ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದಿಗೆ ದೊರಕುವನು ಶ್ರೀಗುರುವನ ಗೆಂದಗೆ ದೊರಕುವನು ಪ ಮಂದಮತಿಯ ಕಡೆಗ್ಹೊಂದಿಸಿ ಸಚ್ಚಿದಾ ನಂದ ಬ್ರಹ್ಮನ ಕೃಪೆಯಿಂದ ಪಾಲಿಸಿದಾತಾ ಅ.ಪ. ಕರುಣದಿ ಕರದು ತನ್ನಾ ತೊಡೆಯ ಮೇಲ್ಕು ಳ್ಳಿರಿಸಿ ಶರಧಿಯೊಳೀಡಾಡಿ ಈಶ್ವರನ ತೋರಿದ ಗುರು ಎಂದಿಗೆ 1 ತನ್ನ ತಾ ತಿಳಿವವೊಲು ತತ್ವನಸಾರ ವನ್ನು ಸಾಧುಗಳಿಂದಲಿ ಚೆನ್ನಾಗಿ ಅರಿತುಕೊಳ್ಳೆಂದು ಅಮೃತಪಾನವನ್ನು ಮಾಡಿಸಿದ ಪ್ರಸನ್ನವದನ ಗುರು ಎಂದಿಗೆ 2 ಹುಟ್ಟಿಸಾಯದಂದದಿ ವಾಕ್ಯದ ಮದ್ದು ಕೊಟ್ಟು ಜೀವನ್ಮುಕ್ತಿಯ ಪಟ್ಟವ ಗಟ್ಟಿ ಫಣಿಗೆ ಮಂಗಲಾಕ್ಷತೆ ಇಟ್ಟ ವಿಮಲಾನಂದ ಬಟ್ಟೆದೋರಿದ ಗುರು 3
--------------
ಭಟಕಳ ಅಪ್ಪಯ್ಯ
ಧನ್ಯ ಧನ್ಯ ಧನ್ಯ ಧನ್ಯ ಗುರುವರಾ ಧನ್ಯ ತಂದೆ ಮುದ್ದುಮೋಹನ್ನ ಗುರುವರಾ ಪ. ಮಾನ್ಯ ವಿಭುದ ಮಾನ್ಯ ಜಗದ್ಮಾನ್ಯ ಗುರುವರಾ ಅ.ಪ. ಪುಟ್ಟಿದಂದಿನಿಂದಿನ್ವರೆಗೆ ತೊಟ್ಟು ದಾಸತ್ವ ದೀಕ್ಷೆ ಕರ್ಮ ಜಪತಪಂಗಳಾ ಕರ್ಮ ಮಾಡಿ ಮುಗಿಸಿ ಶ್ರೇಷ್ಠ ಜ್ಞಾನ ಕವಚ ತೊಟ್ಟು ದಿಟ್ಟತನದಿ ಮೆರೆದ ಗುರುವು ಮುಟ್ಟಿದರೀಗ ಹರಿಯ ಪುರವ 1 ಭಕ್ತಿ ಭೂಷಣ ತೊಟ್ಟು ವಿರಕ್ತಿ ಖಡ್ಗ ವರೆಯಲ್ಲಿಟ್ಟು ಮುಕ್ತಿ ಮಾರ್ಗಕೆಲ್ಲ ದೀಕ್ಷೆ ಇತ್ತು ಸುಜನಕೆ ವ್ಯಕ್ತಾವ್ಯಕ್ತ ಮಹಿಮೆಯಿಂದ ವ್ಯಕ್ತಿತ್ವವನು ತೋರಿಕೊಳದೆ ಉಕ್ತಿಗೊಶರಮಾಡಿಕೊಂಡ ಶಕ್ತಿ ಪೇಳಲಳವೆ ಎನಗೆ 2 ಕರ್ಮ ಕುರುಹನರುಹಿ ನಮ್ಮ ಮಧ್ವಮತಕೆ ದಿವ್ಯ ಸಮ್ಮತವಾಗಿ ವಮ್ಮನದ ಸುಜ್ಞಾನ ಬೆಳಕು ತಮ್ಮ ನಂಬಿದರಿಗೆ ತೋರಿ ಬÉೂಮ್ಮನೈಯ್ಯನ ಪುರಕೆ ಸಾರ್ದ ನಮ್ಮ ಗುರುವರಾ 3 ದಾಸಕೂಟ ಸಭಾಸ್ಥಳದಿ ದಾಸ ಪ್ರಾಣರಾಯನ ನಿಲಿಸಿ ದಾಸಜನಕೆ ಮುಕ್ತಿ ಸ್ಥಾನ ಕರಿಗಿರಿ ಎನಿಸಿ ವ್ಯಾಸತೀರ್ಥರಿಂದ ಬಂದ ದಾಸಕೂಟ ನಿಜವೆಂದೆನಿಸಿ ದಾಸಜನರ ಮೆರಸಿ ನೃಹರಿ ದಾಸಕೂಟ ಸಭಾಸ್ಥಾಪಕ 4 ವ್ಯಾಳಶಯನನಾದ ಗೋಪಾಲಕೃಷ್ಣವಿಠ್ಠಲನ್ನ ಲೀಲೆಯಿಂದ ಯನ್ನ ಹೃದಯದಲ್ಲಿ ನಿಲ್ಲಿಸೀ ಕಾಲ ಕಾಲಕ್ಕೆ ಇತ್ತು ಪಾಲಿಸಿದಾ ಪರಮ ಪ್ರಿಯ ಕೃಪಾಳೂ ಗುರುವರಾ 5
--------------
ಅಂಬಾಬಾಯಿ
ರಾಮ ನಾಮಕೆ ಸಮ ನಾಮವುಂಟೆ ಜಗದೀ ಪಾಮರರಘನಾಶಕೆ ಪ ಕಾಮಾರಿಯು ತನ್ನ ಭಾಮೆಗೆ ಬೋಧಿಸಿದೀ ನಾಮಕೆ ಸಮವುಂಟೇ ಅ.ಪ ಕೋಸಲಪತಿಯೆನಿಸೀ ಅಸುರೆಯ ಸಂಹರಿಸೀ ದುರುಳರಪಹರಿಸೀ ಮುನಿ ಸತಿಯನುದ್ಧರಿಸಿದ 1 ಸತಿಯನುಜರ್ವೆರೆಸೀ ದಿತಿಜರ ಕುಲವಳಿಸೀ ಸತಿಯಳ ನೆಲೆಯರಸೀ ದಿತಿಜಾಂತಕನೆನಿಸಿದ 2 ಶರಣನ ಪತಿಕರಿಸೀ ನರನಾಟಕ ನಡೆಸೀ ಕರುಣಾನಿಧಿಯೆನಿಸೀ ದೇವರದೇವ ರಘುರಾಮವಿಠಲನೆನಿಸೀ ಜನವನು ಪಾಲಿಸಿದಾ 3
--------------
ರಘುರಾಮವಿಠಲದಾಸರು
ಸ್ವಾಮಿ ರಕ್ಷಿಸೊ ಬಂದು ನೀನೆ ಎನ್ನಯ್ಯ ಪ ಸೋಮಶೇಖರ ಪ್ರಿಯ ಸಲಹೆನ್ನ ದೊರೆಯೆ ಅ.ಪ ಜಲ್ಮ ಜಲ್ಮದ ದೋಷವೆಲ್ಲ ಬಂಧಿಸುತೆನ್ನ | \ ಪರಿ ತಲ್ಲಣಿಸುವೆÀ ನಿನಗಿನ್ನು ಕರುಣವಿಲ್ಲ 1 ದೀನರಕ್ಷಕ ತ್ರಾಹಿ ತ್ರಾಹಿ ಮಣಿವೆನು 2 ನಿರ್ಮಲಗೊಳಿಸೆನ್ನ ಮನವ ನೀನಿಂದೆ 3 ಇವರಿಗಿಷ್ಟಾರ್ಥವನಿತ್ತು ಪಾಲಿಸಿದಾತ4 ಭವ ರ್ಭೀತ ಶ್ರೀನಿವಾಸ ಪಾಲಿಸೊ ಮುಕುತಿ5
