ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಳ ಮುದ್ದು ಕೃಷ್ಣನಿಗೆ ಜಯ ಮದನ ಜನಕ ಬಾಲ ಹರಿಗೆ ಪ. ಕಡಗೋಲ ನೇಣು ಪಿಡಿದಗೆ ಪಾಲ್ ಗಡಿಗೆ ಒಡೆದು ಇಲ್ಲಿ ಓಡಿ ಬಂದವಗೆ ಕಡಲ ತಡಿಯಲಿ ನಿಂತವಗೆ ಅಷ್ಟ ಮಡದಿಯರರಸನೆಂತೆಂಬ ಪುರುಷಗೆ 1 ಯತಿವರರಿಂದರ್ಚಿತಗೆ ಬಹು ಜತನದಿ ಭಕ್ತವರ್ಗಗಳ ಕಾಯ್ವನಿಗೆ ಯತಿ ಮಧ್ವರಾಯಗೊಲಿದಗೆ ನಿತ್ಯ ಚ್ಯುತ ದೂರವಾದ ಸರ್ವೇಶನೆಂಬುವಗೆ 2 ಗರುಡನ್ನ ಎಡದಿ ನಿಲಿಸಿದಗೆ ಬಲದಿ ಮರುತನ್ನ ನಿಲಿಸಿ ಕೊಂಡ್ಹರುಷಪಡುವನಿಗೆ ಕಿರಿದ್ವಾರದಿ ಮಧ್ವ ಉಳ್ಳವಗೆ ನಮ್ಮ ಸಿರಿಪತಿ ಗೋಪಾಲಕೃಷ್ಣವಿಠ್ಠಲಗೆ 3
--------------
ಅಂಬಾಬಾಯಿ
ಮೂರ್ತಿ ಶ್ರೀಗಣರಾಯಗೆ ಪ ಶರ್ವಾಣಿಸುತ ಚತುರ್ದಶ ವಿದ್ಯದಾಗರ | ಸರ್ವಗುಣಾಂಬುಧಿ ಗಜಮುಖಗೆ | ಊರ್ವಿಯೊಳಗೆ ತನ್ನ ಚರಣವ ನೆನೆವರ | ನಿರ್ವಿಘ್ನದಲಿ ಕಾವ ದಯಾನಿಧಿಗೆ 1 ರನ್ನ ಮುಕುಟ ದಿವ್ಯ ಕುಂಡಲಧಾರಿಗೆ | ಪನ್ನಗ ಭೂಷಣ ಚತುರ್ಭುಜಗೆ | ಸನ್ನುತ ಪರಶಾಂಕುಶವನು ಪಿಡಿದಗೆ | ಮೂಷಕ ವಾಹನಗೆ 2 ಸಮಚರಣಾಂಬುಜ ಸುರವರವಂದ್ಯಗೆ | ಕಮಲಸಕನ ತೇಜ ಗೆದ್ದವಗೆ | ವಿಮಲ ಮತಿಯ ನೀವ ಸಿದ್ದಿಧೀರೇಶಗೆ | ನಮೋಎಂಬೆ ಮಹೀಪತಿ ಸುತಪ್ರಿಯಗೆ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು