ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸಯ್ಯ ಕಸ್ತೂರಿರಂಗ ಕರುಣಿಸಯ್ಯ ಪ ದುಷ್ಟಸಂಸಾರ ಬಹುಕಷ್ಟವಯ್ಯ ಇದ ರಟ್ಟೊಳಿಗಳ ತಾಳಲಾರೆನಯ್ಯ ಆರೆನಿದರ ಕೋಟಿಲೆಗಳಾರೆನಯ್ಯ ಪಾದ ಸೇರಿಸೈಯ್ಯ 1 ಕಾಮಕ್ರೋಧ ಲೋಭಮೋಹ ಬಿಡಿಸಯ್ಯ ಮದಮಾತ್ಸರ್ಯವೆಂಬ ಕಾಟ ನೀನೊತ್ತಿಸಯ್ಯ ಪಾದ ಹೊಂದಿಸಯ್ಯ ಸರ್ವಬಂಧು [ನೀ] ಎನ್ನ ಜಿಹ್ವೆಯಲಿ ನೆಲೆಸಯ್ಯ 2 ಆಶ ಪಾಶಕ್ಲೇಶವೆಲ್ಲ ನಾಶ ಮಾಡಿಸಯ್ಯ ಶ್ರೀಶ ನಿನ್ನ ದಾಸರಲ್ಲಿ ಸೇರಿಸಯ್ಯ ವಾಸುಕಿಶಯನ ಭವದಿ ನೊಂದೆನಯ್ಯ ಸ ರ್ವೇಶಬಂಧು ಎನ್ನನುದ್ಧರಿಸಯ್ಯ 3 ಪುತ್ರಮಿತ್ರಬಂಧುವರ್ಗದಿ ಬಿದ್ದಿಹೆನಯ್ಯ ಅ ನಿತ್ಯಮೋಹದಲ್ಲಿ ಮುಳುಗಿ ಪೋದೆನಯ್ಯ ವ್ಯರ್ಥನಾಗಿ ಕಾಲವನ್ನು ಕಳೆದೆನಯ್ಯ ಎನ್ನ ಮರಣ ಕಾಲದಿ ನಿಮ್ಮ ಸ್ಮರಣೆ ಕರುಣಿಸಯ್ಯ 4 ಜನನ ಮರಣವೆಂಬೊ ಜಾಡ್ಯ ಕ್ರೂರವಯ್ಯ ಇದರ ವಿಧವನರಿತು ವೈದ್ಯ ಮಾಳ್ವರ ಕಾಣೆನಯ್ಯ ಬ್ರಹ್ಮಾದಿ ದೇವತೆಗಳೂ ಅರಿಯರಯ್ಯ ಧನ್ವಂತ್ರಿರೂಪ ಶ್ರೀನಿವಾಸ ರಕ್ಷಿಸಯ್ಯ 5 ದೇಹವೆಲ್ಲ ಗಳಿತವಾಗಿ ಪೋಯಿತಯ್ಯ ಇಂದ್ರೀಯ ಸ್ವಾಧೀನದಲ್ಲಿ ನಿಲ್ಲದಯ್ಯ ವಿಷಯದಲ್ಲಿ ಮನಸು ಬಹಳ ಹರಿವುದಯ್ಯ ಲಕ್ಷ್ಮೀಪತಿಯೆ ನಿಮ್ಮ ಭಕ್ತಿಯಿತ್ತು ಸಲಹಯ್ಯ 6 ದೀನನಾಗಿ ನಿನ್ನ ಚರಣ ಸೇರಿದೆನಯ್ಯ ಜ್ಞಾನವೈರಾಗ್ಯವಿತ್ತು ಪಾಲಿಸೆನ್ನಯ್ಯ ಮರಳಿ ಜನ್ಮ ಬಾರದಂತೆ ಮಾಡಬೇಕಯ್ಯಾ ಗರುಡಗ ಮನ ವೆಂಕಟರಮಣ ಭವಸಂಕಟ ಬಿಡಿಸಯ್ಯ 7
--------------
ಯದುಗಿರಿಯಮ್ಮ
ಶ್ರೀಮೋದವಿಠಲದಾಸರ ಸ್ತೋತ್ರ ಮೋದವಿಠಲದಾಸರಾಯ ನಿನ್ನ ಪಾದವನಂಬಿದೆ ಪಾಲಿಪುದಯ್ಯ ಪ ಭೇದಮತಾಬ್ಧಿ ಪಾಠಿನ ಆದು - ರ್ವಾದಿಮಾಯಿಗಳಿಗೆ ಗಂಟಲಗಾಣ ಸಾಧುಜನರ ಪಂಚಪ್ರಾಣನೆನಿಪ ಮೇದಿನಿಯೊಳು ಹರಿಭಕ್ತ ಪ್ರವೀಣ 1 ಗುರುಪ್ರಾಣೇಶದಾಸರಲಿ ಜ್ಞಾನ ವರ ಉಪದೇಶವ ಕೊಂಡು ಭಕ್ತಿಯಲಿ ವರದೇಂದ್ರಾರ್ಯರ ಸನ್ನಿಧಿಯಲಿ ಸತತ ಹರಿಭಜನೆಯ ಮಾಳ್ಪ ನಲಿನಲಿಯುತಲಿ 2 ಸ್ನಾನಸಂಧ್ಯಾದ್ಯನುಷ್ಠಾನವನು ಙÁ್ಞನಪೂರ್ವಕದಿ ಚರಿಸುವ ನಿಧಾನ ಹೀನಜನಗಳಲ್ಲಿ ಮೌನ ನಿರುತ ಶ್ರೀನಿವಾಸನ ಮನದಲಿ ಮಾಳ್ಪ ಧ್ಯಾನ 3 ಬಾಲ್ಯತನದಿ ನಿಮ್ಮಾಜ್ಞ್ಞವನು ಮೀರಿ ಕಾಲಕಳೆದೆ ದುರ್ವಿಷಯದಿ ನಾನು ಶ್ರೀಲೋಲನಂಘ್ರಿ ಮರೆದೆನು ಮುಂದೆ ಪಾಲಿಸೆನ್ನಯ ಮೊರೆ ಶರಣು ಬಂದಿಹೆನು 4 ಶ್ರೀ ಮರುನ್ಮತಙÁ್ಞನವನು ನಮ್ಮ ಸ್ವಾಮಿ ವರದÉೀಶವಿಠಲನ ದಾಸ್ಯವನು ಆ ಮುನಿವರನ ಸೇವೆಯನು ಕೊಟ್ಟು ನೀ ಮುದದಲಿ ಕರುಣಿಸು ಸುರಧೇನು5
--------------
ವರದೇಶವಿಠಲ