ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪೀಠಕೀಗ ಬಾರೊ ದೇವನೆ ಆದ ಪಾಠ ಸಾಕೊ ಕೃಷ್ಣನೆ ಪ. ಮುತ್ತಿನಾಭರಣವ ತೊಡಿಸುವೆನು ಕಸ್ತೂರಿ ತಿಲಕವ ತಿದ್ದುವೆನೊ ಕೃಷ್ಣ ಮಸ್ತಕದರಳೆಲೆ ಮಾಗಾಯಿ ಪೊಳೆಯುತ ಕಸ್ತೂರಿ ರಂಗ ಬಾರೊ 1 ಕಂಗಳಿಗೆ ಕಪ್ಪು ಹಚ್ಚುವೆನೊ ರÀಂಗಗೆ ಪೀತಾಂಬರುಡಿಸುವೆನೊ ಮಂಗಳಾಂಗಗೆ ನಾ ಶೃಂಗಾರ ಮಾಡಿ ಕಂಗಳಿಂ ನೋಡುವೆನೊ 2 ಕಾಲಲಂದಿಗೆ ಗೆಜ್ಜೆ ಫಳಿರೆನುತ ನೀಲಮೇಘ ಶ್ಯಾಮ ಶ್ರೀ ಶ್ರೀನಿವಾಸ ಬಾಲ ಗೋಪಾಲ ಸುಶೀಲ ಮುರಳಿಧರ ರಮಾಲೋಲ ಶ್ರೀ ಕೃಷ್ಣ ಬಾರೋ3
--------------
ಸರಸ್ವತಿ ಬಾಯಿ
ಬಾಲಗೋಪಾಲ ಹಸೆಗೆ ಲೀಲೆಯಿಂದ ಬರ್ಪುದೈ ಪ ನೀಲಮೇಘನಿಭ ಸುರೂಪ ಕಾಲಕಾಲವಂದ್ಯ ಬೇಗ ಅ.ಪ ಸಾರಸಾಕ್ಷ ಸರ್ವರಕ್ಷ ಘೋರದೈತ್ಯಸಂಹಾರ ನಾರದಾದಿವಂದ್ಯ ನಮಿಸಿ ನೀರೆಯರು ಕರೆಯುವರು 1 ಸಾಮಜ ಧ್ರುವ ಭಕ್ತ ವರದ ಸಾಮಗಾನ ಲೋಲನೇ ಕಾಮಜನಕ ಕರುಣಪೂರ ಸ್ವಾಮಿಪ್ರೇಮ ತೋರುತ 2 ಅಜಸುಪೂಜ್ಯ ತ್ರಿಜನರಾಜ್ಯ ಭಜಕಜನ ಮನೋಹರ ರಜತಹೇಮಪೀಠಕೀಗ [ಬೇಗ] ಜಾಜಿ ಕೇಶವನೇ 3
--------------
ಶಾಮಶರ್ಮರು
ಸಾರಸಾಕ್ಷಿ ಬಾ ಬಾ ಬೇಗ ಸಾರಿ ನೀಂಪ. ಸಾರಸಾಕ್ಷಿ ಬೇಗ ಚಾರುಪೀಠಕೀಗ ಅ.ಪ. ಭೇರಿ ತಮ್ಮಟಾದಿ ಭಾರಿವಾದ್ಯಂಗಳೂ ಭೊರ್ಗರೆಯುತಿರಲು ನೀರೆ ನೀ ಭರದೊಳು 1 ಭಾರ್ಗವಿ ಕಲ್ಯಾಣಿ ದೇವದೇವನರಾಣಿ ಶ್ರೀಮತೀ ಪದ್ಮಿನಿ2 ಕ್ಷೀರವಾರಿಧಿಜಾತೆ ಮಾರವೈರಿವಿನುತೆ ವಾರಿಜಾಸನ ಮಾತೆ ಸಾರಿ ಬಾ ಪ್ರಖ್ಯಾತೆ 3 ಶೇಷಶೈಲನಿಲಯೆ ವಾಸವಾದಿಗೇಯೆ ವಾಸುದೇವಜಾಯೆ ವಸುಮತೀ ತನಯೆ 4
--------------
ನಂಜನಗೂಡು ತಿರುಮಲಾಂಬಾ