ಒಟ್ಟು 7 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈತನೆ ಗತಿಯೆಂದು ನಂಬಿದೆನೆ ನಾ ನೀತನಂಥ ನಿಷ್ಕರುಣನ ಕಾಣೆ ಪಾತಕಹರ ಅ ನಾಥರಕ್ಷಕ ಮಹದಾತ ಪರಮಭಕ್ತ ಪ್ರೀತನೆಂಬುದ ಕೇಳಿ ಪ ಮರುಳಾಗಿವನ ಬೆನ್ಹತ್ತಿದೆನೆ ಮನೆ ಮಾರುಗಳೆಲ್ಲವ ತೊರೆದೆನೆ ಕರುಣವಿಲ್ಲ ತುಸು ಹೊರಳಿ ನೋಡುವಲ್ಲ ತಿರುತಿರುಗಿ ಮನಕರಗಿ ಸಾಕಾಯಿತು 1 ಜಾತಿಹೀನನೆಂಬುವೆನೇನೆ ಲೋಕ ನಾಥನಿಗೆ ಕುಲ ಅದೇನೆ ಈತನ ಹೊರ್ತು ಮತ್ತಾರಾಸೆನಗಿಲ್ಲ ನೀತಿಯೆ ಈತಗೆ ಜಾತಿಭೇದವೆಂಬ 2 ಹೊಲೆಯರ ಮನೆಯಲ್ಲುಂಡನೆ ಇವ ಗೊಲ್ಲರ ಕುಲದಲ್ಹುಟ್ಟಿದನೆ ಗೊಲ್ಲರ ನಲ್ಲೆಯರಲ್ಲಿ ಹೋಗಿ ಈತ ಗುಲ್ಲುಮಾಡಿ ಬೆಣ್ಣೆಗಳ್ಳನೆನಿಸಿಕೊಂಡ 3 ಪಾತರದವಳಲ್ಲಿಗ್ಹೋದನೆ ತಾ ನೀತಿವಂತನ ಕಟ್ಟೊಡ್ಹೆಸಿದನೆ ನೀತಿವಂತರು ಕೇಳಿರೀತನ ರೀತಿಯ ದಾತ ಜಗನ್ನಾಥ 4 ನಿಲ್ಲದು ಮನ ಘಳಿಗಿವನಲಿ ನಾ ಸಲ್ಲದ್ಹಾಂಗ್ಹೋದೆ ಮತ್ತೆಲ್ಲ್ಹೋಗಲಿ ಬಲ್ಲಿದ ಶ್ರೀರಾಮನೆಲ್ಲ್ಹೋದರು ಬಿಡೆ ಕಲ್ಲೆದೆಯವಗಾಗಿ ಪ್ರಾಣಹೋಗಲಿನ್ನು 5
--------------
ರಾಮದಾಸರು
ನರರೂಪ ಮುರವೈರಿ ಪ ಸುಜನ ಸಂಪ್ರೀತನೆ ಕಂದನ ಕಾಯೊ ಮಮ ಸಿಂಧುಶಯನನೆ 1 ಸಿರಿಧರನ್ಯಾರೆಲೊ ದುರಿತವದೋರೆಲೊ ನರಹರಿಯಾದ ನಮ್ಮ ನಾರಾಯಣ ಬಾರೊ 2 ಫಣಿಯನ್ಯಾರೆಲೊ ಯೆಣಸಲು ನೀನೆಲೊ ಪ್ರಣವರೂಪನೆ ನಿಜ ಗುಣಮಣಿಯಾರೆಲೊ 3 ದೇಶಿಕ ತುಲಶಿ ನಿನ್ನದಾಸನು ನಾನಾದೇ 4
--------------
ಚನ್ನಪಟ್ಟಣದ ಅಹೋಬಲದಾಸರು
