ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಂದೆ ಮುದ್ದುಮೋಹನ ದಾಸರಾಯರ ಪದವ ಪೊಂದಿದವರಿಗೆ ಕಷ್ಟವೆ ಪ. ಬಂಧನವ ಪರಿಹರಿಸಿ ಸಿಂಧುಶಯನನ ಮೂರ್ತಿ ತಂದು ತೋರುವರು ಮನದಿ | ಮುದದಿ ಅ.ಪ. ಅತಿಶಯದ ತಪದಿಂದ ಪತಿತ ಪಾವನನಂಘ್ರಿ ಮತಿವಂತರಾಗಿ ಭಜಿಸಿ ಪೃಥುವಿಯೊಳಗವತರಿಸಿ ಯತನವಿಲ್ಲದೆ ಕರ್ಮ ಪಥವನ್ನೆ ಕೊನೆಗಾಣಿಸಿ ಪತಿತರಿಗೆ ಅಂಕಿತವ ಹಿತದಿಂದ ಬೋಧಿಸಿ ಅತಿ ಅದ್ಭುತವ ತೋರಿಸಿ ಸುತರಂತೆ ಶಿಷ್ಯರನು ಹಿತದಿಂದನುಗ್ರಹಿಸಿ ಗತಿಯ ಮಾರ್ಗವ ತೋರ್ವರು | ಇವರು 1 ದೇವತೆಗಳೊಡೆಯರು ಪಾವಮಾನಿಗೆ ಪ್ರಿಯರು ಭೂವಲಯದೊಳು ಮೆರೆವರು ಆವಕಾಲದಲಿ ಸುಖಾನಂದಭೋಗಿಗಳು ಪಾವನ ಸುಚರಿತ್ರರು ದೇವ ನರಹರಿ ಕರುಣ ಪೂರ್ಣವಾಗಿ ಪಡೆದು ಭಾವಶುದ್ಧಿಯಲಿಪ್ಪರು ಈ ವಿಧದ ಇವರ ಚರ್ಯೆಯನರಿಯುವರನರಿಯೆ ಕಾವ ಭಕ್ತರ ಕರುಣಿಯ | ದೊರೆಯ 2 `ತ' ಎನಲು ತಪಸಿಯಹ `ದೇ' ಎನಲು ದೇಹ ಶುದ್ಧಿ `ಮು' ಎನಲು ಮುಕ್ತನಾಗ್ವ `ದು' ಎನ್ನಲು ದುರ್ಜನರು ದೂರವಾಗಿರುತಿಹರು `ಮೋ' ಎನಲು ಮೋಕ್ಷದಾರಿ `ಹ' ಎನಲು ಹರಿಬಂದು `ನ' ಎನಲು ನರ್ತಿಸುವ `ದಾ' ಎನಲು ದಾರಿದ್ರನಾಶ `ಸ' ಎನಲು ಸತ್ವಗುಣಿ `ರಾಯ' ಎನೆ ಪದವಾಳ್ವ `ರು' ಎನಲು ಋಜುಮಾರ್ಗಿಯು | ಸುಖಿಯು 3 ಈ ರೀತಿಯಿಂ ತಂದೆ ಮುದ್ದುಮೋಹನದಾಸ ರಾ - ಯರೆಂತೆಂದು ಜಪಿಸೆ ಪಾರುಗಾಣಿಸಿ ಭವದ ಬಂಧನವ ಬಿಡಿಸುವರು ದೇವಾಂಶ ಸಂಭೂತರು ಕಾರುಣ್ಯ ನಿಧಿಗಳು ತೋರುವರು ಹರಿಮಾರ್ಗ ಸಾರಿ ಭಜಿಪರಿಗೆ ಸತತ ನಾರಸಿಂಹನ ಚರಣ ಸೇರಿಸಿ ಹೃದಯದಲಿ ಸೂರೆಗೊಂಡಿಹರು ಮುಕ್ತಿ | ಸುಕೀರ್ತಿ 4 ಅಪಾರ ಅದ್ಭುತದ ಕರ್ಮಗಳ ನಡೆಸಿಹರು ಪಾಪಿ ಜನಗಳ ಪೊರೆವರು ರೂಪ ರೂಪಾಂತರದಿ ತೋರ್ಪರು ಸುಜನರಿಗೆ ಶ್ರೀಪತಿಯ ವರ ಭಕ್ತರು ಕೋಪತಾಪಗಳಿಂದ ನಿರ್ಲೇಪರಾಗಿಹರು ತಾಪತ್ರಯಗಳ ಕಡಿವರು ಗೋಪಾಲಕೃಷ್ಣವಿಠ್ಠಲನ ಪದಧ್ಯಾನವನು ಗೋಪ್ಯದಿಂದಲಿ ಇತ್ತರು | ಇವರು5
--------------
ಅಂಬಾಬಾಯಿ
