ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೆರಳಿಪೋದರು ವಿಠ್ಠಲಾರ್ಯರಿಂದು ಮುರಹರನ ಚರಣವನು ಸ್ಮರಿಸುತಲಿ ಹರಿಪುರಕೆ ಪ ಸುರಪುರದಿ ಜನಿಸಿ ದೇವಾಂಶರೆಂದೆನಿಸಿದರು ಪುರುಹೂತನಂತೆ ಸಕಲೈಶ್ವರ್ಯದಿಂ ಗುರುರಾಘವೇಂದ್ರರೊಲಿವರಿಗೆ ಪಾತ್ರರೆಂದೆನಿಸಿ ನರಯಾನದಲಿ ಕುಳಿತು ಮೆರೆದರತಿ ವೈಭವದಿ1 ಬಂದ ಶಿಷ್ಯರಿಗೆ ನಿರುತ ಅನ್ನೋದಕವನಿತ್ತು ತಂದೆಯಂತೆ ಸಲಹಿ ಪ್ರೀತಿಯಿಂದ ಮಂದಹಾಸದಿ ಶಾಸ್ತ್ರಮರ್ಮಗಳ ಪೇಳಿಬುಧ ರೆಂದೆನಿಸಿದಂಥ ಮಹಾಮಹಿಮರಾನಂದದಲಿ2 ಭಾಗವತ ಪುರಾಣವ ಜನಕೆ ಅತಿಹಿತದಿ ಪೇಳಿ ದುಷ್ಕøತವ ಕಳೆದು ಗತಿಯೆಂದು ನಂಬಿದ ಭಕುತ ಜನಕೆಧರ್ಮಪ ದ್ಧತಿಗಳನು ಪೇಳುತ ಪ್ರತಿಮರೆಂದೆನಿಸಿ 3 ಭೂತಲದಿ ಜನಿಸಿ ಬಹು ಖ್ಯಾತಿಯನು ಪಡೆದು ನರ ನಾಥರಿಂದಲೆ ಮಾನ್ಯರಾಗಿ ಮೆರೆದು ಪ್ರೀತಿಯಿಂ ಭಜಿಪ ಶಿಷ್ಯೋತ್ತಮರನುದ್ದರಿಸಿ ಪತಿ ಬಳಿಗೆ ಪೋಗುವಾ ತುರದಿ4 ಮೋದದಿಂ ಪಿಂಗಲ ಸಮಾ ಮಾಘವದಿ ಪಂಚ ಮೀ ದಿನದಿ ಆದಿವಾರ ಸ್ವಾತಿಯೋಳ್ ಶ್ರೀದಕಾರ್ಪರ ನಾರಶಿಂಹ ವಿಠ್ಠಲನ ಪದ ಸಾದರದಿ ಧೇನಿಸುತ ಮೇದಿನಿಯ ತ್ಯಜಿಸಿ 5
--------------
ಕಾರ್ಪರ ನರಹರಿದಾಸರು
ನಮೋ ನಮೋ ಸುಶೀಲೇಂದ್ರ | ಗುರುವರಿಯ ವೈಷ್ಣವ ಸುಮತವಾರಿಧಿ ಚಂದ್ರ | ಸಕುವಿ ಸಂಸ್ತುತ | ಅಮಿತ ಸದ್ಗುಣ ಸಾಂದ್ರ || ಸುಮತಾಹಿವೀಂದ್ರ ಪ ನಮಿಪ ಜನರಿಗೆ ಅಮರ ಭೂರುಹ ಸಮಸುಖಪ್ರದ ವಿಮಲ ಚರಿತನೆ ಯಮಿವರ್ಯ ಸುವೃತೀಂದ್ರ ಮಾನಸ ಕಮಲರವಿ ಮಹಿ ಸುಮನಸಾಗ್ರಣಿ ಅ.ಪ ಅಸಮ ಮಹಿಮೋದರ | ತವಸುಪ್ರಭಾವವ ಸುಜನ ವಂದಿತ ಸ್ವಶನ ಸುಮತೋದ್ಧಾರ || ದಯ ಪಾರವಾರ || ವಸುಧೆಯೊಳು ಮೊರೆಹೊಕ್ಕ ಜನರಿಗೆ ಕುಶಲಪ್ರದ ನೀನೆಂದು ಬುಧ ಜನ ಉಸುರುವದು ನಾ ಕೇಳಿ ನಿನ್ನ ಪದ ಬಿಸಜ ನಂಬಿದೆ ಪೋಷಿಸನುದಿನ 1 ದೀನಜನ ಸುಖದಾತ | ಸುಕೃತೀಂದ್ರ ಕೋಮಲ ಬಾಣಲೋಕ ವಿಖ್ಯಾತÀ || ದ್ವಿಜಕುಲಕೆ ನಾಥ || ಕ್ಷೋಣಿಯೊಳು ನೀ ಒಲಿದ ಮಾತ್ರದಿ ಮೌನಿವರ್ಯ ಶ್ರೀ ರಾಘವೇಂದ್ರರು ಸಾನುರಾಗದಿ ಸಲಹುವರು ಪವ ಮಾನ ಶಾಸ್ತ್ರ ಪ್ರವೀಣ ಜಾಣ 2 ಪಿಂಗಲೇಂದ್ರ ಪ್ರಕಾಶ | ಸುಪವಿತ್ರ ವರದತ ರಂಗಿಣಿ ತಟವಾಸ | ಸದ್ಧರ್ಮ ಸ್ಥಾಪಕ ಮಂಗಳಾಂಗ ಯತೀಶ | ಪಾಪೌಘನಾಶ || ತುಂಗವಿಕ್ರಮ ಶಾಮಸುಂದರನಂಘ್ರಿ ಕಮಲಕೆ ಭೃಂಗ ಭವಗಜಸಿಂಗ ಕರುಣಾ ಪಾಂಗದೀಕ್ಷಿಸೆ ಇಂಗಿತಜ್ಞರ ಸಂಗಪಾಲಿಸು 3
--------------
ಶಾಮಸುಂದರ ವಿಠಲ
ಮಾವಿನಕೆರೆ 5 ಪವಮಾನಾತ್ಮಜ ಚರಣಂ ಭವಸಾಗರ ಭಯ ಹರಣಂ ಪ ಶಿವಹರಿ ಸಂಶಯ ಪರಿಹರಣಂ ಭುವನೇಶ್ವರ ತವಶರಣಂ ಅ.ಪ ರಾಮಮಂತ್ರ ಮಾಲಾಭರಣಂ ಸೋಮಶೇಖರಾನಂದ ಗುಣಂ ಕಾಮರೂಪಿದಾನವ ಹರಣಂ ಸಾರಸ ಚರಣಂ 1 ಮಂಗಳ ಚರಿತಂ ಭವರಹಿತಂ ಸಂಗರಧೀರಂ ಗುಣಭರಿತಂ ಪಿಂಗಲಾಕ್ಷ ಕೋವಿದ ಹನುಮಂತಂ ಮಾಂಗಿರಿ ನಿಲಯ ಹನುಮಂತಂ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್