ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜನುಮ ಜನುಮದಲಿ ಎನಗಿರಲಿ ಪ ಹನುಮ ಭೀಮ ಮಧ್ವಮುನಿಗಳ ಸೇವೆಯು ಅ.ಪ ಮಾತರಿಶ್ವ ನೀ ಪ್ರೀತನಾಗೆ ಅಜ ತಾತನು ಸುಲಭದಿ ಒಲಿಯುವನು ಕೋತಿಯ ರೂಪದಿ ಭೂತಲದಲಿ ಬಲು ಖ್ಯಾತಿ ಪಡೆದ ರಾಮದೂತರ ಸೇವೆಯು 1 ಹರನ ಭಕುತ ಜರಾಸಂಧನ ಕಾಯುವ ಹರಿದು ಮುರಿದು ಬಲು ಸುಲಭದಲಿ ಹರಿಗಪರೋಕ್ಷದಿ ಅರ್ಪಣೆ ಮಾಡಿದ ಕುರುಕುಲಪತಿ ಬಲಭೀಮರ ಸೇವೆಯು 2 ಶುದ್ಧ ದ್ವಿಜಕುಲದಿ ಉದ್ಧವಿಸುತ ಅನಿ ರುದ್ಧನಿಗನುಮತವಾಗಿರುವ ಸಿದ್ಧಾಂತದ ಪದ್ಧತಿಯನು ತೋರಿದ ಮಧ್ವಮತದ ತತ್ವದಲಿ ಪ್ರಸನ್ನತೆ 3
--------------
ವಿದ್ಯಾಪ್ರಸನ್ನತೀರ್ಥರು
ಬಾ ವೆಂಕಟಶೈಲಾಧಿಪ ಮನ್ಮನಕೆ ತಡಮಾಡುವುದ್ಯಾಕೆ ಶ್ರೀ ವಲ್ಲಭನಾ ನಿನ್ನಂಘ್ರಿ ಕಮಲಕೆ ನಮಿಸುವೆ ಪ್ರತಿ ಕ್ಷಣಕೆ ಪ ನೀ ಒಲಿದೆನ್ನ ದಯಾವಲೋಕನದಿ ಪಾವನಮಾಡಲು ದೇವವರೇಣ್ಯ ಅ.ಪ. ವೈಕುಂಠಾಧೀಶ ವಿಗತಕ್ಲೇಶ ಚಿತ್ಸುಖಮಯವಪುಷ ಭವ ಮದನ ದಿ ವಾಕರ ಪ್ರಮುಖ ದಿವೌಕಸ ವರದ 1 ಮಮಸಮಾಸ್ವಾಮಿ ಮದಂತರ್ಯಾಮಿ ಸರ್ವಾಂತರ್ಯಾಮಿ ಅಮಿತಾತ್ಮ ಅತಿರೋಹಿತ ನಿಷ್ಕಾಮಿ ಸೇವಿತ ಶ್ರೀಭೂಮಿ ಅಮಿತ ಸುಗುಣಪೂರ್ಣ ಅಮಲಮಹಿಮ ಖಳದಮನ ದಯಾಳೊ 2 ನಾಮಾಭಿಧೇಯ ಲೋಕಾಧ್ಯಕ್ಷಾ ಕಮಲಾಯತಾಕ್ಷ ಸೋಮ ಭೂಮ ನಿಸ್ಸೀಮ ಮಹಿಮ ತ್ರಿ ಧಾಮರಾಮ ಘನಶ್ಯಾಮ ಲಲಾಮ 3 ಪವನಂತರಾತ್ಮಾ ನಿರ್ಮಲಾತ್ಮಾ ಪರಮಾತ್ಮ ಜ್ಞಾನಾತ್ಮಾ ಅವಿಕಾರ ಅತಿರೋಹಿತ ಭೂತಾತ್ಮ ಪೂತಾತ್ಮ ಮಹಿತಾತ್ಮ ತ್ರಿವಿಧ ಜೀವರಿಗೆ ವಿವಿಧ ಫಲಂಗಳ ತವಕದಿ ಕೊಟ್ಟವರವರ ಪಾಲಿಸೋ 4 ಸೃಷ್ಟ್ಯಾದಿಕರ್ತ ತ್ರಿಜಗದ್ಭರ್ತ ಲೋಕೈಕ ಸಮರ್ಥ ವೃಷ್ಣೀಶಾ ವೃಂದಾರಕ ರಿಪುಹರ್ತಾ ಮುಕ್ತರ ಪುರುಷಾರ್ಥ ಪರಮೇಷ್ಟಿ ಜನಕ ಶಿ ಷ್ಟೇಷ್ಟ ಹೃಷ್ಟ ಅನಿವಿಷ್ಟ ನಿವಿಷ್ಟ 5 