ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂತುಪಿತನೆ ನಿನ್ನ ಎಂತು ವರ್ಣಿಪೆ ಲಕ್ಷ್ಮೀ -ಕಾಂತ ಪಾಲಿಸೆನ್ನನು ನಿರಂತರದಲಿ ಪ ಕುಂತಿಪುತ್ರಗೆ ನೀನತ್ಯಂತ ಸಾರಥಿತ್ವವ ಮಾಡಿನಿಂತು ದುರ್ಯೋಧನನ ಶಿರವ ಅಂತಕನಿಗೊಪ್ಪಸಿದ ಧೀರ ಅ.ಪ ಸುಂದರವದನ ನಿನ್ನ ಕಂದ ಭಜಿಸಲು ಮುದದಿಂದ ಕಂಬದೊಳ್ಬಂದೆ ಮಂದರೋದ್ಧರಸಿಂಧುಶಾಯಿ ರಕ್ಕಸನ ಕೊಂದು ಕರುಳ ಮಾಲೆಯನ್ನುಚೆಂದದಿಂ ಕಂಧರದೊಳ್ಧರಿಸಿದಾನಂದಮೂರ್ತಿ ಇಂದಿರೇಶ1 ಕದಂಬ ಪೂಜಿತಾಂಘ್ರಿಯುಗಳನಂಬಿದ ಭಕ್ತರ ಕಾಯ್ವ ಅಂಬುಜನೇತ್ರಅಂಬರೀಷ ದ್ವಾದಶಿ ವ್ರತವ ಸಂಭ್ರಮದಿ ಮಾಡುತಿರೆಡೊಂಬಿಯಿಂ ದೂರ್ವಾಸ ಶಪಿಸೆ ಬೆಂಬಿಡದೆ ಚಕ್ರದಿ ಸಲಹಿದ2 ಗಂಗೆಯ ಜನಕ ನಿನ್ನ ಅಂಗನೆ ದ್ರೌಪದಿದೇವಿಭಂಗಬಿಡಿಸೆಂದು ಕೂಗೆ ಮಂಗಳಾಂಗನೆಸಾಂಗದಿಂದ ವಸ್ತ್ರಂಗಳ ಹಿಂಗದೆ ಪಾಲಿಸಿದಂಥರಂಗವಿಠಲ ಪಾಲಿಸೀಗ ತುಂಗ ವಿಕ್ರಮ ಎನ್ನ ಮಾತ 3
--------------
ಶ್ರೀಪಾದರಾಜರು
ಬಂದು ನಿಲ್ಲೆಲೊ ಮನಮಂದಿರದೊಳು ಹರಿ ಇಂದುವದನ ಆನಂದದಿಂದ ಪ. ಮುಂದಗಮನೆರ ಅಂದದಿ ಕೂಡ್ಯರ- ವಿಂದ ಮಧ್ಯದಿ ಬಹು ಸುಂದರ ವೆಂಕಟ ಅ.ಪ. ಗಜವ ಪಾಲಿಸಿದಂಥ ಭುಜಗಶಯನ ಹರೆ ತ್ರಿಜಗದೊಳಗೆ ದಿಗ್ವಿಜಯ ಮೂರುತಿ ಗೋ- ವ್ರಜವ ಪಾಲಿಸಿ ಭೂಭುಜರ ಪೊರೆದೆ ಅಂ- ಬುಜನೇತ್ರ ಅಜಪಿತ ಭಜಿಸಲಾಪೆನೆ ನಿನ್ನ ಭುಜಗ ಭೂಷಣವಂದ್ಯ ರಜ ತಮೊ ಸತ್ವದಿ ತ್ರಿಜಗವ ಸೃಷ್ಟಿಪೆ ಕುಜನರ ಶಿಕ್ಷಿಪೆ ರಜ ತಮೊ ದೂರನೆ ಸುಜನರ ಪೊರೆಯುವ ಋಜುಗಣವಂದಿತ 1 ವ್ಯಾಪ್ತಾ ಜಗದಿ ನಿರ್ಲಿಪ್ತ ಗುಣಗಳಿಂದ ಆಪ್ತ ಜೀವಕೆ ಸುಷುಪ್ತಿ ಕಾಲದಿ ನೀ ಗುಪ್ತನಾಗಿ ಪೊರೆವ ಶಕ್ತನಹುದೊ ತ್ರಿ- ಸಪ್ತ ಇಂದ್ರಿಯಗಳ ತೃಪ್ತಿಗೊಳಿಸು ನಿನ್ನೊಳ್ ಸಪ್ತ ಋಷಿಗಳಿಂದ ಗುಪ್ತರ್ಚನೆಗೊಂಬೆ ಸಪ್ತಜಿಹ್ವನೊಳು ವ್ಯಾಪ್ತನಾಗಿ ಸುರರ ತೃಪ್ತಿಪಡಿಸುವ ವ್ಯಾಪ್ತ ಮೂರುತಿಯೆ ಸಪ್ತ ಸಪ್ತ ಭುವನೇಶ ಪ್ರಕಾಶ 2 ವೇದಸುತಗೆ ಇತ್ತು ಆದರದಿ ಸುಧೆ ಮೋದದಿ ಸುರರಿಗುಣಿಸಿ ಭೂದೇವಿಯನು ಕಾಯ್ದೆ ಬಾಧಿಸೆ ಖಳ ಸುತನ ಭೇದಿಸಿ ಕಂಭ ಬಂದೆ ಪಾದದಿ ಗಂಗೆ ಪೆತ್ತು ಬಾಧೆ ಕ್ಷತ್ರಿಯರಿಗಿತ್ತೆ ಆದರದಲಿ ಸುಗ್ರೀವನ ಪೊರೆದೆ ಯಾದವ ವಂಶ ಮಹೋದಧಿ ಚಂದ್ರ ಸಾಧಿಸಿ ತ್ರಿಪುರರ ಛೇಧಿಸಿ ಕಲಿಮುಖ- ರಾದ ದುಷ್ಟರ ಸೀಳಿ ಬಾಧೆಯ ಬಿಡಿಸಿದೆ 3 ಪದ್ಮನಾಭನ ತೋರೊ ಪದ್ಮಸಂಭವ ಜನಕ ಪದ್ಮನಾಭನೆ ಹೃತ್ಪದ್ಮ ಮಧ್ಯದಿ ವಾಸ ಪದ್ಮ ಬಾಂಧವ ತೇಜ ಪದ್ಮ ನಯನಕರ ಪದ್ಮದಿಂದಲಿ ನೀ ಪದ್ಮಾವತಿಯ ಕೂಡ್ದೆ ಪದ್ಮವೈರಿಯ ಕೋಟಿ ಮುದ್ದು ಮುಖದ ತೇಜ ಪದ್ಮ ಉದರ ಷಟ್ಪದ್ಮದಿ ವಾಸ ಪದ್ಮ ಸರೋವರ ತೀರವಾಸ ಹೃ ತ್ಪದ್ಮ ಮಧ್ಯದಿ ಭೂಪದ್ಮಿನಿ ಸಹಿತ 4 ಆಪಾರ ಮಹಿಮನೆ ಗೋಪಾಲಕೃಷ್ಣವಿಠ್ಠಲ ಭೂಪರೈವರ ಕಾಯ್ದೆ ದ್ರೌಪದಿ ಮಾನದೊಡೆಯ ನೀ ಪ್ರೀತಿಯಿಂದ ಪೋಗಿ ತಾಪವ ಬಿಡಿಸಿದೆ ವ್ಯಾಪಕನೊ ಜಗಸ್ಥಾಪಕನೊ ಬಹು ರೂಪಕನೊ ದುಷ್ಟತಾಪಕನೊ ಹರಿ ಪಾಪ ಹರಿಸಿ ಕರ್ಮಲೇಪನ ಮಾಡದೆ ಪರಿ ಪರಿಯಿಂದ ಕಾಪಾಡೊ ಭಕ್ತರ5
--------------
