ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಧವ ಮಾಮವ ಪ್ರಣತ ಜಾನರ್ತಿ ಹರಭೋ ಭೂಧರಜಾವರನುತಪದ ಪ ಸಾದರದಲಿ ನಿನ್ನಾ ಪಾದವ ಭಜಿಸುವೆ ನಾ ಮೋದವ ಕೊಡು ಕರುಣಾಂಬೋಧಿಯೆ ಮಧು ಮಥನಾ ಸದಾಮಲಾಚರಿತನೆ ಒದಗಿಸುತವ ಪದದಲಿ ಮನ 1 ನತಜನ ಕೃತ ಕರುಣಾ ಶ್ರೀತಜನರಘಹರಣ ಶೃತಿಗಣನುತ ಶರಣಾಗತ ಜನವತ್ಸಲನ ನತಿಸುವೆ ಸತತದಿ ರತಿಪತಿ ಪಿತಕರ ಪಿಡಿವದು 2 ಧರಿ ಸುರ ಜನ ಪ್ರಿಯಾ ಕರುಣದಿ ಭವಮಾಯಾ ಪರಿಹರಿಸೆಲೊ ಜೀಯಾ ವರಕಾರ್ಪರ ನಿಲಯಾ ನರಹರಿ ವಿಠಲನೆ ವರಪಿಪ್ಪಲತರು ಸಂಸ್ಥಿತ 3
--------------
ಕಾರ್ಪರ ನರಹರಿದಾಸರು
ಪಾಹಿಸರಸ್ವತಿ ಸುಗಾಯಿತ್ರಿ ಶ್ರೀ ಸಾವಿತ್ರಿ |ಮಹಾ ದುರಿತಾದ್ರಿಪವಿ ದೀನ ಸುರಧರಿಜೇ ಪಶಿಷ್ಟಜನರ ಪಾಲಿಪಳೆ ದುಷ್ಟ ಜನ ದೂರಳೇ |ಸೃಷ್ಟಿಪತಿ ಸೇವೆಯೊಳಗಿಟ್ಟುದುರುಳ|ಬಟ್ಟೆಹಿಡಿಸದಲೆ ದಯವಿಟ್ಟು ಪಿಡಿವದು ಕೈಯ |ಕಷ್ಟ ನಾಶನ ಮಾಡೆ ಕೊಟ್ಟು ಸುಖ ಪೂಜ್ಯೆ 1ಮದನಸತಿಕೋಟ ಲಾವಣ್ಯೆ ಗುಣಸಂಪನ್ನೆ |ಸುದತೀ ವೃಂದ ಶಿರೋಮಣಿ ಕರುಣಾರ್ಣವೆ ||ಮಧು ಜಿತ್ಪ್ರಿಯನ ರಾಣಿ, ವಾಣೀ ವೀಣಾಪಾಣಿ |ಹೃದಯದೊಳು ಕಮಲನಾಭನ ನಿರುತ ತೋರೇ 2ಈಶಾದಿ ಸುಮನಸಾರ್ಚಿತಪಾದಸರಸೀರುಹೆ |ಲೇಶೀತರಾನಂದೆ ಸುಗುಣೆ ಶ್ರೀ ಪ್ರಾ-ಣೇಶ ವಿಠಲನ ಕೊಂಡಾಡುವರೊಳಗೆ ಸ್ನೇಹ |ಹ್ರಾಸವಾಗದೆ ಈಯೆ ಇಭರಾಜ ಗಮನೆ 3
--------------
ಪ್ರಾಣೇಶದಾಸರು