ವೇದಸ್ತೇಯಾರಿ ಮಂದರಧಾರಿ ಭೂವರ ನರಹರಿ ಭೂ ದಾನವ ಬೇಡಿದ ಚಾಪಕುಠಾರಿ ರಾವಣಕುಲವೈರಿ ಯಾದವ ವಂಶ ಮಹೋದಧಿ ಚಂದಿರ ಸಾದಿತ ತ್ರಿಪುರ ಖಳೋದರ ಪಾಹಿ 6 ದಯದಿಂದ ನೋಡೊ ದೀನೋದ್ಧಾರ ಸದ್ಗುಣ ಗಂಭೀರಾ ಪ್ರಿಯ ನೀನೇ ಎನಗೆ ಲೋಕೋದ್ಧಾರ ಸೌಂದರ್ಯಸಾರಾ ಹಯಮುಖ ಲೋಕತ್ರಯ ಪತ್ರಯಾಮಯ ವಯನಗಯ್ಯ ನಾ ಬಯಸುವೆ ನಿನ್ನ7 ಭವ ಭಯಹಾರಿ ಬಿನ್ನೈಸುವೆ ಶೌರಿ ವಿಹಿತಾಹಿತಗಳು ನಿನ್ನನು ಮೀರಿ ಮಾಳ್ಪೆಗೆ ಕಂಸಾರೀ ಮಹಿತ ಶಮಲ ಸದಹಿತ ಲಕುಮಿ ಭೂ ಸಹಿತ ಮನದಿ ಸನ್ನಿಹಿತನಾಗೆಲೋ 8 ದಾತಾ ನೀನಲ್ಲದನ್ಯರರಿಯೇ ಕಂಡವರನು ಕರಿಯೇ ಪ್ರೀತನಾಗೆನ್ನೊಳು ಶ್ರೀ ಹರಿಯೇ ಮೂರ್ಲೋಕದ ದೊರೆಯೇ ಶ್ರೀ ತರುಣಿಯೊಡಗೊಡೀ ತನು ಸದನಕೆ ನೀ ತ್ವ ರಿತದಿ ಜಗನ್ನಾಥ ವಿಠ್ಠಲ 9
--------------
ಜಗನ್ನಾಥದಾಸರು
ಯಾಚಿಸುವೆನು ನಿನ್ನನಿದಕೆ ಕರುಣಸಾಗರ ಗಮನ ಜಗತ್ಪಾಲ ಪ್ರಭುವರ ಪ ದೈನ್ಯರಾಹಿತ್ಯ ರಹಿತ ಜಾಡ್ಯರಹಿತವು ಪಾದ ಕಮಲರತಿ ಸದಾವಕಾಲವು 1 ಪ್ರಭುವೆ ನಿನ್ನ ಭೃತ್ಯನಾನಾದಿಕಾಲದಿ ಅಭಯವಿತ್ತು ಪಾಲಿಸೆನ್ನ ಹೇ ದಯಾನಿಧೆ 2 ತುಷ್ಟನಾದರೇನುರುಷ್ಟನಾರೇನೊಲೊ ಇಷ್ಟದೈವ ನಿನ್ನ ಹೊರತು ಗತಿಯ ಇಲ್ಲೆಲೊ 3 ತುಷ್ಟನಾದ ಬಳಿಕ ನೀನೆ ಹೇ ಕೃಪಾಕರ ಬಿಟ್ಟುನಿನ್ನ ಭಜೀಸಲ್ಯಾಕೆ ಯಿತರಕಾಯ್ವರ 4 ನೀನೆ ರೋಷವನ್ನು ತಾಳೆ ಸುಜನಬಂಧುವೆ ದೀನನನ್ನು ಕಾಯ್ವರಾರು ನೀನೆಯಲ್ಲವೆ 5 ದೋಷ ಕ್ಷಮಿಸುವಲ್ಲಿ ನಿನ್ನ ಪೋಲ್ವ ಅರಸರು ದೇಶಸರ್ವಗಳಲಿ ಪುಡುಕಲಲ್ಲೆ ದೊರಕರು 6 ಎನ್ನಸರಿ ಕೃತಘ್ನ ವಂಚನೀಯ ಮಾಳ್ಪನ ವನ್ನಜಾಭವಾಂಡದೋಳಾವಲ್ಲಿ ಕಾಣೆನಾ 7 ದೀನ ದಾಸ ನಿನಗೆ ನಾನು ಹೇ ಜಗತ್ಪತೆ ಮಾಣದೆಲ್ಲಿರಲ್ಲಿ ತೋರಿ ಪ್ರೇಮ ಸಾಮ್ಯತೆ 8 ಎನ್ನ ವಿಷಯ ಭಯವು ನಿನಗೆ ಲಕ್ಷವಾವುದು ಮನ್ನಿಸೆನ್ನ ಪೊರೆವ ಸರ್ವಭಾರ ನಿನ್ನದು 9 ಈಶಪೂರ್ಣಕಾಯ ನಿನಗಸಾಧ್ಯವಾವುದು ಆಶೆಯನ್ನದಾವಘನವು ನಿನಗೆ ತೋರ್ಪುದು 10 ದಾಸನಾಶೆಪೂರ್ತಿಸಲ್ಕಾಲಸ್ಯವುಚಿತವೋ? ಅಶಿಶಿಸುವನು ದಾಶಗೈವುದೇನು ನೀತವೋ? 