ಅಂಬಾಬಾಯಿ
ಬಂದೆ ರಂಗಯ್ಯ ನಿನ್ನಬಳಿಗೆ ಪ ನೊಂದು ಮನ ಬೇಡುವೆ ನಿನ್ನ ಶ್ರೀಪಾದಂಗಳಿಗೆ ಅ.ಪ Àಕ್ತಜನರು ಬಂದು ಕಾಡುವರೆಂತೆಂದು ಯುಕ್ತಿಯಿಂದಿಲ್ಲಿ ಬಂದು ಸಪ್ತಬೆಟ್ಟದ ಮಧ್ಯದೊಳ್ ವಿ ರಕ್ತಿಯ ಕೈಕೊಂಡು ನಿಂತಿರೆ ಭಕ್ತರ ಪಾಡೇನು ಪೇಳೆಲೊ 1 ಶ್ವೇತಾದ್ರಿಯಲಿ ಭಕ್ತವ್ರಾತ ಪಾಲಿಸಿದಂಥಾ ಪ್ರೀತಿವಚನ ಕೇಳಿ ಭೂತನಾಥನ ಭಯವ ಬಿಡಿಸಿ ಖ್ಯಾತಿಯನು ಪಡೆದಂಥ ವಾರ್ತೆಯ ರೀತಿಯನು ನಾ ಕೇಳಿ ಬಂದೆನೊ ಮಾತುಳಾಂತಕ ಮಾರಮಣ ಹರೇ 2 ಪಾದ ಧ್ಯಾನ ಮಾಡುವರ ಸಂಗವಿತ್ತು ಸಾನುರಾಗದಿ ಸಲಹೊ ಎನ್ನನು ದೀನನಾದ ಗಜೇಂದ್ರನ ಬಹು ಮಾನದಿಂದಲಿ ಕಾಯ್ದ ಪ್ರಭುವೆಂದು ಬಂದೇ 3
--------------
ಬಾಗೇಪಲ್ಲಿ ಶೇಷದಾಸರು
ಬಿಡಬೇಡೆಲೆ ಮನಸೆ ಶ್ರೀಹರಿಪಾದ ಹಿಡಿ ಬಿಗಿಯಲೆ ಮನಸೇ ಪ ಹಿಡಕೋ ಕಡಕಿಂ ಕಡಲಕಡಿದಮರರ ಪಾದ ಅ.ಪ ಅನುದಿನ ಸಿರಿಯರೊತ್ತುವ ಪಾದ ಪರತರ ಭಕುತಿಯಿಂ ಸುರರುಪೂಜಿಪ ಪಾದ ನೆರೆದು ಋಷಿಸ್ತೋಮರರಸಿನಲಿಯುವ ಪಾದ ಪರಮನಾರದ ತುಂಬುರರು ಪಾಡುವ ಪಾದ ಪಾದ 1 ನೀಲಬಣ್ಣದಪಾದ ಪಿಡಿದೆತ್ತಿ ಮೂಲೋಕಾಳುವ ಪಾದ ತಾಳಿ ವಿಲಸಿತರೂಪ ಖೂಳನ ಎದೆಮೆಟ್ಟಿ ಸೀಳಿ ಉದರಮಂ ಬಾಲನ್ನಪ್ಪಿಕೊಂಡು ಪಾಲಿಸಿದಂಥ ಮಹ ಮೇಲಾದಮಿತಪಾದ ಸುಜನ ತಲೆಮೇಲೆ ಹೊತ್ತಪಾದ 2 ಬಲಿಯತುಳಿದಪಾದ ಮುನಿಯಾಗ ಒಲಿದು ಕಾಯ್ದಪಾದ ಶಿಲೆಯನೊದೆದಪಾದ ವನಕೆ ಪೋದಪಾದ ಖಳರಥಳಿಸಿ ಮುನಿಕುಲವ ಸಲಹಿದಪಾದ ಜಲಧಿದಾಂಟಿ ಸ್ಥಿರಪಟ್ಟ ಭಕ್ತನಿಗೆ ಸುಲಭದೊದಗಿಕೊಟ್ಟ ಚೆಲುವ ಸುದಯಪಾದ 3 ಪಾದ ಬಹು ಜರಮರಣ ನಿವಾರ ಪಾದ ತರಳಗೆ ಸ್ಥಿರವರ ಕರುಣದಿತ್ತ ಪಾದ ಭರದಿಗರಡನೇರಿ ಸರಸಿಗಿಳಿದ ಪಾದ ತರುಣಿಮಣಿಯರವ್ರತ ಹರಣಗೈದ ಪಾದ ಸಿರಿ ಪಾದ 4 ಪಾದ ಭಕುತರ ಮೊರೆಯ ಕೇಳ್ವ ಪಾದ ದುರುಳ ಕುರುಪನ ಗರುವಕಂಡ ಬುವಿ ವಿಶ್ವ ಪಾದ ಪರಮ ತುರಗವೇರಿ ಮೆರೆವ ವಿಮಲ ಪಾದ ಪಾದ 5
--------------
ರಾಮದಾಸರು
ರಮಣಿ ಕೇಳೆಲೆ ಮೋಹನ ಶುಭಕಾಯನ ಅಮರ ವಂದಿತ ರವಿಶತಕೋಟಿ ತೇಜನ ವಿಮಲ ಚರಿತ್ರದಿ ಮೆರೆವ ಶ್ರೀ ಕೃಷ್ಣನಕಮಲವದನೆ ನೀ ತೋರೆ ಪ ಬಾಯೊಳಗಿಹಳ ಗಂಡನ ನಿಜ ತಮ್ಮನತಾಯ ಪಿತನ ಮಡದಿಯ ಧರಿಸಿದನಸ್ತ್ರೀಯಳ ಸುತನ ಕೈಯಲಿ ಶಾಪಪಡೆದನದಾಯಾದಿಯ ಮಗನಸಾಯಕವದು ತೀವ್ರದಿ ಬರುತಿರೆ ಕಂಡುಮಾಯಾಪತಿ ಭೂಮಿಯನೊತ್ತಿ ತನ್ನಯಬೀಯಗನ ತಲೆಗಾಯಿದಂಥರಾಯನ ಕರೆದು ತೋರೆ 1 ನಾಲಗೆ ಎರಡರವನ ಭುಂಜಿಸುವನಮೇಲೇರಿ ಬಹನ ತಂದೆ ಇಹ ಗಿರಿಯನುಲೀಲೆಯಿಂದಲಿ ಕಿತ್ತೆತ್ತಿದ ಧೀರನಕಾಳೆಗದಲಿ ಕೊಂದನಲೋಲಲೋಚನೆಯ ಮಾತೆಯ ಪುತ್ರನಣುಗನಮೇಲು ಶಕ್ತಿಗೆ ಉರವನಾಂತು ತನ್ನವರನುಪಾಲಿಸಿದಂಥ ದಾತನಹ ದೇವನಲೋಲೆ ನೀ ಕರೆದು ತೋರೆ 2 ಉರಿಯೊಳು ಜನಿಸಿದವನ ನಿಜ ತಂಗಿಯಸೆರಗ ಪಿಡಿದ ಖಳನಣ್ಣನ ತಂಗಿಯವರನ ತಲೆಯನು ಕತ್ತರಿಸಿದ ಧೀರನಗುರುವಿನೊಳುದಿಸಿದನಶರವ ತಪ್ಪಿಸಿ ತನ್ನ ದಾಸರ್ಗೆ ಅನುದಿನಕರೆದು ವರವನಿತ್ತು ಮನ್ನಿಸಿ ಸಲಹುವಉರಗಗಿರಿಯ ವೆಂಕಟಾದಿಕೇಶವನ ಗರತಿ ನೀ ಕರೆದು ತಾರೆ 3
--------------
ಕನಕದಾಸ