ಒಟ್ಟು 7 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಬಪ್ಪನಾಡ ದುರ್ಗಾಪರಮೇಶ್ವರಿ) ಬಪ್ಪನಾಡ ಭದ್ರಕಾಳಿ ತಪ್ಪು ಕ್ಷಮಿಸಿ ಸಲಹಮ್ಮ ನ- ಮ್ಮಪ್ಪ ಶ್ರೀನಿವಾಸ ದೇವನಪ್ಪುತಾನಂದಾಬ್ಧಿಗಿಳಿದ ಪ. ಸರಸಿಜಾಸನಾದಿ ದೇವ ವರರ ನೀನೆ ಸಲಹುವಿ ದುರುಳ ಜನರ ತರಿದು ಭೂಮಿ ಭರವನೆಲ್ಲ ಇಳುಹುವಿ ಚರಿಯ ತೋರ್ಪಮಾಯೆ ಅಲ್ಯ- ಲ್ಲಿರುವ ಶತ್ರು ಪುಂಜವ ಕತ್ತರಿಪದೇನಾಶ್ಚರ್ಯ ತಾಯೆ 1 ಶಂಬರಾರಿ ಪಿತನಪಾದ ನಂಬಿಕೊಂಡ ರಾತಿಯ ಅಂಬೆ ನಿನ್ನ ಕರುಣದಿಂದ ಸಂಭವಿಸಿದ ಖ್ಯಾತಿಯ ಡಂಬತನದ ಶುಂಭ ನೀಶುಂಭ ದಮನೆ ಶಕ್ತಿ ನಿನ- ಗೆಂಬುದೇನು ದಾಸದಾಸನೆಂಬದರಿತು ಸಲಹು ದೇವಿ 2 ಮೂಢಮತದಿ ಮುಂದೆ ಹೋಗಿ ಮಾಡಿದಂಥ ಕುಂದನು ಪ್ರ- ಹುಡೆ ಕ್ಷಮಿಸಬೇಕೆಂದಿಂದು ಓಡಿ ಬಂದು ನಿಂದೆನು ಮೂಡಲಾದ್ರಿವಾಸನಡಿಯ ಪಾಡುವನೆಂದೆನ್ನನು ಕಾ- ಪಾಡಿ ಕಡೆಹಾಯಿಸುವದೆಂದು ಬೇಡಿಕೊಂಬೆ ಭಯಹರಾಂಬೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ನೀ ಸುಮಂಲಿ ವರಗುಣಶೀಲೆ ನೀ ಸುಮಂಗಲಿ ಪ ಸತತ ಮಾತಾ ಪಿತರ ವಚನ ಹಿತದಿ ನೀನು ಆಲಿಸುತ | ಪತಿಯು ಪರದೈವವೆಂದು ನೇಮದಿ ತಿಳಿದು ನೀ ಮಾಡುವುದು ವ್ರತ 1 ನಿರುತ ಗೋವು ಭೂಸುರರ ಸೇವಾ ಹರುಷದಲಿ ಶ್ರೀ ಗೌರಿ ಪೂಜಾ ತರುಣಿ ಗೈದು ಜಗದಿ ನೀನು ಪಾದ ಸುಕುಮಾರ ಪಿತನಪಾದ ಭಜಿಸೆ 2 ಕೋಮಲಾಂಗಿ ಸೋಮವದನೆ ಆ ಮಹಾತ್ಮ ಶೀಲೆ ರಾಧಾ ಭಾಮೆ ತಾರಾಸೀತೆಯಂತೆ ಶಿರಿಶಾಮಸುಂದರ ದಯ ಪಡೆಯೆ ನೀ 3
--------------
ಶಾಮಸುಂದರ ವಿಠಲ
ಶ್ರೀಯತಿವೃಂದ ಸ್ತೋತ್ರ ಯತಿಗಳ ಸತತ ಸಂಸ್ತುತಿಸುವೆ ಅತಿತ್ವರಿತದಲಿ ದುರಿತಗಳ ತರಿವೆ ಪ ಮೋದತೀರ್ಥಾದಿ ಸುಬೋಧೇಂದ್ರ ಪರಿಯಂತ ಮೋದದಿಂದವರ ಶ್ರೀಪಾದಕ್ಕೆ ನಮಿಪೆ 1 ಅಜನಪಿತನಪಾದ ಭಜಿಸುವ ಭಕುತ ನಿಜವಾಗಿ ಪಾಲಿಪ ಸುಜನೇಂದ್ರ ತೀರ್ಥ 2 ಆನತಜನ ಪಾಪಕಾನನದಹಿಪ ಕೃ ಶಾನನಂತಿಪ್ಪ ಸುಙÁ್ಞನೇಂದ್ರ ತೀರ್ಥ 3 ದುರ್ಮತಧ್ವಂಸ ಸದ್ಧರ್ಮ ಸಂಸ್ಥಾಪಕ ಕರ್ಮಂದಿವರ ಸುಧರ್ಮೇಂದ್ರ ತೀರ್ಥ 4 ಅಗಣಿತಮಹಿಮ ಮೂಜಗದೊಳು ಪ್ರಖ್ಯಾತ ನಿಗಮಾಗಮಜ್ಞ ಶ್ರೀ ಸುಗುಣೇಂದ್ರ ತೀರ್ಥ 5 ಸಸುಪ್ರಸಿದ್ಧ ಮುನಿ ವಿಪ್ರಸಮೂಹವ ಕ್ಷಿಪ್ರದಿಪಾಲಿಪ ಸುಪ್ರಙÉ್ಞಂದ್ರಾಖ್ಯ 6 ಶ್ರೀಶ ಪದಾರ್ಚಕ ಸುಕೃತೀಂದ್ರ 7 ಮೂಲೋಕ ವಿಖ್ಯಾತ ಶ್ರೀಲೋಲನಂಘ್ರಿ ಕೀ - ಲಾಲಜಮಧುಪ ಸುಶಿಲೇಂದ್ರ ಮುನಿಪ 8 ವರದೇಶ ವಿಠಲನ ಪರಿಪರಿ ಪೂಜಿಪ ಪರಮಹಂಸರ ಪಾದಕ್ಕೆರಗಿ ಬಿನ್ನೈಪೆ 9
--------------
ವರದೇಶವಿಠಲ
ಅಂಜಿಕ್ಯಾತಕೆ ಮನವೇ ಅಂಜಿಕ್ಯಾತಕೇ ಪಕಂಜಹರನ ಪಿತನಪಾದ|ಕಂಜನಿರತಭಜಿಸುತಿರಲು ||ಅ.ಪ||ಎರಡು ಒಂದು ಕೋಟಿರೂಪ|ಧರಿಸಿ ರಕ್ಕಸರೊಳು ಕಾದಿ ||ಹರಿಯ ಕರುಣ ಗಳಿಸಿದವನ |ಚರಿತೆಗಳನು ಸ್ಮರಿಸುತಿರಲು 1ತಾಸಿಗೆಂಟು ಒಂದು ನೂರು |ಶ್ವಾಸಜಪವ ಮಾಡಿ ಜಂತು ||ರಾಶಿಗಳಿಗೆ ಸತತ ಬೇಡಿ |ದಾಸೆ ಪೂರ್ತಿಸುವವನಿರಲು2ಜಂಗಮರಿಗೆಪಾಣಿಚರಣ|ಕಂಗಳುಕಿವಿಯಾಡಿಸುತಲಿ ||ಪಿಂಗಳನಿಭಭಾರತೀಶ|ಹಿಂಗದನವರತ ಪೊರೆಯಲು 3ಪರಿಹರಿಸುತಲಗ್ನಿ ಭಯವ |ತ್ವರದಿ ಹಿಡಿಂಬ ಕೀಚಕ ಪ್ರಮು |ಖರನು ಕುರುಪತಿಯ ಕುಲವತರಿದ ಕುಂತೀ ಕುವರನಿರಲು 4ಭುಜಕೆ ಗೋಪೀಚಂದನವನು |ವಿಜಯಚಕ್ರಗಳನು ಧರಿಸಿ ||ಕುಜನರಿಪುಪ್ರಾಣೇಶ ವಿಠಲ |ಭಜಕನ ದಯ ಪೂರ್ಣವಿರಲು 5
--------------
ಪ್ರಾಣೇಶದಾಸರು
ಆನಂದಂ ಮಹದಾನಂದಂಹರಿಯ ಭಜನ ಬ್ರಹ್ಮಾನಂದಂ ಪಸತ್ಯ ನುಡಿಯುವುದೆ ಆನಂದಂ ತನ್ನಗುರ್ತ ತಿಳಿಯುವುದೆ ಆನಂದಂನಿತ್ಯನಿರ್ಮಲನ ಸತ್ಯ ಗುಣಂಗಳನುಭಕ್ತಿಯಿಂ ಭಜಿಸೆ ನಿತ್ಯಾನಂದಂಸತ್ಯ ಸತ್ಯ ಸರ್ವೋತ್ತಮ ಹರಿಯೆಂದುಅರ್ತಿಯಿಂ ಭಜಿಸೆ ಅತ್ಯಾನಂದಂ 1ಆಶ ನೀಗುವುದೆ ಆನಂದಂಭವಪಾಶಗೆಲಿಯುವುದೆ ಆನಂದಂಶ್ರೀಶ ಕೇಶವನ ಸಾಸಿರ ನಾಮದಧ್ಯಾಸದಿರುವುದೆ ಲೇಸಾನಂದಂದೋಷದೂರ ಭವಪಾಶಹರನ ಅನುಮೇಷ ಪÀಠಿಸೆ ಸ್ಥಿರದಾನಂದಂ 2ಹಮ್ಮನಳಿವುದೇ ಆನಂದಂ ತಾಸುಮ್ಮನಿರುವುದೆ ಆನಂದಂಕರ್ಮರಹಿತನಾಗಿ ಬ್ರಹ್ಮಪಿತನಪಾದಒಮ್ಮನದೊಳಗಸಮಾನಂದಂಧರ್ಮವಿಡಿದು ಪರಬ್ರಹ್ಮ ಶ್ರೀರಾಮನಮರ್ಮ ತಿಳಿಯೆ ನಿರ್ಮಲಾನಂದಂ 3
--------------
ರಾಮದಾಸರು
ಗಣೇಶ ಪ್ರಾರ್ಥನೆವಂದಿಪೆ ನಾ ನಿನ್ನನು ಸೊಂಡಿಲ ಗಣಪ ಧಬಂದೆನ್ನ ಸಲಹೊ ನೀನು ಪಪುಂಡರೀಕಾಕ್ಷನುದ್ದಂಡ ಪರಾಕ್ರಮಕೊಂಡಾಡಿಸುವಿ ವಕ್ರತುಂಡನೆಂಬರೊ ನಿನ್ನ ಅಪಪಾಶಾಂಕುಶಧರನೇ ವೂೀದಕಹಸ್ತಭಾಷಿಗ ನೀನಹುದೋಆಶಾಪಾಶಗಳಿಂದ ಘಾಸಿಗೊಂಡಿಹ ಮನಬೇಸರ ಕಳೆದೆಮ್ಮ ಪೋಷಿಪನನು ತೋರೊ 1ಗೌರಿಯ ವರಪುತ್ರನೆ ಪ್ರಾರ್ಥಿಸುವೆ ಶ್ರೀ-ಶೌರಿಯಪಾದಸ್ಮರಣೆಗೌರವದಿಂ ಮಾಳ್ಪ ಶೌರ್ಯ ಎನಗೆ ಕೊಟ್ಟುಮಾರಪಿತನಪಾದತೋರಿಸು ತವಕದಿ2ಅಂತರಂಗದ ಶತ್ರುಗಳಿಂದಲಿ ಮನಚಿಂತೆಗೆ ಗುರಿಗೈಸಿತೊಎಂತು ಈಭವದಾಂಟುವಂಥ ಪಥವ ಕಾಣೆಕಂತÀುಪಿತನಪಾದಚಿಂತನೆ ಕೊಡಿಸಯ್ಯ3ವಾನರನಿಕರದೊಳು ಶ್ರೇಷ್ಠನ ಪ್ರಭುವಾರಿಧಿಯನು ಬಂಧಿಸೆಆದಿಮೂರುತಿ ನಿನ್ನ ಆರಾಧಿಸಿದನೆಂಬಸೋಜಿಗಸುದ್ದಿಯು ಮೂರ್ಜಗದೊಳಗುಂಟು4ಕಮಲನಾಭವಿಠ್ಠಲ ಭಕ್ತರ ಹೃದಯಕಮಲದೊಳಗೆ ಶೋಭಿಪಮಿನುಗುವ ಮಧ್ವಮಂಟಪದೊಳು ರಾಜಿಪಸನಕಾದಿವಂದ್ಯನ ಕ್ಷಣ ಬಿಡದಲೆ ತೋರು 5
--------------
ನಿಡಗುರುಕಿ ಜೀವೂಬಾಯಿ