ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀ ತಂದೆ ನಾಕಂದನಯ್ಯ ರಂಗಯ್ಯ ಪ ಪಾತಕಿಯು ನಾನೆಂದೆ ಘಾತಕನು ನಾನೆಂದೆ ನೀತಿಗಳ ಕಲಿಸೆಂದೆನೈ ತಂದೆ ನಿನ್ನ ಹಿಂದೆ ಅ.ಪ ತಂದೆ ನೀ ಕರೆತಂದೆ ಎಂದು ನಂಬುತೆ ಬಂದೆ ತಂದೆ ನೀ ಕೈಬಿಟ್ಟು ಹಿಂದೆ ನಿಂದೆ ನಿಂದೆಯಲಿ ನಾನೊಂದೆ ಬಂದೆ ಭವದಲ್ಲಿ ಮಂದರೋದ್ಧಾರ ಗೋಪಾಲ ತಾಪವತಂದೆ 1 ಹಿಂದೆ ಜನ್ಮಂಗಳಲಿ ಬೆಂದು ಬಳಲಿದೆನಯ್ಯ ಇಂದು ನರಜನ್ಮದಲಿ ಬಂದೆನಯ್ಯ ಬಂಧು ಬಳಗವಕಾಣೆ ಕಂದು ಕುಂದಿದೆನಯ್ಯ ಇಂದೀವರಾಕ್ಷ ಸಾನಂದ ಭೈರವೀಪ್ರಿಯಾ2 ಮುಂದಿನಾ ಪಥವಾವುದೆಂದರಿಯೆ ಮದನಾಂಗ ಮಂದಮತಿಯನು ನೀಗಿಸೆಂದೆನುವೆ ರಂಗ ಬಂದ ಸುಖದು:ಖಗಳನೊಂದೆಣಿಸು ನೀಲಾಂಗ ಕರವ ಪಿಡಿ ಮೋಹನಾಂಗ 3 ಎಂದು ತವಪಾದಾರವಿಂದವನು ಸೇರಿಸುವೆ ಅಂದು ಜನ್ಮವು ಸಫಲವೆಂದು ನಂಬಿರುವೆ ಮುಂದೆ ಜನ್ಮಗಳಿಲ್ಲ ಎಂದು ನಾನಂಬಿರುವೆ ಸಂದೇಹವೇತಕೆ ನಿನ್ನ ಸೂತ್ರದೋಲ್ ಮೆರೆದೆ 4 ಮಂದಾಕಿನೀಜನಕ ನಂದಗೋಪನ ಕಂದ ಇಂದೀವರಾಕ್ಷ ಮುಚುಕುಂದವರದಾ ಎಂದೆಂದು ವಂದನೆಯ ಮಾಳ್ಪುದೆನಗಾನಂದ ಇಂದದನು ಕರುಣಿಸೈ ಮಾಂಗಿರಿಯ ಗೋವಿಂದ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬಾರೆ ಸಖಿ ಪೋಗೋಣ ಬಾಯೆದ್ದು ಪೋಗೋಣ ಬಾ ಪ ಶೆಳೆಯ ಬ್ಯಾಡ ಸೀರೆನುಡುವೆ ಕರವಬಿಡೊ ಕೈಯ್ಯ ಮುಗಿವೆ ಪ್ರಾಣ ಪ್ರೀಯಾ ಅ.ಪ. ಚಪಲಮುಖಿಯೆ ಚಪಲವಾಗಿದೆ ನಿಲ್ಲದೆ ಹೋಗೋಣ ಪ್ರಿಯಚಾಪಲ್ಯರಹಿತ ಪೂರ್ಣ ಚಲ್ವ ನಿಲ್ಲೋ ನಿಲ್ಲೋ ನಿಲ್ಲದೇ ಪ್ರಿಯಾ1 ಮದನ ಬಾಣಕೆ ಬೆದರಿ ಬಂದೆ ಕುದುರೆನೇರಿ ಬೇಗ ಮದನನಯ್ಯ ಬದರಿವಾಸಿ ಪದರಬಿಡೊ ಪ್ರಿಯಾ2 ದುಂಡುಮುಖಿಯೆ ಗುಂಡುಕುಚವ ಕಂಡು ಮನವ ನಿಲ್ಲದು ಬೇಗ ಕೋದಂಡಪಾಣಿ ತಂದೆವರದಗೋಪಾಲವಿಠ್ಠಲದಂಡ ಪುರುಷ 3
--------------
ತಂದೆವರದಗೋಪಾಲವಿಠಲರು
ಸ್ವಾಮಿ ಕ್ಷೇಮೇಂದ್ರರ ಪ್ರೇಮ ಭಜಕ ಶ್ಯಾಮಸುಂದರ ಪ ಅಷ್ಟಭೋಗ ಪಟ್ಟಾರೋಹಣ ನಿಷ್ಟಜನರ ಕಷ್ಟಹರಣ ಸೃಷ್ಟಿ ಈರೇಳು ಇಟ್ಟು ಹೃದಯದಿ ಮುಟ್ಟಿರಕ್ಷಿಪ ಅಷ್ಟಮೂರುತಿ 1 ಕಮಲನಾಭ ಕಮಲವದನ ಕಮಲಪಾಣಿ ವಿಮಲಚರಿತ ಕಮಲಪೀಠನಯ್ಯ ಸುದಯ ಕಮಲನೇತ್ರ ಕಮಲಪ್ರಿಯಾ2 ಭಕ್ತಜನರ ಪ್ರಾಣಧವ ನಿತ್ಯ ನಿರ್ಮಲ ಮುಕ್ತಿಪದವ ಭಕ್ತಗಿತ್ತು ನೀಡು ಕ್ಷೇಮ ನಿತ್ಯ ನಿರ್ಮಲಾತ್ಮ ಶ್ರೀರಾಮ 3
--------------
ರಾಮದಾಸರು