ಪಾಲಿಸು ಪಾಲಿಸು ಪಾರ್ವತಿ ತನಯನೆ ಫಾಲಚಂದ್ರಯುತನೆ ಕಾಲ ಸಂಭಾವನಲೋಲುಪ ವಾರಿಜಾಸ್ಯನುತನೆ ಪ ಸುಜನ ಗಜವದನಾ ಸುರಕುವಲಯ ದಿನಕರ ಧೂರ್ಜಟಿಸುತ ಗಣಪ 1 ಕಾಮಿತ ಫಲಗಳ ಪಡೆಯಲು ಸುಜನರು ನೇಮದಿ ಪೂಜಿಪರು ಸಾಮಜ ವದನನೆ ಭಕ್ತರಭೀಷ್ಟವÀ ಪ್ರೇಮದಿ ಕರುಣಿಸುತ 2 ಗಾನಲೋಲ ವರತಾಂಡವ ಪ್ರೀತನೆ ಕೋಮಲಾಂಗ ಸತತಂ ಧೇನುನಗರ ಸಂರಕ್ಷಣ ದಕ್ಷನೆ ಸಾನುರಾಗದಲನಿಶಂ 3 ಇಂದ್ರಾದಿ ದಿವಿಜರೆಲ್ಲ ಕುಂದುತ್ತ ದೈತ್ಯ ಭಯದಿಂ ಸುಂದರಿ ನಿನ್ನ ಭಜಿಸೆ ನಿಂದೆಲ್ಲರನ್ನು ಪೊರೆದೆÀ 4 ಕಮಲಾಕ್ಷಿ ವಿಮಲಪಾಣಿ ಕಮಲಾಪ್ತ ಮುಖ್ಯರಮಣೆ ಸುಮಶೋಭಮಾನವೇಣಿ ಕಮನೀಯ ದಿವ್ಯಪಾಣಿ 5 ಶಾಕಿನಿರೂಪೆ ದೇವಿ ಲೋಕೈಕ ವೀರ್ಯ ಧೈರ್ಯ ಬೇಕಾದ ವರಗಳಿತ್ತು ಶ್ರೀಕಾರ ಶಕ್ತಿಯೆನ್ನ 6 ಜ್ಞಾನವು ಮೌನ ಜಯವುಂ ಧ್ಯಾನ ಸುಮಂಗಲತ್ವಂಮಾನ ಸುಪುತ್ರ ಹಿತಮಂ ಧೇನು ಪುರೀಶೆ ಕೊಟ್ಟು 7
--------------
ಬೇಟೆರಾಯ ದೀಕ್ಷಿತರು
ಪ್ರೆಮಾಂಬುಧಿ ಶುಭದಾಯಕ ಜಯ ಜಯ 1 ಪ್ರಹ್ಲಾದಾವರ ಜಾತನೆ ಜಯಯ ಶಲ್ಯ ನೃಪಾಲಕ ಯೋಧನೆ ಜಯ ಜಯ 2 ಪುರುಹೂತಾರ್ಯ ಪೋತನೆ ಜಯ ಜಯ ಮರುತ ಪದಾರ್ಹರ ಪ್ರೀತನೆ ಜಯ ಜಯ 3 ನರಸಿಂಹಾರ್ಯರ ಪುತ್ರನೆ ಜಯ ಜಯ ಗುರುವರದೇಂದ್ರರ ಛಾತ್ರನೆ ಜಯ ಜಯ 4 ತುರುರಕ್ಷಕ ವಿಜಯಾರ್ಯರ ಜಯ ಜಯ ಕರುಣ ಪೂರ್ಣ ಪಡೆದಾತನೆ ಜಯ ಜಯ 5 ಪಂಕಜವೈರಿಯ ಭಾಗದಿ ಜಯ ಜಯ ಅಂಕಿತ ಪಡೆದ ಅಕಳಂಕನೆ ಜಯ ಜಯ 6 ಪಂಢರಿನಾಥನ ಮೂರುತಿ ಜಯ ಜಯ ಕಂಡು ಕೊಂಡಾಡಿದ ಧೀರನೆ ಜಯ ಜಯ 7 ರಂಗವಲಿದ ದಾಸ್ತೋತಮ ಜಯ ಜಯ ತುಂಗ ಮಹಿಮ ಶುಭಾಂಗನೆ ಜಯ ಜಯ 8 ನತಜನ ತತಿ ಮಂದಾರನೆ ಜಯ ಜಯ ಕೃತ ಹರಿಕಥಾಸುಧೆ ಸಾರವ ಜಯ ಜಯ 9 ಮೂಕರ ಮುಖದಿಂ ಕರುಣದಿ ಜಯ ಜಯ ವಾಕು ಪೇಳಿಸಿದ ಗುಣನಿಧಿ ಜಯ ಜಯ 10 ಮಾನವಿ ಮಂದಿರ ಮಾನಿತ ಜಯ ಜಯ ಕ್ಷೋಣಿ ವಿಬುಧ ಗಣ ಸೇವಿತ ಜಯ ಜಯ 11 ಕುಂಭಿಣಿನಾಥ ದಾಸಾಗ್ರಣಿ ಜಯ ಜಯ ನಂಬಿದೆ ನಿನ್ನ ಪದಾಂಬುಜ ಜಯ ಜಯ 12 ಸಾಧು ವರಿಯ ಪ್ರಹ್ಲಾದನೆ ಜಯ ಜಯ ಭೇದಜ್ಞಾನ ಸುಬೋಧಕ ಜಯ ಜಯ 13 ಭೂಸುರ ಕುಮುದಕೆ ಭೇಶನೆ ಜಯ ಜಯ ಭಾಸುರ ಸ್ತಂಭ ನಿವಾಸನೆ ಜಯ ಜಯ 14 ಪವನಾಗಮ ಪ್ರವೀಣನೆ ಜಯ ಜಯ ಸನ್ನುತ ಮಹಿಮನೆ ಜಯ ಜಯ 15 ತಂದೆ ನಮಗೆ ನೀನೆಂದಿಗು ಜಯ ಜಯ ಕುಂದು ಕ್ಷಮಿಸಿ ದ್ವಿಜ ವಂದ್ಯನೆ ಜಯ ಜಯ 16 ಕಂಸಾರಿಯ ಪ್ರೀಯ ಸಾಂಶನೆ ಜಯ ಜಯ ಭವ ಹಿಂಸೆಯ ಜಯ ಜಯ 17 ನಿನ್ನ ತಾಣ ಸುಕ್ಷೇತ್ರವು ಜಯ ಜಯ ನಿನ್ನ ಕವನ ಶೃತ್ಯರ್ಥವು ಜಯ ಜಯ 18 ಕಲುಷ ಕುಲಾದ್ರಿಗೆ ಕುಲಿಶನೆ ಜಯ ಜಯ ವಲಿದು ಕರಪಿಡಿದು ಸಲಹೈ ಜಯ ಜಯ 19 ಆರ್ತರಿಷ್ಟಾರ್ಥವ ಸಲಿಸಲು ಜಯ ಜಯ ಸ್ವಾರ್ಥರಹಿತರಿಗೆ ಕೀರ್ತಿಯು ಜಯ ಜಯ 20 ಎನ್ನವವ ಚನವಿದಲ್ಲವು ಜಯ ಜಯ ನಿನ್ನನು ಭವಕಿದು ಬಂದದು ಜಯ ಜಯ 21 ಮಂದ ಬುದ್ಧಿಯಲಿ ನಿಮ್ಮನು ಜಯ ಜುಯ ನಿಂದಿಪ ಮನುಜ ದಿವಾಂಧನು ಜಯ ಜಯ 22 ಧರ್ಮದ ಮಾರ್ಗವ ತೋರಿಸು ಜಯ ಜಯ ಕರ್ಮಜ ದೇವನೆ ಕೈಪಿಡಿ ಜಯ ಜಯ 23 ಅನಿಲ ಮತಾಂಬುಧಿ ಮೀನನೆ ಜಯ ಜಯ ಪ್ರಣತಾಮರಮಣಿಧೇನುವೆ ಜಯ ಜಯ 24
--------------
ಶಾಮಸುಂದರ ವಿಠಲ
