ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಲ ಬಂತು ಪ್ರಜೆಗೆ ಎಷ್ಟು ಪೇಳ್ವರೇನು ಕೆಲಸ ದಿಟ್ಟ ಅರಿಗಳನು ಕುಟ್ಟಿ ತೆಗೆಯದಿದ್ದಮೇಲೆ ಪ ದಂಡು ಬಂತು ಎಂದು ಜನರು ಗಂಡು ಹೆಣ್ಣು ಮಕ್ಕಳೆಲ್ಲ ಕಂದುಗಳನು ಕಟ್ಟಿ ಗೋವಿನ ಹಿಂಡ ನೆಲ್ಲ ದಾರಿಗೊಳಿಸಿ ಕಂಡ ಕಡೆಗೆ ಹೋಗಿ ಸೇರಿಕೊಂಡುಯಿರಲು ಸೋವಿನಿಂದ ದಂಡಿನವರು ದಾರಿಗಟ್ಟಿಕೊಂಡು ಸುಲಿದು ಕಡಿದ ಮೇಲೆ 1 ಅಲ್ಲಿ ಬಂತು ಇಲ್ಲಿ ಬಂತು ಎಂದು ಬೆದರಿಕೊಂಡು ಕುಣಿಗಳಲ್ಲಿ ಭತ್ತಭಾಂಡವಿಕ್ಕಿ ನಿಲ್ಲದೆಲ್ಲ ಊರಬಿಟ್ಟು ಕಲ್ಲು ಮುಳ್ಳು ಗುಡ್ಡಕಾನಿನಲ್ಲಿ ಸೇರಿಕೊಂಡು ಬಚ್ಚಿಯಿಟ್ಟ ವಸ್ತು ವಡವೆ ಅಲ್ಲಿ ನಷ್ಟವಾದ ಮೇಲೆ 2 ಮತ್ತೆ ಕುದುರೆಯಿಲ್ಲ ಮಂದಿಹೊತ್ತು ಪ್ರಜೆಗಳನ್ನು ಮಾರ್ಗ ದೊತ್ತಿನಲ್ಲಿ ತರುಬಿ ನಿಂದು ಕತ್ತಿಯನ್ನು ಕಿತ್ತು ಗೋಣ ಬರಿಸಿ ಯಾವತ್ತು ವಡವೆ ವಸ್ತುಗಳನು ಮತ್ತು ಮತ್ತು ಸುಲಿದಮೇಲೆ 3 ಮುಟ್ಟು ಪಟ್ಲೆ ಸಹಿತವರಡಿಯೆತ್ತ ಕೊಟ್ಟು ಬೀಳ ಭೂಮಿ ನಷ್ಟ ತೆತ್ತು ಹಳೆಯ ಅರಿವೆ ಬಟ್ಟೆಗಟ್ಟಿ ಬೀದಿ ಬದಿಗೆ ಹಿಂಡು ಗುರಿಯ ಕೆಟ್ಟ ಗೌಡಿ ದ್ವಿಗುಣಿಸಂಕ ತೆತ್ತು ಕೊಟ್ಟು ಪ್ರಜೆಗೆ ಘಟ್ಟ ಬೆಟ್ಟ ವಾಸ ವಾದಮೇಲೆ 4 ಇಕ್ಕಿ ಕದವ ರಾಜ್ಯವನ್ನು ಹೊಕ್ಕು ಅರಿಗಳೆಲ್ಲ ಸುಲಿದು ಸೊಕ್ಕಿನಿಂದ ಪಾಳ್ಯವನ್ನು ಹೊಕ್ಕರಯ್ಯ ನಮ್ಮ ಕಡೆಗೆ ದಿಕ್ಕಕಾಣೆ ಪ್ರಜೆಗಳನ್ನು ರಕ್ಷಿಸುವರು ಬೇರೆಉಂಟು ನಂಬಿ ಜನರು 5
--------------
ಕವಿ ಪರಮದೇವದಾಸರು
ಗಾಡಿ ಪಾಳ್ಯ ಹನುಮಾ | ತವ ಪದಬೇಡಿ ಭಜಿಪೆ ಭೀಮಾ ಪ ಈಡು ರಹಿತ ತವ | ಮಹಿಮೆಗಳನು ಕೊಂ-ಡಾಡ ಬಲ್ಲನೇ | ಪಾಮರನು ನಾಅ.