ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀಚಕೃತ್ಯದ ಮನಸೇ ನಿನಗೆ ತುಸು ನಾಚಿಕಿಲ್ಲಲೆ ಹೊಲಸೆ ಪ ಪ್ರಾಚೀನಹಿರಿಯರ ಯೋಚಿಸಿನೋಡದೆ ನೀಚತನದ ಆಲೋಚನೆಯೊಳು ಬಿದ್ದು ಅ.ಪ ಕುಂತಿಸುತನ ರಥವ ನಡೆಸಿದನು ಅ ತ್ಯಂತ ಕೃಪೆಯಿಂದ ಹರಿಯು ಕಂತುಜನಕ ಭಕ್ತ ಚಿಂತಾಯಕನೆಂದು ಅಂತರಂಗದಿ ಭಜಿಸಿ ಸಂತಸ ಪಡುವಲ್ಲಿ 1 ಅಂಬರೀಷನೆಂಬುವ ನೃಪಗೆ ಮುನಿ ಡೊಂಬೆಯಿಂಬ (?) ಶಾಪಿಸಲು ಅಂಬುಜಾಸನ ಬಂದು ಬೆಂಬಲಿಸಿ ನೃಪನನ್ನು ಇಂಬಿಟ್ಟು ಪೊರೆದದ್ದು ನಂಬಿ ಭಜಿಸವಲ್ಲಿ 2 ಭೂಮಿಪ ಬಲಿಚಕ್ರನ ಬಾಗಿಲ ಕಾಯ್ದ ಪ್ರೇಮದಿಂ ರಮೆಯರಸನು ಪ್ರೇಮದಿಂ ಭಕುತರ ಕಾಮಿತವೀಯಲು ಕಾಮಧೇನೀತನೆಂದು ನೇಮದಿಂದರವಲ್ಲಿ 3 ಗೌತಮ ಮುನಿಸತಿಯು ಪಾಷಾಣವಾಗಿ ಕ್ಷಿತಿಮೇಲೆ ಎರಗಿರಲು ಕ್ಷಿತಿಜಾತೆಪತಿ ತಾನು ಅತಿಹಿತದ ಕೃಪೆಯಿಂದ ಪತಿತಗೈದವನೆಂದು ಸ್ತುತಿಸಿ ಒಲಿಸವಲ್ಲಿ 4 ಹನುಮಂತನೊಡೆಯನಾದ ಜನಕಜೆಪತಿ ವನಜಾಕ್ಷ ಶ್ರೀರಾಮನ ಘನತರಮಹಿಮೆಯ ಅನುದಿನಕೊಂಡಾಡು ಘನಮುಕ್ತಿ ಸಾಮ್ರಾಜ್ಯ ಕನಿಕರದಿಂ ಕೊಡುವ 5
--------------
ರಾಮದಾಸರು
ಮಂಗಳಂ ಶ್ರೀಕೃಷ್ಣವೇಣಿಗೆ ಜಯ ಮಂಗಳಂ ಜಗದುದ್ಧಾರಳಿಗೆ ಪ ರಂಗನ ಪಾದದಿ ಗಂಗೆ ಉದ್ಧವಿಸಲು ಅಂಗದಿಂದಾಗಲೆ ತಾನುದಿಸಿ ಬಂದು ಗಂಗಾಧರನ ದೇಹದಿ ಬಂದು ವೇಣಿಯ ಸಂಗಮವಾಗಿ ಬಂದ ದೇವಿಗೆ ಅ.ಪ ಮುನ್ನೂರು ಅರವತ್ತು ನದಿಗಳೆಲ್ಲ ಕೂಡಿ ಕನ್ಯಾರಾಶಿಗೆ ಗುರು ಬಂದಿರಲು ವಾಸವ ಮಾಡಲು ಅವರ ಪಾಪವ ಕಳೆದ ಶ್ರೀ ಕೃಷ್ಣವೇಣಿಗೆ 1 ಇಂದ್ರನ ಪಾಪವ ನದಿಗಳಿಗೆ ಬಿಡಲು ನಿಂದಿತರಾಗಿ ದುಃಖಿಸುತ ಪೋಗಿ ಬಂದ ಕೃಷ್ಣವೇಣಿಗೆ ಗಂಗಾದೇವಿಗೆ 2 ವೇಣುಶೂರ್ಪಗಳಲ್ಲಿ ನಾನಾ ಫಲಗಳ ಇಟ್ಟು ನೇಮದಿಂ ಬಾಗಿನಂಗಳ ಕೊಡಲು ಮಾನಿನಿಯರೆಲ್ಲ ಮೌನದಿಂ ಕೊಡಲು ಮಾಂಗಲ್ಯವಿತ್ತು ಸಲುಹುವ ದೇವಿಗೆ 3 ಕೃಷ್ಣತೀರದಲ್ಲಿದ್ದ ವೃಕ್ಷದೇವತೆಗಳು ಋಷಿಗಳು ಪಾಷಾಣವಾಗಿರಲು