ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅ. ಗಣೇಶಸ್ತುತಿ ವಂದಿಪೆ ಗಜಮುಖನೆ ನಿನ್ನನು ಚಂದ್ರಶೇಖರ ಸುತನೆನಂದಬಾಲನ ಸ್ಮರಣೆ ಮನದೊಳು ತಂದು ನಿಲಿಸು ಇದನೆ ಪ ಮಂಗಳ ಮೂರುತಿಯೆ ಕೊಡುವೆನು ತೆಂಗು ಬಾಳೆಯ ಗೊನೆಯರಂಗನಮಲ ಕಥೆಯ ಮಾಡುವೆ ಸಂಗ ತೋರಿಸು ದೊರೆಯೆ 1 ಪಾಶಾಂಕುಶಧರನೆ ಸುಂದರ ಮೂಷಕವಾಹನನೆಪೋಷಿಸು ಭಕ್ತರನೆ ಹರಿಕಥೆ ಭಾಷೆಲಿ ನುಡಿಸುವನೆ 2 ಪಾರ್ವತಿ ಪಂಕಜನೆ ವಿಘ್ನಗಳ್ಹಾರಿಸಿ ಪಾಲಿಪನೆಮಾರಜನಕ ಭಜನೆ ಮಾಡುವೆ ತೋರಿಸು ಮಾರ್ಗವನೆ 3 ಭಾರತ ಬರೆದವನೆ ವ್ಯಾಸರ ಭಾಷಿತದಿಳೆದವನೆಮಾರಜನಕ ಭಜನೆ ಮಾಡುವೆ ತೋರಿಸು ಮಾರ್ಗವನೆ 4 ಇಂದಿರೇಶನ ಭಜಕ ನಿನ್ನನು ತಂದು ಮನದಿ ತೂಕ ಆನಂದದಿ ದಿನ ವಾರಾ ಮಾಳ್ಪುದು ಸುಂದರ ಸುರಲೋಕ 5
--------------
ಇಂದಿರೇಶರು
ಜಯ ಜಯ ಮೂಷಕಗಮನಾಜಯ ಜಯ ಗಜಾನನಾಜಯ ಜಯ ನಾಗಾಭರಣಾ ಜಯ ಏಕದಂತ ಜಯ ಜಯ ಪ ಮತಿಯ ಕೊಡು ಪಾರ್ವತಿಯ ನಿಜ ತನುಜನೆಬಿಡದೆ ನಿನ್ನನು ನಾನು ನುತಿಸುವೆ ಕ್ಷಿತಿಯೊಳಗೆಶ್ರೀ ಲಕುಮಿ ಪತಿಯ ಕೊಂಡಾಡಿ ಸದ್ಗತಿಯಪಡೆಯುವದಕ್ಕೆ ಸಾರಥಿಯಾಗು ದೇವಾ 1 ಆಕಾಶದಭಿಮಾನಿ ಅಂಗಜನ ಚಾಪನಿರಾಕರಿಸಿ ಬಿಸುಟ ಲಂಬೋದರನೆಏಕ ಪಿಂಗಾದಿಗಳ ಪ್ರಿಯ ಹಸ್ತಚತುಷ್ಟಲೋಕದೊಳು ಭಜಿಸುವರ ವಿದ್ಯಾದಾ ನಿಧಿಯೆ 2 ಸೀತಾರಮಣನಿಂದ ಪೂಜಿತನಾಗಿವನಧಿ ತೀರದಲ್ಲಿ ಮೆರೆವ ಗಣೇಶಾಸೇತುಮಾಧವ ವಿಜಯವಿಠ್ಠಲರೇಯನದೂತನು ನೀನೆ ಪಾಶಾಂಕುಶಧರನೆ 3
--------------
ವಿಜಯದಾಸ
