ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಖಿಳ ಜನರು ಬಂದು ಮನ್ನಿಸುವರೊ ಮಹರಾಯ ಪ ಎನ್ನ ಪುಣ್ಯಗಳಿಂದ ಈ ಪರಿಯುಂಟೇನೊ ನಿನ್ನದೆ ಸಕಲ ಸಂಪತ್ತು ಅ.ಪ ಒಬ್ಬ ಹೆಂಗಸಿನ ಹೊಟ್ಟೆಗೆ ಹಾಕುವುದಕಿನ್ನು ತಬ್ಬಿಬ್ಬುಗೊಂಡನೊ ಹಿಂದೆ ನಿಬ್ಬರದಿಂದಲಿ ಸರ್ವರ ಕೂಡುಂಬೊ ಹಬ್ಬವನುಣಿಸುವಿ ಹರಿಯೆ 1 ಸಂಜೆತನಕವಿದ್ದು ಸಣ್ಣ ಸೌಟಿನ ತುಂಬ ಗಂಜಿ ಕಾಣದೆ ಬಳಲಿದೆನೋ ವ್ಯಂಜನ ಮೊದಲಾದ ನಾನಾ ರಸಂಗಳು ಭುಂಜಿಸುವುದು ಮತ್ತೇನೊ2 ಜೀರ್ಣ ಮಲಿನ ವಸ್ತ್ರ ಕಾಣದ ನರನಿಗೆ ಊರ್ಣ ವಿಚಿತ್ರ ಸುವಸನ ವರ್ಣವರ್ಣದಿಂದ ಬಾಹೋದದೇನೊ ಸಂ ಪೂರ್ಣಗುಣಾರ್ಣವ ದೇವ 3 ನೀಚೋಚ್ಚ ತಿಳಿಯದೆ ಸರ್ವರ ಚರಣಕ್ಕೆ ಚಾಚಿದೆ ನೊಸಲ ಹಸ್ತಗಳ ಯೋಚಿಸಿ ನೋಡಲು ಸೋಜಿಗವಾಗಿದೆ ವಾಚಕ್ಕೆ ನಿಲುಕದು ಹರಿಯೆ 4 ಮಧ್ಯಾಹ್ನ ಕಾಲಕ್ಕೆ ಅತಿಥಿಗಳಿಗೆ ಅನ್ನ ಮೆದ್ದೆನೆಂದರೆ ಈಯಗಾಣೆ ಸತ್ಪಾತ್ರ ಕೂಡುಂಬೊ ಪದ್ಧತಿ ನೋಡೊ ಪುಣ್ಯಾತ್ಮ 5 ಮನೆ ಮನೆ ತಿರಿದರು ಕಾಸು ಪುಟ್ಟದೆ ಸು ಮ್ಮನೆ ಚಾಲ್ವರಿದು ಬಳಲಿದೆನೊ ಹಣ ಹೊನ್ನು ದ್ರವ್ಯಂಗಳಿದ್ದಲ್ಲಿಗೆ ತನಗೆ ತಾನೆ ಪ್ರಾಪ್ತಿ ನೋಡೊ ಜೀಯಾ 6 ವೈದಿಕ ಪದವಿಯನೀವಗೆ ಲೌಕಿಕ ಐದಿಸುವುದು ಬಹು ಖ್ಯಾತೆ ಮೈದುನಗೊಲಿದ ಶ್ರೀ ವಿಜಯವಿಠ್ಠಲನ ನಿನ್ನ ಪಾದಸಾಕ್ಷಿಯನುಭವವೊ 7
--------------
ವಿಜಯದಾಸ
