ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ ರಂಗಧಾಮ ಈ ಸುಂದರನು ಈ ರಂಗಧಾಮ ಪ. ಕಂಚಿವರದ ರಾಜನಂತಿಹ ಮಿಂಚಿನಂತ್ಹೊಳೆವ ಸಂಚಿತಾರ್ಥವೀವ ದೇವ 1 ಪರಮ ಪುರುಷ ಪಾವನಾಂಗ ಭರದಿ ಭಕ್ತರನು ಪೊರೆವಾ ಕರವ ಪಿಡಿದು ಪೊರೆವ 2 ಸರ್ವತೋಮುಖ ಸರ್ವರಂಗ ಸಂಗದಲ್ಲಿರುವಾ ಗರ್ವಾರಹಿತ ಶ್ರೀ ಶ್ರೀನಿವಾಸ 3
--------------
ಸರಸ್ವತಿ ಬಾಯಿ
ಗೌರೀಶ ಮೃತ್ಯುಂಜಯನುತ ಪಾಲಯ ಗೌರೀಶ ಮೃತ್ಯುಂಜಯ ಪ ಸುಮಶರನಾಶ ಸುಮನರಪೋಷ ಶಮೆಶಾಂತಿದಯಭೂತೇಶ 1 ಶಂಕರ ಶಶಿಧರ ಕಿಂಕರ ಪ್ರಿಯಕರ ಶಂಕರಿಮನೋಹರ 2 ಉಮೆ ಪ್ರಿಯನಾಥ ಅಮಿತವರದಾತ ಅಮರಾದಿಸುರಾರ್ಚಿತ 3 ವರಮಹಲಿಂಗ ಪರಿಭವಭಂಗ ಪರತರ ಪಾವನಾಂಗ 4 ಗಜಚರ್ಮಾಂಬರ ಭುಜಗಾಲಂಕಾರ ಸುಜನಾತ್ಮ ಸುಖಂಕರ 5 ಪುರತ್ರಯ ಸಂಹರ ಪರಿಪಕ್ವರಾಧಾರ ನಿರಂಜನ ನಿರಾಕಾರ 6 ಕೆಂಡನಯನ ರುಂಡಮಾಲನೆ ಹರಣ 7 ಬೇಡುವೆನಭವ ಕಾಡದೆ ಪರಶಿವ ನೀಡು ಎನ್ನಗೆ ವರವ 8 ಭೂಮಿತ್ರಯಕೆ ಘನಸ್ವಾಮಿ ಶ್ರೀರಾಮನ ನಾಮ ಪಾಲಿಸು ಪಾವನ 9
--------------
ರಾಮದಾಸರು
ದೇವಾ ನೀ ಪಾಲಿಪುದೂ ಓ ಹರಿಯೆ ಹರಿಯೆ ಪ ಮದನ ಜನಕ ರಂಗಾ ಪಾವನಾಂಗನೆ ನಿಜಸೇವೆಯೊಳಿರಿಸೆಂದೂ 1 ದಾರುಧಿ ಭೀಕರನ್ಯಾರೊ ವೈಷ್ಣವೋತ್ತಮ ಬಾರೊ ಸಾಧುಶಿಖರನಾರೊ ಸತ್ವರೂಪನು ತೋರೊ 2 ಧರಣೀನಾಗನಗರಿ ಕರುಣವಾರುಧಿಯಾದಾ ಗುರುವೆ ತುಳಶೀರಾಮ ಪರಮಾತ್ಮನೆ ನೀ ಬಾರೊ 3
--------------
ಚನ್ನಪಟ್ಟಣದ ಅಹೋಬಲದಾಸರು
ಭಜಿಸಿ ಧನ್ಯನಾದೆ ನಾನು ಭುಜಗಶಯನನಂಘ್ರಿಯನ್ನು ಪ ಕುಸುಮ ತರಲು ಸರಸಿಧುಮುಕಿ ಮೊಸಳೆಬಾಯಿಗೆ ಸಿಲುಕಿ ಕರಿಯು ಕಂಟಕ ಗೆಲಿದು ಅಸಮಸೌಖ್ಯ ಪೊಂದಿದ್ದು ಕೇಳಿ 1 ಪಾಪಿ ಕುರುಪನೋಲಗದಲ್ಲಿ ದ್ರೌಪದಿಗೊದಗಿಬರಲು ಭಂಗ ಆಪತ್ತು ಗೆಲಿದಳೆಂಬುದ ಕೇಳಿ 2 ಇಳೆಯೊಳ್ಪತಿಯ ಶಾಪದಿಂದ ಶಿಲೆಯ ರೂಪದಿ ಬಿದ್ದ ಯುವತಿ ಗೊಲಿದು ಪಾವನಾಂಗಿಯೆನಿಸಿ ಕುಲಕೆ ತಂದ ಸುದ್ದಿ ಕೇಳಿ 3 ತ್ಯಜಿಸಿ ತನ್ನ ಬ್ರಹ್ಮಕುಲವ ಕುಜಕುಲದ ನಾರಿಗೆ ಕೆಟ್ಟ ಅಜಮಿಳನ ಅಂತ್ಯಕ್ಕೆ ಒದಗಿ ನಿಜಪದವಿ ನೀಡಿದ್ದು ಕೇಳಿ 4 ಅಂಬುಧಿನಿಲಯ ಅಸಮ ಮಹಿಮ ಕಂಬುಕಂಧರಮಿತ್ರ ಭಕುತ ಬೆಂಬಲ ಶ್ರೀರಾಮ ಪ್ರಭುವೆ ನಿನ್ನ ನಂಬಿದವರ ಸಂಭ್ರಮ ಕೇಳಿ 5
--------------
ರಾಮದಾಸರು
ಲೋಕಪಾಲನೆ ನಾಕವಂದ್ಯನೆ ಸಾಕುಬಿಡು ಚಲವಾ ಯಾಕೆ ಕೋಪ ದೀನ ನಾನೆಲೈ ಶ್ರೀಕರ ಸುಗುಣಾ ಪ ಕಾವರಿಲ್ಲವೋ ದೇವ ದೇವನೆ ಭಾವಜಾತಪಿತನೆ ಜೀವಕೋಟಿಯ ಜೀವರಾಶಿಯ ಪಾವನಾಂಗನೆ ಅ.ಪ ಪರರ ನಾನುಪರಿಚರಿಸಲಿಲ್ಲವೋ ದುರುಳಭಾವದಿ ಪರರ ಹಿಂಸೆಗೈದು ಎನ್ನ ಉದರ ಪೊರೆದೆನೋ 1 ವೇದಗಳ ನಾನೋದಿ ಅರಿಯೇ ಸಾಧು ಸಂಗಮ ಭೇದಗೈದೆ ಗರ್ವದಿಂದೆ ವೇದವೇದ್ಯನೆ 2 ಗಂಗಜನಕ ತುಂಗ ವಿಕ್ರಮ | ಮಂಗಳಾಂಗನೇ ಮಾಂಗಿರೀಶ ನಿನ್ನ ನಾಮಭೃಂಗವ ತೋರೈ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್