--------------
ಸದಾನಂದರು
ಚಂದ್ರಚೂಡ ಶಿವಶಂಕರ ಪಾರ್ವತಿ ರಮಣಾನಿನಗೆ ನಮೋ ನಮೋ ಪಸುಂದರ ಮೃಗಧರ ಪಿನಾಕಧರ ಹರ |ಗಂಗಾಧರಗಜಚರ್ಮಾಂಬರಧರಅ.ಪನಂದಿವಾಹನಾನಂದದಿಂದ ಮೂಜಗದಿ ಮೆರೆವನು ನೀನೆ |ಕಂದರ್ಪನ ಕ್ರೋಧದಿಂದ ಕಣ್ದೆರೆದು ಕೊಂದ ಉಗ್ರನು ನೀನೆ ||ಅಂದು ಅಮೃತ ಘಟದಿಂದುದಿಸಿದ ವಿಷತಂದುಭುಂಜಿಸಿದವನು ನೀನೆ |ಬಂದು ಚೆಂದದಿ ಇಂದಿರೇಶ ಶ್ರೀ ರಾಮನ ಪೊಂದಿಪೊಗಳುವವ ನೀನೆ 1ಬಾಲಮೃಕಂಡನ ಕಾಲನು ಎಳೆವಾಗಪಾಲಿಸಿದಾತನು ನೀನೆ |ನೀಲಕಂಠ ಕಾಲಕೂಟ ವಿಷವ ಮೆದ್ದಶೂಲಪಾಣಿಯು ನೀನೆ |ವಾಲಾಯದಿ ಕಪಾಲವ ಪಿಡಿದುಭಿಕ್ಷೆಕೇಳುವ ದಿಗಂಬರ ನೀನೆ |ಜಾಲಮಾಡುವ ಗೋಪಾಲನೆಂಬಪೆಣ್ಣಿಗೆ ಮರುಳಾದವ ನೀನೆ 2ಧರೆಗೆ ದಕ್ಷಿಣ ಕಾವೇರಿ ತೀರ ಕುಂಭಪುರನಿವಾಸನು ನೀನೆ |ಕರದಲಿ ವೀಣೆಯ ನುಡಿಸುವ ನಮ್ಮಉರಗಭೂಷಣನು ನೀನೆ ||ಕೊರಳಲಿ ಭಸ್ಮ ರುದ್ರಾಕ್ಷಿಯ ಧರಿಸಿದಪರಮವೈಷ್ಣವನು ನೀನೆ |ಗರುಡಗಮನಶ್ರೀಪುರಂದರವಿಠಲನ ಪ್ರಾಣ ಪ್ರಿಯನುನೀನೆ3
--------------
ಪುರಂದರದಾಸರು
ವರುಣಗೂ ನಾರಾಯಣಗು ನೆಂಟತನ ಮಾಡುವದಕೆ |ಸರಿಯೆ ಸಂದೇಹವೇನು ಸಮ್ಮೀಸಿ ನೋಡಿರಿ ಪಹೆಂಡಾರು ಬಹು ಮಂದಿ ಜಾರಾ ಪುತ್ರನು ಒಬ್ಬ |ಪಂಡೀತ ಮಗನೊಬ್ಬ ಸಮನೆಲ್ಲಿ ನೋಡಿ1ವಂಶಾ ವಂದೆ ಇಬ್ಬರದು