ಪಾರ್ವತೀಶ ಎನ್ನಿರೋ ಮನಸಾರೆ ಪಾರ್ವತೀಶ ಎನ್ನಿರೊ ಪ. ಪಾರ್ವತೀಶನ ಭಜಿಸಿ ನಿಮ್ಮನು ದ್ಧಾರ ಮಾಡುತ ಹರಿಯ ಮಹಿಮೆಯ ಸಾರಿ ಭಜಿಸಲು ಮನವನೀಯುವ ಕಾರ್ಯ ದುರಂಧರ ಈಶನನ್ನು ಅ.ಪ. ತರುಣಿ ಅಸ್ತಂಗತನಾಗುತಿರೆ ಹರುಷದೊಳೊಮ್ಮೆ ಶಂಭೊ ಎಂದು ವರ ಉಚ್ಚಾರವ ಮಾಡಲಾಕ್ಷಣ ತರಿದು ನಿಮ್ಮಯ ಸಕಲ ಪಾಪವ ಪೊರೆವ ಕರುಣಿ ಈಶನೆನ್ನುತ ಸ್ಮರಿಸಿ ಸುಖದೊಳು ಬಾಳಿ ಜಗದೊಳು 1 ಪಾದ ನೆನವ ಶಂಭೋ ಎಂ ದೀ ಸುನುಡಿಯ ತಿಳಿದು ಭಾಸುರಾಂಗನ ಮೊಮ್ಮಗನ ಸ್ತುತಿ ಲೇಸು ಎಂದು ಧ್ಯಾನವ ಮಾಡಲು ಸೂಸಿ ಕರುಣವ ಬೀರಿ ನಿಮಗೆ ಲೇಸು ಮಾಡುತ ಹರಿಯ ತೋರುತ 2 ಪಾಶಾಂಕುಶಧರನೆನಲು ನಿಮ್ಮಯ ಪಾಪ ರಾಶಿ ಖಂಡಿಸಿ ಪೊರೆದು ಶ್ರೀ ಶ್ರೀನಿವಾಸ ಪದವನು ಈಶ ಧ್ಯಾನಿಪ ಮನವನೀವನು ಸೂಸಿ ಭಕ್ತಿಯೊಳ್ ಶ್ರೀಶ ಭಕ್ತರು ವಿಶ್ವಾಸದಿಂದಲಿ ಈಶ ಎನ್ನಿರೋ ಈ ಸಂಸಾರ ಈಸಲೋಸುಗ 3
--------------
ಸರಸ್ವತಿ ಬಾಯಿ
ಪಾಲಿಸು ಗಣನಾಥ ನೀ ಎನ್ನ ಮೇಲೆ ಕೃಪೆಯ ನಿರತ ಪಸ್ಥೂಲ ಶರೀರ ವಿಶಾಲ ಲೋಚನ ಸುರಜಾಲ ವಂದಿತಜಾಲವಂದಿತ ಗುಣಶೀಲ ಸಜ್ಜನಪಾಲ ಅ.ಪಮೂಷಿಕವಾಹನನೆ ವಿಘ್ನೇಶ್ವರ ಪಾಶಾಂಕುಶಧರನೆಈಶ ನಂದನ ನಿನ್ನ ದಾಸನೆನಿಸೊ ಎನ್ನಆಸೆಯ ಸಲಿಸು ವಿಘ್ನೇಶ ವಿನಾಯಕ 1ಕಾಮಿತಫಲಪ್ರದನೇ ವಿನಾಯಕ ಸ್ವಾಮಿ ಶನೇಶ್ವರನೆಸಾಮಜವದನನೇ ಶ್ಯಾಮಲವರ್ಣನೇಕಾಮವರ್ಜಿತ ಗುಣಸ್ತೋಮ ವಂದಿತನೇ 2ಗಿರಿಜೆಯ ವರಸುತನೇ ಲಂಬೋದರ ಉರಗನ ಸುತ್ತಿಹನೇಕರದಿ ಮೋದಕಹಸ್ತವರಏಕದಂತನೆಶರಣು ನಿನಗೆ ಗೋವಿಂದನ ಸಖನೆ 3
--------------
ಗೋವಿಂದದಾಸ