ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ ಧರೆಯೊಳಗಿಂಥಾ ಸೊಬಗ ಕಾಣೆನೋ ಪ ಕಂತುಪಿತ ತನ್ನ ಕಾಂತೇಯರೊಡಗೂಡಿ | ನಿಂತು ಮಜ್ಜನಗೊಂಡು ಸಂತಸವಾಂತಪರಿಅ.ಪ ನಂದಾವ್ರಜದಿ ಇಂದ್ರನೂ | ಕುಪಿತನಾಗಿ | ಅಂಧವೃಷ್ಟಿಯ ಕರೆಯಲು | ಸಿಂಧೂಶಯನ ಗಿರಿಯ | ಮಂದಹಾಸದಿ ನೆಗಹಿ | ಸುಂದರ ಗೋವ್ಗಳನೆ | ಚೆಂದಾದಿಂದಲೆ ಪೊರೆಯೆ | ಅಂದು ತೋರಿದುಪಕೃತಿಯ ನೆನೆದು ಗೋ | ವೃಂದಗಳೈ | ತಂದಿಂದಿರೆಯರಸಗೆ | ಮಿಂದು ಮಧುರಕ್ಷೀರಧಾರೆಯ ಕರೆಯಲು | ನಂದಕುವರಾನಂದವ ಬೀರಿದ 1 ಕಿರಿಯರೊಡನೆ ಕೂಡುತ | ಗೋಪಾಲನು | ಮುರಲಿನಾದವ ಗೈಯುತ | ಹರಿಣಾಕ್ಷಿಯರಮನೆ | ಹರುಷದಿಂದಲೇ ಪೊಕ್ಕು | ಪರಿಪರಿ ಲೀಲೆಯಿಂ | ಬೆರಗು ಮಾಡುತಲಿರೆ | ವರ ಧದಿಘೃತ ಭಾಂಡಗಳನೊಡೆದು | ಯದುವರನಾಲೈಸುತ ಬರುವರ ಸುಳಿವನು | ಸರಸದಿ ಕಂಡಾಕ್ಷಣದಿಂದೋಡಲು | ಸುರಿದುದು ಶಿರದಲಿ ದಧೀಘೃತಧಾರೆಯು 2 ಕರುಣಾಸಾಗರ ಹರಿಯು | ಮೋಹದಿ ವರ | ಭೈಷ್ಮಿಭಾಮೇರ ಕೂಡುತಾ | ಭರದಿ ಕುಣಿಯಲವರ ಶಿರದಿ ಮುಡಿದ ಸುರಗೀ | ಅರಳುಮಲ್ಲಿಗೆಯೊಳು | ಸೆರೆಬಿದ್ದ ಮಧುಪಗಳ | ನೆರೆದು ಝೇಂಕರಿಸುತ | ಹರುಷದಿ ಸುರಿಸಲು ಸುರ ಸಂದೋಹವು | ಪರಿ 3 ಅಂಗಳದೊಳು ಆಡುತ | ಮಂಗಳಮೂರ್ತಿ | ಸಂಗಡಿಗರ ಸೇರುತಾ | ಮುಂಗುರುಳ್ಗಳ ಮೇಲೆ | ಕೆಂದೂಳಿಯನೇ ಧರಿಸಿ | ಗೋಪಿ ರಂಗನ್ನಪ್ಪಿದಳು ಮುದದೀ || ಅಂಗನೆ ರುಕ್ಮಿಣಿ ಭಂಗಿಯ ನೋಡಲು | ಅಂಗಜ ಪಿತನನು | ಪಿಂಗದೆ ಬೇಡಲು | ಮಂಗಳಾಂಗಿ ಮನದಿಷ್ಟವ ಸಲಿಸಲು | ಸಿಂಗರಗೊಂಡನು | ಸಕ್ಕರೆ ಸುರಿಸುತೆ 4 ಸುರನದೀ ಜನಕ ತಾನೂ | ಕುಂಜವನದಿ | ಸರಸಿಜಾಕ್ಷೇರ ಕೂಡುತ | ಸರಸವಾಡುತಲಿರೇ | ಪರಮ ಸಂತೋಷದಿ | ತರುಲತೆಗಳು ಹರಿಯ ಚರಣ ಸೇವೆಯಗೈಯ್ದು | ಕದಳಿಗಳುದುರಿಸೆ | ಗಳಿತ ಫಲಂಗಳು | ಸರಸಿಜನಾಭನು ಕರುಣಿಸಿ ಭಕುತರ | ಶಿರಿಯಾಳಪುರದೊಳು ಮೆರೆದನು ವಿಭವದಿ 5 ವ್ಯಾಸರಾಜರ ಪೀಠದೀ | ರಂಜಿಪ ಲಕ್ಷ್ಮೀಶತೀರ್ಥರಿಂ ಸೇವಿಪ ಭವ | ಪರಿಪರಿ ನರಳುವ ದಾಸರ ಸಲಹಲಿನ್ನು | ಸಾಸಿರ ಶಂಖದಿ ಪೂಜೆಯಗೊಳುತಿರೆ | ದೇಶದೇಶದ ಜನರಾಲಿಸಿ ಬರುತಿರೆ | ಶ್ರೀಶಕೇಶವ ತನ್ನ ಮಹಿಮೆಯ ತೋರಿದ 6