ಪ. ಸತಿ ವತ್ಸರ ಪೂರ್ವದಿಹಿತಧಾಗಮನವ | ಸೂಚಿಸಿ ಸ್ವಪ್ನದಿ 1 ಸತಿ ತೈಜಸ ಪೇಳಿದನಿಜ ಭಾವವ ತಾ | ಸುಜನರಿಗ್ವೊರೆದು2 ಮಣಿ ಸಹ ವಿರಲವನೂ ||ಘನ ಸಂತಾನವು ಇರದಿರೆ ದಂಪತಿಮನವನು ಹರಿಪದ | ವನಜದಲಿರಿಸೀ 3 ಒಡಗೂಡಿ ಸೇವಕರಾ | ತರಿದನು | ಗಿಡ ಗಂಟಿಯ ವಿವರಾ ||ಅಡವಿಯೊಳೊಡ | ಮೂಡಿದ ಬರಿ ಶಿಲೆಕಂಡು ಮನದಿ ಬಯ | ಲಾಶೆಯೊಳಿರಲೂ 4 ಮಲಗಿರೆ ಮನನೊಂದೂ | ಸ್ವಪ್ನದಿ | ಬಲ ಹನುಮಂತನು ಬಂದೂ ||ಚೆಲುವ ತನ್ನಯ ರೂಪ | ತೋರಿಸಿ ಪೇಳಲುಒಲಿಸಿ ಗಂಧದಲಿ | ಲಿಖಿಸಿ ಪೂಜಿಸಿದ 5 ಮೊಗವನು ದಕ್ಷಿಣಕೆ | ತಿರುಗಿಸಿ | ನಗವನು ಮೇಲಕ್ಕೇ ||ನೆಗಹಿ ತನ್ನ ಎಡ | ಹಸ್ತದೊಳಗೆ ಬಲಭಾಗ ಕೈಯ್ಯ ತಾ | ನಿರಿಸಿಹ ಕಟಿಯಲಿ 6 ಚಾರು ಮತಿಯಲಿ 7 ಸ್ಥಿರ ಚರ ಸುವ್ಯಾಪ್ತಾ | ಮರುತ | ಶರಣ ಜನರ ಆಪ್ತಾ ||ಸುದತರು ಭಕುತರ | ಹರಕೆ ಪೂರೈಸುವೆನಿರುತ ಹರಿಯ ಪದ | ರತಿಯನೆ ಕೊಡುವುದು 8 ಕೋವಿದರರಸನ್ನಾ | ಗುರು | ಗೋವಿಂದ ವಿಠಲನ್ನಾ ||ಓವಿ ತೋರೊ ಮಮ | ಹೃದ್ವನಜದೊಳಗೆ ಪಾವಮಾನಿಯೆ ಮ | ತ್ಪ್ರಾರ್ಥನೆ ಸಲಿಸೀ 9
--------------
ಗುರುಗೋವಿಂದವಿಠಲರು
ಮೂಲ ದೇಹದಿ ಪಾಳ್ಯ ಬಿಡುತಿದೆ ನಾಳೆ ನಾಡದೋ ಕಾಣೆ ತಮಪುರವಿದು ಕಾಲ ಬರುತಿದೆ ಪ ಬಂದು ಬಂದವರೆ ಮುಕ್ತಿಗೆಯಿಕ್ಕಿ ರವಿ ನಂದನ ನಾಳುಪದ್ರವನಿಕ್ಕಿ ಹಿಂದು ಮುಂದಕು ಛಾವಣೆಯಿಕ್ಕಿಪುರದ ಮಂದಿಯ ಕಾವಲನಿಕ್ಕಿ 1 ಪುರದೊಳಗೇನು ಬೀಯಗಳಿಲ್ಲ ಮುಂದೆ ಬರುವ ಮಾರ್ಗವ ಕಟ್ಟಿದರೆಲ್ಲ ಕರಣವೃತ್ತಿಗಳು ತಗ್ಗಿತು ಎಲ್ಲ ಕೋಟೆ ಜರಿದು ಹೋಯಿತು ಸುತ್ತಲು ಎಲ್ಲ 2 ಕಾಲು ಕೈಗಳ ಧಾತು ತಪ್ಪಿತು ನುಡಿದ ನಾಲಗೆ ಹಿಂದಕೆ ಸರಿಯಿತು ಕಣ್ಣಾಲಿಯೊಳಗೆ ನೀರು ಉಕ್ಕಿತು ವಸ್ತು ಗಾಳಿಯೊಳಗೆ ಮಾಯವಾಯಿತು 3 ಮಡದಿ ಮಕ್ಕಳಿಗೆಲ್ಲ ಹೊಡೆದಾಟ ಬಲಕೆ ಎಡಕೆ ಹೊರಳದಿರಿ ಎನುವಾಟ ಕಿಚ್ಚಿ ಯೊಡನೆ ಗೂಡನು ಸುಡುವಾಟ ಕೆಲವು ಕಡೆಯವರೆಲ್ಲ ತೆರಳುವಾಟ 4 ಹೇಳದ ಯಮದೂತರಿಗಂದು ಕಡು ಖೂಳ ಪಾಪಿಗಳೆಳತಹುದೆಂದು ಲಕ್ಷ್ಮೀ ಲೋಲ ನಾಳು ಗಳಮುಟ್ಟದಿರೆಂದು ತನ್ನಾಳಿಗೆ ಕಟ್ಟು ಮಾಡಿದನಂದು 5
--------------
ಕವಿ ಪರಮದೇವದಾಸರು