ಭಾರತೀಶನೆ ಉದ್ಧರಿಸುವದೆನ್ನ ಪ ಕಂಸಾರಿ ಪ್ರೀಯ ಸಂ - ಸಾರ ಬಂಧನ ನಿವಾರಿಸೊ ಜವದಿ ಅ.ಪ ಅಂಜನಾದೇವಿಯ ಸಂಜಾತನೆ ಭವ ಭಂಜನ ಹರಿಪದಕಂಜಾರಾಧಕ 1 ಮಾರುತಿ ನಿನ್ನ ಸುಕೀರುತಿ ತ್ರಿಜಗದಿ ಸಾರುತಲಿದೆಯುದ್ಧಾರಕನೆಂದು 2 ಹರಿಕುಲಜಾತನೆ ಹರಿಸಂಪ್ರೀತನೆ ಹರಿಹಯ ವಿನುತನೆ ಹರಿದುರಿತವನು 3 ಕಾಮಿತ ಫಲದ ನಿಸ್ಸೀವÀು ಪರಾಕ್ರಮಿ ಪ್ರೇಮವ ಕೊಡು ಶ್ರೀ ರಾಮನ ಪದದಿ 4 ಕುಂತಿ ಕುಮಾರಾದ್ಯಂತ ವಿದೂರನೆ ಅಂತರಂಗದಿ ಹರಿಚಿಂತನೆಯಕೊಡು 5 ಧರ್ಮಾನುಜಸದ್ಧರ್ಮ ಸ್ಥಾಪಕನೆ ಕಿರ್ಮೀರಾಂತಕ ನಿರ್ಮಲ ಚರಿತ 6 ಭೀಮನೆ ಸುದ್ಗುಣ ಧಾಮನೆ ಕುರುಕುಲ ಸೋಮನೆ ಸುರಮುನಿಸ್ತೋಮನಮಿತನೆ 7 ಅರ್ಜುನಾಗ್ರಜನೆ ದುರ್ಜನ ಶಿಕ್ಷಕ ಧೂರ್ಜಟಿವಂದ್ಯನೆ ಮೂರ್ಜಗ ಕರ್ತಾ 8 ಆರ್ಯನೆ ಕೃತ ಸತ್ಕಾರ್ಯನೆ ಜಗದೊಳು ನಾರ್ಯಕುರುಪನೂರು ಶೌರ್ಯದಿ ತರಿದ 9 ಕರಿವರದನ ಚರಣಾರವಿಂದ ಯುಗ ನಿರುತ ಸ್ಮರಿಪತೆರ ಕರುಣಿಸು ಭರದಿ 10 ದುಷ್ಟದ್ವಂಸಕನೆ ಶಿಷ್ಟಪಾಲಶ್ರೀ - ಕೃಷ್ಣನಂಘ್ರಿಯಲಿ ನಿಷ್ಠೆಯ ತೋರೋ 11 ಮಧ್ಯಗೇಹ ಸುತ ಸದ್ವೈಷ್ಣವ ಯತಿ ಅದ್ವೈತಕರಿ ಹರಿ ಸಿದ್ಧಾಂತ ಕರ್ತಾ 12 ಮಿಥ್ಯಾವಾದಿಬಾಯಿ ಎತ್ತದಂತ ಶ್ರು - ತ್ಯರ್ಥವ ಪೇಳ್ದ ಸಮರ್ಥನಹುದು ನೀ 13 ಹರಿಸರ್ವೋತ್ತಮ ಸಿರಿಯು ಅಕ್ಷರಳು ಸುರರೊಳು ನೀನೆ ಪಿರಿಯನು ಸತ್ಯ 14 ಸದಮಲಚರಿತನೆ ಹೃದಯದ ತಿಮಿರವ ವದೆದು ತರಿವುದಕೆ ಉದಿತ ಭಾಸ್ಕರ 15 ಮೂರು ರೂಪಾತ್ಮಕ ಸಾರಿದೆಯನ್ನಯ್ಯs ಪಾರದುರಿತ ಪರಿಹಾರವ ಗೈಸೊ 16 ಹೇಸಿಕೆ ಭವದಲಿ ನಾಶಿಲುಕಿಹೆ ವರ - ದೇಶ ವಿಠಲನ ಸೋಶಿಲಿ ತೋರೊ 17
--------------
ವರದೇಶವಿಠಲ
