ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನಂತ ಅಪರಾಧ ಅನುಗಾಲ ಮಾಡುತಿಹೆ ಪ ಸ್ನಾನ ಸಂದ್ಯಾ ಜಪ ಮೌನವೇ ಮೊದಲಾದ ನಾನಾವಿಧದ ವಿಹಿತ ಧರ್ಮತೊರೆದು ನಾನು ನನ್ನದು ಎಂಬೊ ಹೀನ ಬುದ್ಧಿಗಳಿಂದ ಹೀನ ಜನರೊಡಗೂಡಿ ಙÁ್ಞನಿಗಳ ನಿಂದಿಸುವೆ 1 ಶ್ರೀಕಾಂತ ನಿನ್ನ ಸೇವೆಯನು ಮರೆದು ಬೇಕಾದ ವೈಷಿಕವ ಸ್ವೀಕರಿಸಿ ಲೋಕÀದೊಳು ಸಾಕಿದವರನು ನಾ ನಿರಾಕರಿಸಿ ಬಾಳುವೆನು 2 ಎನಗಿಂತ ಅಧಿಕರಾದವರ ಕೂಡ ದ್ವೇಷವನು ಅನುಗಾಲ ಮಾಡುವೆನೊ ಅನಿಮಿಷೇಶಾ ಎನಗೆ ಸರಿಯಾದವರ ಕಂಡು ಮತ್ಸರಿಸುವೆನು ಎನಗಿಂತ ನೀಚರನು ನಾ ನೋಡಿ ನಗುತಿಪ್ಪೆ 3 ಕಾಸಿನಾಸೆಗೆ ಪೋಗಿ ದಾಸವೇಷವÀ ಧರಿಸಿ ಮೋಸಮಾಡುವೆ ಜನರ ಪಾಶದಿಂದಾ ವಾಸುದೇವನೆ ಸರ್ವದೇಶ ಕಾಲಾದಿಗಳಿ ಗೀಶನೆಂದರಿಯದಲೆ ಮೋಸಹೋದೆನು ಸ್ವಾಮಿ 4 ಸಕಲ ದುರ್ಗುಣಕೆ ಆಗಾರ ನಾನವನಿಯೊಳು ಭಕುತಿ ವೈರಾಗ್ಯ ಪ್ರಸಕುತಿಯಿಲ್ಲಾ ಭಕುತವತ್ಸಲ ಗುರುಜಗನ್ನಾಥವಿಠಲನೆ ಅಕಳಂಕಮಹಿಮನೆ ಮುಕುತಾಮುಕುತರೊಡೆಯಾ 5
--------------
ಗುರುಜಗನ್ನಾಥದಾಸರು
ತಾವಲ್ಲಿ ನೆನೆಯಲು ದಶಮತಿ ಗುರುಗಳು ನಾವಿಲ್ಲಿ ಸುಖಿಗಳು ಸುಲಭದಿಂದ ಪ ಪೂರತಿ ಮನದೊಳಗಾಗುವಂತೆ ತಾರಾ ರಮಣನು ತಾ ಮ್ಯಾಲೆ ಉದಿಸಲು ವಾರಿಧಿ ಹರುಷದಿ ಉಕ್ಕುವಂತೆ 1 ತರಣಿ ಕಿರಣ ಪಸರಿಸೆ ಸರೋವರದಲ್ಲಿ ಸರಸಿಜ ವಿಕಸಿತವಾಗುವಂತೆ ವಾರಿದ ಮ್ಯಾಲಿರೆ ತಾ ನೋಡಿ ಮಯೂರ ಮೀರಿ ಹರುಷದಿ ಕುಣಿ ಕುಣಿದಾಡುವಂತೆ2 ವ್ಯಾಸ ದೇವರ ಕೂಡ ಮಾತುಗಳಾಡುವಾಗ ಶುಭ ನಮಗೆ ವಾಸುದೇವವಿಠಲ ಪಾಶದಿಂದಾಡುವಾಗ ವಾಸ ಅಕ್ಷಯವೆನ್ನಿ ಕೃಷ್ಣೆಯಂತೆ 3
--------------
ವ್ಯಾಸತತ್ವಜ್ಞದಾಸರು