ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಡುಪಿ ಪರಿಸರದ ದೇವತೆಗಳು ಕಣ್ವ ಋಷಿ ತಪಗೈದ ಅಜ್ಜರ್ಕಾಡೆಂಬಲ್ಲಿ ಅವನಿಗೊಲಿದಿರುವ ದುರ್ಗೆ ವಾಸವಾಗಿಹಳು ಒಳಕಾಡು ಎಂಬ ತಾನವೆ ಚಂದ್ರನ ತಪೋ ಭೂಮಿ ಇಲ್ಲಿಯೇ ಸಕಲ ವಿದ್ಯಾಲಯವಾಯ್ತು 132 ಬೆಳ್ಳಿ ಮಂಚದ ಕಾಲುಗಳು ನಾಲ್ಕು ಎಂಬಂತೆ ಆರ್ಮೊಗನ ರೂಪಗಳು ನಾಲ್ಕು ದೆಸೆಗಳಲಿ ಮಾಂಗೋಡು ತಾಂಗೋಡು ಆರಿತೋಡು ಮುಚ್ಲಿಕೋಡು ನಾಮದಿಂ ಬೆಳಗುವವು ಷಷ್ಠಿದಿನದಂದು 133 ಕಡಿಯಾಳಿ ಎಂಬಲ್ಲಿ ಮಹಿಷಮರ್ದಿನಿಯಾಗಿ ದುರ್ಗಾಲಯವು ಉಡುಪಿ ಪೂರ್ವದ್ವಾರದಲ್ಲಿ ಪುತ್ತೂರು ಬೈಲೂರು ಬಡಗು ತೆಂಕು ದೆಸೆಯಲ್ಲಿ ಕೃಷ್ಣ ಸೇವೆಗೆ ದುರ್ಗೆ ಕಟಿಬದ್ಧಳಿಹಳು 134 ಸತ್ಯ ನುಡಿಯಲ್ಲಿರಲಿ ಧರ್ಮ ನಡೆಯಲ್ಲಿರಲಿ ಸ್ವಾಧ್ಯಾಯದಲಿ ಎನಗೆ ಎಚ್ಚರವದಿರಲಿ ಅಜ್ಞಾನದಂಧಕಾರದ ದಿಕ್ಕಿನಿಂದೆನ್ನ ನಿನ್ನ ಬೆಳಕಿನ ಕಡೆಗೆ ಕರೆದೊಯ್ಯು ದೇವಾ 135 ಪರಶುರಾಮಕ್ಷೇತ್ರ ಹುಟ್ಟುಭೂಮಿಯು ಎನಗೆ ಪರಶುರಾಮನು ನೀನೆ ನಿನ್ನ ಕ್ಷೇತ್ರವಿದು ಪರಮಹಂಸಾಖ್ಯಯತಿಗಳ ಮಾನಸಹಂಸ ಸೋಹಂ ಎನ್ನುವ ಬ್ರಹ್ಮ ಎನ್ನೊಳಗೆ ಇರುವೆ 136 ಕೃಷ್ಣಾರ್ಪಣವದಿಲ್ಲದಾವುದು ಫಲ ಕೊಡದು ಅದರಿಂದ ಕೃಷ್ಣನಿಗೆ ಕೃತಿಯನರ್ಪಿಸುತ ಸಾಲೋಕ್ಯ ಸಾಮೀಪ್ಯವನ್ನು ಬಯಸುವೆ ನಾನು ಯೋಗ್ಯತಾನುಗುಣವಾಗಿ ಫಲವ ಕೊಡು ಹರಿಯೆ137 ಪರಶುರಾಮನು ರಾಮ ಪರಶು ರಾಮನು ಕೃಷ್ಣ ರಾಮದಾಸನು ನಾನು ಕೃಷ್ಣದಾಸನಿಹೆ ಬರೆದ ಕೃತಿಯಿಂದ ನೀನ್ ಸುಪ್ರಸನ್ನತೆ ಪಡೆದು ಭಕ್ತಿ ಮುಕ್ತಿಗಳ ಕೊಟ್ಟು ರಕ್ಷಿಸು ಶ್ರೀಶ 138 ಉಡುಪಾನ್ವಯಜ ನಾನು ಉಡುಪಾನ್ವಯದ ನೀನು ಉಡುಪಿ ಹುಟ್ಟೂರೆನಗೆ ನೀನುಡುಪಿಗತಿಥಿ ಮಧ್ವ ಹೃದಯವು ನಿನಗೆ ವಾಸದ ಸ್ಥಾನವಿರೆ ಮಾಧ್ವಕೋಟಿಗಳಲ್ಲಿ ಕೀಟನಾಗಿಹೆ ನಾನು 139 ವಿಷ್ಣು ಪದದೊಳಗಿರುವ ಜ್ಯೋತಿಲೋಕದ ಒಡೆಯ ಆ ಜ್ಯೋತಿಲೋಕಕ್ಕೆ ಕರೆದೊಯ್ಯುತ ನನ್ನ ಭಕುತರಿಗೆ ಮುಕುತಿ ಕೊಡುವುದೆ ನಿನ್ನ ಸಂಕಲ್ಪ ಅದರಿಂದ ನಿನ್ನನ್ನು ಶರಣು ಶರಣೆಂಬೆ 140 ಚಾಂದ್ರಮಾನದ ಪಿಂಗಳಾಖ್ಯ ಸಂವತ್ಸರದಿ ಚೈತ್ರ ಮಾಸದ ನವಮಿಯ ದಿನದಲ್ಲಿ ಕಾಲ ಇದನರ್ಪಿಸುತ ನಾನು ಕೃತಕೃತ್ಯನಾದೆ ಶ್ರೀಕೃಷ್ಣ ಕಾಪಾಡು 141
--------------
ನಿಡಂಬೂರು ರಾಮದಾಸ
ಮಾಧವಾ ನಿಮ್ಮ ನಾಮ ಸಾಲದೇ ಪ ಪರಗತಿ ಸುಖವನು ಸ್ಮರಿಸಲು ನಿನ್ನನಾ|| ಪರಿಪರಿ ತಪದಿಂದಾ ಚರಿಸುವ ದ್ಯಾತಕೆ ನಾ 1 ಕರಿಕಿರಿಯನ್ನಲು ಶರೆಯನು ಬಿಡಿಸಿದ| ಶರಣ ಪ್ರಹ್ಲಾದನ ದುರಿತದಿ ಕಾಯ್ದ2 ದ್ರೌಪದಿ ಸ್ಮರಿಸಲು ಆಪತ್ತ ಹರಿಸಿದ| ಆ ಪತಿತ-ಜಮಿಳ ಪಾಪದಿ ತರಿಸಿದ 3 ನೆನೆಯಲು ಪಿಂಗಳಾ ಕ್ಷಣದಿ ಗತಿಯ ಕೊಟ್ಟಾ| ಬಿನುಗು ಮಂಡೂಕನ ವಿಮಾನದಿ ಮೆರೆಸಿದಾ4 ದುರುಳನ ಕೈಯಿಂದ ಹರಣಿಯ ಕಾಯಿದಾ| ಗುರಿಯಾ ತಪ್ಪಿಸಿ ಸೆರೆ ಹೊರೆದ ಕಪೋತಕ5 ಹಲವು ಸಾಧನದಿಂದ ಬಳಲುವ-ದ್ಯಾತಕ| ತಿಳಿದವ ಬೇಡಿದ ಫಲವನೇ ಕೊಡುತಿಹ 6 ತಂದೆ ಮಹಿಪತಿ ನಂದನ ಸಾರಥಿ| ಎಂದೆಂದು ನನಗಿದೆ ಛಂರದಿ ಕುಡು ಕಂಡ್ಯಾ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಯಮುನೇ ದುರಿತೋಪಶಮನೇ ಪ ಶರಣೆಂಬೆ ತವ ಪಾದಾಂಬುರುಹ ಯುಗಳಿಗೆ ದಿವಾ ಕರತನಯೆ ಸಪ್ತಸಾಗರ ಭೇದಿನೀ ಹರಿತೋಷ ಲಾಭ ಸುಂದರಿ ಸುಭಗೆ ನಿನ್ನ ಸಂ ದರುಶನಕೆ ಬಂದೆ ಭಕ್ತರ ಪಾಲಿಪುದು ಜನನಿ 1 ಮಕರಾದಿ ಮಾಸದಲಿ ವಿಖನಸಾವರ್ತ ದೇ ಶಕೆ ಬಂದು ವಿಜ್ಞಾನ ಭಕುತಿಯಿಂದಾ ತ್ರಿಕರಣದ ಶುದ್ಧಿಯಲಿ ಸಕೃತ ಸ್ನಾನದ ಗೈಯೆ ಸಕಲ ಸುಖವಿತ್ತು ದೇವಕೀಸುತನ ತೋರಿಸುವೆ 2 ಕನಕಗರ್ಭಾವರ್ತವೆನಿಪ ದೇಶದಲಿ ಸ ಜ್ಜನರ ಪಾಲಿಪೆನೆಂಬ ಅನುರಾಗದಿ ಪ್ರಣವಪಾದ್ಯಗೆ ವಿಮಲ ಮುನಿಯಂತೆ ನಿರುತ ಕುಂ ಭಿಣಿಯೊಳಗೆ ಸರಸ್ವತಿ ದ್ಯುನದಿಯಂದದಿ ಮೆರೆದೆ 3 ಜಮದಗ್ನಿ ಮುಖ್ಯ ಸಂಯಮಿಗಳನುದಿನದಿ ಆ ತಮ ತಮ್ಮೊಳಗೆ ರಮಾರಮಣ ದಾಮೋದರನ ಸುಮಹಿಮೆಗಳನು ಪೊಗಳುತಮಿತ ಮೋದದಲಿಹರು 4 ಪಿಂಗಳಾಧಿಷ್ಠಿತೆ ಶುಭಾಂಗಿ ಸುಮನವನಿತ್ತು ಕಂಗೊಳಿಸು ಎನ್ನಂತರಂಗದಲ್ಲಿ ತುಂಗ ಸುಮಹಿಮ ಜಗನ್ನಾಥ ವಿಠಲನ ಸುಗು ಣಂಗಳ ತುತಿಪುದಕೆ ಮಂಗಳ ಮತಿಯನೀಯೇ 5
--------------
ಜಗನ್ನಾಥದಾಸರು