ಒಟ್ಟು 9 ಕಡೆಗಳಲ್ಲಿ , 8 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದೆ ಸುಪಥವೆ ಲೇಸು ಸದ್ಗುರು ಭಕುತಿಗೆ ಧ್ರುವ ಪಿಡಿದರೆ ದೃಢ ಗುರುಭಕುತಿ ಸಾಕು ಷಡದರುಷಣ ಗೂಢವ್ಯಾತಕೆ ಬೇಕು ನಡಿನುಡಿಯಲಿ ನಿಜ ಭೇದಿಸಬೇಕು ಪಡಕೊಂಡರೆ ಬಾಹುದು ಘನಥೋಕÁ 1 ಒಂದರಿಯದೆ ನಿಜದೋರುದು ಖೂನ ಸಂದಿಸಿ ಬೆರೆವುದು ಮನ ಚಿದ್ಛನ ತಂದೆ ಸದ್ಗುರು ದಯದನುಸಂಧಾನ ಎಂದೆಂದಿಗೆ ಅದ ತಾ ನಿಧಾನ 2 ಒಂದಾಗುದೆ ನಿಜಗುರು ದಯಕರುಣ ವಂದಿಸಿ ನೋಡಬೇಕಿದೆ ಘನಸ್ಫುರಣ ಹೊಂದಿ ಬದುಕಿರೊ ಮಹಿಪತಿಗುರುಚರಣ ಚಂದವಿದೆ ಇಹಪರ ಭೂಷಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಾ ಕೆಟ್ಟ ಕೇಡ ಹೇಳುವೆನು ಎಲ್ಲ ಲೋಕದಂತೆನ್ನಬದುಕು ಆಗಲಿಲ್ಲ ಪ ಹೆಂಡರಿಚ್ಛೆಯಿಲ್ಲ ಹೀನವೆಂಬುದಿಲ್ಲಪಂಡಿತತ್ವದ ಪರಮಾರ್ಥಕಿಲ್ಲಉಂಡೆ ಉಟ್ಟೆನೆಂಬ ಊಹೆ ಮೊದಲಿಗಿಲ್ಲಕಂಡ ಕಂಡಂತೆ ಚರಿಸುವಂತಾಯಿತೆ 1 ಅರಿವು ಮರೆವು ಇಲ್ಲ ಆಸೆಗಳೇನಿಲ್ಲಇರುಳು ಹಗಲು ಎಂಬುದೆರಡಿಲ್ಲವೋಶರೀರ ಸ್ಮರಣೆಯಿಲ್ಲ ಶ್ರೇಷ್ಠ ಭಾವಗಳಿಲ್ಲಮರುಳು ಮರುಳು ಆಗಿ ತಿರುಗುವಂತಾಯಿತು 2 ಚಿದಾನಂದ ಗುರುವಿನ ಚಿತ್ತದಿ ಪಿಡಿದರೆಒದವಿದ ಬ್ರಹ್ಮಾನಂದವ ಸವಿದುವಿಧವಿಧವಾದ ಬೆಳಕಿನೊಳಾನಡಗಿರೆಇದರಿಂದಲಿ ಇಂತಾದುದಿದೆಲ್ಲವು3
--------------
ಚಿದಾನಂದ ಅವಧೂತರು
ನಿನಗಿಂತ ಕುಂದೇನೊ ನಮ್ಮಮ್ಮ ಜಯಲಕ್ಷ್ಮೀ ಪ ನಿನಗಿಂತ ಕುಂದೇನೋ ಸನಕಾದಿಗಳ ಸ್ವಾಮಿಮನಸಿಜನೊಡೆಯನೆ ಕನಕಗರ್ಭನ ಜನಕ ಅ ಮಚ್ಚ್ಯಾವತಾರ ನೀನಾದರೆ - ಆಕೆಮಚ್ಚ್ಯಗಂಗಳೆ ತಾನಾದಳೊಹೆಚ್ಚಿನ ಶಂಖವ ಪಿಡಿದರೆ - ಆಕೆನಿಚ್ಚ ಶಂಖಕಂಠಳಾದಳಯ್ಯ 1 ನೀಲವರ್ಣ ನೀನಾದರೆ - ಆಕೆನೀಲಕುಂತಳೆ ತಾನಾದಳೊಲೋಲ ಕಮಲನಾಭನಾದರೆ - ಆಕೆಬಾಲ ಕಮಲಮುಖಿಯಾದಳಯ್ಯ2 ಬೆಟ್ಟವ ನೀನೊಂದು ಪೊತ್ತರೆ - ಆಕೆಬೆಟ್ಟದಂಥ ಕುಚವೆರಡು ಪೊತ್ತಳೊಮೆಟ್ಟಿ ಶೇಷನ ನೀ ತುಳಿದರೆ - ಆಕೆಕಟ್ಟಿ ಬಾಸೆಗೆ ಶೇಷನ ನಿಲಿಸಿಹಳಯ್ಯ3 ಗಜರಾಜವರದ ನೀನಾದರೆ - ಆಕೆಗಜಗಮನೆಯು ತಾನಾದಳಯ್ಯನಿಜ ನರಸಿಂಹ ನೀನಾದರೆ - ಆಕೆಭಜಿಸಿ ಸಿಂಹಮಧ್ಯೆಯಾದಳಯ್ಯ 4 ಈ ಪರಿಯೊಳು ನೀನು ಜನಿಸಿದೆ - ಭಲೆಭಾಪುರೆ ಬಾಡದೊಳು ನೆಲೆಸಿದೆಗೋಪಿಯರ ಮೋಹ ಸಲಿಸಿದೆ - ಚೆಲುವಶ್ರೀಪತಿ ಆದಿಕೇಶವರಾಯ ಮೆರೆದೆ5
--------------
ಕನಕದಾಸ
ಪಾದ ನಿಜವಾಗಿ ಕಂಡೆನು ಪ್ರೇಮದಿಂದಲಿಯೆನ್ನ ಸೇರಿ ಕೊಂಡಾಡೋ ಪ ನಿತ್ಯ ನಲಿಯುತ್ತಲಿರುವದು ಕಾಲಕಾಲಕೆ ಮತ್ತೆ ಸೇವೆಗೊಳುವದು ಬಾಲರು ಪಿಡಿದರೆ ಇಷ್ಟವ ಕೊಡುವದು ಓಲೈಸಿ ಭಕ್ತಗೆ ವರವನೀಯುವÀದು 1 ಪಾದ ಮಧ್ಯದಿ ಪದ್ಮ ರೇಖೆಯ ಕಂಡೆನು ಸಾಧು ಸಜ್ಜನರು ಪೂಜೆಯ ಮಾಡುವುದನು ಖೇದವ ನೀಗುವ ಬೆರಳನು ಕಂಡೆನು ಆದ್ಯಂತವಿಲ್ಲದೆ ನಿರುತವಾದುದನು2 ಮನದಣಿ ನೋಡಿದೆ ಪಾದಯುಗ್ಮಗಳನ್ನು ಮನಲೇಪ ಮಾಡಿದೆ ಹರಿಪಾದಗಳಿಗೇ ಅನುದಿನ ದೂರ್ವಾಪುರದಿ ನೆಲೆಸಿರುವಂಥ ಘನಕೋಟಿ ತೇಜದ ಕೇಶವ ಪದವ 3
--------------
ಕರ್ಕಿ ಕೇಶವದಾಸ
