ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾಯಾ ವಾರವ ನೀಡಿ ಪ್ರೀಯದಿಂದಲಿ ಜನರು ಸ್ತ್ರೀಯರು ಮುದದಿಂದ ಪ ಸಾರುತ ಹರಿದಾಸ ಕೇರಿಯೊಳಗೆ ಬರಲು ಚೋರತನವ ಮಾಡಿ ಚುದಗು ಬುದ್ಧಿಯಲಿಂದ ದ್ವಾರವನಿಡದಿರಿ 1 ಬಂದಾ ಹರಿದಾಸನ ವಂದಿಸಿ ನಿಮ್ಮಯ ಮಂದಿರದೊಳು ಕರೆದು ತಂದಿಗಳೆಂದು ನಲು ವಿಂದಲಿ ಉಪಚರಿಸಿ 2 ಪರಲೋಕ ಬಂಧುಗಳೆ ಕರುಣವ ಮಾಡಿದಿರಿ ಕರ್ಮ ಪರಿಹರವೆಂದು ನಾ ಸಿರ ಬಗೆ ಕೊಂಡಾಡುತಾ 3 ಪತಿಮತೈಕ್ಯವಾಗಿ ಅತಿಶಯ ಭಕುತಿಯಲಿ ಗತಿಗೆ ಸಾಧನವೆಂದು ತಿಳಿದು ಈ ಧರ್ಮಕ್ಕೆ ಪ್ರತಿಕೂಲವಾಗದಲೆ 4 ವಕ್ಕಡತಿ ತಂಡುಲವ ಚಕ್ಕನೆ ನೀಡಲು ಮಕ್ಕಳು ಮರಿಗಳು ಸಹಿತ ನಿತ್ಯಾ ಸುಖವಕ್ಕು ಸಟಿಯಲ್ಲಾ 5 ಇಲ್ಲವೆಂದು ನುಡಿದರೆ ಪುಲ್ಲಲೋಚನವಪ್ಪಾ ಎಲ್ಲ ಕಾಲದಲಿ ನಿಮ್ಮಂಗಣದೊಳು ಇಲ್ಲವೆ ನಿಂತಿಪ್ಪದು 6 ಹಸ್ತು ಹರಿದಾಸ ಬಂದು ಹೊಸ್ತಿಲಿಂದಲೆ ತಿರಿಗಿ ವಿಸ್ತರಿಸುವೆ ಕೇಳು ಹರಿ ತೊಲಗುವಾ ದ್ವಿ ಮಸ್ತಕ ಭುಂಜಿಸುವಾ 7 ಒಂದೊಂದು ಕಾಳಿಗೆ ಒಂದೊಂದು ಕುಲಗೋತ್ರ ಮುಂದೆ ಉತ್ತಮ ದೇಹದಲಿ ಬಂದು ಸುಜ್ಞಾನದಿಂದಲೆ ಲೋಲಾಡುವರು 8 ಹಲವು ಪೇಳುವದೇನು ಸುಲಭಾವೆನ್ನು ಧರ್ಮ ಅಳಿದು ಹೋಗುವದಲ್ಲ್ಲ ಇದನು ವಿಜಯವಿಠ್ಠಲ ಬಲ್ಲ ಮಹಾಫಲವ9
--------------
ವಿಜಯದಾಸ
ರಥವನೇರಿದ ರಥಗಾತ್ರ ಪಾಣಿ | ರಥಪತಿ ದಶರಥ ಸುತ ದಶರಥ ನೃಪ ಭಾಗೀ | ರಥಿ ವಿನುತಾ ಸು | ರಥನಯ್ಯ ಮನೋರಥ ದೇವ ಪ ಕರಿ ಭಯಂಕ ಹರ ಹರಿಣಾಂಕಾ | ಕಿರಣಶತ ಧಿಕ್ಕರಿಸುವ ದೇವಾ || ವರಮಣಿ ಭಕ್ತ ವರದಾಯುದಧಿ ತುರಗವು | ಪರತರ ತಮ ತರರಸ | ಪರಮ ಮಂಗಳ ಪುರುಷ ಪ್ರಧಾನಂ | ಪ್ರವಿಷ್ಠ ಭಾ | ಸುರ ಕೀರ್ತಿಹರ ನಿರುತ ಪ್ರದರು ಸುರಪತಿ 1 ಮಣಿಪ್ರಚುರ ಮುತ್ತಿನ ಮುಕುಟ ಸು | ಫಣಿ ಕಸ್ತೂರಿ ಕಂಕಣ ಕೇಯೂರ ಕಾಂ| ಕೌಸ್ತುಭ ಸೂರ್ಯನಗೆಲ್ಲ್ಲೆ | ವನಮಾಲೆ ಹರಿಮಣಿ ಪದಕ ಪಾ | ವನ ಪೀತಾಂಬರ ಮಿನಗುವ ಕಾಂಚಿ | ಝಣ ಝಣ ಮಹಾ | ಧ್ವನಿ ಚರಣ ಭೂಷಣವಾಗಿಯೂ ಮಾ | ನಿನಿ ಕೂಡಾ 2 ಎತ್ತಿದ ಶ್ವೇತಾತಪತ್ರ ಚಾಮೀಕರ | ವಿತ್ತ ನಭ ತುಳುಕುತ್ತಲಿರೆ ಧ್ವಜ | ಮಾತ್ರ ಬಂದಾಗಿ ತೂಗುತ್ತಿರಲು | ಸುತ್ತಲು ಊದುವ ತುತ್ತುರಿ ಶಂಖ | ವತ್ತಿ ಬಾರಿಸುವ ಮತ್ತೆ ವಾದ್ಯಗಳು | ತುತ್ತಿಸುವ ಮುನಿ | ಉತ್ತಮ ಜನ ಬಾ | ಗುತ್ತ ವಡನೆ ಬರುತಿರಲು 3 ವಸು ರುದ್ರಾದಿತ್ಯ ವಸುಜನರ ಪಾ | ಲಿಸುವೆನೆಂದು ದರಶನವು ಸರಸಿಜಗದಾಧರಿಸಿಕೊಂಡು ಅಷ್ಟ ರಸ ನಾಮಕ ಹರುಷದಿಂದ | ನಸುನಗುತ ನೀಕ್ಷಿಸಿಕೊಳುಂತ ಆ | ಲಸ ಮಾಡದೆ ರಂ | ಜಿಸುವ ಲೀಲಾಮಾನಸ ವಿಗ್ರಹ ಮೆ | ಚ್ಚಿಸಿದ ಜನರ | ವಶವಾಗಿಪ್ಪ ರಾಕ್ಷಸ ರಿಪು 4 ವನಧಿ ಚಿನ್ಮಯ ಉ | ಭಯಾ ಭಯ ಹಾರೆ | ಪಯೋವಾರಿ ನಿಧಿ | ಶಯನ ಚತುರ್ಬೀದಿಯಲಿ ತಿರುಗಿ | ಪ್ರೀಯದಿಂದಲಿ ಸ | ತ್ಕ್ರಿಯವಂತ ಜಯ ಜಯ ಪ್ರದಾ | ಸಾರಥಿ ನಿ | ರಯ ವಿದೂರ ವಿಜಯವಿಠ್ಠಲ ಸಾ | ಹಾಯವಾಗುವ ಗಿರಿಯ ವೆಂಕಟರಾಯ ಬಂದಾ 5
--------------
ವಿಜಯದಾಸ
ವೃಂದಾವನವ ನೋಡಿರೊ - ನೀವೆಲ್ಲಾನಂದವನ್ನೇ ಪೊಂದಿರೊ ಪ ರಾಮಾಚಾರ್ಯರ ಪುತ್ರರೊ - ಅವರುಮಾಮನೋಹರ ನೃಹರಿ ದಾತರೋ |ಜನ್ಮ ಅಷ್ಟಕೆ ಬ್ರಹ್ಮಚರ್ಯ - ಪೊಂದಿಬ್ರಹ್ಮ ವಿದ್ಯೆಯ ಪಡೆದರೋ |ಧೃತ - ಪ್ರೇಮದಿಂದಲಿ ಬಂದು ತಾವ್ ಪುರುಷೋತ್ಮ ತೀರ್ಥರ ಸಾರ್ದರಾ 1 ಕಾಯಜ ಪಿತನ ತಾನ್ವಲಿಸೀ - ದೇಶಂಗಳಪ್ರೀಯದಿಂದಲಿ ಸಂಚರಿಸೀ |ಮಾಯಾರಮಣನು ಜೀವನೂ - ಒಂದೆಂಬಮಾಯಾವಾದೀಗಳ ತರಿದೂ |ಧೃತ - ವಾಯುಮತ ಪ್ರೀತಿಯಲಿ ಅರುಹುತಪ್ರೀಯ ಅಬ್ಬೂರಲ್ಲಿ ನೆಲೆಸಿದ 2 ವಿಠಲ ನೃಹರಿ ಪೂಜೆಗೇ - ನೇಮಿಸಿತಮ್ಮಪಟ್ಟ ಶಿಷ್ಯರು ವ್ಯಾಸತೀರ್ಥರ |ಅಟ್ಟ ಹಾಸದಿ ಸರ್ವಜಿತೂ - ಸಂವತ್ಸರಕೃಷ್ಣೈಕಾದಶಿ ವೈಶಾಖ |ದಿಟ್ಟ ಗುರುಗೋವಿಂದ ವಿಠಲನದೃಷ್ಟಿಸೀ ತನು ಬಿಟ್ಟು ಪೊರಟನ 3
--------------
ಗುರುಗೋವಿಂದವಿಠಲರು
ಶ್ರೀ ತುಳಸಿ ದೇವಿ ತಾಯಿ ಶ್ರೀ ತುಳಸೀಯೆ | ಕಾಯೆ ಭಕ್ತರ ಪ್ರೀಯೆಕಾಯೆ ಶ್ರೀಹರಿ ಜಾಯೆ | ತಾಯೆ ವರವ ನೀಯೇ ಪ ಪಾದ | ತೋಯಜ ಕಾಂಬುವದಾಯವಿತ್ತೆನ್ನ ನೀ | ಪ್ರೀಯದಿಂದಲಿ ಕಾಯೇ ಅ.ಪ. ಅಮೃತ ಕಲಶಹರಿಯು ಉದುಭವಿಸಲು | ವರ ಧನ್ವಂತ್ರೀಯೂ ||ಹರುಷೋದ್ರೇಕದಿ ನಯನ | ವರಬಿಂದು ಉದುರಲುಶಿರಿ ತುಳಸಿ ಎನಿಸೀದೆ | ಶರಣರ್ಗೆ ಗತಿ ಕೊಡುವ 1 ಓಲಗ ಗೈವರು 2 ಕಲುಷ ಸುಜನ | ಮಲಗಳ ಕಳೆದೂ |ಆಲವ ಭೋದರೆ ಶಾಸ್ತ್ರ | ವಲಿಸಿ ಕೀರ್ತಿಪ ನರಗೆನೆಲೆಯ ಕಾಣಿಪ ತನ್ನ | ಚೆಲುವ ವೈಕುಂಠದಿ 3 ಕರುಣಿಸು ಹರಿಪಾದ | ವರ ಪದ್ಮ ದ್ವಯದಲ್ಲಿನಿರುತ ಭಕುತಿಯನ್ನೆ | ವರಗುಣ ಸಂಪನ್ನೆ |ಕರವೀರ ಪುರದರಿಸಿ | ವರ ಸನ್ನಿಧಾನಕ್ಕೆನಿರುತದಿ ಸತ್ಪಾತ್ರೆ | ಪರಮ ಪಾವನ ಗಾತ್ರೆ 4 ಹಂಬಲೊಂದೆನಗುಂಟು | ಜಾಂಬುವತಿಯೆ ತುಳಸಿಇಂಬಿಟ್ಟು ಸಲಹುವೆ | ನೆಂಬ ಮತಿಯು ಇರೇ |ಬಿಂಬನು ಗುರು ಗೋ | ವಿಂದ ವಿಠಲ ಪಾದಅಂಬುಜದ್ವಯ ತೋರಿ | ಸಂಭ್ರಮದಲ್ಲಿ ಇರಿಸೆ 5
--------------
ಗುರುಗೋವಿಂದವಿಠಲರು