ಒಟ್ಟು 7 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಕೋಲ ಹಾಡು) ಕೋಲು ಕೋಲೆನ್ನ ಕೋಲೆ ಕೋಲು ಕೋಲೆನ್ನ ಕೋಲೆ ಕೋಲು ಶ್ರೀ ರಾಮನ ಬಲಗೊಂಬೆ ರನ್ನದ ಪ. ಭೂಮಿಯೊಳಗೆ ಸೀತಾರಾಮನು ಜನಿಸಲು ಸೀಮೆಯ ನಾರಿ ಜನರೆಲ್ಲ ರನ್ನದಾ ಸೀಮೆಯ ನಾರಿ ಜನರೆಲ್ಲ ನೆರೆದು ಸು ಪ್ರೇಮದಿ ಪಾಡಿ ನಲಿದರು ರನ್ನದಾ 1 ಕುಂಡಲ ಕಂಠ ಮಾಲೆಯ ನೊಸಲಾ ತಿಲಕವು ರನ್ನದ ಮಾಲೆಯ ತಿಲಕನೊಸಲೊಳಗಿರಿಸಿದ ಬಾಲೇರು ಕೂಡಿ ನಲಿವುದ ರನ್ನದ 2 ಸಾರಸಂಭವ ಕ್ಷೀರ ವಾರುಧಿ ತಡಿಯಲ್ಲಿ ಭೋರನೆ ಬಂದು ಸ್ತುತಿಸಲು ರನ್ನದ ಭೋರನೆ ಬಂದು ಸ್ತುತಿಸಲು ರಾಮವ ತಾರನಾಗುವೆನೆಂದು ನುಡಿದನು ರನ್ನದ 3 ಪೃಥಿವಿ ನಾಯಕ ದಶರಥನಲ್ಲಿ ಜನಿಸಿದ ಕಥನೀಯ ಸುಗುಣ ಸಂಭೃತ ರಾಮರನ್ನದ ಕಥನೀಯ ಸುಗುಣ ಸಂಭೃತ ರಾಮ ಕೌಸಲ್ಯ ಸುತನೆಂದು ನಗುತ ಮನ್ಮಥನ ಜನಕನಿಗೆ 4 ಕೌಶಿಕ ಮುನಿಯ ಮಹಾಶೆ ಪೂರಿಸಿ ಯಜ್ಞ ಘಾಸಿ ಮಾಡಿದ ರಾಮ ಘಾಸಿ ಮಾಡಿದ ಜಗ ದೀಶನು ಸಕಲಾಭಿಲಾಷಾ ಪೂರಿಪೆನೆಂದು 5 ಪಾದ ಪಲ್ಲವವಿರಿಸುತ ಕಲ್ಲಾದ ಶಿಲೆಯನ್ನಹಲ್ಯೆ ಮಾಡಿದ ರಾಮ ಕಲ್ಲಾದ ಶಿಲೆಯನ್ನಹಲ್ಯೆ ಮಾಡಿದ ಸಿರಿ ನಲ್ಲ ಶಿವನ ಮಹ ಬಿಲ್ಲ ಮುರಿದನು 6 ಭೂತಳಾಧಿಪಜನವ್ರಾತಮಂಡಲದೊಳು ಸೀತೆಯನೊಲಿಸಿ ಶುಭದಿಂದ ರನ್ನದಾ ಸೀತೆಯನೊಲಿಸಿ ಶುಭದಿಂದ ಸ್ವಜನ ಸ- ಮೇತಾಯೋಧ್ಯಗೆ ಬಂದ ಖ್ಯಾತ ರಾಘವನಿಗೆ 7 ಜನಕನ ವಾಕ್ಯದಿಂದ ಜನಕಾತ್ಮಜೆಯ ಕೂಡಿ ವನಕಾಗಿ ನಡೆತಂದ ವನಜಾಕ್ಷ ರನ್ನದಾ ವನಕಾಗಿ ನಡೆ ತಂದ ವನಜಾಕ್ಷನಲ್ಲಿ ಶೂ- ರ್ಪನಖಿಯ ಮಾನಭಂಗವನು ಗೈದ ರನ್ನದಾ 8 ಖರದೂಷಣಾದಿ ದೈತ್ಯರ ಕೊಂದು ಮಾರೀಚ ದುರುಳನ ಸದೆದಾ ಧುರಧೀರ ರನ್ನದ ದುರುಳನ ಸದೆದಾ ಧುರಧೀರ ಶ್ರೀ ರಾಮ ಪರಿಪಾಲಿಸೆಮ್ಮನು ಕರುಣಾಳು ರನ್ನದ 9 ಪಾತಕಿ ದಶಕಂಠ ಸೀತೆಯನೊಯ್ದನೆಂದು ಕಾತರಗೊಂಡಂತೆ ಜನಕೆಲ್ಲ ರನ್ನದಾ ಕಾತರಗೊಂಡಂತೆ ಜನಕೆಲ್ಲ ತೋರ್ದ ರಘು ನಾಥನ ಮೊಖಲೀಲೆ ಖ್ಯಾತಿಯ ಪೊಗಳುತ10 ಮಂದರಾವಣ ಮೋಸದಿಂದ ಕೆಡಹಿದಂಥ ತಂದೆಯ ಸಖನಿಗಾನಂದ ಪದವನಿತ್ತ ತಂದೆಯ ಸಖನಿಗಾನಂದವ ಸಲಿಸಿ ಕ- ಬಂಧನ ದೈತ್ಯಯೋನಿ ಇಂದ ಬಿಡಿಸಿದಗೆ 11 ಬೇಡತಿ ಶಬರಿಯನ್ನು ನೋಡಿ ರಕ್ಷಣೆ ಮಾಡಿ ಪ್ರೌಢ ಮಾರುತಿಯಿಂದ ಕೂಡಿದ ರನ್ನದಾ ಪ್ರೌಢ ಮಾರುತಿಯನ್ನು ಕೂಡಿ ರವಿಜನ ಕಾ ಪಾಡಿ ವಾಲಿಯ ವಧೆ ಮಾಡಿದ ರನ್ನದಾ 12 ಪ್ರಾಣಾತ್ಮಜನು ನಾಗವೇಣಿಯ ವಾರ್ತೆಯ ತಾರೆ ಜಾಣತನದಲಿದ ಕ್ಷೀಣಾಂಬುಧಿಯೊಳಂದು ಜಾಣತನದಲಿದ ಕ್ಷೀಣಾಂಬುಧಿಯೊಳು- ಪ್ರ ವೀಣತನದಿ ಸೇತು ಕಾಣಿಸಿದವನಿಗೆ 13 ದೋಷಿ ರಾವಣನನು ನಾಶಗೈದಸುರಾರಿ ನೀಶ ನೀನೆನುತ ವಿಭೀಷಣಗೊರವಿತ್ತಾ ಈಶ ನೀನೆನುತಲಿವಿಭೀಷಣಗೊರವಿತ್ತ ವೈರಿ ಜಗದೀಶ ರಾಮನಿಗೆ 14 ಸೃಷ್ಟಿಜಾತೆಯ ಕೂಡಿ ಪಟ್ಟಾಭಿಷೇಕಗೊಂಡು ಶಿಷ್ಟ ರಕ್ಷಕನಾದ ಸಿರಿನಾಥ ರನ್ನದಾ ಶಿಷ್ಟ ರಕ್ಷಕನಾದ ಸಿರಿನಾಥ ವೆಂಕಟ ಬೆಟ್ಟದೊಡೆಯ ನಮ್ಮಭೀಷ್ಟವ ಕೊಡುವನ 15
--------------
ತುಪಾಕಿ ವೆಂಕಟರಮಣಾಚಾರ್ಯ
ತೋರೊ ತೋರೊ ನಿನ್ನ ಚರಣವ ಪ ಸಾರಥಿ ಕೋರಿ ಭಜಿಪೆ ಬೇಗ ಬಾರೊ ಗುರುವರ ಅ.ಪ ವೋ ಮಧ್ವಮುನಿರಾಯ ವಂದಿಪೆ ಜೀಯ 1 ತಾವರೆಗಣ್ಣನದಾಸವರ್ಯನೆ 2 ದಿಟ್ಟ ಶ್ರೀ ಗುರುರಾಮವಿಠ್ಠಲರಾಯನ ಪಟ್ಟದಾನೆಯು ನೀನು ಪಾಲಿಸೆಮ್ಮನು 3
--------------
ಗುರುರಾಮವಿಠಲ
ಪಾಲಿಸೆಮ್ಮನು ಗುಹನೇ | ಶ್ರೀ ಸುಬ್ರಹ್ಮಣ್ಯ ಪ ಪಾಲಿಸೆಮ್ಮನು ಗುಹ | ನೀಲಕಂಠನ ಸುತ ಅ.ಪ ನೂರಿಗಟ್ಟಿದ ಗುಹನೇ ಶ್ರೀ ಸುಬ್ರಹ್ಮಣ್ಯ ||ಪಾಲಿಸೆ|| 1 ದಿಷ್ಟವನಿತ್ತ ಗುಹನೇ ಶ್ರೀ ಸುಬ್ರಹ್ಮಣ್ಯ ||ಪಾಲಿಸೆ|| 2 ವಲ್ಲಿ ದೇವಿಯ ಪ್ರಾಣವಲ್ಲಭನೆನಿಸುವ ಪುಲ್ಲಂಬರೂಪ ಗುಹನೇ ಶ್ರೀ ಸುಬ್ರಹ್ಮಣ್ಯ ||ಪಾಲಿಸೆ|| 3 ನಂದ ಚಿನ್ಮಯ ಗುಹನೇ ಶ್ರೀ ಸುಬ್ರಹ್ಮಣ್ಯ ||ಪಾಲಿಸೆ|| 4 ಅಂಬಿಕಸುತ ಗುಹನೇ ಶ್ರೀ ಸುಬ್ರಹ್ಮಣ್ಯ ||ಪಾಲಿಸೆ|| 5
--------------
ಬೆಳ್ಳೆ ದಾಸಪ್ಪಯ್ಯ
ಪಾಲಿಸೆಮ್ಮನು ವೆಂಕಟೇಶಾ ನಂಬಿದೆ ನಿನ್ನ ಪಾದಾ ಸಲಹೋ ಗಿರೀಶಾ ಪಾಲಿಸು ಪನ್ನಗಾ ಚಲವಾಸಾ ಪಾಲಿಸುವ ನ್ನ ಸರ್ವೇಶಾ ಪ ಅನುದಿನ ಕೊಂಡಾಡುವೆನಾ ಪತಿತ ಪಾವನ ನೀನೇಗತಿಯೆಂದು ನಂಬಿದೆ ಸನ್ಮತಿಯ ಪಾಲಿಸು ದೇವಾ ಅಹಿಗಿರಿ ನಿಲಯಾ 1 ಕರಣಶುದ್ಧನ ಮಾಡಿ ಕರೆದುಕೋ ಯನ್ನನು ಕರುಣಾಕರ ವೆಂಕರಾಯಾ ಜೀಯಾ2 ಅಗಣಿತ ಸರಿಯಾರು ನಿನಗೇ ಮೂಲೋಕದ ದೊರೆಯೇ 3 ಕರೆಕರೆ ಸಂಸಾರದೀ ಕೊರಗುತ್ತ ಮರುಗುತ್ತಲಿಹೆ ಭರದೀ ಕಣ್ದೆರೆದು ನೋಡೆಮ್ಮನು ಕನಕಾದ್ರಿಗೊಡೆಯಾ4 ಅರ್ಥಿಯಿಂದಲಿ ನಿನ್ನ ಬಲು ಪರಿಯಿಂದಲಿ ನುತಿಪೆನಾ ಸತ್ಯ ಮೂರುತಿ ನೀನೆ ಹತ್ತಿರ ಕರೆದು ಸಲಹೋ 5 ಹಿಂದೆ ಪ್ರಹ್ಲಾದನ ನುಡಿಯಾ ಕೇಳಿ ನೀ ಕಂಬದಿಂದೊಡೆದು ಬಂದೆ ಅಂಧಕಾರದಿ ಮುಳುಗಿ ಮುಂದೆ ಕಾಣದಲಿರುವೆ ಒಡೆಯ ಇಂದಿರೆ ರೆಮಣಾ 6 ವರವ ಕೊಡುವೇ ಇಷ್ಟಾರ್ಥಗಳ ಕೊಡುವೆ ವೆಂಕಟವಿಠಲಾ 7
--------------
ರಾಧಾಬಾಯಿ
ಪಾಲಿಸೋ | ಪಾವ9ತಿಯ ಪ್ರಾಣೇಶ | ಪಾಲಿಸೋ ಪ ಪಾಲಿಸೆಮ್ಮನು ಪಶುಪತಿಯೆ | ನಿಜ | ಬಾಲಾಕ9 ಕೋಟಿದೀಧಿತಿಯೆ | (ನಮ್ಮ) | ಏಳಿಗೆಗೊಳಿಪ ಸದ್ಗತಿಯೆ ಎಂಬು || ಮೂಲ ಮೂರುತಿ ಸರ್ವಕಾಲಕಾಲನೆ ತ್ರೀ || ಶೂಲವ ಪಿಡಿದೆನ್ನ ಆಲಸ್ಯ ತ್ಯಜಿಸಿನ್ನು 1 ಪ್ರಮಥ ಪ್ರಜಾಪ್ರಭೂದಾರ | ಧರ್ಮ | ದ್ರುಮ ಸುಮನಸರಿಗಾಧಾರ |ಜಗ | ತ್ಕ್ರಮಜಳಿಂತೆನುವ ವಿಚಾರ | ಸ್ವಾಮಿ | ನಮಿಸಿ ಕೇಳುವೆ ಸವ9ಸಾರ | ಆಹಾ || ಗಾತ್ರ | ದ್ಯುಮಣಿಸನ್ನುತ ನಮೋ | ನಮೋಯೆಂಬೆ ಜಯ ಶಂಭೋ 2 ಶರಣವತ್ಸಲ ಮೃತ್ಯುಂಜಯನೆ | ನಿನ್ನ | ಮರೆಯ ಹೊಕ್ಕೆನು ಕಾಲಾಂತಕನೆ | ಎನ್ನ | ಕರುಣದಿ ಸಲಹೊ ಶಂಕರನೆ | ಶಿರ- ವೆರಗಿ ಬೇಡುವೆ ದಯಾಪರನೆ | ದೇವ || ಕರುಣಾಸಾಗರ ನಿನ್ನ | ತರಳನಾಗಿದೆ9ನ್ನ | ಪರ ಗುರುರಾಯನೆ 3
--------------
ಸದಾನಂದರು
ಭವ ಶಿತಿಕಂಠ ನಿನ್ನಪದ ತಾಮರಸಯುಗ್ಮಗಳಿಗಾನಮಿಸುವೆ ಪ ಕಾಮಹರ ಕೈಲಾಸ ಹೇಮಗಿರಿಯಾವಾಸ ರಾಮನಾಮನ ಭಜಿಪ ಉಮೆಯರಸ ಶಂಭೋ ಅ ಮೃತ್ಯುಂಜಯ ಮೃಗಾಂಕ ಕೃತ್ತಿವಾಸ ಕೃಪಾಳೊ ವಿತ್ತÀ್ತಪತಿ ಸಖ ವಿನಾಯಕರ ಜನಕ ಭೃತ್ಯವರ್ಗಕೆ ಬಾಹಪಮೃತ್ಯು ಕಳೆದು ಸಂ ಪತ್ತು ಪಾಲಿಸುವುದು ನಿವೃತ್ತಿ ಸಂಗಮಪ 1 ಗೋಪತಿ ಧ್ವಜ ಘೋರ ಪಾಪ ಸಂಹರಣ ಹರಿ ತೋಪಲೋಪಮ ಕಂಠ ಚಾಪಪಾಣೀ ಶ್ರೀ ಪತಿಯ ಶ್ರೀನಾಭಿ ಕೂಪಸಂಭವತನಯ ನೀ ಪಾಲಿಸೆಮ್ಮನು ವಿರೂಪಾಕ್ಷ ಗುರುವೆ 2 ಭಸಿತ ಭೂಷಿತಡಮರು ತಿಸುಳಗೈಯನೆ ಶಂಭೋ ಕಿಸಲಯೋಪಮ ನವಿರ ಶಶಿಭೂಷಣ ಅಸುರಾರಿ ಶ್ರೀ ಜಗನ್ನಾಥ ವಿಠಲನ ಪದ ಬಿಸಜ ಧ್ಯಾನವನೀಯೊ ಹಸನಾಗಿ ಕಾಯೊ 3
--------------
ಜಗನ್ನಾಥದಾಸರು