಟ್ಟು ಹರುಷದಲಿರು ತಾಯೆ| ಇನ್ನು ನಾ ಪೋಗಿ ನಾನಾ ಪರಿಯಿಂದಾ| ನಿನ್ನ ಬಳಿಗೆ ಒಪ್ಪಂತೆ ಮಾಡುವೆನೆ ಸಂ| ಪನ್ನ ಕೀರುತಿ ಮಹಿಪತಿ ಸುತ ಪ್ರೀಯನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಚರಣಾರಾಧಿಸೋ ಚಾರುತರ ಭೂ ವರಹ ವೇಂಕಟೇಶನಾ ಉರಗಾದ್ರಿವಾಸನಾ ವರ ಶ್ರೀನಿವಾಸನಾ ಪ ದುರಿತಕೋಟಿಯ ಹರಿವ ಸ್ವಾಮಿ ಪು ಷ್ಕರಿಣಿ ತೀರ ವಿಹಾರನಾ ಸಿರಿಮನೋಹರನಾ ಪರಮ ಉದಾರನಾ 1 ವಾಹನೋತ್ಸವದಲ್ಲಿ ಪರಿಪರಿ ಮಹಿಮೆ ಜನರಿಗೆ ದೋರ್ವನಾ ಸಹಜದಿ ಮೆರೆವನಾ ಬಹಳ ಪೂರ್ವನಾ 2 ನಡೆದು ಯಾತ್ರೆಗೆ ಬರಲು ಹಯಮೇಧ ಅಡಿಅಡಿಗೆ ಫಲ ನೀವನಾ ಬಿಡದೆವಾ ಕಾವನಾ ಮೃಡಜರ ದೇವನಾ3 ಸಕಲರಿಗೆ ನೈವೇದ್ಯನುಣಿಸುವಿ ಅಖಿಳ ಸಂಶಯ ಹಾರಸೀ ವೈಕುಂಠ ಸೇರಿಸೀ ಸ್ವಕರದಿ ತೋರಿಸೀ 4 ಇಂದು ನಮ್ಮನಿ ದೈವವಾಗಿಹ ತಂದೆ ಮಹಿಪತಿ ಪ್ರೀಯನಾ ಸುಂದರ ಕಾಯನಾ ವೃಂದಸುರ ಧ್ಯೇಯಾನಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಡೀರೇ ನೋಡುವಾ ಗುರುಮೂರ್ತಿಯಾ | ಮಹಿಪತಿಯಾ | ತಡೆಯದೇ ಸಖಿಯರು ಪ ಪೊಡವಿಯೊಳಾನಂದ ಸ್ಥಿತಿಯಾ | ವರ ಯತಿಯಾ | ಅಡಿ ಕಮಲವ ಪಿಡಿದು | ಜಡಿದಿಟ್ಟು ಸದ್ಭಾವರತಿಯಾ | ಕರ ಮುಗಿದು 1 ಷೋಡಶ ಪರಿಸೇವೆ ಮಾಡುವಾ | ಪಾಡುವಾ | ನೋಡದೆಲೆ ಎಡ ಬಲವಾ | ಪಡ ಕೊಂಬಷ್ಟು ಸುಖವಾ 2 ಶರಣ ಬಂದ ವರಂಗೀಕಾರವಾ |ಮಾಡಿ ಹೊರವಾ | ದೋರಿ ಸನ್ಮಾರ್ಗ ಪೂರ್ಣಾ | ವರನಿಗಮದರ್ಥ ಸಾರವಾ | ನೋಡಿ ಬೀರುವಾ | ಕರುಣಿಪ ಕೃಷ್ಣನ ಪ್ರೀಯನಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೆನಿ ಮನವೇ ನೀ ಮುಕುಂದನ ಪ ನೆನಿ ಮನವೇ ನೀ ಮುಕುಂದನಾ| ಅಜ ವಂದ್ಯನಾ 1 ಸಿರಿಲಕ್ಷುಮಿ ಮನೋಹರನಾ| ಸುರಾಧಾರನಾ ಯದುವೀರನಾ2 ದುರಿತ ನಿವಾರಿಯಾ| ವರ ಶೌರಿಯಾ ಮುರವೈರಿಯಾ 3 ಮನೋಹರ ಮೂರುತಿ ರಾಮನಾ| ಘನ ಶ್ಯಾಮನಾನಂತ ನಾಮನಾ 4 ಗುರು ಮಹಿಪತಿ ಸುತ ಪ್ರೀಯನಾ| ಸ್ಮರ ನೈಯನಾ ಕೃಷ್ಣರೇಯನಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೆನೆಯೋ ನೀ ಎನ್ನ ಮನವೇ| ಅನುಪಮ್ಯ ಶ್ರೀ ಮುಕುಂದನಾ| ಚಕೋರ ಸುನಕ್ಷತ್ರೇಶ ಗೋಪಾಲನಾ| ಶ್ರೀಲೊಲನಾ ನಂದಬಾಲನಾ ಪ ವರಭಕ್ತ ಧೃವಗ ಸ್ಥಿರಪದ ವಿತ್ತನಾ| ಧರಣಿಯ ಭಯಹರ ಪುರುಷೋತ್ತಮನಾ| ಉರಗ ತುಳಿದವನಾ| ಉರಗಶಯನುರಗಾ ಭರಣನ ಸಖನಾ| ಸುನಖನ ಅಬ್ಬ ಮುಖನಾ 1 ದುರಿತ ನಿವಾರಕನಾ| ಕರುಣಾದೀ ಅಹಲ್ಯಯ ನುದ್ಧರಿಸಿದನಾ ಸರಸಿಜ ಸಮಪದ ಸರಸಿಜನಾಭನಾ| ಸರಿಸಿಜ ಪಾಣಿಯ ಸರಸಿಜ ನೇತ್ರನಾ 2 ಸುಚರಿತ್ರನಾ ಮುನಿಸ್ತೋತ್ರನಾ| ಗುರುವರ ಮಹಿಪತಿ ನಂದನ ಜೀವನಾ| ಗಿರಿವರಧಾರನಾ ಕಂಸಾಸುರ ಮರ್ಧನಾ| ಶರಧಿ ನಿವಾಸನಾ| ಹರಿಶತ ಕಿರಣ ಹರಿಸುತ ಪ್ರೀಯನಾ| ಸ್ಮರಸೈಯ್ಯನಾ ಕೃಷ್ಣರೇಯನಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡಮ್ಮಾ ಶ್ರೀ ವಾಸುದೇವನಾ ನಮ್ಮ ಬೇಡಿದಿಷ್ಟಾರ್ಧವ ನೀವನಾ ಪ ಪರ ಬ್ರಹ್ಮ ರೂಢಿಗೆ ನರಲೀಲೆಯಾಡುವ ಬಗೆಯಾಅ.ಪ ದೇವರ ಅನುಮತ ನೋಡಿದಾ ಅಂವ ದೇವಕಿ ಉದರದಿ ಮೂಡಿದಾ ಪಾವನ ಗೋಕುಲ ಮಾಡಿದಾ ಸುಖ ದೇವಿ ಯಶೋದೆಗೆ ನೀಡಿದಾ ಆವಾವ ಪರಿಯಲಿ ನೋವ ಬಗೆಯ ಬಂದು ಗಾಲಿಲ ಅಸುರರ ಜೀವನ ವಳಿದಾ 1 ಗೊಲ್ಲತೆಯರ ಮನಮೋಹಿಸಿ ಕದ್ದು ಅಲ್ಲಿಹ ಪಾಲ್ಬಣ್ಣೆ ಸೇವಿಸಿ ಬಿಲ್ಲ ಹಬ್ಬದ ನೆವತೋರಿಸಿ ಪೋಗಿ ಮಲ್ಲಚಾಣರರಾ ಭಂಗಿಸೀ ಬಲ್ಲಿದ ಕಂಸನ ಮಲ್ಲಯದ್ಧಗಳಿಂದ ಘಲ್ಲಿಸಿದನು ಜನಚಲ್ಲಿ ಬಡಿದನಾ 2 ನೀರೊಳು ಕಟ್ಟಿಸಿ ಮನೆಯನು ಬಂಗಾರದ ದ್ವಾರಕಾ ಪುರವನು ಸೇರಿಸಿ ಯದುಕುಲದವರನು ರುಕ್ಮಿ ಣೀ ರಮಣಲ್ಲಿಗೆ ಮರೆದನು ಸಾರಿದ ಶರಣರಾ ತಾರಿಸಿ ಹೋದನು ಮಹಿಪತಿ ನಂದನ ಪ್ರೀಯನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಂದನಮ್ಮಾ ಬಂದನಮ್ಮಾ ನಮ್ಮ ರಂಗನು| ಇಂದು ನಮ್ಮ ಪೂರ್ವಾರ್ಜಿತಫಲ ವದಗಿ ಬಂದಿತೆಂದು ಪ ಬಿಸಜಾಸಖ ಶತಕೋಟಕಿ ಸಮತೇಜ ದೊಪ್ಪತಿಹನಖವು| ಅಂದುಗೆ ಗೆಜ್ಜೆಯಿಂದ ಘಲುಘಲುಕೆನುತಾ 1 ಉಟ್ಟ ಪೀತಾಂಬರದ ಮ್ಯಾಲ ವಡ್ಯಾಣವನಿಟ್ಟುಕೊಂಡು| ಕಟ್ಟಿದ ಸು ಕಿಂಕಿಣಿಗಳಿಂದ ಝಣ ಝಣ ಕೆನುತಾ2 ಕರ ಕಡಿಗ ವಂಕಿ ತೋಳ ತಾಯಿತ ಕೇಯೂರವನು| ಕೌಸ್ತುಭ ವನಮಾಲೆಯಿಂದ ಪೊಳವುತಾ 3 ಕುಂಡಲ ಕದಪು ಚಲ್ವಿನಿಂದಾ| ದಾಳಿಂಬ ದಶನಾ ಸುನಶಿಕದೆಸಳು ಕಣ್ಣಿಂದಾ 4 ಸ್ಮರನಾಥನು ಸೋಲಿಪ ಭ್ರೂಲತೆಯು ಫಣಿಯಲ್ಲಿಕ| ಸ್ತೂರಿಯನಿಟ್ಟು ಹರಿಮಯ ಕಿರೀಟಕಾವಳಿಮ್ಯಾಲಿರಿಸಿಕೊಂಡು5 ಪಿಡಿದು ಬಿಂಬಾಧರಕತಂದು| ಪರಿ ಪರಿಯಲೂದುತಾ ಮಹಿಪತಿ ನಂದನ್ನ ಪ್ರೀಯನಾ 6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭಕ್ತಿಲೇಸು ಮುಕ್ತಿಗಿಂತಲಿ ಪ ಭಕ್ತಿಲೇಸು ಮುಕ್ತಿಗಿಂತಲಿ | ಭಕ್ತಜನರಾ ಪಾಲಿಸುವನಾ | ಭಕ್ತಿಗೊಲಿದು ಫಣಿಗಣ ಲೋಕದಿ | ಯುಕ್ತಬಲಿಯ ಬಾಗಿಲಲೊಳಿಹ ರಂಗಯ್ಯನಾ | ಸುರಪ್ರೀಯನಾ ಮುನಿಧ್ಯೇಯನಾ 1 ಸರಸಿಭವನ ಕಠಾರದಿಂದ ಲೋಗದನಾ | ಅರಸೆನಿಪನಾ ತನುಭವನಾ | ಧರಿಸಿದನಾ | ಅರಸಿಯ ಜನಕನ ಕುಲರಿಯನಿಪನಾ | ಕುವರನ ಸ್ಯಂದನ ವಾಜಿಯನು ಪೊರೆದನಾ | ಗೆಲಿಸಿದನಾ | ಮೆರಿಸಿದನಾ 2 ವನರುಹಸಖನ ಪೊಂದೇರ ನಡೆಸುತಿಹನಾ | ಅನುಜನಾ ಅರಿಗಳಾ ಹರಿಯ ನಂದನನಾ | ಘನವಾಲದಿಂದ ನೊಂದಿಹ ಪುರದರಸನಾ | ಅನುಜನಾ ಸ್ಥಿರಪದವಿತ್ತು ನುಳುಹಿದನಾ | ನಿಲಿಸಿದನಾ | ಕಾಯ್ವನಾ 3 ಸಿರಿಯ ಮದನಳಿದು ಗುರುಚರಣಕೆ ಹೊಂದಿ | ದೊರಕಿ ನಿತ್ಯದಲಿ ಸಂತುಷ್ಟವಿರುತಾ | ಗುರುವರ ಮಹಿಪತಿ ಸ್ವಾಮಿಯ ಷೋಡಶ | ಪರಿಯಲಿ ತುಳಸಿಯ ತಂದು ಪೂಜೆ ಮಾಡುವ | ಪಾದ ನೋಡುವಾ | ಪಾಡುವಾ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಂಗಳಂ ಶ್ರೀರಂಗಗ ಮಂಗಳಂ ಇಂಗಿತ ಭಕ್ತರ ಅಂಗಸಂಗಾದವಗ ಪ ಸಿರಿತಳಕ ಮಂಗಳ ಕಾಲಿಯ ವರದನಾ ವರನಖಮಂಗಳ ಗಂಗೆ ಪಡಿದನಾ ಚರಣ ಕಮಂಗಳ ಅಹಿಲ್ಯ ಉದ್ಧಾರಗ ನೆರೆಜಂಘಗೆ ಮಂಗಳೆ ಶೊದಾನಂದನಾ 1 ತೊಡೆಗಳಿಗೆ ಮಂಗಳ ಗರುಡ ವಾಹನನಾ ನಡುವಿಗೆ ಮಂಗಳ ಧೃವ ಗೊಲಿದನ ಒಡಲ ಕಮಂಗಳ ಜಗವಳ ಕೊಂಬನಾ ಧೃಡ ನಾಭಿಗೆ ಮಂಗಳ ಬ್ರಹ್ಮ ಪಿತನಾ 2 ಉರ ಸಕ ಮಂಗಳ ಉಪಮನ್ಯು ಪ್ರೀಯನಾ ಸಿರಿವಕ್ಷಕ ಮಂಗಳ ಭೃಗು ರಕ್ಷನಾ ಕರಗಳಿಗೆ ಮಂಗಳ ಕರಿರಾಜ ವರದನಾ ಕೊರಳಿಗೆ ಮಂಗಳ ತುಳಸಿ ಧರನಾ 3 ಇದು ಶೃತಿಗೆ ಮಂಗಳ ಹನುಮನೇ ಕಾಂತನಾ ವದನಕ ಮಂಗಳ ವಿದುರ ಗೊಲಿದನಾ ಅದೇ ಫ್ರಾಣಕೆ ಮಂಗಳ ಪ್ರಲ್ಹಾದ ವತ್ಸಲನಾ ಮದನ ಮೋಹನನಾ 4 ಸಿರಸಕ ಮಂಗಳ ಫಣಿರಾಜಶಯನನಾ ದೊರೆತನಕ ಮಂಗಳ ಶ್ರೀ ಭೂರಮಣನಾ ಗುರುತನಕ ಮಂಗಳ ಉದ್ಬವತಾರಕನಾ ಕರುಣಿಗೆ ಮಂಗಳಾರ್ಜುನ ಬೋಧನಾ 5 ಪ್ರಭುಗೆ ಮಂಗಳ ಬಲಿ ವಿಭೀಷಣರ ಸ್ಥಾಪನಾ ಅಭಯಕ ಮಂಗಳಾಜಮೀಳ ಪಾಲನಾ ಅಭಿಮಾನಿಗೆ ಮಂಗಳಾ ಪಾಂಚಾಲಿಕಾಯಿದನಾ ಪ್ರಭೆಗೆ ಮಂಗಳಾ ರವಿ ಸೋಮಾತ್ಮಕನಾ 6 ಸಿರಿನಾಮಕ ಮಂಗಳ ನಾರದ ಪ್ರೀಯನಾ ಕ ಮಂಗಲ ಶಿವ ವಂದ್ಯನಾ ಗುರುವರ ಮಹಿಪತಿ ನಂದನಸಾರಥಿ ಬಿರದಿಗೆ ಮಂಗಳಾಂಬರೀಷ ನೊಡಿಯನಾ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರಾಮನಾಮವನು ನೆನಿಯಬಾರದೆ | ನೇಮದಿ ಮನವೆ ಸದ್ಗತಿಯ ತೋರದೆ ಪ ಹೃತ್ತಾಪ ದೂರಮಾಡಿ ಶಾಂತಿಸುಖವಿತ್ತದರಿಯಾ 1 ಜಲದೊಳು ತೇಲಿಸಿದನು ಅಚಲಗಳ | ಸುಲಭದುದ್ದರಿಸಿತು ವಿಪಿನಚಾರಿಗಳಾ 2 ಈ ಮಹಿಯೊಳು ಮಹಿಪತಿ ಪ್ರೀಯನಾ | ನಾಮನಿಧಾನಕ ಸರಿಯ ಕಾಣೆ ನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವಾಸುದೇವ ವಾರಿಜಾಕ್ಷನಾ ಸ್ತುತಿಸು ಮನದಿ ಪ ಸಾಸಿರನಾಮದೊಡೆಯ ಸಕಲಲೋಕಕರ್ತನಾದ ಸುಜನ ಪೋಷಕ ಭಕ್ತವಿಲಾಸ ಅ.ಪ ಪಂಕಜೋದರ ಪರಮ ಪಾವನ ಸರ್ವಜಗವ ಬಿಂಕದಿಂದ ಪೊರೆವ ದೇವನಾ ಶಂಕೆಯಿಲ್ಲದ ದನುಜ ಮರ್ದನನಾದ ತನ್ನ ಕಿಂಕರರÀನು ಬಿಡದೆ ಕಾಯುವಾ ವೆಂಕಟಾದ್ರಿ----ದ ವೇಣುನಾದದಲಿ ಬುಧವಂದ್ಯ ಶಂಕರಾದಿ ದೇವ ದೇವ ಶರಧಿಶಯನ ಶಾಶ್ವತನಾದ 1 -----ಶ್ವ ರೂಪನಾ ಎಂದು ಎಂದಾನಂದ ದಿಂದ ಅನುದಿನ ಚಂದದಿಂದ ---ಸನಾ |----ಭವ ಬಂಧಕವನೆ ಪರಿಹರಿಸುವನಾ ಕಂದ ಕೂಗಲು ಕಂಭದಿಂದಾ ಬಂದ ನಾರಸಿಂಹನ ಮೂರ್ತಿ 2 ----------ಮಹಾನುಭಾವ ಕಂಡ ಮುನಿಗಳಂತರ್ಭಾವನಾ ಕುಂಡಲೀಶÀ ಭೂಷಣ ಪ್ರೀಯನಾಕರ ಘನಾ ಕೋದಂಡಧರ ಶ್ರೀರಾಮನಾದನಾ ಪುಂಡಲೀಕ ವರದಹರಿ-----ತನಾದ ವೇದವೇದ್ಯ ಅಂಡಜನ--------ಹರಿ 'ಹೊನ್ನಯ್ಯ ವಿಠ್ಠಲ’ ನಾದ 3
--------------
ಹೆನ್ನೆರಂಗದಾಸರು
