ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಿರಿರಾಯಾ ಗಿರಿರಾಯಾ ಪ ಶರಣಾಗತರಿಗೆ ಕರುಣಾಕರ ವೆಂಕಟಅ.ಪ ಸ್ಮರಿಸುವೆ ನಿನ್ನನು ಸರಸಿಜಭವನುತ ಸ್ಮರತಾಮರತರು ದುರಿತವಿದೂರ 1 ಶ್ರೀಕರಭವಭಯ ನೂಕಿಸಿ ಎನ್ನನು ಸಾಕೆಲೋ ಭೂಧರಸೂಕರರೂಪ 2 ಆಪದ್ಬಾಂಧವ ಶ್ರೀಪತಿ ಎನ್ನನು ಕಾಪಾಡೆಲೊ ಸಕಲಾಪದ್ಧರ ವೆಂಕಟ3 ಕಾಮಿತ ಫಲಪ್ರದ ಈ ಮಹೀತಳದೊಳು ಸಾಮಜವರದ ಸುಧಾಮನ ಸಖ ಪೊರಿ 4 ದಾತಗುರುಜಗನ್ನಾಥವಿಠಲ ಪ್ರೀತನಾಗೊ ನಿನ್ನ ದೂತನು ನಾನೈ 5
--------------
ಗುರುಜಗನ್ನಾಥದಾಸರು
ಶ್ರೀ ನರಸಿಂಹ ಮಂತ್ರ ಜಯ ಜಯ ಜಯ ನರಸಿಂಹ ಜಯ ಜಯ ಮಹಾಲಕ್ಷ್ಮೀರಮಣ ಜಯ ನಿರಾಮಯ ಸರ್ವೋತ್ಕøಷ್ಟ ಆಹ ಜಯ ಕಮಲಜ ಮೃಡಾದ್ಯಮರವಂದ್ಯನೆ ನಮೋ ಭಯಬಂಧಹರ ಭಕ್ತ ಜನರ ರಕ್ಷಕ ಸ್ವಾಮಿ ಪ ಅರದೂರ ಗುಣಪರಿಪೂರ್ಣ ಉಗ್ರವೀರನೆ ಮಹಾವಿಷ್ಣು ಉರುಕಾಂತಿ ಸರ್ವತೋಮುಖನೆ ಆಹ ನರಸಿಂಹ ಭಯಕರಾಶ್ರಿತಜನರ ರಕ್ಷಕ ಶರಣಾದೆ ನಿನಗೆ ನಾ ಮೃತ್ಯುಮಾರಕ ನಮೋ 1 ಸೃಷ್ಟಾ ಪಾತಾ ಅತ್ತ ತ್ರಾತಾ ದುಷ್ಟ ದೈತ್ಯರಿಗತಿ ಕ್ರೂರ ಶ್ರೇಷ್ಠ ಅಸಮಬಲರೂಪ ಆಹ ಇಷ್ಟಭಕ್ತನ ಕಾಯೆ ಕಂಬದಿಂದಲಿ ಬಂದು ತ್ಕøಷ್ಟ ಪ್ರಜ್ವಲಿಪ ನಖದಿ ಸೀಳ್ದೆ ಭ್ರಷ್ಟನ 2 ವಿಶ್ವಸ್ಥ ಬಹಿರಂತವ್ರ್ಯಾಪ್ತ ವಿಶ್ವ ವಿಷ್ಣು ವಷಟ್ಕಾರ ಸರ್ವಜ್ಞ ನಿರ್ದೋಷ ಸುಗುಣಿ ಆಹ ಅಮಿತ ಸಕಾಂತಿಯಿಂ ಜ್ವಲಿಸುವೆ ವಿಶ್ವತೋಮುಖ ಸರ್ವಸಾಕ್ಷಿಸ್ವತಂತ್ರ 3 ನರನಲ್ಲ ನರರೂಪಧಾರಿ ನೀ ಮೃಗವಲ್ಲವು ಸಿಂಹವದ್ರೂವ ನರಮೃಗಗಳಲಿ ನೀ ಸಮನು ಆಹ ಧರೆ ದಿವಿ ಪಾತಾಳ ಜಂತು ಸರ್ವಾಂತಸ್ಥ ಉರು ಜ್ಞಾನ ಬಲರೂಪ ಅನಂತ ನೀ ಏಕ 4 ನ ಎಂದರೆ ಸರ್ವವಂದ್ಯ ರ ಎಂದರೆ ಸುಖ ಜ್ಞಾನ ಸಿಂ ಎಂದರೆ ಗುಣಸಾರ ಆಹ ಇಂದಿರಾಪತಿ ಮಹದೈಶ್ವರ ರೂಪನು ಹ ಎಂದರೆ ನೀನು ಪೂರ್ಣ ನಿರ್ದೋಷ 5 ಭೂತಾದಿ ದುಷ್ಟ ಗ್ರಹಗಳ ಖದ್ರೂಜಾದಿ ಸರ್ವ ವಿಷವ ನೀ ದಯದಿ ಪರಿಹರಿಪೆ ಆಹ ಭಕ್ತ ಜನರಿಗೆ ನೀ ಶುಭವಿತ್ತು ಅಕಾಲ ಮೃತ್ಯುವ ತರಿವ ರಕ್ಷಕ ನಮೋ ಎಂಬೆ 6 ದ್ವಾತ್ರಿಂಶ ಚತುರ್ವಿಂಶಾಕ್ಷರದ ಮಂತ್ರ ಗಾಯತ್ರಿ ಪ್ರತಿಪಾದ್ಯ ವೃತತಿಜಾಸನ ಮಂತ್ರ ಋಷಿಯು ಆಹ ಅಧಿಕಾರಿಗಳು ಇದನು ಶ್ರವಣ ಪಠಣ ಮಾಡೆ ಭೀತಿ ಮೋಹವÀ ಬಿಡಿಸಿ ನಿಖಿಳೇಷ್ಟವೀವೆ 7 ಜಯ ಜಯ ನರಸಿಂಹಸ್ವಾಮಿ ಜಯ ಜಯ ಸರ್ವಜ್ಞ ಭೂಮನ್ ಜಯ ಮಹಾ ತೇಜೋಬಲವೀರ್ಯ ಆಹ ಜಯ ಪುರುಷೋತ್ತಮ ವೇಧಾದಿ ಸುರರಿಂದ ಇಜ್ಯಪೂಜ್ಯನು ದೃಢಭಕ್ತಿಯಿಂ ಮುದದಿ 8 ನಾರ ಉರು ಗುಣಸಿಂಧು ನರಸಿಂಹ ಸುಪ್ರೀತನಾಗೊ ಚಿರಜ್ಞಾನ ಭಕ್ತಿಯ ಸತತ ಆಹ ಪರಮರಿಲ್ಲದ ಬಲಿ ನಿನ್ನಲಿ ಧ್ಯಾನ ತೀವ್ರ ಪ್ರೇರಿಸು ಎನಗೆ ಅನಂತ ಅನುತ್ತಮ 9 ಪ್ರೋದ್ಯಾರ್ಕನಿಭ ದೀಪ್ತವಾದ ವರ್ತುಲ ಉರು ನೇತ್ರತ್ರಯವು ಹಸ್ತದ್ವಯವು ಜಾನುವರೆಗೂ ಆಹ ಸುದರ್ಶನಿ ಶಂಖಿ ಮಹಾಲಕ್ಷಿಯುತ ಕೋಟಿ ಆದಿತ್ಯಾಧಿಕತೇಜ ಉತ್ಕøಷ್ಟ ಶಕ್ತ 10 ಕಮಠ ಕ್ರೋಡ ನೃಹರಿ ಮಾಣವ ಪರಶ್ವಿ ಸುಧನ್ವಿ ಬುದ್ಧ ಕಲ್ಕಿ ಶರಣ ಆಹ ವನರುಹನ ತಾತ ಪ್ರಸನ್ನ ಶ್ರೀನಿವಾಸ ಅನಿಷ್ಟಹ ಇಷ್ಟದ ಎನಗೆ ದಯವಾಗೊ 11
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀಕರಾರ್ಚಿತ ವಿಠಲ | ಸಾಕ ಬೇಕಿವಳಾ ಪ ವಾಕು ಮನ್ನಿಸುತಾ ಅ.ಪ. ಕಂಸಾರಿ ತವಪಾದಪಾಂಸು ಸೇವಾ ಸಕ್ತೆ | ಸಂಶಯ ನಿರಹಿತಾಅಂಶ ಆವೇಶ ಅವ | ತಾರಗಳ ತಿಳಿಸುತಲಿಶಂಸನದಿ ತವನಾಮ | ಸಂಪ್ರೀತನಾಗೊ 1 ದುಷ್ಕರ್ಮಗಳ ಭಾದೆ | ದೂರಾಗುವಂತೆಸಗೊನಿಷ್ಕಾಮ ಕರ್ಮಕ್ಕೆ | ಮಾರ್ಗವನೆ ತೊರೋ |ಶುಷ್ಕ ಆಚಾರಗಳ | ತ್ಯಜಿಸುತ್ತ ತವನಾಮಅಕ್ಕರದಿ ಭಜಿಪಂಥ | ಚೊಕ್ಕಮನವೀಯೊ 2 ಶರ್ವವಂದ್ಯನೆ ದೇವ | ತವನಾಮ ಸಂಸ್ಕøತಿಯಸರ್ವದಾ ಸರ್ವತ್ರ | ಇವಳಿಗೊದಗಿಸುತಾಭವವನದಿ ಉತ್ತರಿಸೊ | ಭವರೋಗ ಭೇಷಜನೆದರ್ವಿಜೀವಿಯ ಕಾಯೊ | ಪವನಂತರಾತ್ಮ 3 ಸೃಷ್ಟಾದಿಕರ್ತನೇ | ಸುಗುಣಮೂರುತಿ ದೇವಕಷ್ಟಂಗಳ ಪರಿಹರಿಸಿ | ಕಾಪಾಡೊ ಹರಿಯೇಕೃಷ್ಣಮೂರುತಿ ದೇವ | ಕಾರುಣ್ಯ ಸಾಗರನೆಸುಷ್ಠಮನ ನಿಲಿಸೊ ತವ | ಚರಣದೊಳು ಹರಿಯೆ 4 ಸೂಚಿಸಲು ತೈಜಸನು | ಯೋಚನೆಯ ಕೈಕೊಂಡುವಾಚಿಸಿಹೆ ಅಂಕಿತದಿ | ದಾಸ ಸದ್ವೀಕ್ಷಾ |ಮೋಚ ಕೇಚ್ಛೆಯ ಮಾಡಿ | ಕೈಪಿಡಿಯೊ ಈಕೆಯನುಖೇಚರಾಂತಕ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು