ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಆ). ವಿವಿಧ ದೇವತಾ ಸ್ತುತಿ ರುದ್ರದೇವರು ಬೇಡಿಕೊಂಬೆನು ನಾನು ರೂಢಿಗೊಡೆಯನಾಗಿ ಆಡುವನಂತೇಶನಿದಿರೊಳು ಮೂಡಿದ ಚಂದ್ರಶೇಖರನ ಪ ಒಪ್ಪುವ ಶಿರದೊಳಗೆ ಸರ್ಪನ ಮೇಲೊರಗಿಪ್ಪನ ಮಗಳನ್ನು ಒಪ್ಪದಿ ಧರಿಸಿದನ 1 ಮುಪ್ಪುರಹರನೆಂದು ಮೂರು ದೃಷ್ಟಿಗಳುಳ್ಳ ಕಪ್ಪುಕೊರಳ ದೇವನ ರೌಪ್ಯದ ಪುರವರಧೀಶನೆಂದೆನಿಸಿಯೆ ಇಪ್ಪಂಥ ಪರಶಿವನ 2 ಗಿರಿಯ ನಂದನೆಯನ್ನು ಉರದೊಳು ಧರಿಸಿಯೆ ಕರಿಚರ್ಮ ಪೊದ್ದವನ ಗರುಡನ ಭಯಕಂಜಿ ಮೊರೆಹೊಕ್ಕ ಶರಣನ ಕರುಣದಿ ಕಾಯ್ದವನ 3 ಉರಗಾಭರಣವ ಸುತ್ತಿಕೊಂಡಿರುವಂಥ ಗರುವ ದೇವರ ದೇವನ ಚರಣ ಸೇವಕರನ್ನು ಸ್ಥಿರವಾಗಿ ಸಲುಹುವ ಬಿರುದುಳ್ಳ ಪರಶಿವನ 4 ದ್ವಾರಕಿವಾಸನಾಚಾರ್ಯನ ಮುಖದಿಂದ ಸೇರಿಸಿಕೊಂಡವನ ಧಾರುಣಿ ಸುರರಿಗೆ ಶೈವ ವೈಷ್ಣವವೆಂಬ ಚಾರವ ತೋರಿದನ 5 ಮೀರಿದ ದಾರಿದ್ರ್ಯವೆಂಬ ವೃಕ್ಷದ ಬೇರ ಹಾರಿಸಿ ತರಿದವನ ಸಾರಿದ ಭಕ್ತರ ಸಲುಹುತ್ತ ಮುಂದಣ ದಾರಿಯ ತೋರ್ಪವನ 6 ಬತ್ತೀಸ ಗ್ರಾಮಕ್ಕೆ ಕರ್ತನೆಂದೆನಿಸಿಯೆ ಅರ್ತಿಯಿಂ ನಲಿವವನ ಪಾರ್ಥಸಂಗರದೊಳು ಮೆಚ್ಚಿಯೆ ಶರವಿತ್ತು ಕೀರ್ತಿಯ ಪೊತ್ತವನ 7 ಸ್ಮಾರ್ತರ ನಿಂದಿಸಿ ರಚಿಸುವ ಯಾಗಕ್ಕೆ ಮೃತ್ಯುವನೊಟ್ಟಿದನ ಮೃತ್ಯುಂಜಯನೆಂದು ಮೊರೆಹೊಕ್ಕ ನರರ ಕಾ- ಯುತ್ತಲಿರ್ಪವನ 8 ಕೊಡಲಿಯ ಪಿಡಿದವ ಪಡೆದಿಹ ಕ್ಷೇತ್ರದಿ ಉಡುಪಿನ ಸ್ಥಳವೆಂಬುದು ಪಡುವಲು ಮೂಡಲು ಎರಡಾಗಿ ತೋರುವ ಒಡಲೊಂದೆ ಮೃಡನೊಬ್ಬನೆ 9 ಕಡಗೋಲ ಪಿಡಿದಿಹ ಕೃಷ್ಣ ನಿಂತದರಿಂದ ಪೊಡವಿಯುತ್ತಮವಾದುದು ಬಡವರ ಬಡತನ ಉಡು (ಪಿಯ)1 