ಮಾನವಾತ್ಮರೆ ನಿಮ್ಮ ಮಾನಸ ಪೂಜೆಯಿಂಮಾನವನಿಗೆ ಮೋಕ್ಷ ಸಾಧಿಸೀರಿ ಪ ರತ್ನ ನಿರ್ಮಿತ ಸುಚರಿತ್ರ ಮಂಟಪವನ್ನುಸತ್ಯಭಾಮೆಯ ಪತಿಗಿತ್ತು ಪೂಜಿಸುವೆ1 ಆಸನ ನೀಡುವೆ ಶೇಷಶಯನನೆ ಇಲ್ಲಿವಾಸ ಮಾಡಿ ಎನ್ನ ಸೇವೆ ಸ್ವೀಕರಿಸು2 ಧ್ಯಾನ ಮಾಡುವೆ ನಿನ್ನ ಗಾನ ಮಾಡುವೆ ನಿನ್ನಜ್ಞಾನ ಭೂಷಣ ಶೋಭಿತಾನನಾಂಬುಜ 3 ಧೃತ ವೇಣುಗೋಪಾಲ ಬಾರೋ ಮನಸಿಗೆ ತೋರೊಮೂರುತಿ ನಿನ್ನಯ ಸಮೀರ ಸಂಸ್ತುತನೆ 4 ಅಘ್ರ್ಯ ನೀಡುವೆ ನಾನು ಅನಘ್ರ್ಯ ವಸ್ತುಗಳಿಂದಸ್ವಘ್ರ್ಯಗ್ರಹಣ ಮಾಡೋ ಭರ್ಗ ಸೇವಿತನೆ 5 ಪಾದ್ಯ ನೀಡುವೆ ವೇದ ವೇದ್ಯ ಮಹಿಮನೇ ಮುನ್ನಾವದ್ಯ ಕಳೆದು ಭವದಿಂದ ಉದ್ಧರಿಸೆನ್ನ 6 ಆಚಮನವ ನೀಡುವೆ ಹೇ ಚತುರಾನನೇಶವಾಚಾಮಗೋಚರ ಮೋಚಕ ಹೇತು 7 ಸುದತಿ ಮೋಹನ ತವಮಧುಪರ್ಕವನೀವೆ ಮುದದಿ ಸ್ವೀಕರಿಸು 8 ಮತ್ತೆ ಆಚಮನವನಿತ್ತು ಪೂಜಿಪೆ ಕರವೆತ್ತಿ ಮುಗಿವೆ ಸರ್ವಭಕ್ತ ಪೋಷಕನೆ 9 ಗಂಗೆ ಯಮುನೆ ಗೋದಾ ತುಂಗೆ ಜಲವ ತಂದಿಹೆ ಅ-ನಂಗ ಜನಕ ಮಾಡೋ ಅಭ್ಯಂಗ ಸ್ನಾನ 10 ನಿರಿಗೆಗಳನೆ ಹಾಕಿ ಜರದ ಪೀತಾಂಬರ ಗ-ರುಡವಾಹನ ನೀನು ಧರಿಸು ಮಧ್ಯದಲಿ 11 ಹಾರ ಕಿರೀಟ ಕಾಂಚಿ ನೀರ ನೂಪುರ ಸು-ಕೇಯೂರ ನೂಪುರನೀವೆ ಧಾರುಣಿಪತಿಗೆ 12 ಸ್ವರ್ಣ ರಚಿಸಿದ ಸೂತ್ರವನು ಕೊಡುವೆ ಲಕ್ಷ್ಮೀರನ್ನ ಸೌರಭ ಗಂಧವನು ಸ್ವೀಕರಿಸು 13 ವಾಸುದೇವನೆ ದಿವ್ಯ ನಾಸಿಕೇಂದ್ರಿಯದಿಂದಈಸು ಧೂಪದ ಗಂಧ ವಾಸನೆ ಗ್ರಹಿಸೋ 14 ಮರುಗು ಮಲ್ಲಿಗೆ ಜಾಜಿ ಸುರಗಿ ಸೇವಂತಿಗೆಸುಮಗಳ ಪರಿಮಳ ಧರಿಸೋ ಮಧ್ಯದಲಿ 15 ಹತ್ತು ಅಂಗಗಳಿಂದ ಉತ್ತಮ ಸುಧೂಪವಎತ್ತುವೆ ನಿನಗೆ ಸರ್ವೋತ್ತಮ ಹರಿಗೆ16 ಆಕಳ ಘೃತದ ಅನೇಕ ದೀಪಗಳ್ಹಚ್ಚಿಶ್ರೀಕರ ತವ ಮುಖಾವಲೋಕಿಸುತ್ತಿಹೆನು 