ಒಟ್ಟು 7 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಕುಮಟಾದಲ್ಲಿಯ ಶಾಂತೇರಿ ಕಾಮಾಕ್ಷಿ) ಶಾಂತೇರಿ ಕಾಮಾಕ್ಷಿ ತಾಯೇ ಅ- ನಂತಪರಾಧವ ಕ್ಷಮಿಸು ಮಹಮಾಯೇ ಪ. ಸರ್ವಭೂತಹೃದಯಕಮಲ ನಿವಾಸಿನಿ ಶರ್ವರೀಶಭೂಷೆ ಸಲಹು ಜಗದೀಶೆ1 ಮೂಲ ಪ್ರಕೃತಿ ನೀನೆ ಮುನಿದು ನಿಂತರೆನ್ನ ಪಾಲಿಸುವವರ್ಯಾರು ಪರಮ ಪಾವನ್ನೆ2 ನಿನ್ನಾಧೀನವು ನಿಖಿಲ ಬ್ರಹ್ಮಾಂಡವು ಮನ್ನಿಸು ಮಹಾದೇವಿ ಭಕ್ತಸಂಜೀವಿ3 ಗೋವೆಯಿಂದ ಬಂದೆ ಗೋವಿಂದಭಗಿನಿ ಸೇವಕಜನರಿಂದ ಸೇವೆ ಕೈಕೊಂಬೆ4 ಪೃಥ್ವಿಗುತ್ತಮ ಕುಮಟಕ್ಷೇತ್ರನಿವಾಸಿನಿ ಕರ್ತ ಲಕ್ಷ್ಮೀನಾರಾಯಣೀಕಲ್ಯಾಣಿ5
--------------
ತುಪಾಕಿ ವೆಂಕಟರಮಣಾಚಾರ್ಯ
ಕಮಲ ಸಂಭವೆ ಹಿಮನಗಜಾರಮಣ ಸನ್ನುತೆ ತಮರಿಪು ಶತ ಸಮಸನ್ನಿಭೆ ಇಭ ಇಂದಿರೆ ಶೋಭಾನೆ ಪ ಶೃಂಗಾರ ತರಂಗ ಹೆಳಲಾ ಬಂಗಾರವ ಪೊಂಗ್ಲಾದಿಗೆ ಬಲಿ ವಂಗನೆ ಶಿರೋಮಂಗಳ ಮಡಿ ಜಡ ಜಂಗಮ ವ್ಯಾಪ್ತಿ ಅಂಗಜ ಶರ ಕಂಗಳೆ ದ್ವಿಜೋ ತ್ತುಂಗಮ ರಂಗನ ನಿಜ ಅ ರ್ಧಾಂಗಿನಿಯೆ ಬಾ ಹಸಿಯ ಜಗುಲೀಗೆ 1 ಪೊಸುಕುಸುಮ ಶಿರಸದಲೊಪ್ಪುವ ನೊಸಲಲಿ ರಂಜಿಸುವ ಕಸ್ತೂರಿ ದಿಶದುಂಬಿದ ಬಿಸಿಜಾನನ ಪ್ರಭೆ ಎಸೆವ ಕಂಧರ ಕಕ್ಕಜ ಕುಚಕು ಪ್ಪುಸದಲ್ಲತಿ ಶೋಭಿಸುತಿಹ ಪವಳ ದಾ ಸರವ ತೂಗುವ ಅಸಮೇ ಬಾ ಹಸೆಯ ಜಗುಲೀಗೆ 2 ಕರಿಸೊಂಡಿಲುತೆರ ಚತುರಕರ ವರ ಅಭಯಸರಸಿಜಯುಗಧರ ಜಠರಾ ವರತ್ರಿವಳಿ ಗಂಭೀರನಾಭಿ ಕ ಟಸೂತರೆ ಹೇಮಾಂಬರೆ ಚರಣಂದಿಗಿ ಸಪಳಿ ಪೊಂಗೆಜ್ಜೆಯಾ ಮೆರೆಯುತ ಸರಸಳೆ ಬಾಹಸಿಯ ಜಗುಲೀಗೆ 3 ಮೃಗಲಾಂಛನೆ ಮಿಗೆ ಶೋಭಿಪ ಪದ ನಖ ಪಂಕ್ತಿಗಳೊಪ್ಪುವ ಗತ ಅಗಣಿತ ಮಹಿಮಳೆ ಸುಗುಣ ಸಂಪನ್ನೆ ಭಗವಂತನ ಜಘನದಿ ಪೊಳೆಯುತ ಖಗರಾಜನ ಪೆಗಲನೇರಿ ಅಮ ರ ಗಣವ ಚಿರ ಬಾ ಹಸಿಯ ಜಗಲೀಗೆ 4 ಅಂಭೃಣಿ ಸ್ವಾಯಂಭೂ ಸುರ ನಿಕು ರುಂಬಕರ ಅಂಬುಜ ಪೂಜಿತೆ ನಂಬಿದ ಜನರ್ಹಂಬಲಿಸುವ ಫಲ ಸಂಭ್ರಮದಿ ಕೊಡುವಾ ಗಂಭೀರಾ ಸು ಖಾಂಬೋಧಿ ಹರಿ ನಿತಂಬೆ ಪ ಯಾಂಬೋಧಿ ಸುತೆ ಜಗದಂಬೆ ಬಾ ಹಸಿಯ ಜಗುಲೀಗೆ 5 ಮಾಯೆ ನಾರಾಯಣಿ ಶ್ರೀ ಭೂ ಕೃತಿ ಆಯತಾಕ್ಷಳೆ ಕಾಯಜನ ತಾಯೆ ಶರಣೆ ಪ್ರಿಯ ಪಾವನ್ನೆ ವಾಯುಭುಕು ಶಾಯಿ ಅಮರಾಧೇಯಾ ಜಗನ್ನಾಥವಿಠಲನ ಜಾಯೆ ಬಾ ಹಸಿಯ ಜಗುಲೀಗೆ 6
--------------
ಜಗನ್ನಾಥದಾಸರು
ಕರುಣಿಸು ವರಗೌರಿ ಭರದಿಂದ ವರವನ್ನೂ ಶರಣಾಪ್ತ ಬೇಡುವೆ ನಿನ್ನಾ ಪ. ಪಾರ್ವತೀ ತಾಯೇ ಪಾಮರರಿಗೆ ಪರಮಪಾವನ್ನೆ ಪರಿಪಾಲಿಸುತ್ತ ವರವಿತ್ತು ನೀ ಕಾಪಾಡೆ 1 ಪತಿಪಾದ ಸೇವಾ ಸತತದೊಳಿತ್ತು ಸತಿಗೆ ಮಾಗಲ್ಯ ನಿರತವೀಯೆ ತಾಯೆ ಸಕಲಕೆ ಶ್ರೀ ಗೌರಿ2 ಪಾದ ಸೋಸಿಲಿ ಭಜಿಪೆ ವರವೀಯೆ ತಾಯೆ ಶಂಕರಿ ಕಾಯೆ ದೇಹಿಮೆ 3
--------------
ಸರಸ್ವತಿ ಬಾಯಿ
ಪಾವನ್ನೆ ಪಾವನ್ನೆ ಪ ನಗ | ಗೋವರ್ಧನಧರಶ್ರೀ ವರನಿಗೆ ಪ್ರಿಯೆ | ಪಾವನೆ ತುಳಸೀ ಅ.ಪ. ದಳ ದಳ ರೂಪಂ | ಗಳ ಬಹು ಧರಿಸುತನೆಲಿಸಿಹ ನಿನ್ನಲಿ | ಆಲವ ಪೂರ್ಣ ಹರಿ 1 ತೀರ್ಥಮಾನಿ ಸುರ | ಜಾತರೆಲ್ಲ ಸಂ-ಪ್ರೀತಿಯಿಂದ ಇಹ | ರಾತು ಮೂಲದಲಿ 2 ಕಂಡವರಘಗಗಳ | ಖಂಡಿಸಿ ಬಹು ತನುದಿಂಡುಗೆಡೆಹೆ ಹರಿ | ತೊಂಡರ ಗೈಯ್ಯುವ 3 ನೀರನೆರೆಯೆ ತರು | ಬೇರಿಗೆ ಸಂಸ್ಕøತಿಪಾರು ಮಾಳ್ಪ ಹೆ | ದ್ದಾರಿಯ ತೋರುವೆ 4 ಭಾವಜ ಪಿತ ಗುರು | ಗೋವಿಂದ ವಿಠಲನಭಾವದಿ ವಲಿಸಿಹೆ | ದೇವಿ ಜಾಂಬುವತಿ 5
--------------
ಗುರುಗೋವಿಂದವಿಠಲರು
ಮಾನಿನಿ ಆ ಮಹಾಭಕುತಿಗಭಿಮಾನಿ ಪ ಸುತ್ರಾಮ ಕಾಮ ರವಿ ಸೋಮವಿನುತೆ ಮದಸಾಮಜ ಗಮನೆ ನೀಲಕುಂತಳೆ ಮೋಹನ್ನೇ-ಸುವಾಣಿ ಚನ್ನೆ ಬಾಲಾರ್ಕ ತಿಲಕರನ್ನೆ ಫಾಲೆ ವಿಶಾಲೆ ಗುಣರನ್ನೆ -ಕುಂದರದನ್ನೆ ಮೂರ್ಲೋಕದೊಳು ಪಾವನ್ನೆ ಕಾಳವ್ಯಾಳ ವೇಣಿ ಮ್ಯಾಲೆ ರ್ಯಾಗಟೆ ಪೊ ನ್ನೊಲೆ ಚವುರಿಗೊಂಡ್ಯ ಹೆರಳು ಭಂಗಾರ ಕು- ನಾಸಿಕ ನೀಲೋ ತ್ಪಲೆ ನೇತ್ರಳೆ ಪಾಂಚಾಲಿ ಕಾಳಿ ನಮೋ 1 ಪೊಳಿವೊ ಕೆಂದುಟಿ ನಸುನಗೆ ಪತ್ತು ದಿಕ್ಕಿಗೆ ಬೆಳಕು ತುಂಬಿರಲು ಮಿಗೆ ಥಳಕು ವೈಯಾರದ ಬಗೆ ಮೂಗುತಿಸರಿಗೆ ಸಲೆ ಭುಜಕೀರ್ತಿ ಪೆಟ್ಟಿಗೆ ಥಳಥಳಿಸುವ ಕೊರಳೊಳು ತ್ರಿವಳಿ ನ್ಯಾ ವಳಿ ತಾಯಿತು ಸರಪಳಿಯ ಪದಕ ಪ್ರ ವಳ ಮುತ್ತಿನ ಸರಪಳಿಗಳು ತೊಗಲು ಎಳೆ ಅರುಣನ ಪೋಲುವ ಕರತಳವ 2 ಕಡಗ ಕಂಕಣ ಮಣಿದೋರೆ-ದೋಷ ವಿದೂರೆ ಝಡಿತದುಂಗುರ ಶೃಂಗಾರೆ ಮುಡಿದ ಮಲ್ಲಿಗೆ ವಿಸ್ತಾರೆ-ಕಂಚುಕಧರೆ ಉಡಿಗೆ ಶ್ವೇತಾಂಬರ ನೀರೆ ಬಡ ನಡು ಕಿಂಕಿಣಿ ನಿಡುತೋಳ್ಕದಳಿಯ ಪೊಡವಿಗೊಡೆಯ ನಮ್ಮ ವಿಜಯವಿಠ್ಠಲನ್ನ ಅಡಿಗಳರ್ಚಿಪುದಕೆ ದೃಢಮನ ಕೊಡುವಳ 3
--------------
ವಿಜಯದಾಸ
ಶಾಂತೇರಿ ಕಾಮಾಕ್ಷಿ ತಾಯೇ ಅ-ನಂತಪರಾಧವ ಕ್ಷಮಿಸು ಮಹಮಾಯೇ ಪ.ಸರ್ವಭೂತಹೃದಯಕಮಲ ನಿವಾಸಿನಿಶರ್ವರೀಶಭೂಷೆ ಸಲಹು ಜಗದೀಶೆ 1ಮೂಲ ಪ್ರಕೃತಿನೀನೆ ಮುನಿದು ನಿಂತರೆನ್ನಪಾಲಿಸುವವರ್ಯಾರುಪರಮಪಾವನ್ನೆ2ನಿನ್ನಾಧೀನವು ನಿಖಿಲ ಬ್ರಹ್ಮಾಂಡವುಮನ್ನಿಸು ಮಹಾದೇವಿ ಭಕ್ತಸಂಜೀವಿ 3ಗೋವೆಯಿಂದ ಬಂದೆ ಗೋವಿಂದಭಗಿನಿಸೇವಕಜನರಿಂದ ಸೇವೆ ಕೈಕೊಂಬೆ 4ಪೃಥ್ವಿಗುತ್ತಮ ಕುಮಟಕ್ಷೇತ್ರನಿವಾಸಿನಿಕರ್ತಲಕ್ಷ್ಮೀನಾರಾಯಣೀಕಲ್ಯಾಣಿ5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