ಒಟ್ಟು 11 ಕಡೆಗಳಲ್ಲಿ , 7 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಳಿ ಭವಾನಿ ಶಿವೆ ಪಾಲಿಸೇ | ಪ ಗೋತ್ರೋದ್ಬವೆಸಿತ ಗೋತ್ರ ಕೃತಾಲಯೆ | ಗೋತ್ರಸುರಾರ್ಚಿತೆ ಗೋತ್ರಾರಿಯನುತೆ 1 ಭುವನೇಶ್ವರಿತ್ರೈ ಭುವನಾರ್ಚಿತಪದ | ಭುವನಜಯುಗ್ಮಳೆ ಭುವನಜ ಲೋಚನಳೇ 2 ನಾಗಾಂಬರ ಪ್ರಿಯೆ ನಾಗ ಸುವೇಣಿಯೇ | ನಾಗತಿ ಬೆಡುವೆ ನಾ ಗಿರಿಜೇಶಳೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿರುತದಿ ಭಜಿಪೆನಾ ಭರತನ ರಾಣಿಯೇ ಭಾರತಿಯೇ ಪ ಗುರುವರಂತರ್ಗತ ಹರಿಭಕ್ತಿ ಪಾಲಿಸೇ ಭಾರತಿಯೇ ಅ.ಪ ಕಾವೋದು ಬಾಲನ ಸೇವೆ ನೀಕರಿಸದೆ ಭಾರತಿಯೇ ಶಿವಮುಖ ಸುರ ಸಂಸ್ತವಕೆ ಸುಪ್ರೀತಳೆ ಭಾರತಿಯೇ 1 ಕಾಳೀದ್ರೌಪದಿ ಶಿವಕನ್ಯಳೆಂದೆನಿಸಿ ಭಾರತಿಯೇ ನಳನಂದಿನಿ ಮನ ಕೊಳೆಯ ತೊಳೆಯಬೇಕೇ ಭಾರತಿಯೇ 2 ವಂದಿಪೆ ನಿನಗಿಂದ್ರೇಶನಳೆಂದೆನಿಸಿದಿ ಭಾರತಿಯೇ ಕಂದನ ಕುಂದುಗಳೊಂದೆಣಿಸದೆ ಕಾಯೇ ಭಾರತಿಯೇ 3 ಕಾಲಾಭಿಮಾನಿಯೆ ಶೈಲಜೆ ಶ್ಯಾಮಲ ಭಾರತಿಯೇ ವಾಲಗ ಕೈಕೊಂಬೆ ಭಾರತಿಯೇ 4 ಹರಿಯ ಹಿರಿಯ ಸೊಸಿ ಪರಮ ಪದಕೆ ಬರುವಿ ಭಾರತಿಯೇ ಕರುಣಾದಿ ಭಾರತಾದ್ಯರ್ಥವರುಹೆ ನಿತ್ಯಾ ಭಾರತಿಯೇ 5 ಯೋಗಿ ವಿನುತ ಚರಣಳೆ ಎನ್ನ ಭಾರತಿಯೇ ಹೀನ ಬುದ್ಧಿಯ ಕಳಿ ಜ್ಞಾನಮಾರ್ಗವ ತೋರೆ ಭಾರತಿಯೇ6 ಮಾನಾಭಿಮಾನ ನಿನ್ನಾಧೀನ ಎನಗೆ ನೀ ಭಾರತಿಯೇ ಪಾದ ಮನದಿ ತೋರಿಸೇ ನಿತ್ಯಾ ಭಾರತಿಯೇ 7
--------------
ಪ್ರದ್ಯುಮ್ನತೀರ್ಥರು
