ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನಿಯಗೆನ್ನೊಡನೆ ಪ್ರೀತಿಯೋ ಆ ತರುಣಿಯೊಳ್‍ಘನತರ ಪ್ರೀತಿಯೊ ಪೇಳೆನೆಗೆಕನಕಾಂಗಿಯವನೆನಿಸಿದ ಚಾರಿತ್ರವನಿನಗರುಪುವೆಯದ ತಿಳಿದೆನಗುಸುರೆ ಪ ಸುರಗಿ ಸಂಪಿಗೆ ಮಲ್ಲಿಗೆ ಜಾಜಿ ಮೊದಲಾದಪರಿಪರಿ ಪುಷ್ಪಮಾಲೆಗಳಾಕೆಗೆತರುಣಿ ಕೇಳಲ್ಲಿ ತಾ ಪುಷ್ಪದ ಸರಗಳಕರುಣದಿಂದೆನ್ನ ಬಳಿಗೆ ಕಳುಹಿದ ಮೇಲೆ 1 ನಾನಾ ವಿಧಧ ವಿಚಿತ್ರಾಂಬರಗಳಆ ನಳಿನಾಕ್ಷಿಗೆ ಕಳುಹಿದನೆಮಾನಿನಿಯೊಂದೆ ವರ್ಣದ ವಸ್ತ್ರಗಳ ಸುಮ್ಮಾನದಿಂದೆನ್ನ ಬಳಿಗೆ ಕಳುಹಿದ ಕಾಣೆ 2 ಏಕಾವಳಿ ಪಂಚರತ್ನದ ಸರಗಳನೇಕ ಹಾರಗಳ ಶೃಂಗಾರವಾಕೆಗೆರಾಕೇಂದುಮುಖಿ ನನಗೊಂದೆ ಹಾರವುಯಿದಶ್ರೀ ಕೆಳದಿ ರಾಮೇಶ್ವರ ತಾನೆ ಬಲ್ಲ 3
--------------
ಕೆಳದಿ ವೆಂಕಣ್ಣ ಕವಿ
ಇನಿಯಗೆನ್ನೊಡನೆ ಮುನಿಸೋ ಪ್ರೀತಿಯೋ ಪೇಳೆವನಜಾಕ್ಷಿಯವನೆಸಗಿದುದಾ ಪೇಳ್ವೆನೆ ಪ ಮೃಗಮದ ತಿಲಕವ ಪಣೆಗೆ ತಾನಿಡಲಿಲ್ಲಅಗಿಲುಗಂಧವ ಮೈಗೆ ತೀಡಲಿಲ್ಲ ಸೊಗಸು ಸಂಪಿಗೆ ಸರವಮುಡಿಸಿ ಝಗಝಗಿಪ ಮುತ್ತಿನ ಸರವಹಾಕದೆ ಎನ್ನ ಮುಗುಳು ಮೊಲೆಗೆಸೆಳ್ಳುಗುರಿಕ್ಕದಿದ್ದ ಮೇಲೆ1 ಗುರುಕುಚರ್ಚಿತ ಮೃಗಮದ ಪತ್ರವ ಸೆರಗಿನಿಂದೊರಸಿದನೆಕುಂಕುಮಗಂಧವ ಭರದಿ ಲೇಪಿಸಿದನೆ ತಾನೆತಾಂಬೂಲವ ಹರುಷದಿ ಕರದಿತ್ತನೆಆಲಿಂಗಿಸಿ ಪರಮ ಸಂತೋಷದಿ ತಿರುಗಿ ನೋಡಿದನೆ 2 ಧರಿಸಿದ ಮಿಸುನಿಯ ಆಭರಣಂಗಳ ಭರದಿಂದ ತೆಗೆದ ತಾನೆಚಿನ್ನದುಂಗುರವ ಬೆರಳಿಗೆ ನಲಿದಿಟ್ಟನೆತರುಣಿ ಬಾರೆಂದು ನಂಬುಗೆಗೊಟ್ಟನೆಶ್ರೀ ಕೆಳದಿಯ ಪುರದ ರಾಮೇಶ ಎನ್ನನೆರೆದು ಮನ್ನಿಸಿದನೆ3
--------------
ಕೆಳದಿ ವೆಂಕಣ್ಣ ಕವಿ
ಉಗಾಭೋಗ ಚಿಕ್ಕ ಮಗುವಾದ ಪ್ರಹ್ಲಾದ ದೇವನನು ರಕ್ಕಸನು ಪಿಡಿದತಿ ಹಿಂಸೆಪಡಿಸುವದ ನೋಡಿ ಉಕ್ಕಿಬರುತಿಹ ಕೋಪದಿಂ ಕಿಡಿಕಿಡಿಯಾಗಿ ಉಕ್ಕಿನ ಕಂಬದಿಂ ಉರಿಯ ಕಾರುತ ಬಂದು ಪಕ್ಕಿದೇರನು ಹಿರಣ್ಯಕಶಿಪನ ಪಿಡಿದು ತಾ ಉರ ಬಗೆದು ಕರುಳ ಮಾಲೆಯ ಗಕ್ಕನೆ ಗಳಕಿಕ್ಕಿಕೊಂಡು ಆರ್ಭಟಿಸಿದಂದು ಲಕ್ಕುಮಿಯಾದಿಯಾಗಿ ಮುಕ್ಕೋಟಿ ದೇವತೆಗಳು ಬೆದರಿ ದಿಕ್ಕೆಟ್ಟು ಗಡ ಗಡ ನಡುಗುತಿರಲಾಗ ಅಕ್ಕರದ ಭಕುತ ಪ್ರಹ್ಲಾದ ಬರೆ ಬಿಗಿಯಪ್ಪಿ ತಕ್ಕೈಸಿ ಮುಂಡಾಡಿ ಪ್ರಸನ್ನನಾದನು ತನ್ನ ಭಕ್ತರೊಳಿನ್ನೆಷ್ಟು ಪ್ರೀತಿಯೋ ರಂಗೇಶವಿಠಲಗೆ
