ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನುಧನ್ಯನೊ ಇವನು ಎಂಥ ಪುಣ್ಯನೊ ದೀನದಯಾಳು ಜಾನಕೀಶನ ಧ್ಯಾನ ಮಾಳ್ಪ ಮಾನವನು ಪ ಜ್ಞಾನದಿಂದ ತಿಳಿದು ಜಗ ಶೂನ್ಯವೆಂದು ಊಹಿಸಿ ಮನದಿ ದಾನವಾಂತಕನಾದ ಹರಿಯ ಧ್ಯಾನವೊಂದೇ ಕಾರಣೆಂದು ಜ್ಞಾನಬೆಳಗಿನೊಳಗೆ ನೋಡಿ ಆನಂದಿಸುತಲ್ಹಿಗ್ಗುವವ 1 ಆಶಪಾಶಗಳನು ನೀಗಿ ಈ ಮೋಸಮಯ ಸಂಸಾರದೊಳು ವಾಸನಾರಹಿತನಾಗಿ ಸದಾ ದಾಸಸಂಗಸುಖಪಡೆದು ಈಶ ಭಜನೆಯೊಳ್ಮನವಿಟ್ಟು ಈಸಿಭವಾಂಬುಧಿ ಪಾರಾಗುವವ 2 ನಂಬಿಗಿಲ್ಲದ ದೇಹವಿದನು ನಂಬಿನೆಚ್ಚಿ ಸಂಭ್ರಮಿಸದೆ ಕಂಬುಕಂಧರ ಶಂಭುವಿನುತ ಅಂಬುಜಾಕ್ಷ ಶ್ರೀರಾಮನ ನಂಬಿ ಗಂಭೀರಸುಖದೊಳಿರುವವ 3
--------------
ರಾಮದಾಸರು
ಬಯಸದಿರೈಹಿಕ ಸುಖಗಳನುದಿನ ನಿ ಪ ರ್ಭಯದಿ ಭಜಿಸು ಹರಿಯ ವಯನಗಮ್ಯ ವಾಂಛಿತ ಫಲಗಳ ಸ ದ್ದಯದಿ ಕೊಡುವುದರಿಯ ಅ.ಪ. ಮೃಗ ಪಶು ವಾರಿ ಖೇಚರ ಶ ರೀರಗಳಲಿ ಬಂದೆ ಮಾರಿ ಮಸಣಿ ಬಿಕಾರಿ ಭವಾನಿಗ ಳಾರಾಧಿಸಿ ನೊಂದೆ ನಾರಾಯಣ ಪದಾರವಿಂದ ಯುಗ ಳಾರಾಧನೆ ಒಂದೇ ಶರಧಿ ತೋರುವುದೋ ಮುಂದೆ 1 ಅನಿರುದ್ಧನು ನಿಜ ಮನಕೆ ಸಹಿತ ತಾ ಧನ ಧಾನ್ಯದೊಳಿಪ್ಪ ಸುಖಗಳ ತೋರ್ಪಾ ಗುಣವಂತರೊಳು ಜಯಪತಿ ಸಂಕರ್ಷಣ ಕರ್ಮವ ಮಾಳ್ಪಾ ಧರ್ಮ ಕರ್ಮಗಳ ಕೊನೆಗೀತನು ಒಪ್ಪ 2 ವಾಸುದೇವ ವಿಜಯಪ್ರದನಾಗೀ ನರ ರಾ ಶರೀರಗಳೊಳು ಕ್ಲೇಶ ಸುಪುಣ್ಯಗಳ ತಾ ಸಮನಿಸುವನು ಸಂದೇಹಿಸದಿರು ಆಶಾಪಾಶಗಳನು ತಾ ಸಡಲಿಸುವನು ಶೀಘ್ರದಿಂದ3 ನಾರಾಯಣ ಕರುಣಾಸಮುದ್ರ ಕೇಳು ತನ್ನಾರಾಧಕರಿಗೆ ದೂರಗೈದು ದುರಿತಾ ಕೈವಲ್ಯ ಪ್ರದಾಯಕ ತೋರುವ ಸರ್ವಜಿತ ಹಾರೈಸದಿರು ಅಲ್ಪಾಹಿಕ ಸುಖಗಳ ನರಕದ್ವಾರಗಳವು ನಿರುತ ಸೂರಿಗಳನು ಸಂಸೇವಿಸು ಮುಕ್ತಿಗೆ ದ್ವಾರವಹುದು ಸತತಾ4 ಪಂಚರೂಪಿ ಪರಮಾತ್ಮನು ತಾ ಷ ಟ್ಟಂಚ ರೂಪದಿ ಪೊರೆವಾ ಪಾತಕ ತರಿವ ಸಂಚಿತಾಗಾಮಿಗಳಪರಾಧವ ಮುಂಚಿನವಂಗೀವಾ ಮಿಂಚಿನಂದದಿ ಪೊಳೆವಾ 5