ಪಾರ್ವತಿ ದೇವಿ ಉಮಾ - ನಿನಗೆ ಸರಿಯಾರೇಕಮ್ಮಗೋಲ್ವೈರಿಯ ಪ್ರೇಮ ಪಾತ್ರಳಾದ ಪ ಆಡೂವ ನುಡಿಗಳ - ಜೋಡಿಸಿ ಹರಿಯಲಿಮಾಡೀಸು ಸತ್ಸಾಧನಾ ||ಬೇಡಿಕೊಂಬೆನು ದೇವಿ - ರೂಢಿಗೊಡೆಯನ ತಡಮಾಡದೆ ತುತಿಪಂಥ - ಜೋಡಿಸು ಮನಾ 1 ಸುರಪಾದಿ ದೇವತೆ ಕರಗಳ ಜೋಡಿಸಿಶರಣೆಂದು ಪೇಳುವರೇ ||ಹರ್ಯಕ್ಷ ಯಕ್ಷನ ಈಕ್ಷಿಸಿ ಬರುತಿರೆಹರಿ ಪೇಳೆ ಸುರಪಗೆ ಬೋಧಿಸಿದೆ 2 ಸತಿ - ವ್ಯತ್ಯಸ್ತ ಮನವನುಸತ್ಯಾತ್ಮನಲಿ ನಿಲಿಸೇ ||ಅರ್ಥೀಲಿ ಹರಿಯ - ಅತ್ಯರ್ಥ ಪ್ರಸಾದಕ್ಕೆಪಾತ್ರನೆಂದೆನಿಸಿ - ಪಾಲಿಸೇ 3 ಪ್ರಾಣಂಗೆ ಪ್ರಾಣನ - ಗಾನ ಮಾಡಲು ಗುಣಶ್ರೇಣಿಗಳ ಜೋಡಿಸೇ ||ಗಾನ ವಿನೋದಿ - ಪ್ರ - ದಾನ ಪುರೂಷನಮಾಣದೆನಗೆ ತೋರಿಸೇ 4 ಹಿಮಗಿರಿಸುತೆತವ - ವಿಮಲಪದಾಬ್ಜಕೆನಮಿಸುವೆ ನೀ ಪಾಲಿಸೇ ||ಅಮಿತಾರ್ಕ ನಿಭ ಗುರು ಗೋವಿಂದ ವಿಠಲನಕಮನೀಯ ಪದ ಕಾಣಿಸೇ 5
--------------
ಗುರುಗೋವಿಂದವಿಠಲರು
ಪಾಲಿಸೇ ಪದ್ಮಾಲಯೇ ಪಾಲಿಸೆ ಪ. ಪಾಲಿಸು ನಿನ್ನನೆ ಓಲೈಸಿತಿರುವೀ ಬಾಲೆಯರಭಿಮತ ಪಾಲಿಸುತೊಲವಿಂಅ.ಪ. ಅಂಬುಜನಾಭನ ರಾಣಿ ನಿನ್ನ ನಂಬಿದೆ ಪಲ್ಲವರಾಣಿ ಚನ್ನೆ ಕಂಬುಕಂಧರೆ ಫಣಿವೇಣಿ ಎನ್ನ ಬೆಂಬಿಡದಿರು ಕಲ್ಯಾಣಿ ಜನನೀ ಜಂಭಾರಿ ಪೂಜಿತೆ ಶಂಬರಾರಿಯಮಾತೆ ಶಂಭುವಂದಿತ ಪಾದಾಂಬುಜಕ್ಕೆರಗುವೆ 1 ಘನ ಸತ್ಯವ್ರತ ಪಿಡಿದರಿಯೆ ತಾಯೇ ಮತ್ತೇಭಗಾಮಿನಿ ಮರೆಹೊಕ್ಕೆ ನಿನ್ನನೇ ನಿತ್ಯಸತ್ಯದಿ ನಿನ್ನ ಭಜಿಸುವೆ ಜನನೀ 2 ಘೋರ ಋಣದ ಭಾದೆ ಕಳೆದು ಎನ್ನ ಪಾರುಗಾಣಿಸು ಮೋದವಡೆದು ಮುನ್ನ ದುರಿತವಿದೆನ್ನನು ಬಿಡದು ತಾಯೆ ವರಶೇಷಗಿರಿ ದೊರೆಯರಸಿ ನಿನ್ನಡಿತಾವರೆಗೆನ್ನನಾರಡಿಯೆನಿಸೆಂದು ಬೇಡುವೆ3
--------------
ನಂಜನಗೂಡು ತಿರುಮಲಾಂಬಾ
