ಒಟ್ಟು 8 ಕಡೆಗಳಲ್ಲಿ , 5 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದು ದೂರಮಾಡುವಿ ಎನ್ನ ಬಂಧನವನು ಸಿಂಧುಶಯನ ತಂದೆ ಈ ಭವದಂದುಗವನು ಸಹಿಸಲಾರೆ ಪ ಸತಿಪತಿಯ ರತಿಯ ಕಲಹದಿ ಪತನಾದಿಂದ್ರಿಯಿಂದೆ ನಾನು ಪೃಥಿವಿಮೇಲೆ ಬಿದ್ದು ಘನ ವ್ಯಥೆಯಬಡುವ ತಾಪತ್ರಯವ 1 ಮಂದಭಾಗ್ಯನಾಗಿ ಆಗಿ ನಾನಾ ಸಂದಿನೊಳಗೆ ಬಂದು ಬಂದು ಮಂದಿಸೇವೆಗೈದು ನರಕ ಬಂಧರುರುಳವಂಥ ಕೆಡುಕು 2 ಆಸೆದೆಳಸಿ ಪರರಾಸ್ತಿ ಮೋಸತನದಿ ಕದಿಸಿ ಯಮನ ಪಾಶದೊಳಗೆ ನೂಕುವಂಥ ಹೇಸಿ ಎನ್ನ ನಾಶಬುದ್ಧಿ 3 ಅವನಿಯೊಳು ಜನಿಸಿಬಿಟ್ಟ ಬವಣೆ ನೆನೆಸಿ ನೆನೆಸಿ ಎನಗೆ ಸವೆಯದಯ್ಯೋ ದು:ಖ ಈ ದು ರ್ಭವ ಪಾಪ ಸಂಕಟ 4 ದಾಸಜನರ ಪ್ರಾಣಪ್ರಿಯ ಶ್ರೀಶ ಶ್ರೀರಾಮ ನಿಮ್ಮ ಚರಣ ಧ್ಯಾಸ ಮರೆಗೆ ಬಳಲಿಸುವ ಹೇಸಿಭವದ ವಾಸನವ 5
--------------
ರಾಮದಾಸರು
ನಾರಾಯಣ ರಕ್ಷಿಸೋ ನಮ್ಮನು ಲಕ್ಷ್ಮೀ ನಾರಾಯಣ ರಕ್ಷಿಸೋ ಪ ಪಾರರಹಿತ ಭವಪಾರಾವಾರದಿ ಬಲು ಘೋರತಾಪವು ಮೀರಿತೋ ಭವದೂರ ನಿತ್ಯೋದಾರ ಕರುಣದಿ ಅ.ಪ ಶ್ರೀಶ ನಿನ್ನರ್ಚಿಸದೆ ಶ್ರೇಯಸ್ಸುಖ ಕಳತ್ರ ನಿವೇಶ ತನುಜ ಮಾಯಾ ಪಾಶದೊಳಗೆ ಶಿಲ್ಕಿ ಗಾಸಿಯಾದೆನು ಜಗದೀಶ ನಿಖಿಲಸು ರೇಶ ಕಮಲಫಲಾಶನಯನ ದಿ ನೇಶಶತ ಸಂಕಾಶ ವ್ಯಾಘ್ರಗಿರೀಶ ಭವಭಯ ಪಾಶ ಹರಪರಮೇಶ ವಂದಿತ 1 ದೇಹಾಭಿಮಾನದಲ್ಲಿ ತೀವಿದ ಭೂತ ಸೋಹಮೆಂಬುವ ಬಲು ಮೋಹದಿ ಸಿಲುಕಿ ದಾ ಸೋಹಮೆನ್ನದೆ ದೈವ ದ್ರೋಹಿಯಾದೆನು