ನಕ್ರ ಮೊದಲಾದ ಜಂತುಗಳೆಲ್ಲ ಯಕ್ಷರು ವಾಲೂಕ ಹರಿದ ಧೂಲಿಯಾಗಿಹರು 4 ಇಂದ್ರದಂಡಕ ದಂತ್ರಿಪಾಲ ಸೋಮಕ ಧರ್ಮ ನಂದನ ನಳ ಹರಿಶ್ಚಂದ್ರರೆಲ್ಲ ಬಂದು ಸ್ನಾನವ ಮಾಡೆ ಅವರ ಪಾಪಗಳ ಆ ನಂದದಿಂ ಕಳೆದ ಕೃಷ್ಣವೇಣಿಗೆ 5 ಮಲಾಪಹಾರಿ ಭೀಮೆ ತುಂಗಭದ್ರೆಯು ಮೊ [ಒಲವಿ]ಂದ ಸ್ನಾನಪಾನವ ಮಾಡಿದವರಿಗೆ [ಲೋಲ] ಶ್ರೀನಿವಾಸನ ಪಾದತೋರ್ಪ ಕೃಷ್ಣವೇಣಿಗೆ 6
--------------
ಯದುಗಿರಿಯಮ್ಮ
ನಿನ್ನ ನಂಬಿದೆ ನೀರಜನಯನಎನ್ನ ಪಾಲಿಸೊಇಂದಿರೆರಮಣಪಮುನ್ನ ಪಾಂಚಾಲಿಯ ಮೊರೆಯ ಲಾಲಿಸಿ ಕಾಯ್ದಪನ್ನಗಶಯನ ನೀಪರಮಪುರುಷನೆಂದುಅ.ಪಹರಿಸರ್ವೋತ್ತಮನಹುದೆಂಬ ಬಾಲಕನಹಿರಣ್ಯಕಶಿವು ಪಿಡಿದು ಬಾಧಿಸಲು ||ನರಹರಿ ರೂಪಿಂದಲವನ ವಕ್ಷವ ಸೀಳ್ದೆಪರಮವಿಶ್ವಾತ್ಮಕನಹುದೆಂದು ಮೊರೆ ಹೊಕ್ಕೆ1ಪಾದವ ಪಿಡಿದು ನೀರೊಳಗೆಳೆದ ನಕ್ರನಬಾಧೆಗಾರದೆ ಕರಿಮೊರೆಯಿಡಲು ||ಆದಿ ಮೂರುತಿ ಚಕ್ರದಿಂದ ನಕ್ರನ ಕೊಂದವೇದಾಂತವೇದ್ಯ ಅನಾಥ ರಕ್ಷಕನೆಂದು 2ಇಳೆಗೊಡೆಯನ ತೊಡೆ ನಿನಗೇತಕೆಂದು ಆಲಲನೆಕೈ ಪಿಡಿದೆಳೆಯಲರ್ಭಕನ ||ನಳಿನಾಕ್ಷ ನಿನ್ನನೆದೆಯೊಳಿಟ್ಟು ತಪವಿರ್ದಬಲು ಬಾಲಕಗೆ ಧ್ರುವ ಪಟ್ಟಿಗಟ್ಟಿದನೆಂದು 3ಸುದತಿಗೌತಮಸತಿ ಮುನಿಶಾಪದಿಂದಲಿಪಢದಿ ಪಾಷಾಣವಾಗಿ ಬಿದ್ದಿರಲು ||ಮುದದಿಂದಲಾಕೆಯಮುಕ್ತಮಾಡಿದಯೋಗಿಹೃದಯ ಭೂಷಣ ನಿನ್ನ ಪದ ವೈಭವವ ಕಂಡು 4ಪರಮಪಾವನೆ ಜಗದೇಕಮಾತೆಯನುದುರುಳರಾವಣ ಪಿಡಿದು ಕೊಂಡೊಯ್ಯಲು ||ಶರಣೆಂದು ವಿಭೀಷಣ ಚರಣಕೆರಗಲಾಗಿಸ್ಥಿರಪಟ್ಟವನು ಕೊಟ್ಟ ಜಗದೀಶ ನೀನೆಂದು 5ಅಂಬರೀಷನೆಂಬನೃಪತಿದ್ವಾದಶಿಯನುಸಂಭ್ರಮದಿಂದ ಸಾಧಿಸುತಿರಲು ||ಡೊಂಬೆಯಿಂದದೂರ್ವಾಸಶಪಿಸಲಾಗಿಬೆಂಬಿಡದಲೆ ಚಕ್ರದಿಂದ ಕಾಯ್ದವನೆಂದು 6ಧರೆಯೊಳು ನಿಮ್ಮ ಮಹಿಮೆಯ ಪೊಗಳ್ವಡೆಸರಸಿಜೋದ್ಭವ-ಶೇಷಗಸದಳವು ||ಸ್ಮರಣೆಮಾತ್ರದಿ ಅಜಾಮಿಳಗೆ ಮೋಕ್ಷವನಿತ್ತಪುರಂದರವಿಠಲ ಜಗದೀಶ ನೀನೆಂದು7
--------------
ಪುರಂದರದಾಸರು