ಕಾಣಲು ಸಡಲಿತು ಸುಲಭದಲಿ 10 ಚಿಂತೆಗಳೆನ್ನನು ಭ್ರಾಂತಿ(ಬ)2 ಡಿಸುತಿದೆ ಅಂತಕಾಂತಕ ಲಾಲಿಸು ಪಂಥವ ಮಾಡದೆ ಏಕಾಂತ ಭಕ್ತರಿಗೆಲ್ಲ ಸಂತೋಷವನು ಪಾಲಿಸು 11 ಪಿಂತೆನ್ನ ಕೃತ್ಯ ಬೆನ್ನಾಂತು ಬಂದರು ಇಭ- ವಾಂತದಿ ನೀ ಹಾರಿಸು ಸಂತತ ಎನ್ನನು ಸಲಹಯ್ಯ ಪಾರ್ವತೀ ಕಾಂತನೆ ಕಡೆ ಸೇರಿಸು 12 ಹರ ಹರ ಮಹಾದೇವ ಪರದೈವ ಶಂಕರ ಮೆರೆವ ಆ ವೃಷಭಧ್ವಜ ವರದ ಕೃತ್ತೀವಾಸ ಸ್ಮರನಾಶ ದೇವೇಶ ಸಿರಿಕಂಠ ಪುರಹರನೆ 13 ಗಿರಿಯ ಮಗಳ ಗಂಡ ಉರಿಗಣ್ಣ ಮಹಾರುದ್ರ ಸ್ಥಿರವಾದ ಶಿವಬೆಳ್ಳಿಯ ಪುರಪತಿ ಅನಂತೇಶ ವರಾಹತಿಮ್ಮಪ್ಪನ ಸರಿಯೆಂದು ತೋರ್ಪವನ14
--------------
ವರಹತಿಮ್ಮಪ್ಪ
ದುರ್ಲಭ ಇದು ಕಲಿಯುಗದೊಳಗೆ ಕಾಣಾ ಎಲ್ಲರಿಗೆ ದೊರಕಬಲ್ಲದೆ ಶ್ರೀ ವಲ್ಲಭನ ಪಾದಸೇವೆ ಮಾಡೋ ನೀ ನಲಿದಾಡೋ ಎಲೆ ಮನುಜಾ ಪ ಗಂಧರ್ವರು ಸಿದ್ಧರು ವಿದ್ಯಾ ದರಸಾಧ್ಯ ಗುಹ್ಯಕ ಸುರಮುನಿಗಣ ಗರುಡಾದ್ಯರೆ ನೆರೆದು ಪುರಹರ ಮೂವನ ಬಲ್ಲಿದರೀ ಇಲ್ಲವೆನುತಲಿ ಬರಿದು ರೇಖೆಯ ಬರಿಸಿದರೊ ಡಂಗುರ ಹೊಯಿಸಿದರೊ ಎಲೆ ಮನುಜಾ 1 ಹರಿಯೆಂತೆಂದವ ಧರ್ಮಕೆ ಸಂದವ ಕರದಲಿ ದಂಡಿಗೆ ಪಿಡಿದವ ಪುಣ್ಯವ ಪಡೆದವ ಚರಣದ್ವಯದಲಿ ಗೆಜ್ಜೆಯ ಕಟ್ಟಿದವ ಅಟ್ಟಿದವ ಯಮ ಭಟರ ಹರಿಹರಿದಾಡುತ ಕುಣಿದವ ಉತ್ತಮ ಗುಣದವ ಹಿರಿದಾಗಿ ಗಾಯನ ಪಾಡಿದವ ಸುರರನ ಗೂಡಿದವ ಮಾಯವ ಬಿಡೋ ಎಲೆ ಮನುಜಾ2 ಭವಾಬ್ಧಿ ದಾಟಿದವ ಇಂಬಾಗಿ ಕಡ್ಡಿ ವಾದ್ಯವ ಹಾಕಿದವ ದುರುತವ ನೂಕಿದವ ಸಂಭ್ರಮ ತಾಳ ಕಟದವ ಊಟದವ ಸುರರೊಡನೆ ತುಂಬಿದ ದಾಸರ ಸಭೆಯೊಳಗಿದ್ದವ ನರಕವನೊದ್ದವ ಕಂಬನಿ ಪುಳಕೋತ್ಸವ ಸುರಿದವ ತತ್ವವನರಿದವ ನೀ ಸುಖದಲಿ ಬಾಳೊ ಎಲೆ ಮನುಜಾ 3 ಬೇಸರದಲೆ ಹೇಳಿ ಏಕಾದಶಿಯ ವಾಸರದಲಿ ಜಾಗರವನು ಗೈದ ಮಾನೀಸನು ಅಘನಾಶನು ಚರಣಕೆ ಏರಿಸಿದನಿವ ಬೆರೆದು ಎಲೆ ಮನುಜಾ4 ಗೋಪಾಳವನು ಬೇಡಿ ನಿತ್ಯಸುಖಿಯಾಗಿ ತಾಪತ್ರೆಯ ಮೊದಲಾದ ದುಷ್ಕರ್ಮ ಪಾಪರಹಿತನಾಗಿ ಸಿರಿ ಪದ್ಮವ ಪೊಂದಿದ ಭಜಕರು ಒಂದೇ ಗೇಣೊ ಎಲೆ ಮನುಜಾ 5
--------------
ವಿಜಯದಾಸ
ನಿತ್ಯ ಶುಭ ಮಂಗಳಂ ಪ. ಸರಸೀರುಹಾಕ್ಷಾಯ ದುರುಳಮದಶಿಕ್ಷಾಯ ಸುರಮೌನಿ ಪಕ್ಷಾಯಾಧೋಕ್ಷಜಾಯ ಶರಣನ ರಕ್ಷಾಯ ಕರುಣಾಕಟಾಕ್ಷಾಯ ಧರಣಿಜಾರಮಣಾಯ ರಾಮಭದ್ರಾಯ 1 ಕ್ರತು ಪಾಲಕಗೆ ಶಶಿವದನೆ ಜಾನಕಿಯ ಕೈಪಿಡಿದವಂಗೆ ಶಶಿಮೌಳಿಚಾಪಮಂ ಮುರಿದ ಅಸಮಬಲನಿಗೆ ದಶಕಂಠಕಾಲಂಗೆ ರಾಘವೇಂದ್ರನಿಗೇ 2 ಕಾಕುತ್ಸ್ಥಕುಲಮಂಡನಗೆ ಕಮಲಾಪ್ತ ಕುಲದೀಪಂಗೆ ಸಾಕೇತನಗರಾಧಿಪಗೆ ಲೋಕೇಶನಿಗೆ ಪಾಕಶಾಸನಮುಖ್ಯ ನಾಕಪೂಜಿತಚರಣ ವೈಕುಂಠನಾಯಕ ಶ್ರೀ ಶೇಷಗಿರಿವರಗೆ 3
--------------
ನಂಜನಗೂಡು ತಿರುಮಲಾಂಬಾ
ಹರಿಯೆನೀನು ಒಲಿದಮೇಲೆ ಪರರ ಭಯವುಂಟೇ ಪ ಪÀರುಷವೇದಿ ಸೋಂಕಿದ ಕಬ್ಬಿಣ ಹೊನ್ನಲ್ಲವೇ ಸುರನದಿ ಭಾಗೀರಥಿಯೊಳು ಮಿಂದೂ ಪಾಪಿಯೇ1 ಗರುಡದೇವನಿದಿರೊಳು ಉರಗಬಾಧೆಯಿರುವುದೇ ಧರೆಯೊಳ್ ರವಿಯು ಉದಯನಾಗೆ ರಾತ್ರಿ ನಿಲ್ವುದೇ2 ಗುರುವಿನ ದಯೆಯಿರುವರೇ ಕುಲದವರೇಂ ಗಯ್ಯುವರು ಉರಿವ ಕಿಚ್ಚಿನಿದಿರೊಳಗೆ ಚಳಿಯ ಭೀತಿಯೇ 3 ಸಂಜೀವನ ಪಿಡಿದವಂ ಮರಣಕೆ ತಾನಂಜುವನೇ ಕಂಜನಯನ ಕಾಯ್ವನಿರಲು ಶನಿಯು ಹಿಂಸಿಪನೇ 4 ರಾಜತನ್ನವನಾಗಿರಲ್ ವಿರಾಜಿಸುತ್ತಲಿರುವನೈ ಜಾಜೀಶ ಕೇಶವನೇ ನಾನು ನಿನ್ನವನೈ 5
--------------
ಶಾಮಶರ್ಮರು