ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆತ್ಮನಿವೇದನೆ ಇಂದೀವರಾಕ್ಷ ಬಾ ಮುಕುಂದ ಮರಹರ ಗೋವಿಂದಾ ಸುಂದರಾಂಗನೆ ಬಂದು ರಕ್ಷಿಸೋ ಚೆನ್ನಿಗರ ಚಂದಾ ಪ ತಂದೆ ತಾಯಿ ಬಂಧುಬಳಗ ಇಂದೆನಗೆ ನೀನೇ ಚಂದದೆನ್ಮನ ಮಂದಿರದಿ ನೀ ನಿಂದಿರು ದಯಾಮಯನೆ 1 ನಿನ್ನ ಪಾದವನ್ನು ಪಿಡಿದನೆನ್ನ ರಕ್ಷಿಸೋ ಸನ್ನುತ ವಿಚ್ಛಿನ್ನ ಭಕುತರನ್ನು ಸೇರಿಸಿಕೋ 2 ಬೆರಸ ಬ್ಯಾಡೆನ್ನರಸ ನಿನ್ನ ಸ್ಮರಿಸದಿರ್ಪರಾ ಶಿರಿವರ ನರಸಿಂಹವಿಠ್ಠಲ ಪೊರೆಯೋ ಭೌಮಾ 3
--------------
ನರಸಿಂಹವಿಠಲರು
ಆವಾವ ಬಗೆಯಿಂದ ಹರಿಗರ್ಪಿಸೊ ಭಾವ ಶುದ್ಧನಾಗಿ ಮುಖ್ಯತ್ವ ವಹಿಸದೆ ಪ ನೋಡುವ ನೋಟಗಳು ಹರಿಯೆ ನೋಡಿದನೆನ್ನಿ ಆಡುವ ಮಾತುಗಳು ಹರಿಯೆ ಆಡಿದನೆನ್ನಿ 1 ನಡಿವ ನಡಿಗೆ ಎಲ್ಲ ಹರಿಯೆ ನಡೆದನೆನ್ನಿ ಕೊಡುವ ದಾನಗಳು ಹರಿಯೆ ಕೊಟ್ಟನೆನ್ನಿ ಒಡನಾಡುವ ಲೀಲೆ ಹರಿಯೆ ಆಡಿದನೆನ್ನಿ ಪಿಡಿವ ಚೇಷ್ಟೆಗಳೆಲ್ಲ ಹರಿಯೆ ಪಿಡಿದನೆನ್ನಿ 2 ಕೇಳುವ ಶಬ್ದಗಳು ಹರಿಯೆ ಕೇಳಿದನೆನ್ನಿ ಹೇಳುವ ವಿಧವನಿತು ಹರಿಯೆ ಎನ್ನಿ ಮಾಲೆ ಧರಿಸುವುದು ಹರಿಯೆ ಧರಿಸಿದನೆನ್ನಿ ಮೇಲು ಸುಖ ಬಡುವುದು ಹರಿಯೆ ಎನ್ನಿ3 ಕೊಂಡ ಎನ್ನಿ ಭೂಷಣವಿಡುವುದು ಹರಿಯೆ ಎನ್ನಿ ಲೇಸು ಬಯಸುವುದು ಹರಿಯೆ ಬಯಿಪನೆನ್ನಿ ಗ್ರಾಸ ಮೆಲುವದೆಲ್ಲ ಹರಿಯೆ ಎನ್ನಿ 4 ಸತಿಯ ಕೂಡುವದೆಲ್ಲ ಹರಿಯೆ ಕೂಡಿದನೆನ್ನಿ ಹಿತವಾಗಿಪ್ಪದು ಹರಿಯೆ ಎನ್ನಿ ಸುತರ ಪಡೆದಾದಲ್ಲಿ ಹರಿಯೆ ಪಡೆದನೆನ್ನಿ ಪ್ರತಿಕೂಲವಾಗುವುದೆ ಹರಿಯೆ ಎನ್ನಿ 5 ಬಳಗ ಸಾಕುವುದೆಲ್ಲ ಹರಿಯೆ ಸಾಕಿದನೆನ್ನಿ ಸುಲಭನಾದರೆ ಹರಿಯಾದನೆನ್ನಿ ಗಲಭೆ ಮಾಡುವುದೆಲ್ಲ ಹರಿಯೆ ಮಾಡಿದನೆನ್ನಿ ಸುಳಿದಾಡುವುದೆಲ್ಲ ಹರಿಯೆ ಎನ್ನಿ 6 ಏನೆಂಬೆ ಹರಿ ಲೀಲೆ ನಿರ್ದೋಷ ನಿಸ್ಸಂಗ ಅನಂತಕಾಲಕ್ಕೂ ಎಲ್ಲಿದ್ದರು ಕಾಯ ವಿಜಯವಿಠ್ಠಲರೇಯ ನಾನಾ ವ್ಯಾಪಾರಗಳ ಮಾಳ್ಪನೆನ್ನಿ 7
--------------
ವಿಜಯದಾಸ