ಬಾ ಬಾ ಬಾ ಹರಿಯೇ ಮೂರ್ಲೋಕದ ದೊರೆಯೇ ಪ. ಸರ್ವೋತ್ತಮ ಸರ್ವಾಂತರ್ಯಾಮಕ ಸರ್ವಾಧಾರ ಪ್ರವೀರ ಶೂರವರ 1 ನಿತ್ಯಮುಕ್ತ ಪರಿಪೂರ್ಣಗುಣಾರ್ಣವ ಸತ್ಯನಿಯಾಮಕ ಸತ್ಯವಾದರೆ ತ್ವರೆ 2 ರೂಪತ್ರಯ ಭವತಾಪಶಮನ ಸ- ದ್ವ್ಯಾಪಕ ಸ್ಥಾಪಕ ಶ್ರೀ ಪುರುಷೋತ್ತಮ 3 ಭಜಕರ ಭಾಗ್ಯನಿಧಿಯು ನೀನೆಂಬುದು ನಿಜವಾಗಿರೆ ಶ್ರೀ ರುಜುಗಣೇಶಪತಿ 4 ಶ್ರೀಲಕ್ಷ್ಮೀನಾರಾಯಣ ನಿರ್ಗುಣ ಮೂಲೇಶ ಮುಕುಂದ ಮುನೀಂದ್ರವಂದಿತ 5
--------------
ತುಪಾಕಿ ವೆಂಕಟರಮಣಾಚಾರ್ಯ
ಬಾ ಬಾ ಬಾ ಹರಿಯೇ ಮೂರ್ಲೋಕದ ದೊರೆಯೇ ಪ.ಸರ್ವೋತ್ತಮ ಸರ್ವಾಂತರ್ಯಾಮಕಸರ್ವಾಧಾರ ಪ್ರವೀರ ಶೂರವರ 1ನಿತ್ಯಮುಕ್ತ ಪರಿಪೂರ್ಣಗುಣಾರ್ಣವಸತ್ಯನಿಯಾಮಕ ಸತ್ಯವಾದರೆ ತ್ವರೆ 2ರೂಪತ್ರಯ ಭವತಾಪಶಮನ ಸ-ದ್ವ್ಯಾಪಕ ಸ್ಥಾಪಕ ಶ್ರೀ ಪುರುಷೋತ್ತಮ 3ಭಜಕರ ಭಾಗ್ಯನಿಧಿಯು ನೀನೆಂಬುದುನಿಜವಾಗಿರೆ ಶ್ರೀ ರುಜುಗಣೇಶಪತಿ 4ಶ್ರೀಲಕ್ಷ್ಮೀನಾರಾಯಣ ನಿರ್ಗುಣಮೂಲೇಶ ಮುಕುಂದ ಮುನೀಂದ್ರವಂದಿತ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮಹಾಲಕ್ಷುಮಿಗೆನಿತ್ಯಮಂಗಳಶುಭಮಂಗಳಮಹಾವಿಷ್ಣುವಿನ ರಾಣಿಗೆ ಮಹಾ ಮಂಗಳ ಪ.ಪೂರ್ಣಚಂದ್ರಾರ್ಣವ ಪೂರ್ಣಗುಣಾರ್ಣವಪೂರ್ಣಮನೋರಥದಾಯಕಿಗೆ ಸುಪರ್ಣೇಂದ್ರವಾಹನನರ್ಧಾಂಗಿ ದೇವಿಗೆ ವಿಶ್ವ ನಾಯಕಳಾದ ಜಗನ್ಮಾತೆಗೆ 1ಕರವೀರಪುರದಲ್ಲಿ ನೆರಹಿದ ಭಕ್ತರಕರಕರದಭೀಷ್ಠೆಯ ಕೊಡುವಂದಿಗೆಕರಕಮಲಗಳಲ್ಲಿ ಅಕ್ಷಯಾಮೃತಕುಂಭಧರಿಸಿದ ಜಾಣೆ ಕಲ್ಯಾಣಿಗೆ ನೀಲವೇಣಿಗೆ 2ಶ್ರೀಮದನಂತಾಸನ ವೈಕುಂಠಶ್ರೀ ಮತ್ಯ್ವೇತದ್ವೀಪನಿವಾಸಿನಿಸ್ವಾಮಿ ಪ್ರಸನ್ನವೆಂಕಟನ ಪಟ್ಟದರಾಣಿಕಾಮಿತಾರ್ಥದಾಯಿ ಕಲ್ಯಾಣಿಗೆ 3
--------------
ಪ್ರಸನ್ನವೆಂಕಟದಾಸರು