--------------
ಜಗನ್ನಾಥದಾಸರು
ವಿಮಲಮತಿಯ ಪಾಲಿಸಭವ ಅಮಿತದಯಾರ್ಣವ ದೇವ ಪ ದೀನಬಂಧು ಜ್ಞಾನಸಿಂಧು ದೀನನೊಳು ನೀನೆ ನಿಂದು ಹೀನಮತಿಯ ತರಿದು ತವ ಧ್ಯಾನ ಸದಾನಂದದಿಡುವ 1 ಆಶಾಪಾಶಗಳನು ತುಳಿದು ದೋಷರಾಸಿಗಳನು ಕಡಿದು ಶ್ರೀಶ ನಿಮ್ಮ ಸಾಸಿರನಾಮವ ಧ್ಯಾಸಕಿತ್ತು ಜ್ಞಾನ ಕೊಡುವ 2 ಸತ್ಯ ಶ್ರೀರಾಮ ನಿಮ್ಮ ಪಾದ ಭಕ್ತಿಯಿಂದ ಬೇಡ್ವೆ ಸದಾ ಚಿತ್ತ ಶುದ್ಧಿಗೈದು ಎನಗಾ ನಿತ್ಯ ಮುಕ್ತಿ ನೀಡಿ ಬೇಗ 3
--------------
ರಾಮದಾಸರು
ಹುಡುಕಿದಳೆಶೋದ ಕಂದನ ಪಿಡಿದು ದಾರೆತ್ತಿಕೊಂಡ್ಹೋದರೆನುತ ಪ ಕಂಗಳನಿಕ್ಕಿ ಕಾದಿಹ್ಯದು ಸಿಂಗರದ ಗೋಪಿರ್ಹೆಂಗಳೆಯರು ರಂಗನ ಸುಖಕವರು ಗುಂಗುಹಿಡಿದು ಕುಳಿತಿಹ್ಯರು ರಂಗುಮಂಟಪದೊಳಗೆ ಎನ್ನ ಕಂಗಳಿದರ ಕಾಣನಾವ ಅಂಗನೆಯರಡಗಿಸಿದರೆಂದು ಅಂಗಲಾಚಿ ಅಂತರಂಗದಿ 1 ಉನ್ನತೋನ್ನತ ಋಷಿಗಣರು ಪನ್ನಂಗಶಾಯಿಯ ಸನ್ನಿಧಿಲವರು ಮುನ್ನಾವ ಕಾಲದಿಂ ಕುಳಿತಿಹರು ಭಿನ್ನವಿಲ್ಲದೆ ತಪವ ಮಾಳ್ಪರು ಇನ್ನು ಕಾಣಲವರು ತಮ್ಮಿಷ್ಟ ವನ್ನು ಪೂರ ಪಡೆವನಕ ಎನ್ನ ಕಣ್ಣಿಗೆ ಹಾಕರೆಂದು ಬನ್ನಬಡುತ ತನ್ನೊಳ್ತಾನು 2 ದೂಷಣೆ ಭೂಷಣಗಳನೊದೆದ ಮೋಸ ಕ್ಲೇಶಗಳನು ತರಿದ ಆಶಾ ಪಾಶಗಳನು ಜರಿದ ಈಶನುನ್ನತ ನಿಜವ ತಿಳಿದ ಶ್ರೀಶ ಶ್ರೀರಾಮ ನಿನ್ನ ಪಾದ ದಾಸರು ಕಾಣಲು ತಮ್ಮ ಭಕ್ತಿ ಪಾಶದಿಂದ ಬಿಗಿದು ಕಟ್ಟಿ ನ್ನೇಸು ಕಾಲದಿ ಬಿಡರೆಂದರಿದು 3
--------------
ರಾಮದಾಸರು