ಶರಣೆನ್ನಿ ಸಾಧುರಿಂಗೆ | ಹರಿ ಮೆಚ್ಚುಪರಮ ಭಾಗವತರಿಂಗೆ ಪ ತೀರ್ಥ ಕ್ಷೇತ್ರಂಗಳಲ್ಲಿ ಮಿಂದು ಘನ | ಯಾತ್ರೆಯನು ಮಾಡಿ ಬರಲಿ | ಧಾತ್ರಿಯಲಿ ಕೆಲವು ದಿನಕೆ ಆ ಪುಣ್ಯ | ವರ್ಥಿ ಬಹುದಯ್ಯ ಜನಕ | ಅರ್ತು ಸದ್ಭಾವದಿಂದ್ಹೋಗಿ ಸಂತರ ಕಂಡ | ಮಾತ್ರದಲಿ ಸರ್ವ ಸುಖ ಇದಿರಿಡುವದೆಂದು 1 ಮೆರೆವ ಭಾಗವತದಲ್ಲಿ ಉದ್ಭವಗೆ | ಹರಿತಾನೆ ಬೋಧಿಸುತಲಿ | ನೆರೆಯೋಗ ಯಾಗ ವೃತವು ಯನ್ನಹಿಡಿ | ಲರಿಯದಿದು ಸಾಂಖ್ಯ ತಪವು | ನಿರುತೆನ್ನ ಸತ್ಸಂಗ ತೋರಿ ಕೊಡುವಂತನ್ಯ | ಧರಿಯೊಳಗ ಸಾಧನಗಳಿಲ್ಲ ಕೇಳೆಂದಾ 2 ಚಲಮೂರ್ತಿ ಸಂತರುಗಳು ನೋಡಲಾ | ಚಲಮೂರ್ತಿ ಪ್ರತಿಮೆಯಗಳು | ನಲಿದವರ ಪೂಜೆಯಿಂದಾ ಪ್ರೀಯನಾಗಿ | ಸಲಹುವನು ಶ್ರೀ ಮುಕುಂದಾ | ತಿಳಿಯ ದೆಂದಿಗೆ ಅಭಾವಿಕ ವರ ಮಹಿಮೆಗಳು | ವಲಿದು ಗುರುಮಹಿಪತಿ ಸುತಗೆಚ್ಚರಿಸಿದಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸ್ಮರಿಸೆನ್ನ ಮನವೇ ಯಾದವ ರಾಯನಾ| ಸರಸಿಜೊವನುತ ಭಕುತರ ಪ್ರೀಯನಾ ಪ ವರನಿಗ ಮೋಯಿದವನಾ ಶೀಳಿ ಎಳಹಿದವನಾ| ಶರಧಿ ಮಥನ ಗೋಸುಗನ ಪೊತ್ತನಾ ಧರಣಿಯಾ ತನ್ನ ಕೋರೆ ದಾಡಿಲಿರಿಸಿದಿಹನಾ| ಶರಣ ಪ್ರಲ್ಹಾದನ ಸುಸ್ಮರಣೆ ಗೊಲಿದನಾ1 ಭೂಸುರೋತ್ತಮನಾಗಿ ದಾನವ ಬೇಡಿದನಾ| ಹೇಸದೇ ಕ್ಷತ್ರಿಯರ ಕುಲ ಕೊಂದನಾ| ವಾಸು-ಕ್ಯಾ ಭರಣನ ಧನುವ ಮುರಿದವನಾ| ವಾಸವಾತ್ಮಜ ಮಿತ್ರ ದೇವಕಿ ಕಂದನಾ2 ಪತಿವೃತೆ ನಾರಿಯರ ವೃತಭಂಗ ಮಾಡಿದನಾ| ಸಿತ ಹಯವೇರಿದ ಶ್ರೀ ಜಗದೀಶನಾ| ಪತಿತ ಪಾವನನಾದಾ ಅನಂತಾವತಾರನ| ನುತ ಗುರು ಮಹಿಪತಿ ನಂದನ ಪ್ರೀನಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು