ಒಟ್ಟು 9 ಕಡೆಗಳಲ್ಲಿ , 7 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅವತಾರತ್ರಯ (1) ಕರುಣದೆನ್ನನು ಕಾಯಬೇಕಯ್ಯಾ ಕದರೂರ ರಾಯಕರುಣದೆನ್ನನು ಕಾಯಬೇಕ್ಕೆಹರಸುರಾದಿಗಳಿಂದ ವಂದ್ಯನೇದುರಿಥ ಪರಿಹರಿಸಿಹ ಪರಕೆ ನೀ-ನ್ಹರುಷದಲಿ ಸಾಧನ ಮಾಡಿ ಪ ಅಂಜನಿಯ ಗರ್ಭದಲ್ಲಿ ಜನಿಸಿದೆಯೊ ಶ್ರೀರಾಮನಂಘ್ರಿಕಂಜದಲ್ಲಿಹ ಭ್ರಮರನೆನಿಸಿಯಾಅಂಜದಂಬುಧಿಯ ದಾಟಿ ಸೀತೆಯ -ನಂಜಿಸುವ ರಾವಣನ ಬಲಗಳಭಂಜಿಸಿದಿ ಧರೆಯೊಳಗೆ ತೇಜಃಪುಂಜನಾಗಿಹ ಪ್ರಭುವೆ ಎನ್ನನು 1 ಅಖಿಳ ಕುರುಬಲಅಂತಕನಿಗೊಪ್ಪಿಸಿದಿ ಜಗದಾ -ದ್ಯಂತ ಸುಜನರಿಗಿತ್ತಿ ಸಂತಸಸಂತತೆನ್ನನು ಬಿಡದೆ ಪವನನೆ 2 ಮಧ್ಯಗೇಹನಲ್ಲಿ ಪುಟ್ಟಿದೆಯೊ ಸಚ್ಛಾಸ್ತ್ರ ಪಠಿಸಿ ಆ -ಪದ್ಧ ಮತದವರನ್ನು ಕುಟ್ಟಿದಿಯೊಉಧ್ವನುತ ರಮಾಪತಿ ವಿಠ್ಠಲನಸದ್ಯ ಮನದಲಿ ತೋರಿ ಕೊಟ್ಟೆ -ನ್ನುದ್ಧರಿಸಿ ಭವಕಡಲ ದಾಟಿಸೊಮಧ್ವಮುನಿ ಸಜ್ಜನತ್ಪ್ರಸಿದ್ಧನೆ 3
--------------
ರಮಾಪತಿವಿಠಲರು
ಕಾಯ ಬಲು ಹೇಯವೊ | ಸಾಕು ಸಾಕು ಸಂಸಾರ ನೆಚ್ಚದಿರು ಎಚ್ಚರಿಕೆ ಪ ಊಧ್ರ್ವಾಧೋ ಭಾಗದಿಂದ ಕೂಡಿದಾ ರಕ್ತಶುಕ್ಲ | ಅರ್ಧರ್ಧ ಪ್ರವೇಸಿಯಾಗಿ | ವರ್ಧನಾಗಿ ಮಾಂಸ ಪಿಂಡಿಕೆಯಲಿ ಬೆಳೆದು | ಅರ್ಧವದೊಳಗೆ ಬಳುಲುವುದೇನೊ ಮಹಾ ಕಠೀಣಾ 1 ಸನ್ನಿರೋಧವಾದ ಪ್ರಾದೇಶದಲಿ ನೀನು | ಬನ್ನ ಬಡುವದು ಜನಕೆ ಅರಿಯನಲ್ಲಾ | ಮುನ್ನೆ ಇಂದ್ರನಿಗಾಗಿ ವರವಿತ್ತ ಸಂಪತ್ತು | ಇನ್ನು ನಿನ್ನ ಸುತ್ತ ಬಂದದೆ ತಿಳಿದುಕೋ 2 ವಾತ ಶೈತ್ಯಜ್ವರ ಕೆಮ್ಮು | ಸಪುತ ಧಾತುಗಳಿಂದ ಬರುವ ರೋಗ | ಕ್ಲೇಶ ಮೋಹಗಳೊಡನೆ | ಮಾಯಾ 3 ಕಾಮ ಮದ ಗರ್ವದಲಿ ಪುಂಜನಾಗಿ ದುರಳ ನಿ | ಜ ಮಗಳ ಕೂಡ ಬೆರದಾಡಿ ಬೆರೆದು | ರೋಮರೋಮ ವಿಷಯ ಪೂರ್ತಿಯಾಗಿ ಚರಿಸಿ | ಪಾಮರನಾಗಿ ಬಳಲದಿರು ಬಹು ಜೋಕೆ 4 ಸತಿ ಸುತರು ಮಿಕ್ಕಾದ ಬಂಧುಗಳು ನೆರೆನೆರೆದು | ಪ್ರತಿದಿವಸದಲಿ ಅಟ್ಟುವುದು ನೋಡು| ಮತಿ ಚಂಚಲವಾಗಿ ಸತ್ಕರ್ಮ ವೃತ್ತಿಗೆ | ಪ್ರತಿಕೂಲವಾಗುವದು ಪ್ರೀತಿಯಾಗದು ಮುಂದೆ 5 ಎಂತು ನೋಡಲು ವಿಷಯ ಅನುಭವಿಸಿದರು ಅದರ | ಅಂತು ಕಂಡವರಾರು ವಲ್ಲೆನೆಂದು | ಭ್ರಾಂತಿಯಿಂದಲಿ ತಿರುಗಿ ಬಯಲಾಗೋದಲ್ಲದೆ | ಚಿಂತೆ ಇಷ್ಟಷ್ಟು ಏನೆಂದು ಪೇಳಲಿ 6 ಯಲೋ ಮನವೆ ಸಾರಿ ಪೇಳಿದೆನು ಚನ್ನಾಗಿ ನೀ | ನೆಲೆ ಮಾಡಿಕೋ ಜ್ಞಾನ ಭಕುತಿ ವಿತ್ತಾ | ಸುಲಭ ದೇವರ ದೇವ ವಿಜಯವಿಠ್ಠಲರೇಯ | ಕೆಲಕಾಲ ನೆನೆದು ಸುಖಿಯಾಗು ಸುಜನರಾ ಕೇಳು 7
--------------
ವಿಜಯದಾಸ
ಜಯ ಜಯ ಮಂಗಳಜಯ ಮಂಗಳ ಶುದ್ಧಾದೈತನಿಗೆ ಪ ಅಗಣಿತ ಮಹಿಮಗೆ ಅಕ್ಷಯರೂಪಗೆಅಖಂಡ ಸಹಜಾನಂದನಿಗೆಝಗಿ ಝಗಿತಾತ್ಮಗೆ ಝಳುಕಿಸಿ ಕರ್ಣದಿಝಣನಾದವ ಕೇಳ್ವನಿಗೆಸೊಗಯಿಸಿ ಚಂದ್ರನ ಶತಕೋಟಿಯಪ್ರಭೆ ಸಾರವ ಸವಿಸವಿದುಣ್ಣುವಗೆಬಗೆ ಆನಂದದಿ ಸುಖಿಸುವ ದೇವಗೆಭಾಸ್ಕರ ತೇಜಃಪುಂಜನಿಗೆ1 ನಿತ್ಯಾನಂದಗೆ ನಿರ್ಮಲರೂಪಗೆನಿಶ್ಚಲ ಪರಬ್ರಹ್ಮಾತ್ಮನಿಗೆನಿತ್ಯಶುದ್ಧಗೆ ನಿಜನಿರ್ಮಾಯಗೆನಿಜಬೋಧ ಜ್ಞಾನೈಕ್ಯನಿಗೆಪ್ರತ್ಯಗಾತ್ಮಗೆ ಪೂರ್ಣಬ್ರಹ್ಮನಿಗೆಪರಮ ಪರತರ ಪಂಡಿತಗೆನಿತ್ಯತೃಪ್ತಗೆ ನಿಗಮಾಗಮನಿಗೆನಿಶ್ಚಿಂತಾತ್ಮ ನಿಸ್ಪøಹಗೆ 2 ಕೈಯಲಿ ಪಿಡಿದಿಹ ಜಪಮಾಲೆಯಸರ ಕರ್ಣಕುಂಡಲವಿಟ್ಟಿಹಗೆಮೈಯೊಳು ಪೊದ್ಹಿಹ ಕಾಷಾಯಂಬರಮಿರುಪಿನ ಕೌಪೀನವುಟ್ಟಿಹಗೆಮೈಯೊಲೆದಾಡುವ ಸ್ವಾತ್ಮಾನಂದದಿನಲಿವ ಸದ್ಗುಣ ಶಾಂತನಿಗೆಮೈಯನೆ ಸದ್ಗತಿ ಭಕ್ತರಿಗೀಯುವವ್ಯಾಪಿತ ಜೀವನ್ಮುಕ್ತನಿಗೆ3 ಆರವಸ್ಥೆಯ ಧರಿಸಿಯೆ ಜಗದಲಿಅನಂತರೂಪ ತಾನಾಗಿಹಗೆಮೀರಿಯೆ ಸದ್ಗುಣ ನಿರ್ಗುಣ ರೂಪವಮೆರೆದಿಹ ಮುಮುಕ್ಷಾಂಗನಿಗೆತೋರುವ ತ್ವಂಪದ ತತ್ತ್ವಮಸಿಪದತೋರಿ ವಿರಾಜಿಪ ತುಷ್ಟನಿಗೆಧೀರೋದ್ಧಾರಗೆ ದೀನರನಾಥಗೆದೃಶ್ಯಾದೃಶ್ಯ ವಿದೂರನಿಗೆ 4 ನಿರುಪಮ ನಿರಮಯ ನಿಜ ನಿರ್ಲಿಪ್ತಗೆನಿರ್ಭಯ ನಿರ್ವಿಕಲ್ಪನಿಗೆಪರಮಪುರುಷಗೆ ನಿಗಮೋದರನಿಗೆಪರಮಾರೂಢಾ ಮಾರ್ಗನಿಗೆಗುರುಚಿದಾನಂದ ಅವಧೂತಾತ್ಮಗೆಗುಣನಿಧಿ ತುರಿಯಾತೀತನಿಗೆಸ್ಥಿರಸಿದ್ಧ ಪರ್ವತದಾಸ ಶ್ರೀಪುರುಷಗೆಬಗಳಾ ಶ್ರೀಗುರು ರೂಪನಿಗೆ 5
--------------
ಚಿದಾನಂದ ಅವಧೂತರು
ಯಾಕುಪೇಕ್ಷಿಸುವಿ ಕರುಣೈಕನಿಧಿ ನರಸಿಂಹ ವೈರಿ ಪುಂಜನನ ಶ್ರೀಕರನೆ ನೀನೆನಗೆ ಶರಣೆಂದು ನಂಬಿದೆನು ಸಾಕಬೇಕಯ್ಯ ದಾಸರನು ಪ. ಹುಡುಗ ಪ್ರಲ್ಹಾದ ಜಗದೊಡೆಯ ನೀನಹುದೆಂಬ ನುಡಿಯಲಾಲಿಸುತವನ ಪಿತನು ಕಡಿವೆನೆಂದೆದ್ದು ಮುಂದಡಿಯಿಟ್ಟು ಮುಂದರಸಿ ದೃಢ ಮುಷ್ಟಿಯಿಂದ ಖಂಬವನು ಬಡಿಯುತಿರೆ ಶತಕೋಟಿ ಸಿಡಿಲಂತೆ ಗರ್ಜಿಸುತ ಘುಡುಘುಡಿಸಿ ಬಂದು ದೈತ್ಯನನು ಪಿಡಿದೆತ್ತಿ ತೊಡೆಯ ಮೇಲ್ ಕೆಡಹಿ ದಶನಖದಿಂದ ಒಡಲ ಬಗೆದನೆ ನೀಚರನು 1 ನರಸಿಂಹನೆಂಬ ಈರೆರಡು ವರ್ಣವ ಜಪಿಸೆ ದುರಿತ ದೂರೋಡುತಿಹವೆಂದು ಸರಸಿಜೋದ್ಭವ ಶಂಭು ಸುರನಾಥ ಮುಖ್ಯಮುನಿ ವರರು ಕೊಂಡಾಡುತಿಹರಿಂದು ಅರಿತದನು ತ್ವತ್ಪಾದ ಸರಸಿಜವೆ ಶರಣೆಂದು ದೊರೆ ನಿನ್ನ ನಂಬಿಕೊಂಡಿಹೆನು ಅರಿಭಾವ ಸಾಧಿಸುವ ದುರುಳರನು ಪಿಡಿದವರ ಕರುಳ ತೆಗೆದೆತ್ತಿ ಬೀರದನು 2 ಅತಿ ಸೂಕ್ಷ್ಮಯಂದಗ್ನಿ ಗತಿಯನ್ನುಪೇಕ್ಷಿಸಲು ವಿತತವಾಗುವುದು ಕ್ಷಣದೊಳಗೆ ಜತನ ಮಾಡುವರದರ ಗತಿಯನಳಿಸುವುದು ಸ- ಮ್ಮತವಾಗಿರುವುದು ಜಗದೊಳಗೆ ಪತಿತಪಾವನ ಶೇಷಗಿರಿರಾಜ ನೀ ಯೆನಗೆ ಗತಿಯಾಗಿ ಸಲಹುವುದರಿಂದ ವಿತಥಾಭಿಲಾಷೆಯಾತತಾಯಿಗಳ ತ್ವರೆಯಿಂದ ಹತಮಾಡಿಸು ಶ್ರೀ ಮುಕುಂದ 3
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀಶ ವೇದವ್ಯಾಸನಾದನು ಪ ಶ್ರೀಶ ವೇದವ್ಯಾಸನಾಗಲು ಸಾಸಿರ ನಯನ ಸಾಸಿರ ವದನ ಕರ ಮಿಕ್ಕ ಸುರರೆಲ್ಲ ತು- ತಿಸಿ ಹಿಗ್ಗುತ ಹಾರೈಸಲಂದು ಅ.ಪ. ದರ್ಪಕ ಜನಕ ಸರ್ಪತಲ್ಪನಾಗಿ ತಪ್ಪದನುಗಾಲ ಇಪ್ಪ ವಾರಿಧೀಲಿ ಕಂದರ್ಪ ಹರನೈಯ ಸುಪರ್ಣರಥನಾಗಿ ಒಪ್ಪಿಕೊಂಡು ಇಪ್ಪತ್ತು ಲಕ್ಷಗಲಿಪ್ಪ ಯೋಜನದ ಅಪ್ಪನ ಅರಮನೆ ದರ್ಪಣದಂತೆ ತಾ ರಪ್ಪಥ ಮೀರಿದಂತಿಪ್ಪದು ನೋಡಿ ಸಾ- ಮೀಪಕ್ಕೆ ವಾಣೀಶ ಬಪ್ಪ ಬೇಗಾ 1 ಬಂದು ಬೆನ್ನೈಸಿದ ಮಂದಮತಿ ಕಲಿ- ಯಿಂದ ಪುಣ್ಯಮೆಲ್ಲ ಹಿಂದಾಯಿತೆನೆ ಮು ಕುಂದ ಭಕ್ತನಿಗೆ ಒಂದೆ ಮಾತಿನಲಾ- ನಂದ ಬಡಿಸಿ ಪೋಗೆಂದು ಪೇಳೆ ಅಂದು ಸುಯೋಜನಗಂಧಿ ಗರ್ಭದಲ್ಲಿ ನಿಂದವತರಿಸುತ ಪೊಂದಿದ ಅಜ್ಞಾನ ಅಂಧಕಾರವೆಲ್ಲ ಹಿಂದು ಮಾಡಿ ಸುರ- ಸಂದಣಿ ಪಾಲಿಸಿ ನಿಂದ ದೇವ 2 ಕೆಂಜೆಡೆವೊಪ್ಪ ಕೃಷ್ಣಾಜಿನ ಹಾಸಿಕೆ ಕಂಜಾಪ್ತನಂದನದಿ ರಂಜಿಸುವ ಕಾಯ ಮಂಜುಳ ಸುಜ್ಞಾನ ಪುಂಜನು ವಜ್ಜರ- ನಿತ್ಯ ಅಂಜಿದಗೆ ಸಂಜೆಯ ತೋರಿ ಧನಂಜಯ ಶಿಷ್ಯ ನೀ- ಗಂಜದಂತೆ ಕರಕಂಜವ ತಿರುಹಿ ನಿರಂಜನ ಪೇಳಿದ ಕುಂಜರ ವೈರಿಯ ಭಂಜನನು 3 ಗಂಗಾತೀರದಲಿ ಶೃಂಗಾರ ಉಪವ- ನಂಗಳದರೊಳು ಶಿಂಗಗೋಮಾಯು ಭು ಮೂಷಕ ಮಾತಂಗ ಸಾರಮೇಯ ಕೊಂಗಹಂಗ ಸರ್ವಾಂಗ ರೋಮ ಶರಭ ವಿಹಂಗ ಶಾರ್ದೂಲ ಸಾ- ರಂಗ ಕುರಂಗ ಕುಳಿಂಗ ಪಾಳಿಂಗ ಪ್ಲ ವಂಗ ತುರಂಗ ಪತಂಗ ಭೃಂಗಾದಿ ತು- ರಂಗವು ತುಂಬಿರೆ ಮಂಗಳಾಂಗ 4 ಬದರಿ ಬೇಲವು ಕಾದರಿ ಕಾಮರಿ ಮಧುಮದಾವಳಿ ಅದುಭುತ ತೆಂಗು ಕದಳಿ ತಪಸಿ ಮದಕದಂಬ ಚೂ- ತದಾರು ದ್ರಾಕ್ಷಿಯು ಮೃದು ಜಂಬೀರವು ಬಿದಿರು ಖರ್ಜೂರ ಮೋದದಿ ದಾಳಿಂಬ ತುದಿ ಮೊದಲು ಫ ಲದ ನಾನಾವೃಕ್ಷ ಪದಲತೆಯ ಪೊದೆಯು ಫಲ್ಲಸೈ ಇದೆ ಆರು ಋತು ಸದಾನಂದ 5 ವನದ ನಡುವೆ ಮುನಿಗಳೊಡೆಯ ಕಾನನ ಸುತ್ತಲು ಆ- ನನ ತೂಗುತ್ತ ಧ್ವನಿಯೆತ್ತಿ ಬಲು- ಗಾನ ಪಾಡಿದವು ಗುಣದಲ್ಲಿ ಕುಣಿದು ಖಗಾದಿ ಗಣಾನಂದದಿಂದಿರೆ ವನನಿಕರ ಮೆಲ್ಲನೆ ಮಣಿದು ನೆ- ಲನ ಮುಟ್ಟುತಿರೆ ಅನಿಮಿಷರು ನೋ ಡನಿತಚ್ಚರಿಯನು ಪೇಳೆ 6 ಮೌನಿ ನಾರದನು ವೀಣೆ ಕೆಳಗಿಟ್ಟು ಮೌನವಾದನು ಬ್ರಹ್ಮಾಣಿ ತಲೆದೂಗಿ ಗೀರ್ವಾಣ ಗಂಧರ್ವರು ಗಾನ ಮರೆದು ಇದೇನೆನುತ ಮೇನಕೆ ಊರ್ವಸಿ ಜಾಣೀರು ತಮ್ಮಯ ವಾಣಿ ತಗ್ಗಿಸಿ ನರ್ತನೆಯ ನಿಲ್ಲಿಸಿ ದೀನರಾದರು ನಿಧಾನಿಸಿ ಈಕ್ಷಿಸಿ ಎಣಿಸುತ್ತಿದ್ದರು ಶ್ರೀನಾಥನ 7 ನಮೋ ನಮೋಯೆಂದು ಹಸ್ತ- ಕಮಲ ಮುಗಿದು ನಮಗೆ ನಿಮ್ಮಯ ಅಮಲಗುಣ ನಿಗಮದಿಂದೆಣಿಸೆ ಕ್ರಮಗಾಣೆವು ಉತ್ತಮ ದೇವ ಕೂರ್ಮ ಖಗಮೃಗ ಸಮವೆನಿಸಿ ಅ- ಚಮತ್ಕಾರದಲ್ಲಿ ನಾಮಸುಧೆಯಿತ್ತ ರಮೆಯರಸ ಆಗಮನತ8 ಇದನು ಪಠಿಸೆ ಸದಾ ಭಾಗ್ಯವಕ್ಕು ಮದವಳಿ ದಘವುದದಿ ಬತ್ತೋದು ಸಾಧನದಲ್ಲಿಯೆ ಮದುವೆ ಮುಂಜಿ ಬಿಡದಲ್ಲಾಗೋದು ಶುಭದಲ್ಲಿ ಪದೆಪದೆಗೆ ಸಂಪದವಿಗೆ ಜ್ಞಾನ- ನಿಧಿ ಪೆಚ್ಚುವುದು ಹೃದಯ ನಿರ್ಮಲ ಬದರಿನಿವಾಸ ವಿಜಯವಿಠ್ಠಲ ಬದಿಯಲ್ಲೆ ಬಂದೊದಗುವ 9
--------------
ವಿಜಯದಾಸ
ಹರಿಹರೀ ಎನ್ನ ದೋಷವಳಿಯೊ ಪ ಕರಿವರದ ಕೃಪೆಮಾಡು ನಿತ್ಯಮಿತ್ರನೆ ಕೃಷ್ಣ ಅ.ಪ. ಬೇಲಿ ಎದ್ದು ಹೊಲವ ಮೆದ್ದರೆ ಬ್ಯಾರಿನ್ನು ಪಾಲಿಪರು ಯಾರೆಯ್ಯ ಶೀಲರೊಡೆಯ ಫಾಲಾಕ್ಷಸಖ ನಿನ್ನ ಅಚುಂಬಿತ ಕಾರುಣ್ಯ ಶ್ರೀಲಕ್ಷ್ಮೀ ಶ್ರುತಿ ರಾಸಿ ವರ್ಣಿಪರೊ ಗುಣನಿಧಿಯೆ 1 ಯಾತನೆಲ್ಹಣ್ಣಾದೆ ಪೂತನಿಯ ಅಸುಹರನೆ ಪಾತಕಕೆ ಕೊನೆಗಾಣೆ ಪಾರ್ಥಸೂತ ಆತ್ಮಬಂಧುವೆ ಇನ್ನು ತಡಮಾಡೆ ತಡಿಲಾರೆ ಪೂತನ ಮಾಡೆನ್ನ ಪ್ರಾಣೇಶ ಪ್ರಿಯಬಂಧು 2 ದೋಷಪುಂಜನು ನಾನು ಶೇಷಶಯನನೆ ಬಲ್ಲ ಪೋಷಕನು ನೀನೆಂದು ವೇದರಾಸಿ ಘೋಷಿಪವು ಅನವರತ ಕಾಪಾಡು ಶ್ರುತಿವಾಕು ದೋಷಕರ ಜಯೇಶವಿಠಲನೆ ಮೈದೋರು 3
--------------
ಜಯೇಶವಿಠಲ
ಹಿತ ನೋಡಿ ಸಂತರ ಕೂಡೀ ಪ ಹಿತ ನೋಡಿ ಸಂತರ ಕೂಡೀ | ಮತಿ ನಿಜ ಮಾಡಿ | ಶ್ರೀ ಪತಿಯ ಕೊಂಡಾಡಿ 1 ದುರಿತ ವಿಭಂಗಾ | ನೆರೆ ಕರುಣಾಂಗದಿ | ಹೊರೆವನು ರಂಗಾ 2 ಪರಿ | ರಂಜಿಸುತಿಹ ತೇಜಃ | ಪುಂಜನ ನೋಡಿ 3 ಕಂಡಪದಕ ಹರಿದಂಡಲಿಯದೆ ನೆಲೆ | ಗೊಂಡ ವಿವೇಕದ | ಪಂಡಿತರಾಗಿ 4 ತಂದೆ ಮಹಿಪತಿನಂದನು ಸಾರಿದಾ | ಬಂದ ಜನುಮಕಿದು | ಛಂದದು ನೋಡಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕೋಳಿ ಕೊಗಿತಲ್ಲಾ - ಲಕ್ಷ್ಮೀಲೋಲನಲ್ಲದೆ ಅನ್ಯರಾರಿಲ್ಲವೆಂದು ಪ.ಮೊದಲ ಜಾವದಲಿ ಮುಕುಂದನೆಂದು ಕೂಗಿಎರಡಲಿ ಶ್ರೀ ವೆಂಕಟಾದ್ರಿಯೆಂದು ||ಉರಗಗಿರಿಯ ವಾಸ ಯಾದವ ಕುಲ ಗೊಲ್ಲಚದುರ ಚಲ್ಲಪಿಲ್ಲಿ ರಾಯನಲ್ಲದಿಲ್ಲವೆಂದು 1ಮೂರು ಜಾವದಲಿ ಮುರಾರಿಯೆಂದು ಕೂಗಿನಾಕರಲಿ ನಾರಾಯಣಯೆನಲು ||ಕ್ಷೀರಾಬ್ಧಿಯ ವಾಸ ಲಕ್ಷ್ಮೀಪತಿ ಕೋನೇರಿವಾಸ ವೆಂಕಟಕೃಷ್ಣರಾಯನೆಂದು 2ಪರಮಪುರುಷ ಮುಖ್ಯ ಆಧಾರಭೂತಕರುಣದ ಪುಂಜನು ಜಗದಾದಿ ತಾ ||ಕಮಲಸಂಭವ ಮುಖ್ಯ ಕಾರುಣ್ಯ ಮೂರುತಿವಿಮಲಕಾಪುರ ತಿಮ್ಮರಾಯನಲ್ಲದಿಲ್ಲವೆಂದು 3ರೆಕ್ಕೆಯ ಬಿಚ್ಚಿ ಪಸರಿಸಿ ಡಂಗುರ ಹೊಯ್ದಕೊಕ್ಕನು ಮೇಲೆ ನೆಗಹಿಕೊಳುತ ||ಚಕ್ಕನೆ ಕೇರಿ ಕೇರಿಯಗುಂಟ ಸಾಗುತಮುಕುಂದನಲ್ಲದೆ ಅನ್ಯರಾರಿಲ್ಲವೆಂದು 4ಐದು ಜಾವದಲಿ ಅನಂತನೆಂದು ಕೂಗಿಆರರಲ್ಲಿ ಅಳಗಾದ್ರೀಶಯೆಂದು ||ಏಳರಲ್ಲಿ ಕಾಶಿಯ ಬಿಂದುಮಾಧವಎಂಟಕೆ ಪುರಂದರವಿಠಲರಾಯನೆಂದು 5
--------------
ಪುರಂದರದಾಸರು
ನಗೆಯು ಬರುತಿದೆ - ಎನಗೆನಗೆಯು ಬರುತಿದೆ ಪ.ಜಗದೊಳಿದ್ದ ಮನುಜರೆಲ್ಲಹಗರಣಮಾಡುವುದ ನೋಡಿಅಪಪರಸತಿಯರ ಒಲುಮೆಗೊಲಿದುಹರುಷದಿಂದಅವರ ಬೆರೆದುಹರಿವ ನೀರಿನೊಳಗೆ ಮುಳುಗಿಬೆರೆಳನೆಣಿಸುವರ ಕಂಡು 1ಪತಿಯ ಸೇವೆ ಬಿಟ್ಟು,ಪರಸತಿಯ ಕೂಡೆ ಸರಸವಾಡಿಸತತ ಮೈಯ ತೊಳೆದು ಹಲವುವ್ರತವ ಮಾಡುವರ ಕಂಡು 2ಹೀನಗುಣವ ಮನದೊಳಿಟ್ಟುತಾನು ವಿಷದ ಪುಂಜನಾಗಿಮಾನಿ ಪುರಂದರವಿಠಲನಧ್ಯಾನ ಮಾಡುವವರ ಕಂಡು 3
--------------
ಪುರಂದರದಾಸರು