ಒಟ್ಟು 4 ಕಡೆಗಳಲ್ಲಿ , 1 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಬಿಕಾ ಕುಮಾರನೆ ಪ ಅಂಬುಜಾಕ್ಷ ಶಂಭುಪುತ್ರ ಸ್ಕಂದನೇ ಅ.ಪ ದುರುಳ ತಾರಕನಾಶನೆ ಶರಜ ವಲ್ಲಿಯರಸ ಗುಹ ಕರುಣಾ ಸಾಗರ ಸ್ಕಂದನೆ 1 ಮೂರ್ತಿ ಸುಬ್ರಹ್ಮಣ್ಯನೆ ಸ್ತೋತ್ರ ಮಾಳ್ವ ಜನರ ಮನದಿ-ಷ್ಟಾರ್ಥವೀವ ಸ್ಕಂದನೆ 2 ವಾಸವಾದಿ ದಿವಿಜನುತ ಪಾವಂ-ಜೇಶ ಪರಮ ಪೂಜ್ಯನೆ | ದಾಸ ಜನರ ಮನಕೆ ಸಂತತ ತೋಷವೀವ ಸ್ಕಂದನೆ 3
--------------
ಬೆಳ್ಳೆ ದಾಸಪ್ಪಯ್ಯ
ಕರುಣದಿ ಕೊಡು ಕಾರ್ತಿಕೇಯಾ | ತವ | ಶಿರದ ಮೇಲಿಹ ಗಂಧ ಸಿಂಗಾರ ಹೂವಾ ಪ ದುರಿತ ಕೋಟಿಗಳನು ತರಿಯೇ | ಮಹಾ | ದುರುಳರುಪದ್ರದ ಗಿರಿಯನು ಮುರಿಯೇ ಪರಮ ಕುಲಿಶದಂತೆ ಇರುವಾ | ತವ | ಶಿರದ ಮೇಲಿರುವ ಸಂಪಿಗೆ ಹೂವ | ದೇವಾ 1 ಕೆಡುಕಿನ ತಾಮಸವಳಿದೂ | ತವ | ದೃಢಭಕ್ತಿ ಎನ್ನಯ ಮನದೊಳು ಮೊಳೆದೂದೃಢವಾಗಿ ನೆಲೆಸುವ ತೆರದೀ | ತವ | ಮುಡಿ ಮೇಲಿಹ ಮಲ್ಲಿಗೆಯನತಿ ಮುದದೀ2 ಆಶಾದಿಗಳ ಪರಿತ್ಯಜಿಪಾ | ತವ | ದಾಸರ ಚರಣಯುಗ್ಮಕೆ ನಮಸ್ಕರಿಪಾ | ಲೇಸಿನ ತಿಳಿ ಜನಿಸಲಿಕೇ ಪಾವಂ- ಜೇಶ ನೀ ಪೊತ್ತು ಕೊಂಡಿರುವ ಅಶೋಕೇ 3
--------------
ಬೆಳ್ಳೆ ದಾಸಪ್ಪಯ್ಯ
ಕೃತ್ತಿವಾಸನ ಪ್ರಿಯ ಪುತ್ರನೆ ಗುಹ ಸ- ರ್ವೋತ್ತಮ ಚಿದ್ರೂಪ ಪ ಚಿತ್ತಜ ಪ್ರತಿರೂಪಾ ಪ್ರತಾಪಾಅ.ಪ ದೀನತನದಿ ಕಡುಬೇನೆಯ ಪಡುತಲಿಹೀನಮನುಜನೆನ್ನಾ | ದಾನಿಯಾಗಿಹ ಕರುಣಾನಿಧಿ ಕೈಪಿಡಿ ಧ್ಯಾನಿಪೆ ನಾ ನಿನ್ನ ಪ್ರಸನ್ನ 1 ಸುತ್ತಮುತ್ತಿರುವ ವಿಪತ್ತುಗಳಾ ಭಯ ಮೆತ್ತಿಕೊಂಡಿದೆ ತಾನೇ ಸತ್ವಶಾಲಿಯೇ ನೀ ಕಿತ್ತೊಗೆಯದಿರೆ ಅ- ನ್ಯತ್ರ ಗತಿಯ ಕಾಣೆ ನಿನ್ನಾಣೆ 2 ಪಾಶ ಅಂಕುಶಧರ | ನಾ ಸಹೋದರ ಪಾವಂ- ಜೇಶ ಮಹಾನುಭಾವ | ದಾಸರಿಗೊದಗುವ ತ್ರಾಸವ ಕಳೆ ಸ- ರ್ವೇಶನೆ ಮಹದೇವಾ | ದೇವರ ದೇವಾ 3
--------------
ಬೆಳ್ಳೆ ದಾಸಪ್ಪಯ್ಯ
ಸುಬ್ರಹ್ಮಣ್ಯ ಇನ್ನೂ ದಯೆದೋರೆಯ ಪ ಕರ್ಮ ಬೆನ್ನ ಪಿಡಿಯುತೀಗ-ಲೆನ್ನ ಕಾಡುತಲಿದೆ ನಿನ್ನಾಶ್ರಯವ ಗೈದೆ ಅ ಅನುದಿನ ಕೊರಗುವೆ ಅನಪತ್ಯಕೋಸುಗ ಕೊನೆಗಾಣಿಸೆಂದು ನಾ ಮಣಿಯುತ ಬೇಡುವೆ 1 ಬಲವೆಲ್ಲಿ ಕುಗ್ಗಿತು ಗೆಲವೆಲ್ಲಿ ನಿಂತಿತು ಛಲ ಬಿಟ್ಟು ಎನ್ನನೀ ಸಲಹೆಂದು ಬೇಡುವೆ 2 ಲೇಶವು ಸುಖವಿಲ್ಲ ಘಾಸಿಯಾದೆನು ಪಾವಂ-ಜೇಶನೆ ತವಪದ ದಾಸರ ಮೇಲೆ ನೀ | ಇನ್ನೂ 3
--------------
ಬೆಳ್ಳೆ ದಾಸಪ್ಪಯ್ಯ