--------------
ರಂಗೇಶವಿಠಲದಾಸರು
ಹಚ್ಚಡವಗೆಯ ಬೇಕಮ್ಮಾ | ಬಹುಕೊಳೆ ಮುಚ್ಚಿ ಕೊಂಡಿಹುದು ನೋಡಮ್ಮಾ ಪ. ಸ್ವಚ್ಛವ ಮಾಡುತ ಅಚ್ಯುತನಂಘ್ರಿಗೆ ಬೆಚ್ಚಗೆ ಹೊದಿಸಲು ಇಚ್ಛೆಯ ಮಾಡುತ ಅ.ಪ. ಏಳು ಪದರವಿಹುದೊ | ಬಹು ಕಾಲದಿಂ ಬಾಳುತ ಬಂದಿಹುದೂ ಕಾಲಕಾಲಕೆ ಬದಲಾವಣೆ ಪೊಂದುತ ಬೀಳುತೇಳುತ ಬೆನ್ನು ಬಿಡದಿರುತಿಹುದೊ 1 ಹೊರಗಡೆ ನವ ದುರ್ಗಂಧಾ | ಒಳಗಡೆ ಇನ್ನು ಅರುಹಲಾರದ ಕಲ್ಮಷಾ ಸುರರೆಲ್ಲ ಇದಕಿನ್ನು ಸರಿ ಇಲ್ಲವೆಂಬೋರು ಮರುತಾಂತರ್ಯಾಮಿಗೆ ಸರಿತೋರುವಂದದಿ 2 ಎಪ್ಪತ್ತೆರಡು ಸಾಸಿರಾ | ನೂಲುಗಳಿಂದ ವಪ್ಪಾಗಿ ಹೊಲಿದ ಪಾರ ಕಪ್ಪು ಕೆಂಪು ಬಿಳಿ ವಪ್ಪೆ ಬಣ್ಣಗಳಿಂದ ಸರ್ಪಶಯನ ಸತತ ಸಲಹಿ ಕೊಡುವಂಥ 3 ನಿರ್ಮಲೋದಕವ್ಯಾವುದೇ | ಇದನೊಗೆಯಲು ಸಮ್ಮತ ಶಿಲೆಯಾವುದೇ ಬೊಮ್ಮನೈಯ್ಯನ ಸುಜ್ಞಾನ ಸುಕೊಳದೊಳು ವಮ್ಮನಸಿನೊಳದ್ದಿ ವದ್ದೆ ಮಾಡುತಲಿನ್ನು 4 ವ್ಯಕ್ತಿ ವೈರಾಗ್ಯ ಶಿಲೇ | ಶ್ರೀ ಹರಿಗುರು ಭಕ್ತಿ ಎರಡು ಕೈಗಳೇ ಎತ್ತಿ ವಗೆದು ಎಲ್ಲಾ ಕಶ್ಮಲ ಕಳೆಯುತ ಮತ್ತೆ ಜಾಲಾಡಿ ಹಿಂಡಿಕೆ ಮಾಡಿ ಶುಭ್ರದಿ 5 ಎತ್ತಿ ತಂದು ಕೊಡುವುತಾ | ಮತ್ತೆ ಕೊಳೆ ಹತ್ತದಂದದಿ ನೋಡುತಾ ಉತ್ತಮವಾದ ಮೈದಾನದೊಳಗೆ ಹರಹಿ ನೆತ್ತಿ ಜ್ಯೋತಿಯ ಘನ ದೀಪ್ತಿಯಲ್ಲೊಣಗಿಸು 6 ಶುದ್ಧ ಸಾತ್ವಿಕವರ್ಣದೀ | ಹೊಳೆವಂಥ ಈ ಶುದ್ಧ ಹೊದ್ದಿಕೆ ಸ್ಥಾನದೀ ಮುದ್ದುಕೃಷ್ಣನು ತನ್ನ ಪರಿವಾರ ಸಹಿತದಿ ಪೊದ್ದಿಕೊಂಡಿಪ್ಪ ಬಲು ಭದ್ರವ ಮಾಡುತ 7 ಹಿಂದೆ ಮುಂದಿನ ಭಯವೆಲ್ಲಾ | ತಪ್ಪುವುದಿನ್ನು ಸಂದೇಹಪಡಲು ಸಲ್ಲಾ ತಂದೆ ಮುದ್ದುಮೋಹನ್ನ ಗುರುಗಳು ಪೇಳಿದ ಒಂದೆ ವಾಕ್ಯವ ಆನಂದದಿ ನಂಬುತ 8 ನೂತನ ಹಚ್ಚಡವೂ | ನೂಲುಗಾರ ಜಾತಿಯರರಿಯರಿವೂ ಪ್ರೀತಿಯೋಳ್ ಗೋಪಾಲಕೃಷ್ಣವಿಠ್ಠಲ ಕೊಟ್ಟ ಖ್ಯಾತಿಯೊಳ್ ಬಾಳಿ ಶ್ರೀನಾಥನ್ನ ಪೊಂದುವೋ 9
--------------
ಅಂಬಾಬಾಯಿ