17 ಏಕಾರತಿ ಗೋಪಿಪ್ರೀತನೆ ಬೆಳಗುವೆನಾಕ ನಾಯಕ ಸುರಲೋಕ ಸೇವಿತನೆ 18 ಆರು ವಿಧದ ಅನ್ನ ಸಾರು ಪಾಯಸ ಭಕ್ಷ್ಯಭೂರಿ ಶಾಕಗಳೀವೆ ನೀರಜಾಂಬಕನೆ 19 ಮಾರಜನಕನೆ ಮುತ್ತಿನಾರತಿ ಬೆಳಗುವೆಶ್ರೀರಾಮನೆ ನಿನ್ನ ಮೋರೆಯ ತೋರೊ20 ಛತ್ರ ಚಾಮರ ವ್ಯಜನ ದರ್ಪಣ ಪರ್ಯಂಕಕರ್ಪುರ ತಾಂಬೂಲವಿತ್ತು ಪೂಜಿಸುವೆ 21 ಹತ್ತಾರು ಉಪಚಾರ ಚಿತ್ರ ಚರಿತನೆ ನಿನಗೆಅರ್ಥಿಯಲಿ ಕೊಡುವೆನು ಮುಕ್ತಿ ನೀಡೆನಗೆ 22 ಇಂದಿರೇಶನೆ ನಿನ್ನ ಮುಂದೆ ತುತಿಪನೆ ನಿಂತುನಂದಬಾಲನೆ ಕೃಪೆಯಿಂದ ನೋಡೆನ್ನ 23
--------------
ಇಂದಿರೇಶರು
ಸಲಹು ಸಲಹು ಗುರುರಾಯನೆ ನನ್ನಾಲಸದೆ ಪಾವನ್ನಕಾಯನೆ ನಾನುಹಲವು ದಿವಸ ನಿನ್ನ ನಂಬಿರೆದ್ವಿಜಕುಲಮಣಿ ಜನಾರ್ದನಾಚಾರ್ಯನೆ ಪ.ನಿನ್ನ ಶರಣು ಹೊಕ್ಕ ಭೃತ್ಯರು ತತ್ವಪೂರ್ಣರಾದರು ಪೂತರಾದರುನನ್ನ ಮನ್ನಿಸಲಾಗದೆ ದಾತನೆ ವಿದ್ಯೋನ್ನತ ವಿಶ್ವಕೆ ಪ್ರೀತನೆ 1ಆ ಬಾಲ್ಯದೊಳು ರಘುಪತಿಪಾದಭಜನಾದರ ನಿನಗುಂಟುಕೋವಿದಈ ಮೇದಿನಿಯಲಿ ಸುಧಾಸುರಸದಬಹು ಸ್ವಾದವ ಬಲ್ಲ ಇಷ್ಟಾರ್ಥದ 2ಅಜ್ಞಾನ ಕತ್ತಲೆ ಕವಿದಿದೆ ಅಭಿಜÕನ ಮಾಡಲಿ ಬಾರದೆ ನಿನ್ನಪ್ರಜÕತನದ ಪ್ರಸವನಿತ್ಯಆಜ್ಞಾಧಾರಕಗೀಯೊ ಜ್ಞಾನವ 3ಭಕ್ತಿ ವೈರಾಗ್ಯ ಸುಜ್ಞಾನ ಸಂಯುಕ್ತ ಮಂಗಳ ಗುಣಾಲಂಕೃತಯುಕ್ತಿ ಸಾಲದು ಹರಿಸೇವೆಗೆ ಸ್ವಪ್ನವ್ಯಕ್ತ ಬೋಧಿಸೆನಗೆ 4ತಂದೆ ತಾಯಿ ಆಪ್ತಮಿತ್ರ ನೀಗತಿಹೊಂದಿಪ ದುರಿತಘಹರ್ತ ನೀ ಗೋವಿಂದ ಪ್ರಸನ್ವೆಂಕಟೇಶನ ಹೃದಯಮಂದಿರದೊಳು ಪೂಜಾಶೀಲನೆ 5
--------------
ಪ್ರಸನ್ನವೆಂಕಟದಾಸರು