ವಿದೇಹಜಾವರಿ ಗೂಹ ನೋಚಿತದೇಹ ವಿಜಿತ ವಿ ದೇಹ ಖಗವರವಾರಶುಭಪರಿವಾಹ ನಿಖಿಲ ನಿ ರೀಹ ಲೋಕವಿಮೋಹನಾಚ್ಯುತ 2 ಗುರುಹಿರಿಯರ ಮರೆದು ಗರ್ವದಿ ಧರ್ಮಾವ ಚರಣೆಯ ನೆರೆತೊರೆದು ಜರಿದು ದುರ್ಗತಿಗೆ ನಾ ಗುರಿಯಾದೆನು ಹರಿ ಪರಮಪುರುಷ ಪಾವನ ಚರಣ ಸುಗುಣಾ ಭರಣ ದೀನೋ ಭವ ಸಂಹರಣವಿಶ್ವಂ ಭರಣ ಪುಲಿಗಿರಿ ವರದವಿಠಲ 3
--------------
ವೆಂಕಟವರದಾರ್ಯರು
ನೀಚಮನಸೆ ನೀ ಯೋಚಿಸಿ ಕೆಡಬೇಡ ಬರಿದೆ ಪ ಸಾರವಿಲ್ಲದ ನಿಸ್ಸಾರ ಸಂಸಾರವೆಂಬುದು ಮಾಯಾಬಜಾರ ತೋರಿ ಅಡಗುತಿಹ್ಯದು ನಿಮಿಷ ನೀರಮೇಲಿನ ಗುರುಳೆತೆರದಿ ಪರಿ ಸ್ಥಿರವಲ್ಲದನರಿದು ನೋಡೋ 1 ಕಾರಣಲ್ಲದ ಕಾಯವಿದು ಮೂರುದಿನದಸುಖವ ಬಯಸಿ ಮೀರಿಸಿ ಗುರುಹಿರಿಯರ್ವಚನ ಪಾರಮಾರ್ಥವಿಚಾರ ಮರೆಸಿ ಸೂರೆಗೈದು ಸ್ವರ್ಗಭೋಗ ಘೋರನರಕಕೆಳಸುತಿಹ್ಯದು 2 ಆಶಾಬದ್ಧನಾಗಿ ಭವಪಾಶದೊಳಗೆ ಸಿಲುಕಬೇಡೆಲೊ ವಾಸನಳಿದು ಐಹಿಕಸುಖದ ಕ್ಲೇಶನೀಗಿ ಸುಶೀಲನಾಗಿ ಬೇಸರಿಲ್ಲದೆ ಶ್ರೀಶಜಗದೀಶ ಶ್ರೀರಾಮನಂಘ್ರಿ ಭಜಿಸು 3
--------------
ರಾಮದಾಸರು
ಪಾಲಿಸು ಯದುಪತಿಯೆ ಶ್ರೀಹರಿಯೆ ಹರಿಯೆ ಹರಿಯೆ ಪ ನಾನಾಯೋನಿಗಳಲ್ಲಿ ಶ್ವಾನನಂದದೆ ಸುತ್ತಿ ಶ್ರೀಹರಿಯೆ ಹರಿಯೆ ಹರಿಯೆ 1 ದೇಶಕೋಶವು ಬಂಧು ಪಾಶದೊಳಗೆ ಸಿಕ್ಕಿ ದೋಷಗೈವೆ ಆಶೆಯಬಿಡೆನಾ ಶ್ರೀಹರಿಯೆ ಹರಿಯೆ ಹರಿಯೆ 2 ಅಂಗವು ಕುಂದಿತು ಭಂಗವ ಪೊಂದುವೆ ಶ್ರೀಹರಿಯೆ ಹರಿಯೆ ಹರಿಯೆ 3 ಧೇನುನಗರ ದೊರೆ ಭಾನುಸನ್ನಿಭ ಶೌರೆ ಶ್ರೀಹರಿಯೆ ಹರಿಯೆ ಹರಿಯೆ 4
--------------
ಬೇಟೆರಾಯ ದೀಕ್ಷಿತರು
ಬೇಗ ನೀಗಿಸು ದುರ್ಭೋಗದ ಸೆರೆಯ ನಾಗಶಯನ ಬಾಗಿ ಬೇಡುವೆ ಪ ನೀತಿಗೆಡಿಸಿ ಮಂಗನೆನಿಸಿ ಮಾತುಮಾತಿಗೆ ಭಂಗಬಡಿಸಿ ಪಾತಕನೆನಿಸಿ ದಂಗು ಹಿಡಿಸಿ ಘಾತಮಾಳ್ಪ ಹೊನ್ನಿನಾಸೆ 1 ಕುನ್ನಿಯಂದದಿ ಕುಣಿಸಿ ಕುಣಿಸಿ ಬನ್ನ ಬಡಿಸಿ ಬನ್ನಂಗನೆನಿಸಿ ಉನ್ನತ ಸುಖಗೆಲಿಪ ಹೇಸಿ ಗನ್ನಗತಕ ಹೆಣ್ಣಿನಾಸಿ 2 ಮೋಸಪಾಶದೊಳಗೆ ಮುಳುಗಿಸಿ ದೋಷದೆಳಸಿ ಮುತಿಯಕೆಡಸಿ ನಾಶ ಯಮನ ಕೊಲೆಗೀಡೆನಿಸಿ ಘಾಸಿ ಮಾಳ್ಪ ಹೆಣ್ಣಿನಾಸಿ 3 ಇಷ್ಟೆ ಜಗದ ಸುಖವಿದನು ಎಷ್ಟುನಂಬಿ ಫಲವೇನು ಅಷ್ಟು ಮಾಯವೆನಿಸಿ ಎನ್ನನು ನಷ್ಟಗೊಳಿಪ ಕೆಟ್ಟಾಸಿಯನು 4 ಮೀರಿ ಮಹ ಘೋರಬಡಿಸಿ ಸಾರಸುಖದ ಮಾರ್ಗ ಕೆಡಸಿ ಧೀರ ಶ್ರೀರಾಮ ನಿನ್ನ ಮರೆಸಿ ಗಾರುಮಾಳ್ಪ ಪಾಪರಾಸಿ 5
--------------
ರಾಮದಾಸರು
ವ್ಯಾಪಾರ ಉದ್ಯೋಗವನು ಮಾಡುವೆ | ಭೂಪಾಶದೊಳಗೆ ಎಲ್ಲರಿಗೆ ಬಲ್ಲಿದನಾಗಿ ಪ ಮುರಾರಿ ನಾಮವೆಂಬೊ ಮುಂಡಾಸವನೆ ಸುತ್ತಿ | ಅರವಿಂದನಾಭವೆಂಬೊ ಅಂಗಿಯ ತೊಟ್ಟು || ನರಹರಿನಾಮವೆಂಬೊ ನಡುಕಟ್ಟನೆ ಸುತ್ತಿ | ಕರುಣಾಸಾಗರನೆಂಬೊ ಕಠಾರಿಯನು ಸಿಕ್ಕಿಸಿ 1 ಕಮಲನಾಭವೆಂಬೊ ಕಮಲದಾನಿ ಪಿಡಿದು | ತಿಮಿರದೋಷವೆಂಬೊ ಪಾಯಿಪೋಸು ಮೆಟ್ಟಿ || ಶಮೆದಮೆಯೆಂಬೊ ಪರಿಚಾರಕರ ಒಡಗೊಂಡು ಗಮಿಸಿದ್ದೆನೊ ಹರಿದಾಸರಿದ್ದ ಚಾವಡಿಗೆ 2 ಪೋಗಿ ನಮಸ್ಕಾರವೆಂದು ತಲೆಬಾಗಿ ನಿಲ್ಲಲು | ಭಾಗವತರು