ಛಲದಿಂದ ಕೊಲ್ಲುವಂಥಾ |ಕೂಸು ಪಾಲಿಸಿದಾರು ಸಮನೆಲ್ಲಿ ನೋಡಿ 2ಸ್ಥೂಲಾ ವಿಗ್ರಹದವರು ಜಡ ಚೇತನಗಳಿಗೆ |ಆಲಯವಾಗಿಹರು ಸಮನೆಲ್ಲಿ ನೋಡಿ 3ಕನಕಾ ಭೂಮಿ ವಜ್ರದಾಹಾರ ಒಬ್ಬಾಗೊಬ್ಬಾಗೆ |ವನಮಾಲಿವೈಜಯಂತಿಸಮನೆಲ್ಲಿ ನೋಡಿ 4ತುಳಿಸೀಕೊಂಡೂ ಕೋಪಿಸದೆಲೆವೇ ಹಿಗ್ಗಿದಾರು |ಕಲುಷಾ ವಿದೂರರೂಪಸಮನೆಲ್ಲಿ ನೋಡಿ 5ದ್ವಾರಕ ಪಟ್ಟಣವ ಪ್ರೀತಿಂದ ಪಾಲೀಸೀ |ಹಾರಾವ ಮಾಡಿದಾರು ಸಮನೆಲ್ಲಿ ನೋಡಿ 6ವೃದ್ಧಿ ಹ್ರಾಸಗಳಿಲ್ಲಾ ಅನ್ನಾದಾಪೇಕ್ಷವಿಲ್ಲ |ನಿದ್ರಾ ಶೂನ್ಯರಾಗಿಹರು ಸಮನೆಲ್ಲಿ ನೋಡಿ 7ಸರಸೀಜಾರೂಪಉಳ್ಳವರು ಪೂರ್ತಿ ಮಾಡಿದಾರು |ಸುರರಾ ಮನೋಭೀಷ್ಟಿಯಾ ಸಮನೆಲ್ಲಿ ನೋಡಿ 8ವಿಧಿಯಿಂದ ಜನಿಸಿದಾರು ಜನರೀಗಸಹ್ಯವಾಗಿ |ಒದರುವರು ಇದರಿಂದ ಸಮನೆಲ್ಲಿ ನೋಡಿ 9ನೂತನ ಯಜೊÕೀಪವೀತಾವ ಧರಿಸುವರು ಪ್ರ- |ಖ್ಯಾತಿ ವಸ್ತು ಕೊಟ್ಟಾರು ಸಮನೆಲ್ಲಿ ನೋಡಿ 10ದಾರಿ ತೋರಿದಾರು ವಾನರಾಗಳಿಗೆ ಗುಂಜಿ |ಹಾರಾಯೀಸೂವರಿದು ಸಮನೆಲ್ಲಿ ನೋಡಿ11ವಾಸಾವಿವರ್ಜಿತಾರು ದ್ವೇಷಿಗಳ ಶರೀರ |ನಾಶಾಗೈಸಿದರಿದು ಸಮವೆಲ್ಲಿ ನೋಡಿ12ಶೋಧಿಸೀ ನೋಡಿದಾರೆ ಕರ್ದಾಮ ಜಾಲಯಳ |ಭ್ಯೋದಯಕ್ಕೆ ಕಾರಣರು ಸಮವೆಲ್ಲಿ ನೋಡಿ13ಧರಿಗಾನಂದಾವಿತ್ತಾರಾಲಂಕಾರವಾಗಿ ಖಳರಾ |ತರಿದು ಭಾರವ ಕಳದು ಸಮವೆಲ್ಲಿ ನೋಡಿ 14ಶ್ರೀನಿವಾಸಾಗೆ ಮಾವನೀತಾ ನೀತಾಗು ಹಾಗೆ |ಪ್ರಾಣೇಶ ವಿಠ್ಠಲನು ಸಮವೆಲ್ಲಿ ನೋಡಿ 15
--------------
ಪ್ರಾಣೇಶದಾಸರು