ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯ ಲಕ್ಷ್ಮಿ ಬಾ ಹಸೆಗೆ ಜಯ ಜಯ ಜಗನ್ಮಾತೆ ತ್ರೈಲೋಕವಿಖ್ಯಾತೆ ಪ ಮುತ್ತಿನ ಮಂಟಪದಿ ರತ್ನಪೀಠವಿರಿಸಿ ಮುತ್ತೈದೆಯರು ನಿನ್ನ ಅರ್ಥಿಯಲಿ ಕರೆವರು ಅ.ಪ ಗೆಜ್ಜೆ ಸರಪಣಿ ಕಾಲಗೆಜ್ಜೆ ನಾದದಿಂದ ಹೆಜ್ಜೆನಿಡುತ ಬಾ ಬಾ ಸಜ್ಜನರಕ್ಷಕಳೆ1 ಅಚ್ಚ ಜರಿ ಪೀತಾಂಬರ ಹೆಚ್ಚಿನಾಭರಣಗಳು ಮಿತ್ರೇರಲಂಕರಿಸುವರು ಅಚ್ಚುತನೊಡಗೊಡಿ 2 ಮುತ್ತಿನ್ಹಾರ ಪದಕ ಜತ್ತಿಲೊಲಿಯುತಿಹುದು ಹಸ್ತ ಕಡಗ ದೋರ್ಯ ಸಿಸ್ತಿನ ಸುಂದರಿಯೆ 3 ಕರ್ತೃ ಕಮಲನಾಭ ವಿಠ್ಠಲನರಸಿಯೆ ಹಸ್ತಿಗಮನೆ ಬಾ ಬಾ ಉತ್ತಮ ಪೀಠಕೆ 4
--------------
ನಿಡಗುರುಕಿ ಜೀವೂಬಾಯಿ
ಮಾರ ಜನಕನ ನೀರೆ ಪ ಕರವ ಹರುಷದಿಂದಾ ಅ.ಪ ಕ್ಷೀರವಾರ್ಧಿತನಯೆಯೆಂದು ಸಾರಸಾಕ್ಷಿಯರು ಬಂದು ಕೋರಿ ಭಜಿಸುವರು ನಿನ್ನ ಅಪಾರ ಮಹಿಮೆಗಳನು 1 ಸುತ್ತ ಜ್ಯೋತಿಗಳ ಬೆಳಗಿ ಮುತ್ತೈದೆಯರೆಲ್ಲ ಕೂಡಿ ಮುತ್ತು ಮಾಣಿಕ ಪೀಠವಿರಿಸಿ ಭಕ್ತಿಯಿಂದ ಪ್ರಾರ್ಥಿಸುವರು 2 ಜನಕರಾಯನ ಕುಮಾರಿ ಸನಕಾದಿಯೋಗಿ ಜನಾಧಾರೀ ದಿನಕರ ಕೋಟಿ ಪ್ರಕಾಶೆ ದಿವ್ಯಮಣಿಮಯ ಭೂಷೆ 3 ಮಾನಸಾಬ್ಜ ಮಂಟಪದಲಿ ಧ್ಯಾನವೆಂಬೊ ಪೀಠದಲ್ಲಿ ಜ್ಞಾನಿಶಕ್ತಿಗಳು ಪೊಗಳೆ ಸಾನುರಾಗದಿಂದಲೀಗಾ 4 ನಿತ್ಯಸಂಪತ್ಪ್ರದಾಯಿನಿ ಭೃತ್ಯವತ್ಸಲೆ ಜನನೀಸತ್ಯಸಂಕಲ್ಪ ಗುರುರಾಮ ವಿಠಲನ ಪಟ್ಟದರಾಣಿ 5
--------------
ಗುರುರಾಮವಿಠಲ
ಹಸೆಗೆ ಬಾರೊ ಹರುಷಬೀರೊ ಬಿಸಜನಾಭನೇ ಪ ಶಶಿಯ ಸೋದರಿ ಸಹಿತವಾಗಿ ಶಾಮಲಾಂಗನೇ ಅ.ಪ ರತ್ನಖಚಿತ ಪೀಠವಿರಿಸಿ ರಮಣಿ ಮಣಿಯರೂ ಕುತ್ನಿ ಪಟ್ಟಾವಳಿಯ ಹಾಸಿ ಕೋರಿ ಪ್ರಾರ್ಥಿಪರೂ 1 ಭೇರಿ ಮೃದಂಗ ನಾಗಸ್ವರ ನಗಾರಿ ಕಹಳೆಗಳ್ ಧಾರುಣಿ ಸುರವೇದ ಘೋಷ ವಿಸ್ತಾರವಾಗಿರಲ್ 2 ಹಳದಿ ಕುಂಕುಮಾಕ್ಷತೆ ಗಂಧ ಕಳಶ ಕನ್ನಡಿ ಹೊಳೆಯೆ ತಟ್ಟಿಯೋಳ್ ಸುತ್ತ ಜ್ಯೋತಿ ಬೆಳಗುವುದು 3 ಮುದದಿ ನಸು ನಗುತ ಬಲದ ಪದವು ಮುಂದಾಗಿ 4 ಶರಣ ಜನರಭೀಷ್ಟಗಳನು ಸಲಿಸುವಾತನೇ ಗುರುರಾಮವಿಠಲ ಸರ್ವೇಶ ಪುರುಷೋತ್ತಮನೆ 5
--------------
ಗುರುರಾಮವಿಠಲ