ಬರಹೇಳಮ್ಮಾ ಭಾವೇ ಮನೆಗೆ ಬಿರದಂಕ ಹರಿಯಾ| ಚರಣವನ್ನು ಗಾಣದೆನ್ನ ಚಿತ್ರನೆಲೆ ಗೊಳ್ಳದಮ್ಮಾ ಪ ಬಾಲೆಕೇಳೆ ಕುಂತಳೆ ಬೇಸರ ವಿದೇನೇ| ಪಾಲಗಡಲ ಮನೆಯಾ ಬಿಟ್ಟು ಪವನಾಹಾರನ ಪರ್ಯಂಕವನು| ಜಾಳಿಸಿ ತಾನ್ಯಾಕ ಪೋದನೇ ಜಲರುಹ ನಾಭ| ಕಾಲಿಲಲ್ಲದವನಾಗಿ ಕೊಂದು ತಮನನೀಗಿ| ಮ್ಯಾಲಗಿರಿಯ ಪೊತ್ತ ಮರರಿಗ ಮೃತವಿತ್ತಾ| ಭೂಲಲನೆ ಬಡಿಸಿ ಭೂವರಾಹೆನಿಸಿ| ಬಾಲಕರಿಯಲು ರೂಪ ಬೆಡಗಾ ವಿಡಿಸು 1 ಉಡುರಾಜದವನೆ ಕೆಳದೀ ಉನ್ನತಿಯ ನೋಡೇ| ಷಡ್ಗುಣೈಶ್ವರ್ಯವುಳ್ಳಾ ಸುರಮುನಿಸೇವಿತ ಪಾದಾ| ಬೇಡಿ ಭಾಗ್ಯವ ನೀಡುವ ಬಲುದೊರೆ ತಾನಾಗಿ| ಬಡಹಾರುವನಂತೆ ಭೂಮಿ ಬೇಡಿದನಂತೆ| ಕೊಡಲಿಪಿಡಿದರೆ ಸಕುಲ ಮಾಡಿದ ನಾಶಾ ವಡನೆ ವಾನರ ಸಂಗ ವಿರಹರಿಸಿ ಸುರತುಂಗಾ| ತುಡುಗತನದಿ ಬೆಣ್ಣೆತಿನ್ನುವರೆ ರನ್ನೆ 2 ಕರಿರಾಜ ಗಾಮಿನೀ ಕಿರೀಟ ಕುಂಡಲದಾ ಶಿವತ್ವಕುಂಡಲದಿಂದಾ| ಪರಮಪುರಷದೇವನು ಪೀತಾಂಬರಧಾರೀ| ಬರಿಯ ಬತ್ತೆಲೆಯಾಡಿ ಬೌದ್ಯರೋಳಗ ಕೂಡೀ| ತುರಗೀರಿಯ ವನರ ತುಳಿಸುತ ಸುರವರ ಮೊರೆಗೇಳಿ ಬಂದನು ಮನದೊಳು ನಿಂದನು| ಗುರು ಮಹಿಪತಿ ಪ್ರೀಯಾ ಗುಣಗಣನಿಲಯಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಯಾಕೆ ರಂಗ ನಿನಗೆ ಮಾಕಾಂತೆಯೊಳು ಗರ್ವ | ಲೋಕದೊಳು ಅಬಲೆಯೇನೋ ಕೇಳಯ್ಯಾ ನೀನು ಪ ಮೀನಾವತಾರವ ನೀನಂದು ವಿಡಿದರೆ | ಮೀನಾಂಬಕಿ ತಾನಾದಳೋ1 ಬೆಟ್ಟವ ಬೆನ್ನಿಲಿ ಕಷ್ಟದಿ ನೆಗೆದರೆ | ಬಟ್ಟ ಕುಚಗಳ ಹೊತ್ತಳೋ 2 ಧರೆಯ ಭಾರವ ತಾಳಿದರ ನಿನ್ನಾಭಾರವನು | ಧರಿಸಿದಳಂದಗಲದಲೆ 3 ಸಿಂಹಾನನನಾಗಿ ಮಹಿಮೆ ದೋರಿಸಿದರೆ | ಸಿಂಹದಂತೆ ನಡು ನಡುವಾದಳೋ 4 ಬಲಿ ಬಾಗಿಲಕಾಯಿದರೆ ನೆಲೆಸಿಹಳವಳಲ್ಲಿ | ಬಲಿಯಾ ಭಾಗ್ಯ ರೂಪವಾಗಿ5 ಸುರರ ಹೊರಿಯಲಿಕ್ಕೆ ಪರಶವ ಪಿಡಿದರೆ | ಪರಸಗೈಯ್ಯ ತಾನಾದಳೋ 6 ಹರನಾ ಚಾಪವನೆಗೆದರೆ ಅದನೆವೆ ಮುನ್ನೆ | ಕರೆದಲೆ ತ್ಯಾಡಿದಳೊ 7 ಸೆರೆಹರಿದು ಸ್ತ್ರೀಯರಾ ತಂದರೆ ನಾರದರಿಂದ | ಸೆರೆವಿಡಿಸೆ ಕೊಂಡಳೋ 8 ಮುಪ್ಪರ ಹೊಕ್ಕರೆ ನೀವಪ್ಪುತಲಿ ಹನಿನ್ನಾ | ಮುಪ್ಪುರದಲಿ ಮೆರೆದಳೋ 9 ತುರುಗವ ಏರಿಕೊಂಡು ತಿರುಗಲು ನಿನ್ನಾಕೂಡ | ತುರಗಮನಿ ತಾನಾದಳೋ 10 ಕಡೆಯಕಾಲಕ ನೀರೊಳೊಡಗೂಡಿ ಮಲಗಲು | ಒಡನೆ ವಟದೆಲೆ ಯಾದಳೋ11 ಗುರು ಮಹಿಪತಿ ಪ್ರಭು ಚರಿತೆಯಾ ನಿಮ್ಮೀರ್ವರ | ಭರದಿ ಹೇಳಲೆನ್ನಳವೇ 12
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸೃಷ್ಟಿ ಕಾರಣ ದಯಾ ದೃಷ್ಟಿಯಲಿ ನೋಡೆನ್ನ ಘಟ್ಟಿಗನೆನಬೇಕೊ ಇಷ್ಟಿಲ್ಲ ಅಪರಾಧ ಪ ಇಷ್ಟವರನ ಬಂಧದೋಳೆನ್ನ ಸಿಲುಕಿಸಿ ದುಷ್ಟರೂ ಒಂದಾಗಿ ತಾವೆಲ್ಲ ಎನ್ನನೂ ಲಿಷ್ಟರೊಳು ನೀ ಕೇಳುವಂತೆ ಕೂಗಿದೆನಲ್ಲ 1 ನಿನ್ನ ಮಾತುಗಳಾಡಧ್ಹಾಂಗೆನ್ನ ಮಾಡಿಸಿ ಅನ್ಯವಾರುತಿಗಳು ಚನ್ನಾಗಿ ನುಡಿಸಲು ಅನ್ಯಾಯ ಬಂತೆಂದು ಅವರಂತೆ ನುಡಿದು ನಾ ಮನ್ನದೊಳಗೆ ಮೊರೆ ಇಟ್ಟದನರಿಯಾ 2 ಒಳಗೆ ಹೊರಗೆ ತುಂಬಿಕೊಂಡಿಹರು ಬಹಳ ಖಳರು ಅವರು ದೇಶ ಕಾಲವಯ್ಯ ಬಳಿಯಲಿ ನಿನ್ನವರು ಗೂಢ ವೇಷದಿ ತಾವು ಸುಳಿಯಲು ಅವರನ್ನು ಗುರುತು ಮಾಡಿದೆನಯ್ಯ 3 ಈಗಲೂ ನಿನ್ನ ಬಲಪವನನಾಗಮದಿಂದ ಬ್ಯಾಗನೆ ಖಳರನ್ನ ವರದು ಸವರಿಸೊ ಜಾಗರೂಕನಾಗಿ ಅದೇ ಪದ್ಧತಿ ಪಿಡಿದು ಸಾಗಿ ಬಂದೆನು ಕೇಳು ಎನ್ನಿಂದೇನಪರಾಧ4 ಲೇಸಾಗಿ ಬಲವಿತ್ತು ಎನ್ನನು ಕಳಿಸಲು ಆಸು ಅಸುರರನ್ನು ತರದೊಟ್ಟುವೆಯಾ ವಾಸುದೇವವಿಠಲ ನೀ ಕೈಯ್ಯ ಪಿಡಿದರೆ ಆ ಸುಕಾರ್ಯಕೆ ಬಾಹೆ ನೋಡೆನ್ನ ಶಕುತಿ5
--------------
ವ್ಯಾಸತತ್ವಜ್ಞದಾಸರು
ಹಳೆಯವಾಸನೆ ನಿನ್ನ 'ೀರುವದಣ್ಣಬಳಸಿದೆ ಬಹುವಾಗಿ ಬಿಡುವದೆಂತಣ್ಣ ಪಭವರೋಗಿಯಾಗಿದ್ದು ಬಾಯ ಸ'ಗಾಗಿಅ'ವೇಕ ಪಥ್ಯಗಳ ಸ'ದು ಮೂರ್ಛೆದೋಷವುಮೂರ್ಛೆಯ ಕ'ದು ಮನ ತೇಲಿ ಬಂತಾಗಿಸು'ವೇಕ ಮುಚ್ಚೋುತೆ ತೋರದಾಗಿ 1ರಾಮನ ನಾಮ ರಸಾಯನವನ್ನುನೇಮದಿಂ ಸೇ'ಸು ಬಿಡದಿರುುನ್ನುಕಾಮಾಲೆ ಬರದಂತೆ ಕರಣಗಳನ್ನು ಸದಾ ಮನಗುತೆುಂದರಿತರೆ ಸುಖಿುನ್ನು2ಕರುಣದಿಂ ಚಿಕ್ಕನಾಗಪುರದೊಳಗಿರುವಗುರುಪರವಾಸುದೇವಾರ್ಯನ ಪದವ ಪಿಡಿದರೆ ಸುಜ್ಞಾನಾಮೃತವ ನಿನಗೆರೆವಮರೆವೆ ಹಳೆಯ ವಾಸನೆಯ ನಿನ್ನಿರವ3
--------------
ವೆಂಕಟದಾಸರು
ಏಳಯ್ಯ ಶ್ರೀಹರಿ ಬೆಳಗಾಯಿತು ಪ.ಏಳು ದೇವಕಿತನಯ ನಂದನಕಂದಏಳು ಗೋವರ್ಧನ ಗೋವಳರಾಯ ||ಏಳುಮಂದರಧರ ಗೋವಿಂದ ಫಣಿಶಾಯಿಏಳಯ್ಯ ನಲಿದು ಉಪ್ಪವಡಿಸಯ್ಯ 1ಕ್ಷಿರಸಾಗರವಾಸ ಬೆಳಗಾಯಿತು ಏಳುಮೂರುಲೋಕದರಸು ಒಡೆಯ ಲಕ್ಷ್ಮೀಪತಿ ||ವಾರಿಜನಾಭನೆ ದೇವ ದೇವೇಶನೆಈರೇಳು ಲೋಕಕಾಧಾರ ಶ್ರೀ ಹರಿಯೇ 2ಸುರರುದೇವತೆಗಳು ಅವಧಾನ ಎನುತಿರೆಸುರವನಿತೆಯರೆಲ್ಲ ಆರತಿ ಪಿಡಿದರೆ ||ನೆರೆದು ಊರ್ವಶಿ ಭರದಿ ನಾಟ್ಯವಾಡಲುಕರುಣಿಸೊ ಪುರಂದರವಿಠಲ ನೀನೇಳೋ 3
--------------
ಪುರಂದರದಾಸರು