ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಕರ್ಮವ ಮಾಡಿ ನಾ ನಿನ್ನ ಒಲಿಸಲಿ ಶ್ರೀನಿವಾಸ ಧ್ಯಾನಕೆ ನಿಲುಕದ ಜ್ಞಾನಿಗಳರಸ ನೀನು ಶ್ರೀನಿವಾಸ ಪ ಗಂಗೆಯ ತಂದು ಮಂಗಳಸ್ನಾನ ಮಾಡಿಸೆ ಶ್ರೀನಿವಾಸ ಗಂಗೆಯು ನಿನ್ನಂಗುಷ್ಟದಲ್ಲಿಹಳಲ್ಲೊ ಶ್ರೀನಿವಾಸ 1 ಮನಮೆಚ್ಚುವಂತೆ ನಿನ್ನ ಸುಮಗಳಿಂದರ್ಚಿಪೆನೆ ಶ್ರೀನಿವಾಸ ವನಜ ಪುಷÀ್ಪವು ನಿನ್ನ ನಾಭಿಯೊಳಿಹುದಲ್ಲೋ ಶ್ರೀನಿವಾಸ 2 ಅಂಗಿವಸ್ತ್ರಗಳಿಂದ ಶೃಂಗರಿಸುವೆನೆಂದರೆ ಶ್ರೀನಿವಾಸ ಅಂಗನೆ ಲಕುಮಿ ಸಕಲಾಭರಣಂಗಳಾಗಿರುವಳಲ್ಲೊ ಶ್ರೀನಿವಾಸ 3 ಅನ್ನ ಪಾನಗಳಿತ್ತು ಧನ್ಯನಾಗುವೆನೆ ಶ್ರೀನಿವಾಸ ಅನ್ನಪೂರ್ಣಿ ಷಡುರಸದನ್ನವ ಮಾಳ್ಪಳಲ್ಲೊ ಶ್ರೀನಿವಾಸ 4 ಕಡುಭಕ್ತಿಯಿಂದ ನಿನ್ನಡಿ ಸೇವೆ ಮಾಳ್ಪೆನೆ ಶ್ರೀನಿವಾಸ ಎಡಬಿಡÀದೆ ಹನುಮ ನಿನ್ನಡಿಯ ಪಿಡಿದಿಹನಲ್ಲೊ ಶ್ರೀನಿವಾಸ 5 ಜಗದುದರ ನಿನ್ನ ಬಗೆ ಬಗೆ ನಾಮಗಳ ಸ್ತುತಿಸೆ ಶ್ರೀನಿವಾಸ ಅಗಣಿತವಾಗಿಹುದು ಮುಗಿಯದಂತಿಹುದಲ್ಲೊ ಶ್ರೀನಿವಾಸ6 ಶ್ರಿಷ್ಟಿಕರ್ತ ಶ್ರೀ ರಂಗೇಶವಿಠಲನೆ ಎಂಬೆ ಶ್ರೀನಿವಾಸ ಇಷ್ಟೆಂದ ಮಾತ್ರಕೆ ಒಲಿದಿಷ್ಟವ ಸಲಿಸೈಯ್ಯಾ ಶ್ರೀನಿವಾಸ 7
--------------
ರಂಗೇಶವಿಠಲದಾಸರು
ನಂದಿಯನೇರಿ ಬರುತಿಹ ಸುಂದರನ್ಯಾರೆ ಪೇಳಮ್ಮಯ್ಯ ಪ. ಚಂದ್ರಚೂಡ ಗಂಗಾಧರ ಶಂಕರ ಸುಂದರ ಗೌರೀರಮಣ ಕಣಮ್ಮಾ ಅ.ಪ. ಕರದಿ ತ್ರಿಶೂಲ ಧರಿಸಿದನಾರೆ ಪೇಳಮ್ಮಯ್ಯ ವರ ಡಮರುಕಪಾಲ ಪಿಡಿದಿಹನಾರೆ ಪೇಳಮ್ಮಯ್ಯಾ ಕರುಣವ ತೋರುತ ಸಕಲರ ಮನ ಮಂದಿರದಲಿ ಪೊಳೆಯುವ ಗಿರಿಜಾ ರಮಣ ಕಣಮ್ಮ 1 ಗಜ ಚರ್ಮಾಂಬರ ಧರಿಸಿಹನಾರೆ ಪೇಳಮ್ಮಯ್ಯ ತ್ರಿಜUನ್ಮೂರುತಿ ನೊಸಲಿಗೆ ಭಸ್ಮವ ಧರಿಸಿಹನಾರೆ ಪೇಳಮ್ಮಯ್ಯ ಋಜುಗುಣದೊಡೆಯಗೆ ರಜತಾದ್ರಿನಿಲಯ ನಿಜ ಪಾರ್ವತೀರಮಣ ಕಣಮ್ಮಾ 2 ಶೇಷನಾಭರಣವ ಧರಿಶಿಹನಾರೆ ಪೇಳಮ್ಮಯ್ಯ ಸೋಸೀಲಿ ಮೂಗಣ್ಣವನಾರೆ ಪೇಳಮ್ಮಯ್ಯ ವಾಸುಕಿಶಯನ ಶ್ರೀ ಶ್ರೀನಿವಾಸನ ವಾಸ ಶಂಭೋ ಶಂಕರನು ಕಣಮ್ಮಾ 3
--------------
ಸರಸ್ವತಿ ಬಾಯಿ