ಬಾರವ್ವ ಜಗದಂಬೆ ಶರಣೆಂದು ಬಲಗೊಂಬೆ | ಪಾದ ಪದ್ಮ ಪೂಜೆಗೊಳೆ ಸುಖದಿಂಬೆ ಪ ಕೈವಲ್ಯ - ಗತಿ - ದಾಯಿ ಮೂರು ಲೋಕದಾ ತಾಯೀ ಆವಾಗ ನೆನೆವೆ ನಿಮ್ಮ ಅರ್ಥಿಯಿಂದಾತುಕೊ ಬಾಯೀ 1 ಅಷ್ಟದಳ ಗದ್ದುಗೆಯಲಿ ಭಕ್ತಿರಂಗ ಹಾಕಿರಲೀ ಇಷ್ಟೇನು ಜ್ಞಾನದೀಪಾ ಕಟ್ಟಿ ನಿಜದ್ಯಾಸ ಮಾಲೀ2 ವೇದಶಾಸ್ತ್ರಗಳಿಗೆ ಮುನ್ನೆ ಮಹಿಮೆ ತಿಳಿಯದು ಪ್ರಸನ್ನೆ ಸುರರು ನಮೋ ಎನ್ನೆ3 ಅನುವಾಗಿ ನಾಮ ಪಾಡಿ ಗೊಂದಲ್ಹಾ ಕುವೆನುಛಂಧಾ4 ಕೊಂಡಾಡುತಿಹೆ ನಿನ್ನ ಗುರು ಮಹಿಪತಿಜನಾ ಮಂಡಿಮ್ಯಾಲ ಕೈಯನಿಟ್ಟು ಪಾಲಿಸೇ ಅನುದಿನಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭಾರತೀ ನೀ ಪರಿಪಾಲಿಸೇ ಪ ನಾರಿ ಶಿರೋಮಣಿ | ನಿರುತ ನಿನ್ನಯ ಪದವಾರಿಜ ಭಕುತಿಯ | ಗಾರು ಮಾಡದೆ ಕೊಡು ಅ.ಪ. ಉರು ವಿಕ್ರಮನಲಿ | ವರ ಭಕ್ತ್ಯುದಯಕೆಪರಮ ಕಾರಣಳೆಂ | ದರಿತು ನಿನ್ನ ಪದ |ಸರಸಿಜ ಭಜಿಸುವೆ | ಪರಮ ಕೃಪಾಕರೆತ್ವರ ಹರಿ ಭಕುತಿಯ | ಪಾರಿಪಾಲಿಪುದು 1 ವಿಪರೀತದ ಮತಿ | ಅಪಹರಿಸುತ ಬಲುಕೃಪೆಗೈದೆನ್ನಲಿ | ಅಪ ವರ್ಗದ ಹರಿವಿಪಗಮನನ ಸ | ದ್ದಪರೋಕ್ಷವ ಕೊಡುವಿಪ ಅಹಿಪತಿ ನುತೆ | ಅಪ್ರತಿ ಮಾತೆಯೆ 2 ಭೂವಲಯದಿ ನಿನಗಾವರಿಲ್ಲ ಸಮನೀ ವೊಲಿಯದಲಿ | ನಿನ್ನಾವರ ಕಾಣೆನುಮಾ ವಿನೋದಿ ಗುರು | ಗೋವಿಂದ ವಿಠಲನಪಾವನ ಪದವನು | ತೀವರ ತೋರಿಸು 3
--------------
ಗುರುಗೋವಿಂದವಿಠಲರು
ಲಕ್ಷ್ಮೀ ದೇವಿ ಇಂದಿರೆ ನಾ ನಿನ್ನ ವಂದಿಸಿ ಬೇಡುವೆ ಬಂದು ನೀ ಪಾಲಿಸೇ ಚಂದಿರವದನೆ ಪ ಸಿಂಧು ಕುಮಾರಿಯೆ ಎಂದಿಗೂ ನಿನ್ನ ಪದ ದ್ವಂದ್ವವ ಸೇವಿಪೆನೆಂದು ನಾ ಬೇಡುವೆ ಅ.ಪ ದೇವಿ ನಿನ್ನಂಘ್ರಿಯ ಸೇವಿಸಿ ಪದ್ಮಭವ ಭಾವಿ ಫಣೇಶ ಸುರಾಧಿಪರೆಲ್ಲರು ಈ ವಿಧವಾದನುಭಾವವ ಪೊಂದಿರಲು ಈ ವಿಷಯಕೆ ಶ್ರುತಿ ಸಾವಿರವಿರುವುದೆ 1 ಪನ್ನಗವೇಣಿಯೆ ನಿನ್ನನೆ ನಂಬಿರಲು ಸಣ್ಣ ಮನುಜರ ವರ್ಣಿಪುದೇಕೆಲೆ ಎನ್ನಪರಾಧವ ಮನ್ನಿಸಿ ಕೃಪೆಯನು ಎನ್ನೊಳು ತೋರಲು ಧನ್ಯ ನಾನಾಗುವೆ 2 ತಾಮರಸಾಕ್ಷಿಯೆ ನಾಮಗಿರೀಶ ಶ್ರೀ ಸ್ವಾಮಿ ನೃಸಿಂಹನ ಕಾಮಿನೀಮಣಿಯೇ ಕೋಮಲಗಾತ್ರಯೆ ಶ್ರೀ ಮಹಾಲಕ್ಷ್ಮಿ ಎನ್ನ ಸಹೋದರಿ 3
--------------
ವಿದ್ಯಾರತ್ನಾಕರತೀರ್ಥರು
ವಾಣಿ ಬ್ರಹ್ಮನ ರಾಣಿ ಕಲ್ಯಾಣೀ| ಫಣಿವೇಣಿ ಸದ್ಗುಣ | ಶ್ರೇಣಿ ವೀಣಾ ಪುಸ್ತಕ ಪಾಣಿ ಪ ಜಾಣೆ ಶ್ರೀ ಜಗತ್ರಾಣಿ ಶಾಸ್ತ್ರ ಪ್ರ- ವೀಣೆ ವೇದ ಪ್ರಮಾಣಿ ನಿನಗೆಣೆ | ಗಾಣೆ ಸಂತತಕೇಣವಿಡದೆನ್ನಾಣೆ | ನೆಲಸಿರು ಮಾಣದೆನ್ನೊಳು ಅ.ಪ. ತ್ರಿಜಗ ಶುಭ ಕಾಯೇ | ಓಂಕಾರರೂಪಿಣಿ | ಮಾಯೆ ಮುನಿಜನಗೇಯೆ ಸುಖದಾಯೇ || ತೋಯಜಾಂಬಕಿ ಶ್ರೀಯರ ಸೊಸೆ | ಆಯದಿಂದಲಿ ಶ್ರೇಯಸ್ಸುಖಪದ - ವೀಯೆ ಸಂತತ ಕಾಯೆ ಶತಧೃತಿ ಪ್ರೀಯೆ | ನೀನೆನಗೀಯೆ ವಾಕ್ಸುಧೆü 1 ಅಕ್ಷರ ಸ್ವರೂಪೆ ನಿರ್ಲೇಪೇ | ಮೌನಿಜನ ಮಾನಸ | ಪಕ್ಷ ಸಕಲಾಧ್ಯಕ್ಷೆ ಶುಭಚರಿತೇ | ಸೂಕ್ಷ್ಮ ಸ್ಥೂಲ ಸುಲಕ್ಷಣಾನ್ವಿತೆ | ಮುಮುಕ್ಷು ಜನ ನಿಜ | ಭಕ್ತಿ ಭುಕ್ತಿವರ ಪ್ರದಾಯಕಿ | ಮುಕ್ತಿ ಸುಖ ಸೌಖ್ಯ ಪ್ರದಾಯಕಿ 2 ಸುಂದರಾಂಗಿ ಆನಂದ ಗುಣ ಭರಿತೇ | ವಂದಿಸುವೆ ತವಪದ -| ದ್ವಂದಕಾನತನಾಗಿ ಸಚ್ಚರಿತೇ | ಯೆಂದು ಮದ್‍ಹ್ವನ್ ಮಂದಿರದಿ ನೀ | ನಿಂದು ಆಪದ್ ಬಂಧು ಕರುಣಾ | ಸಿಂಧುವನು ನಾನೆಂದು ಪೊಗಳ್ವಾ -| ನಂದವರ ಸದಾನಂದ ಪಾಲಿಸೇ 3
--------------
ಸದಾನಂದರು