11 ಲೋಕನಾಥ ಕರುಣ ಪೂರ್ಣನೇ ಪರಾತ್ಪರ ಯಾಕೆ ಯೊನ್ನೊಳಿನಿತು ನೀನು ನಿರ್ದಯಾಪರ 12 ಗರವತಾಯಿತನನುಜಗೀಯೆ ಅವುದೋಗತಿ ತರುಳನಲ್ಲಿ ಕರುಣಿಸುವದು ಕೃಷ್ಣ ಮೂರುತಿ 13 ದಾತ ಜ್ಞಾತನು ನಿನ್ನ ವಿನಹಾಭಿಷ್ಟಫಲದ ಕರ್ತೃ ಆವನು 14 ಲಕ್ಷ್ಮಿಪತಿಯ ಪೋಲ್ಪೋದಾರ ಸುಗುಣ ಶೀಲನ ಈಕ್ಷಿಸಲ್ಕೆ ಜಗದೊಳಾರನೆಲ್ಲಿ ಕಾಣೆನಾ 15 ನಿನ್ನ ಔದಾರ್ಯ ಸರ್ವರಲ್ಲಿ ಸಾಮ್ಯವು ಎನ್ನೊಳಿನಿತ್ತು ನಿನ್ನದ್ಯಾಕೆ ಕಾರ್ಪಣ್ಯವು 16 ಆರ್ತಬಂಧುವೆಂದು ನಿನಗೆ ಶರಣುಬಂದೆನು ಸಾರ್ಥಕವನು ಮಾಡುವಿಯೊ ಜರಿದೆ ಬಿರುದನು 17 ದೀನ ಬಂಧು ಕರುಣಸಿಂಧು ಸುಹೃದ್ಬಾಂಧವ ಹೀನ ಭವಾರ್ಣವದಿ ಮಗ್ನನಿರುವೆ ಭೂಧವ 18 ತಾರಿಸೈ ಭವಾಬ್ದಿಯಿಂದ ಇಂದಿರಾವರ ಸೂರಿಜನರ ಸಂಗವೆನ್ನಗೀಯೋಗಿರಿಧರ19 ಶ್ರೀನೃಸಿಂಹ ಸತತ ನೀನು ಸದಯ ಮೂರುತಿ ದೀನ ನನ್ನೊಳ್ಯಾಕೆ ನಿರ್ದಯವ ತೋರುತಿ 20 ಸಾಧುಗಳು ನಿರ್ಗುಣಿಗಳಲ್ಲಿ ದಯವÀ ಮಾಳ್ಪರು ಸಾದರದಲಿ ಸರ್ವರಲ್ಲಿ ಸದಯರಿಪ್ಪರು 21 ಧನ್ಯಜನಕೆ ನಿನ್ನನೀವುದೇನು ಅಚ್ಚರ ದ್ಯೆನ್ಯ ಬಡುವನನ್ನು ಪಾಲಿಸುವದು ಪರತರ 22 ಚಂದ್ರಚಾಂಡಾಲಗೃಹದ ಮೇಲೆಯಾದರು ಸುರತರು 23 ಈತೆರ ಶ್ರೀ ಪತಿಯೆ ಎನಗೆ ಪ್ರೀತನಾಗೆಲೋ ನೀತವಾಗಿ ಕರುಣದಿಂದ ಕರವಪಿಡಿಯಲೊ 24 ಪುನಃ ಪುನಃ ನಿನ್ನನಿದನೆ ಬೇಡಿಕೊಂಬೆನಾ ಮನದೊಳು ಪ್ರಸನ್ನನಾಗು ಜನಕಜಾರಮಣ25 ಪಂಚರಾತ್ರಾಗಮೋಕ್ತ ಈಸ್ತುತಿಯನು ವಿನುತ ಶ್ರೀ ರಾಮಚಂದ್ರನು 26 ಮುದದಿ ಮನಸಿನೊಳಗೆ ತಾನೆವದಗಿ ಪೇಳಿದ ಅದನೆ ಶ್ರೀವರದೇಶ ವಿಠಲ ನುಡಿಸಿ ಬರೆಸಿದ 27
--------------
ವರದೇಶವಿಠಲ