ಕರೆದು ಇಂಬನಿತ್ತು || ಯೋಗಕ್ಷೇಮವೆಲ್ಲ ವಿಚಾರಿಸಿ ಪ್ರೀತಿಯಲಿ | ಈಗಳೆ ಕುಳಿತ ಅಚ್ಯುತನ ತೋರಿದರು 3 ಕಂಡು ಕರವನು ಮುಗಿಯೆ ಕರುಣಾಸಾಗರನೆಂಬೊ | ಮಂಡಲಾಧಿಪನು ಕರೆದು ಮನ್ನಿಸಿ || ಗಂಡುಗಲಿಯಾಗೆಂದು ಸಂಚುಗಾರಿಕೆ ತುಲಸಿ | ದಂಡೆ ಕೊರಳಿಗೆ ಹಾಕಿ ದಾಸರೊಳಗಿರಿಸಿದನು 4 ಘನವಾದ ಉದ್ಯೋಗ ದೊರಕಿತು ನನಗಿನ್ನು | ಅನುಮಾನವಿಲ್ಲವು ಎಂದೆಂದಿಗೂ || ದಿನದಿನಕೆ ಹರಿನಾಮವೆಂಬೊ ಲೆಖ್ಖ-| ವನು ಬರೆದು ತ್ರಿಲೋಕದರಸನಿಗೆ ಒಪ್ಪಿಸಿದೆ || 5 ಬರೆದು ಲೆಖ್ಖವ ನೋಡಿ ದಯಾಪಯೋವಾರಿಧಿ | ಹರುಷದಿಂದಲಿ ಎನಗೆ ಸಂಬಳಕ್ಕೆ || ಬರೆಸಿ ಕೊಟ್ಟನು ಸನದು ಕೇಶವಾದಿಯಂಬೊ | ವರಹಗಳು ಎಂದಿಗಾದರು ಅಳಿವಿಲ್ಲದೆ || 6 ಈಸು ದಿನ ಉದ್ಯೋಗ ಹೀನನಾಗಿ ನೊಂದೆ | ದಾಸರಾ ದಯದಿಂದ ದೊರೆಕಿತಿಂದು || ಸಂಚಿತ ಕರ್ಮ ಓಡಿಸಿ |ಶ್ರೀಶ ವಿಜಯವಿಠ್ಠಲನಲ್ಲಿ ಬಾಳಿದೆನೊ || 7
--------------
ವಿಜಯದಾಸ
ಹರಿಯ ನೆನೆವಲ್ಲಿ ಮನವೆ ನೀ ಪ ಅರಿವು ತಿಳಿವಲ್ಲಿ ಹರಿದುಹೋಗುವ ದುರುಳ ಸಂಸಾರಕೆ ಮರುಳನಾಗಿ ನೀ ನರಕಕ್ಹೋಗುವಿಯಲ್ಲೋ ಅ.ಪ ಖೊಟ್ಟಿಗುಣಳಿವಲ್ಲಿ ಮನಸಿನ ಭ್ರಷ್ಟತ್ವ ಕಳಿವಲ್ಲಿ ಶಿಷ್ಟರಲ್ಲಿ ಮನವಿಟ್ಟು ಉಳಿಯದೆ ನೀ ಕಷ್ಟದೊಳಗೆ ಬಿದ್ದು ಕೆಟ್ಟು ಹೋಗುವಿಯಲ್ಲೋ 1 ಮರವೆ ಮಾಯವನ್ನು ಮರುಳೆ ನೀ ತರಿಯವಲ್ಲಿ ಇನ್ನು ಪರಿ ವಿಚಾರಿಸದೆ ದುರಿತದೊಳಗೆ ಬಿದ್ದು ಮರುಗುವಿಯಲ್ಲೋ 2 ಅಸೆ ನೀಗುವಲ್ಲಿ ಸಂಸಾರ ದ್ವಾಸನೆ ಕಡಿವಲ್ಲಿ ದಾಸರ ನಡೆನುಡಿ ಸೋಸಿಲಿಂ ತಿಳಿಯದೆ ನಾಶನಾಗುವಿ ಯಮಪಾಶದೊಳಗೆ ಬಿದ್ದು 3 ಸತಿಸುತರ ಮಾಯಮೋಹದಿ ಗತಿಸಿ ಪೋಗ್ವುದು ವಯ ಕೃತ್ರಿಮನೆ ಅತಿ ಮಂದಮತಿಯೊಳು ಬಿದ್ದು ಘನ ವ್ಯಥೆಯ ಬಡುವಿ ಮಹಗತಿಮೋಕ್ಷ ಪಡೆಯದೆ 4 ಮಂದಿ ಮಕ್ಕಳ್ಯಾರು ನಿನಗೀ ಬಂಧು ಬಳಗ ಯಾರು ಕುಂದುವ ಜಗಮಾಯದಂದ ತಿಳಿದು ಮಮ ತಂದೆ ಶ್ರೀರಾಮನ ಹೊಂದಿಕೊಳ್ಳವಲ್ಲಿ 5
--------------
ರಾಮದಾಸರು
ಎಚ್ಚರಿಕೆ ಎಚ್ಚರಿಕೆ ಮನವೆ - ನಮ್ಮಅಚ್ಯುತನ ಪಾದಾರವಿಂದ ಧ್ಯಾನದಲಿ ಪ.ಆಶಾಪಾಶದೊಳಗೆ ಸಿಲುಕಿ - ಬಹುಕ್ಲೇಶಪಟ್ಟು ತುಟ್ಟ ಸುಖದ ಮರುಳಿಕ್ಕಿಹೇಸಿ ಸಂಸಾರದಲಿ ಸಿಲ್ಕಿ -ಮಾಯಾಕ್ಲೇಶಅಂಬರಕೇಳಾಗೆ ಮೈಮರೆತು ಸೊಕ್ಕಿ1ಹಣ - ಹೆಣ್ಣು - ಮಣ್ಣಾಸೆ ವ್ಯರ್ಥ - ಈತನುವಿಗೆ ಯಮಪುರ ಪಯಣವೇನಿತ್ಯಮೂರು ಶೃಂಗಾರಗಳುಮಿಥ್ಯ - ಅಂತಕನ ಯಾತನೆಗಳಿಗೆ ಹರಿನಾಮ ಪತ್ಯ 2ತೊಗಲ ಚೀಲ ಒಂಬತ್ತು ಹರುಕು -ನರಬಿಗಿದುಕಟ್ಟಿ ಒಳಗೆ ಎಲುವುಗಳ ಸಿಲುಕುಬಗೆರಕ್ತ - ಮಾಂಸದ ಹುಳುಕು - ಒಳಗೆ ಮಲ - ಕಫ -ವಾತ- ಪಿತ್ತದಸರಕು3ದುಷ್ಟರ ಸಹವಾಸ ಹೀನ - ಬಲುಇಷ್ಟ ಜನಸಂಗವು ಹರಕೆ ಬಹುಮಾನಎಷ್ಟು ಓದಿದರಷ್ಟು ಜ್ಞಾನ - ಆದರಲ್ಲಿಟ್ಟು ಭಕುತಿಯ ತಿಳಿಯಲೊ ಸಾವಧಾನ 4ನಾಲಿಗೆಯ ಹರಿಯ ಬೀಡಬೇಡ - ತಿಂಡಿವಾಳರ ರುಚಿವಾತಗಳನೊರಿಸಬೇಡಹಾಳು ಮಾತು ಗೊಡಬೇಡ -ಶ್ರೀಲೋಲ ಪುರಂದರವಿಠಲನ ಬಿಡಬೇಡ 5
--------------
ಪುರಂದರದಾಸರು