ಅನ್ನಪೂರ್ಣೇಶ್ವರಿ ನಿನ್ನ ಪಾದಕೆ ಶರಣು |
ಮನ್ನಿಸಿ ಕರುಣದಿ ಎನ್ನನುದ್ಧರಿಸವ್ವ ಪ
ಮಾತೆ ನೀನೆನ್ನನು | ಪ್ರೀತಿಯೊಳ್ ಸಲಹವ್ವ ||
ದಾತೆಯೆ ಭವಭಯ (ದ) | ಭೀತಿಯೊಳೆನ್ನ ಪೊರೆ 1
ಸರಸಿಜಾಂಬಕಿ ಯೆನ್ನ | (ಸ) ರಸೆ (ಸುಗುಣೆ) ರನ್ನೆ |
ಭಾರ | ಗಿರಿಜೆ ನಿನಗಪಿ9ಸಿದೆ2
ಭಾವಭಕ್ತಿಯೊಳ್ನಿನ್ನ | ಸೇವೆಯೊಳಿರುವರನ್ನೆ ||
ದೇವ ವಿಶ್ವೇಶ್ವರ ಪ್ರಿಯೆ | ದೇವಿ ಸಂತಸದಿ ಕಾಯೆ 3
ಸಾಧುಸಂತರ ಸೇವೆ | ಎಂದೆಂದಿಗಾದರು ||
ಕುಂದದೆ ಸಾಗುವರೆ | ಕಂದನಿಷ್ಟವ ಸಲಿಸೆ 4
ವಾಸುದೇವನ ಭಗಿನಿ | ಲೇಸಿನೊಳಗ್ರಜನ ||
ದಾಸನಾದೆನ್ನ (ವ) ರೊಳ್ | ಸಾಸಿ (ರ) ಸೇವೆಗೈಸೆ 5
ಭಗವತ್ಸೇವೆಯೊಳೆನ್ನ | ಸುಗುಣದ ಪರಂಪರೆ ||
ಅಗಣಿತ ವರವೀಯೆ 6
ತಾಯೆನ್ನಿಷ್ಟವನು ಪ್ರೀಯದಿಂ ಸಲಿಸುವ ||
ರಾಯ ಶ್ರೀಕೃಷ್ಣಾನುಜೆ | ಕಾಯೆ ಸದಾನಂದದೊಳು7