--------------
ಶ್ರೀಶ ಕೇಶವದಾಸರು
ಭವ ಹಿಂಗವ್ವ ಸುಳ್ಳೆ ಮಂಗ್ಯಳಾಗಿ ತಿರುಗಬೇಡವ್ವ ಪ ಪಿಂಗಟದಿಂದ ಭವಸಂಕಟದಲಿ ಬಿದ್ದು ಭಂಗದಿಂ ಕಂಗೆಡಬೇಡವ್ವ ಅ.ಪ ಮುಂಗಿಯ ಮನೆಯೊಳು ನಿಂತೆವ್ವ ತಂಗಿ ಹ್ಯಾಂಗಿದ್ದದರಂತರಿಯವ್ವ ಕಂಗಳಿನಿಕ್ಕಿ ಮಹ ಮಂಗಳಾತ್ಮನ ಕಂಡು ಪಿಂಗದ ಸವಿಸುಖ ಸುರಿಯವ್ವ 1 ಹಾಳು ಜಗದ ಗಾಳಿ ಬೇಡವ್ವ ನಿಜ ಬಾಳುವ ಮಾರ್ಗವ ತಿಳಿಯವ್ವ ನೀಲ ಶ್ಯಾಮನ ಧ್ಯಾನ ತಾಳಿಯ ಕಟ್ಟಿಕೊಂಡು ಕಾಲನ ದಾಳಿಯ ಗೆಲಿಯವ್ವ 2 ಮೈಲಿ ಮುಟ್ಟು ಚಟ್ಟಳಿಯವ್ವ ನೀ ಮೇಲುಮಂಟಪ ಹತ್ತಿ ನೋಡವ್ವ ಬೈಲಿಗೆ ಬೈಲು ನಿರ್ಬೈಲು ಶ್ರೀರಾಮನ ಲೀಲೆಯೊಳಗೆ ನಿಂತು ನಲಿಯವ್ವ 3
--------------
ರಾಮದಾಸರು
ಮಾವನ ಮರ್ದನ ಜಗದ ಜೀವನ ಪ ಸೇವಕಜನ ಭಾವದೊಳಿಹ್ಯ ದೇವದೇವ ದೇವಕಿ ಕಂದನೋ ಅ,ಪ ನವನೀತ ಜಾರತನದಿ ಮೀರಿದವನ ನಿರಂಜನ 1 ಅಂಗನೆಯರ ಭಂಗಿಸಿದ ಅಂಗನೆಯಾಗಿ ಸಂಗರವ ಗೆಲಿದ ಪಿಂಗದಿವನಮಹಿಮಾರಿಂದಂಗಜಾರಿ ವಂದ್ಯನೋ 2 ನಾಮರೂಪಿಲ್ಲದವನು ನಾಮಧಾರಿ ಎನಿಸಿದನೆ ಸ್ವಾಮಿ ರಾಮನ ಮಹಿಮೆ ಈ ಕಾಮಿಜನಗಳು ಬಲ್ಲರೇ 3
--------------
ರಾಮದಾಸರು
ಹನುಮ ಸದ್ಭಕ್ತರ ಪ್ರೇಮ ನೆನೆವರ ಮನದಿಷ್ಟ ಕನಿಕರದಿಂ ಕೊಡುವ ಪ ಕುಂತಿಗರ್ಭಜ ಬಲವಂತನೆನಿಸಿದ್ಯೊ ಭೀಮ ಪಂಥದಿಂ ಕರುಪನ ಸ್ವಂತು ಜೈಸಿದ್ಯೊ ವೀರ 1 ಮಧ್ವಕುಲದಿ ಜನಿಸಿ ಮಧ್ವಮುನಿಯೆನಿಸಿದಿಯೊ ತಿದ್ದಿ ಮಧ್ವಾಂತಗ್ರಂಥ ಸಿದ್ಧಾಂತಪಡಿಸಿದ್ಯೊ 2 ಅಂಜನ್ಯುದರದಿ ಬಂದು ಭಂಜಿಸಿ ಲಂಕೆಯ ಕಂಜಾಕ್ಷಿಯುಳ್ವøತ್ತಾಂತ ಕಂಜನಾಭನಿಗಿತ್ಯೊ 3 ಮಂಗಳಾಂಗನೆ ರಣರಂಗಮಧ್ಯದಿ ನೀ ಪಿಂಗದಸುರರ ಸದೆದು ಭಂಗಪಡಿಸಿದ್ಯೊ ಖಳರ 4 ಸೀತಾದೇವಿಯ ತಂದು ನಾಥ ಶ್ರೀರಾಮನಿಗಿತ್ತ ವಿ ಖ್ಯಾತ ಮಾರುತಿ ಎನ್ನ ಪ್ರೀತಿಲಿ ಸಲಹಯ್ಯ 5
--------------
ರಾಮದಾಸರು