ನೆನೆಯಿರೋ ಜನರೆಲ್ಲ ಗುಣಯುತನ ಮೂರ್ತಿ ಮಧುಪುರದ ಗಣನಾಥನ ಪ ಫಣೆಯುದರದಿ ಸ್ತುತಿ ತಿರುಗುವನ ಕರದಿ ಪಾಶಾಂಕುಶ ಪಿಡಿದಿಹನ ಪಾದವ ನೆನೆವರ ಭಕ್ತರ ನೋಡಿ ಮರುಗುವನ 1 ಶಿಬ್ಬಲುಂಡಿಗೆಯ ಮೆಲುವವನ ಕಾಲ ಕೊಬ್ಬಿದ ರಕ್ಕಸರಹಲ್ಲ ಮುರಿದವನ ಜಗಕೊಬ್ಬನೇ ಸುರನರ ಸೇವಿತನ 2 ಭಾಸುರ ತೇಜದಿ ಮೆರೆವನ ಒಳ್ಳೆ ಮೂಷಿಕವನೇರಿ ನಲಿದವನ ಅನುದಿನ ಪೊರೆವವನ 3
--------------
ಕವಿ ಪರಮದೇವದಾಸರು
ಪುಲಿಗಿರಿ ಧೊರೆಯ ಪ ಶ್ರೀರಮಣೀ ನಿಜವಲ್ಲಭನ-ಮಾರ ಚತುರ್ಮುಖರಿಗೆ ಪಿತನ ನಾರದ ಶರ್ವ ಪಿತಾಮಹನ-ಮದ- ವಾರಣಮುಖ ಪ್ರಪಿತಾಮಹನ 1 ಕಿರೀಟವ ನಿರಸಿಹನ ಕರದಲ್ಲಿ ಚಕ್ರವ ಪಿಡಿದಿಹನಾ-ನಿಜ-ಕರುಣದಿ ಭಕ್ತರಿಗೊಲಿದಿಹನ2 ಕೊರಳೊಳು ಪೊತ್ತಿಹನ ಬಾಲಕ ಸುಕೃತಾನುಗ್ರಹನ-ನಿಜ ಲೀಲೆಯೊಳಾಸುರ ನಿಗ್ರಹನ 3 ಪಡೆದ ಪಾದಾಂಬುಜನ ವಿಹಂಗ ಗುಣಗಣ ಸಂಗತನ 4 ಭವಭಯ ಮೋಚನನ ವರವ್ಯಾಘ್ರಾಚಲ ನಾಯಕನ-ನಮ್ಮ- ವರದವಿಠಲ ವರದಾಯಕನ5
--------------
ಸರಗೂರು ವೆಂಕಟವರದಾರ್ಯರು
ಮುದ್ದು ಕೃಷ್ಣನ್ನ ನೋಡ ಬನ್ನಿರೆಲ್ಲ ನಮ್ಮ ಸಿರಿ ಭೂಮಿ ನಲ್ಲ ಪ. ಪಂಚ ಪಂಚ ಉಷಃ ಕಾಲದಲಿ ಎದ್ದು ಯತಿವರರು ಪಂಚಬಾಣನ ಪಿತಗೆ ನಿರ್ಮಾಲ್ಯ ತೆಗೆದು ಪಂಚ ಗಂಗೋದಕದಿ ಸ್ನಾನಗೈಸುತ ಹರಿಗೆ ಪಂಚವಿಧ ಪಕ್ವಾನ್ನ ಉಣಿಸಿ ದಣಿಸಿಹರು 1 ಕಾಲ್ಕಡಗ ಗೆಜ್ಜೆ ಪೈಜಣ ಘಲ್ಲು ಘಲ್ಲೆನುತ ಮೇಲೆ ಉಡುದಾರ ಉಡುಗೆಜ್ಜೆ ನಡುವಿನಲಿ ಬಾಲಕೃಷ್ಣಗೆ ಅಸಲಿ ಹುಲಿ ಉಗುರು ಹೊನ್ನು ಸರ ತೋಳ ಬಾಪುರಿಗಡಗ ಉಂಗುರಗಳ್ಹೊಳೆಯೆ 2 ಮುದ್ದು ಮುಖಕೊಂದು ಮೂಗುತಿ ಕರ್ಣಕುಂಡಲವು ಕದ್ದು ಬೆಣ್ಣೆಯನು ಕಡಗೋಲ ಪಿಡಿದಿಹನು ತಿದ್ದಿದ ತಿಲುಕ ಮುಂಗುರುಳೂ ಮುತ್ತಿನ ಸಾಲು ಶುದ್ಧ ಚಿನ್ನದ ರತ್ನ ಮಕುಟ ಶಿರದಲ್ಲಿ 3 ರಮ್ಯವಾಗಿಪ್ಪ ವೈಕುಂಠಪುರಿಯನೆ ಬಿಟ್ಟು ಜನ್ಮಸ್ಥಳವಾದ ಗೋಕುಲವ ತ್ಯಜಿಸಿ ತಮ್ಮವರಿಗಾಗಿ ಕಟ್ಟಿದ ದ್ವಾರಕಿಯ ಕಳೆದು ಬ್ರಹ್ಮಾದಿ ವಂದ್ಯ ತಾನಿಲ್ಲಿ ನೆಲೆಸಿಹನು 4 ಅಪಾರ ಮಹಿಮನು ಆನಂದ ತೀರ್ಥರಿಗೊಲಿದು ಪಾಪಿ ಜನರುಗಳ ಉದ್ಧರಿಸಬೇಕೆಂದು ಶ್ರೀಪತಿಯು ತಾ ಪುಟ್ಟ ರೂಪಧಾರಕನಾಗಿ ಗೋಪಾಲಕೃಷ್ಣವಿಠ್ಠಲನಿಲ್ಲಿ ನಿಂತ 5
--------------
ಅಂಬಾಬಾಯಿ