ಶ್ರದ್ಧಾ ಪಾಲಿಸೇ ಮಾತೇ | ನಂಬಿದೆ ಶೇಷಾರುದ್ರಾದಿ ಸುರ | ವಿನುತೇ ಪ ಉದ್ಧರಿಸುವುದೆನ್ನ | ಅವಿದ್ಯವ ನೀಗಿ ಹೇಬುದ್ಯಭಿಮಾನಿ ಸ | ದ್ಬುದ್ಧಿ ಪ್ರದಾತೇ ಅ.ಪ. ಪುತ್ಥಳಿ ಬೊಂಬೆ 1 ಕೃತಿ ಕುಮಾರಿ | ಬ್ರಹ್ಮಮಾನಸಮಂದಿರೆ ಸಜ್ಜನೋದ್ಧಾರಿ ||ಚಂದಿರೆ ಎನ ಮನ | ಮಂದಿರದಲಿ ಬಲುಸುಂದರ ಶ್ರೀ ಗೋ | ವಿಂದ ಪಾದಾಬ್ಜವತೋರೆ - ಹೇ ನೀರೆ - ವೈಯ್ಯಾರೆ | ಸದ್ಗುಣಗಣ ಗಂಭೀರೆ 2 ನಿತ್ಯ ಕಲ್ಯಾಣೀ ||ಚತುರ ಮೂರುತಿ ಗುರು | ಗೋವಿಂದ ವಿಠಲನಸತತ ಭಜಿಪ ಮತಿ | ಸುಸ್ಥಿರದಲಿ ಕೊಡುನೀನೆ - ಬಲು ಜಾಣೆ :ಎನ್ನಾಣೆ | ಪತಿತ ಪಾವನ್ನೇ 3
--------------
ಗುರುಗೋವಿಂದವಿಠಲರು
ಕಾಳೀ ದ್ರೌಪದಿ ಭಾರತೀನಿನ್ನಪಾದಕೀಲಾಲಜನುತಿಪೆಪ್ರತಿ||ವೇಳೆಯೊಳಗೂ ಲಕ್ಷ್ಮೀಲೋಲನ ಚರಣಾಬ್ಜ |ವಾಲಗವೀಯೇ ಸುಶೀಲೆ ಸ್ವಯಂಭುಜೆ ಪಇಂದ್ರಸೇನಾ ನಳನಂದಿನಿ ಶಿವಕನ್ಯಾ |ನಂದಪೂರಿತಳೆ ಚಂದ್ರಾ |ನಿಂದಕರಿಪುಜ್ಞಾನಸಾಂದ್ರೆ ಸುಪತಿವ್ರತೆಕಂದುಗೊರಳ ವಾರುಣೀಂದ್ರ ಅಂಡಜಾಧಿಪ ||ಇಂದ್ರನಿರ್ಜರವೃಂದ ಮುನಿಗಣವಂದಿತ ಪದಾರವಿಂದೆ ಭವದಲಿನೊಂದೆ ಭಯವಾರೆಂದು(ನಿನ್ನೊಡಿವೆಂದದಲಿ ನಿನ್ನಡಿ ಪೊಂದಿ ಬೇಡುವೆ ನಂದದಲಿ)ಕೊಡೆ (ಅ)ಮಂದಕರುಣೆ 1ತರಣಿಯಾನಂದ ಭಾಸೆ |ಪ್ರದ್ಯುಮ್ನ ದೇವರ ಸುತೆಕ್ಲೇಶಹರಿಸೆ |ಹರಹಿ ಯನ್ನಯ ಮೇಲೆ ಕರುಣಾಪಾಂಗದ ದೃಷ್ಟಿ |ದುರುಳಮತಿ ಪರಿಹರಿಸಿತವಕಹರಿ-ಗೆರಗೊ ಮನ ಕೊಡುಪರಮಧಾರ್ಮಿಕೆಕರೆವೆ ಬಂದೀಗಿರೆ ಹೃದಯಾಬ್ಜದಿ |ಉರು ಪರಾಕ್ರಮೆಪರತರಳೆ ಸದಾಪೊರೆಯೆ ಬಿಡದಲೆಕರಮುಗಿವೆ 2ವಾಣೀ ಸುಂದರಿ ವರದೆ ಸಾಧ್ವೀ |ವೀಣಾಪಾಣಿ ಪೇಳುವೆನೆ ಇದೇ |ಹೀನ ವಿಷಯವಲ್ಲೆ ಪೋಣಿಸಿ ಸುಮತಿ ಶ್ರೀಪ್ರಾಣೇಶ ವಿಠಲನ ಧ್ಯಾನದೊಳಿಹ ಮ-ಹಾನುಭಾವರ ಸಂಗ ಪಾಲಿಸೇ ||ಮಾನಿನೀ ಕುಲಮೌಳಿಮಣಿಚಂ |ದ್ರಾನನೆ ಮದಗಜಗಮನೆ ಸು-ಶ್ರೋಣಿ ಅಷ್ಟಾಪದ ಸುಕಾಂತೆ 3
--------------
ಪ್ರಾಣೇಶದಾಸರು