ತಪಿಸಲಾರೆ ನಾನು ಪರಿಪರಿ ತಾಪದಲಿ ಕೃಪೆಮಡಿ ಸಲಹಿರಿ ಶ್ರೀ ಗುರುಗಳೆ ಪ. ಸುಪಥ ಕಾಣದೆ ನಿಮ್ಮ ಪಾದವನೆ ನಂಬಿದೆನು ಗುಪಿತ ಮಹಿಮರೆ ಇನ್ನು ಭವಪಾಶ ಬಿಡಿಸುತ್ತ ಅ.ಪ. ಬಂಧು ವರ್ಗಗಳನ್ನ ಬದುಕಿಸುವರು ಎಂದು ಬಂಧನದೊಳು ಬಿದ್ದು ಬೆಂದು ನೊಂದೆ ಮುಂದೆ ದಾರಿಯ ಕಾಣೆ ಮುಕ್ತಿ ಮಾರ್ಗವನರಿಯೆ ಬಂಧು ಬಳಗಗಳೆಲ್ಲ ನೀವೆಂದು ನಂಬಿದೆ 1 ಅಶನವಸನಗಳಲ್ಲಿ ಆಸೆಯನು ತೊರೆಯದೆ ವಸುಮತಿಯೊಳು ಜ್ಞಾನ ಹೀನವಾಗಿ ಪಶುವಿನಂದದಿ ತಿರುಗಿ ಕಾಲವ್ಯರ್ಥ ಕಳೆದೆ ಅಸಮ ಮಹಿಮರೆ ಇನ್ನು ಅಜ್ಞಾನ ಪರಿಹರಿಸಿ 2 ಮಮತೆಯನು ತೊರೆಯದೆ ಮಾಯ ಪಾಶಕೆ ಸಿಲುಕಿ ಮಮಕಾರದಿಂದ ನಾ ಮೈಮರೆತೆನು ನಮಿಸುವೆನು ದೈನ್ಯದಲಿ ನಾನೀಗ ನಿಮ್ಮ ಪದಕೆ ರಮೆಯರಸನ ತೋರಿ ಎನ್ನ ಮನ ಮಧ್ಯದಿ 3 ಪಾವನರೂಪರೆ ಪಾಪರಾಹಿತ್ಯರೆ ಪಾವಿನಶಯನಗೆ ಪರಮಪ್ರಿಯರೆ ದೇವತೆಗಳೊಡೆಯರೆ ದೇವಾಂಶ ಸಂಭವರೆ ಪಾವಮಾನಿಗೆ ಪ್ರಿಯರೆ ಪಾವನ್ನಗಾತ್ರರೆ 4 ಆಪತ್ತು ಕಳೆಯುವರೆ ಶ್ರೀಪತಿಯ ತೋರ್ವರೆ ಕೋಪಿಸದೆ ಎನ್ನೊಳು ಕೃಪೆಗೈಯ್ಯರಿ ಗೋಪಾಲಕೃಷ್ಣವಿಠ್ಠಲ ತಾನು ಹೃದಯದಲಿ ತೋರ್ಪುತೆ ಕರುಣಿಸುತ ಈ ಪರಿಯಿಂ ಸಲಹಿರಿ5
--------------
ಅಂಬಾಬಾಯಿ
ವರದರಾಜ ವಿಠಲ | ಪೊರೆಯ ಬೇಕಿವನಾತರಳತವದಾಸ್ಯಕ್ಕೆ | ಮೊರೆಯನಿಡುತಿಹನಾ ಪ ಜನಿತ ಜನಿತ ಸಂಸ್ಕಾರಗಳನೀನಾಗಿ ಕಳೆಯುತಲಿ ಮಾನನಿಧಿ ಸಲಹೋ 1 ತೈಜಸನೆ ಓಲೆಯಲಿ | ಯೋಜಿಸಿದ ಅಂಕಿತವಾಮಾಜದಲೆ ಇತ್ತಿಹೆನೊ | ವಾಜವರ ವದನಾಮಜಗಜ್ಜನ್ಮಾದಿ | ಬ್ರಾಜಿಷ್ಣುಕರಿವರದಓಜಸವನಿತ್ತಿವಗೆ | ನೀ ಜಯನ ಬೀರೋ 2 ಲೌಕಿಕದಿ ಅಭಿಮಾನ | ತೋಕನಿಗೆ ನೀ ಬಿಡಿಸಿಏಕಮೇವನೆ ನಿನ್ನ | ಏಕಮಾನಸದೀ |ಪ್ರಾಕೃತಸುಗೀತೆಯಲಿ | ಝೇಂಕರಿಪ ಸುಕೃಪವಮಾಕಳತ್ರನೆ ಈಯೋ | ಲೋಕೈಕ ಮೂರ್ತೇ 3 ಪತಿ | ಭೂಮಗುಣಪೂರ್ಣಸೋಮಧರ ಮಧ್ಯ ಸತ್ | ಶ್ರೀ ಮಧ್ವ ಮತದೀಕ್ಷೆಕಾಮನಕೆ ತವದಾಸ್ಯ | ಸ್ವಾಮಿ ಕರುಣಿವುದೋ 4 ಪಾವಮಾನಿಗೆ ಪ್ರೀತ | ಭಾವಜಾರಿಯ ತಾತದಾವಗ್ನಿ ಬಹು ಪೀತ | ಗೋವಗಳರತ್ರಾತಗೋವತ್ಸದನಿಗೆ ಹಸು | ಧಾವಿಸೀ ಪೊರೆವಂತೆತಾವಕನ ಪೊರೆಯೊ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು