ಒಟ್ಟು 9 ಕಡೆಗಳಲ್ಲಿ , 3 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆದದ್ದ ಮರೆತು ಶ್ರೀ ರಂಗನ ಭಜಿಸಿರಿ ಮೋದದಿ ಹರಿಯ ಸೇವೆಯ ಮಾಡಿರಿ ಪ ಮುಕುಟವೆ ವಂದಿಸು ಮತ್ಸ್ಯಾವತಾರನ ಮುಖವೆ ನೀ ಕೀರ್ತಿಸು ಮುದ್ದು ಕೂರ್ಮನ ಸೂಕರ ರೂಪನ ನಖವೆ ನೀನಪ್ಪಿಕೊ ನರಸಿಂಹತನ 1 ವಕ್ಷವೆ ಹೊರು ನೀನು ಗಿಡ್ಡ ವಾಮನನನ್ನು ಪಕ್ಷವೇ ಪಿಡಿದಾಡು ಭಾರ್ಗವನನ್ನು ಕಕ್ಷವೆ ಯೆತ್ತು ಶ್ರೀ ರಾಮಚಂದ್ರನನ್ನು ಕುಕ್ಷಿಯೆ ಬೇಡು ಶ್ರೀ ಕೃಷ್ಣಾಮೃತವ 2 ಹರುಷದಿ ತೊಡೆಯೆ ನೀ ಬುಧನ ಕೂಡ್ರಿಸಿಕೊಳ್ಳು ಚರಣವೆ ಕಲ್ಕ್ಯಾನ ಮನೆಗೆ ನೀ ಪೋಗು ನಿತ್ಯ ದಶನಾಮ ಸ್ಮರಿಸಿರಿ ಸರಿಚನ್ನಕೇಶವ ನೊಲಿದು ಪಾಲಿಸುವಾ 3
--------------
ಕರ್ಕಿ ಕೇಶವದಾಸ
ಕೇಳೆಲೋ ಪ್ರಾಣಿ ನಂಬಿ ಪೂಜಿಸು ಹರಿಯ ಪಾದಾ | ಪಾಲಿಸುವಾ ಗರದು ಅನುಭವ ಬೋಧಾ ಪ ಗುರುವಿನಾ ಬಲಗೊಂಡು ಬಲಿಯೋ ಸ್ವಸುಖ ಪಡಕೋ | ಹರಿಯದೇ ನಾನಾ ಮಾರ್ಗವ ಕಂಡು 1 ಕಂಡ ದೈವಕ ಹಲ್ಲಾ ದೆರೆದು ಬಾಗುವದಲ್ಲಾ | ಮಂಡೆ ದಡವಲ್ಲದೇ ಮತ್ತೇನಿಲ್ಲಾ 2 ಇರಲು ಮನಿಲಿ ಧರಿಲುಳ್ಳಾ ಬಯಸಿದವಟಗಳೆಲ್ಲಾ | ತಿರುಕವ ಬೇಡಿ ಉಂಬುದು ಸಲ್ಲಾ 3 ನೀರಡಿಸಿ ಬರಿಗೈಯ್ಯಾ ನೆಕ್ಕಿದರೇನು ಶ್ರಯಾ | ಗುರುವಿನ ಕೇಳು ಸ್ವಹಿತೋಪಾಯ 4 ಹತ್ತು ಕಟ್ಟುವಕಿಂತ ಮುತ್ತು ಕಟ್ಟಬೇಕೆಂದೇ | ಅರ್ತರೊಲುವನು ಮಹಿಪತಿಸುತಂದೇ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಧುಮ್ಮಸಾಲೆನ್ನಿರೈಯ್ಯಾ | ಒಮ್ಮೆ ಸಾಧು ಜನರು | ಬೊಮ್ಮನ ಪದವಪಡದ | ನಮ್ಮ ಮುಖ್ಯ ಪ್ರಾಣನ ಪ ನಷ್ಟರಾವಣನ ಬಾಲಕ್ಕಿಟ್ಟ ಬೆಂಕಿಯಿಂದ ಲಂಕಾ | ಪಟ್ಟಣವ ಸುಟ್ಟು ಬೊಬ್ಬೆ ನಿಟ್ಟ ಹನುಮಪ್ಪನಾ 1 ಪಾಪಕರ್ಮಕೀಚಕಾದಿ | ಕಾಪುರುಷ ಕೌರವರಾ | ಕೋಪಾಗ್ನಿಯಲಿ ಸುಟ್ಟ | ಭೂಪ ಭೀಮನಾ 2 ಉದ್ಧಟ ದುರ್ವಾದಿಗಳಾ | ಸಿದ್ಧಾಂತವೆಂಬ ವಹ್ನಿಯಲ್ಲಿ | ಬುದ್ಧಿಯಿಂದ ಉರಹಿದಾಪ್ರ | ಸಿದ್ಧಮಧ್ವರಾಯನಾ 3 ಮೂಲ ಗುರುವಾಗಿ ಜಗ | ಪಾಲಿಸುವಾ ಮಹಿಪತಿ | ಸಿರಿ | ಲೋಲನಿಜ ದಾಸನಾ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಿನ್ನವೆನ್ನೆಣೆಸದಿರು ಎಲೆ ಮಾನವಾ ಚನ್ನಕೇಶವ ಸ್ವಾಮಿ ಒಲಿದು ಪಾಲಿಸುವಾ ಪ ವಸುಧೆಯಲಿ ಚಲಿಸುತಿಂತ ಸಕಲ ಜಂತುಗಳೆಲ್ಲ ಹಸನಾಗಿ ತಿಳಿಯದೆ ನಿನ್ನಾತ್ಮವೆಂದು ತೃಷೆ ಕ್ಲೇಶಗಳು ಮುರಿದೊಗೆವ ಜೀವವನು ಕಸಕಸರಿ ಮಾಡದಿರು ಪರರಾತ್ಮವೆಂದು 1 ಅವರಿವರು ಬಂಧುಗಳು ಅಪ್ತೇಷ್ಟ ಸಹೃದರು ಇವರವರು ದೂಷಕರು ಪರಜಾತಿಯೆಂದು ಸವಿಸುತಲಿ ಮನಸನ್ನು ಪರಪಂಚವೆನಿಸುತ್ತ ಭವವನ್ನೆ ಸೆಲೆ ನಂಬಿ ಪರರಾತ್ಮವೆಂದು 2 ದಾಸದಾಸರಿಗೆಲ್ಲ ವಂದನೆಯ ಮಾಡುತ್ತ ದಾಸರೆಲ್ಲರು ಜಗದಿ ಏಕಾತ್ಮರೆಂಬ ವಾತನೆಯ ನಂಬದಲೆ ಬಿನ್ನಾತ್ಮರೆಂದೆಣಿಸಿ ವಾಸುಕೀಶಯನನೂ ಭಿನ್ನಾತ್ಮನೆಂದು 3
--------------
ಕರ್ಕಿ ಕೇಶವದಾಸ
ರಾಮನ ನಾಮವ ಪ್ರೇಮದಿ ಭಜಿಸಲು ರಾಮನು ವಲಿಯುವಾ ಬಿಡದೆ ಪಾಲಿಸುವಾ ಪ ಕಾಮಿತ ವರಗಳ ನೀಯುತ ಭಜಕರ ಸ್ವಾಮಿಯು ವಲಿದೆಮ್ಮ ನಿರುತ ಪಾಲಿಸುವಾ ಅ.ಪ. ತರಳರ ಮಾತಿಗೆ ಸೈಯೆಂದು ನುಡಿಯುತ್ತ ಪರಮ ಸಾಮ್ರಾಜ್ಯದ ಪದವಿಯ ಕೊಡುತ್ತಾ ಸರಳರ ಹೃದಯವ ನೀಕ್ಷಿಸಿ ಜವದೊಳು ಕರೆದು ಸಾಯುಜ್ಯದ ಪದವಿಯ ಕೊಡುವಾ 1 ದುರುಳರ ಸುಖಗಳಿಗಂತಕನಾಗುತ ಶರಣರ ಪಿಡಿದು ಶಿಷ್ಟರನು ಕಾಯುತ್ತ ಭರದಿಂದ ಸುಜನರ ಕಷ್ಟವ ತರಿವಾ 2 ಕೌಸಲೆ ಗರ್ಭದಿ ಬಂದ ಶ್ರೀಹರಿ ತಾನು ವಾಸುಕಿ ಭಾರವ ನಿಳುಹಲಿಕ್ಕೆ ವಾಸ ಮಾಡುವನೀಗ ವರ ದೂರ್ವಾಪುರದಲ್ಲಿ ದಾಸನ ಸಲಹುವ ಕೇಶವನೆಂಬ 3
--------------
ಕರ್ಕಿ ಕೇಶವದಾಸ
ಶ್ರೀ ಸತ್ಯಧೀರರು ಚಾರು ಚರಣಗಳಿಗೆರಗುವೆನು ಪ ವರಮತಿಗುಣಗನ ಮಣಿಯೆ ಅ.ಪ. ಯತಿ ಆಶ್ರಮದಿ ಸೀತಾ ಪತಿಯ ಪೂಜಿಸುತಿರೆ ಮತಿಹೀನರಪಹಾಸ್ಯ ಮಾಡಿದರೆ ಪರಿಯಂತ ಹರಿಸೇವೆಯಾ ಅತಿ ಭಕುತಿಯಿಂದಲಿ ಮಾಡಿದ್ಯೋ ಜೀಯಾ ಹಿತದಿಂದ ಕೈಗೊಂಡ ದಶರಥನಂದ ರಘುರಾಯ ಯತಿವರನೆ ನಿನ್ನಯ ಕ್ಷಿತಿಯೊಳಗೆ ಹರಿ ಪ್ರತಿ ದಿಗಂತ ಪರಿಹರಿಸಿದ ವರಕೀರ್ತಿ ಆಶ್ರಯದಿಂದ ಬಂದೆ 1 ವರಮಧ್ವಮತಾಭಿಮಾನಿಯೆ ನಿನ್ನಯ ದರುಶನದಿಂದ ಪಾವನನಾದೆನೋ ದೊರಕಾದೊ ಯಂದಿಗೆಲ್ಲರಿಗೆ ಈ ಗುರುಗಳ ವರಸೇವಾ ಸರ್ವಜ್ಞ ಪೀಠಕೆ ಸರಸ ಶೋಭಿಸುವಾ ಹರಿವಾಯುಗಳಲಿ ನಿಶ್ಚಯದ ಭಕುತಿಯನು ಪಾಲಿಸುವಾ ನಿರುತದಲಿ ಕಾವಾ ಪರಮಭಕ್ತರ ಭಾಗ್ಯನಿಧಿಯಂದರಿದು ಹಂಬಲಿಸುತಲಿ ನಿನ್ನಯ ಚರಣಕೆರಗಿದೆ ತ್ವರದಿ ಕರುಣಿಸಿ ಪೊರೆಯೊ ಶರಣರ ಸಂಜೀವಾ 2 ಆನಂದಜ್ಞಾನದಾಯಕನಾಜ್ಞೆಯಿಂ ಸತ್ಯಜ್ಞಾನಾ- ನಂದಗಿತ್ತಿ ಉತ್ತಮಪದವಾ ಗಾನಲೋಲನ ಜಗತ್ಪಾಲನ ಪ್ರಿಯನೇ ತವ ಸೇವಾ ತನುವನೊಪ್ಪಿಸಿ ಇಡುವೆ ನಿನ್ನಡಿಗಳ ಮೇಲೆ ಶಿರವಾ ಸೇವಕನೋ ಅನುಚಿತೋಚಿತಕರ್ಮ ಕೃಷ್ಣಾರ್ಪಣವೆನುವ ಸುಮನವ ಕೊಡು ನೀ 3
--------------
ಹನುಮೇಶವಿಠಲ
ಸಖಿ ಕೇಳೇ ಇನ್ನು ಹರುಷದ ಮಾತಾ| ಸಕಲ ಜನರಿಗೆ ಆನಂದ ವೀವಾ| ಪ ಇಂತೆಂದು ಹರಿಯು ನಾನಾಪರಿ ವಿರಹದ| ಸಂತಾಪ ಮಾತವ ನುಡಿಯಲು ಕೇಳಿ| ಅಂತರಂಗದ ಕೋಪವಬಿಟ್ಟು ಎದ್ದು|ಅ| ನಂತನ ಬಿಗಿದಪ್ಪಿದಳು ಅಂಬುಜಾಕ್ಷಿ 1 ಲಲಿತಾಂಗಿ ಆಲಿಂಗನವ ನೀಯೇ ಹರಿಗಾಗಾ| ಒಲಿದು ಉಕ್ಕೇರಿತು ಆನಂದ ಉದಧಿ| ಸತಿ ಮಾತಾಡುವ ದೇವ ಶ್ರೀ| ಲಲನೇಯಾ ಸದ್ಬುವನೆಯಾ ಪೂರಿಸಿದನು 2 ಈ ಪರಿಯಾಡಿದ ಶ್ರೀ ಹರಿ ಚರಿತೆಯಾ| ನಾ ಪೇಳಿದುದು ಭಾವ ಭಕುತಿಯಲಿಂದಾ| ಆ ಪದಿಂದಲಿ ಕೊಂಡಾಡುವ ಮನುಜನ| ತಾ ಪಾಲಿಸುವಾ ಮಹಿಪತಿ ಸುತ ಪ್ರೀಯಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹಣ್ಣ ಸವಿಯ ಬಾರದೇ ಪ ಹಣ್ಣನ್ನು ತಿಂದರೆ ಕೇಶವನೊಲಿಯುವಾ ಚನ್ನಕೇಶವ ಸ್ವಾಮಿ ಬಿಡದೆ ಪಾಲಿಸುವಾ ಅ.ಪ. ಪ್ರೀತಿಯೆನ್ನುವಂಥ ಬೀಜವನ್ನೇ ಬಿತ್ತಿ ಭೂತ ದಯೆಯೆಂಬುವ ವೃಕ್ಷವ ಬೆಳೆಸೀ ಆತುರದಲ್ಲಿ ಪರೋಪಕಾರವೆಂಬ ನೀತಿಯ ನೀರನ್ನು ನೇಮದೊಳೆರೆದೂ 1 ಅನುದಿನ ದಾನಧರ್ಮಗಳ ಟೊಂಗೆಗಳೇರಿ ತನುಮನ ಧನದಿಂದ ದೈನ್ಯರ ಸಲಹಿ ಘನತರ ಸ್ವಾರ್ಥ ತ್ಯಾಗವುಯೆಂಬ ಪರ್ಣವ ನೆನೆದು ಕೃತಜ್ಞತೆ ಕುಸುಮವ ಪಡೆದೂ 2 ವರತರ ದೇವಾಂಶ ಗುಣದಿಂದ ಬೆಳೆದಿರ್ಪ ಹರಿಭಕ್ತಿಯೆನ್ನುವ ಫಲವನ್ನೇ ಕೊಯ್ದು ಸರಸದಿ ಕೀರ್ತನೆ ಭಜನೆ ಸೂತ್ರಗಳಿಂದ ಪರಮ ಭಕ್ತೀಯೆಂಬ ಹಣ್ಣನು ತಿಂದೂ 3 ಧರೆಯಲ್ಲಿ ಸಿಗುವಂಥ ಹಣ್ಣನು ಸವಿದರೆ ನಿರುತ ತೃಪ್ತಿಯು ಆಗಲಾರದು ದೇವಾ ಅಮೃತ ಹರುಷದಿ ತಿನ್ನಲು ಘನಮುಕ್ತಿ ದಿಟವು 4
--------------
ಕರ್ಕಿ ಕೇಶವದಾಸ