ಒಟ್ಟು 6 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರೇಶಾನಂದ ಕಂದನೇ ಮಂದರಧರ ಗೋವಿಂದ ಗೋಪತಿಯೇ ಪ ಮುದ್ದು ಮೋಹನ ಕೃಷ್ಣಾ ಸಿದ್ಧನಾಗಿಹೆ ನೀ ಇದ್ದು ನೀ ಇಲ್ಲದಂತೆನ್ನಾ ಬುದ್ಧಿವಂತನೆ ನೀನು ಕದ್ದು ಪೋಗುವೆಯೊ 1 ಮರೆತು ನಾಬಿಟ್ಟೆನು ಧರೆಯೊಳು ನಿನಗೆ ಪರಮ ಪುರುಷ ಹರಿಯೇ ತುಂಬಿ ಭರಿತನಾಗಿರುವಿ 2 ಮೃಡಸಭಾ ನಿನಗೆ ತಡಮಾಡದೆ ಪಿಡಿದು ದೃಢದಿಂ ಕಟ್ಟುವೆ ಕಡಲೊಡೆಯನೇ 3 ವಾಸುದೇವನೇ ಜಗ ದೀಶ ಗೋಪಾಲಾ ಈಶ ಶಾಂತಿಯ ಪಾಲಿಪಾ ಶೇಷ ಶಯನನೆ ಸರ್ವೇಶಾ ಶ್ರೀ ಗುರುವೇ 4
--------------
ಶಾಂತಿಬಾಯಿ
ಉರುಟಣಿಯಾ ಸರಸಿಜನಾಭಾಗ್ಹರುಷದಲಿ ಮಾಡುವೆನಾ ಪ ಶಂಖಚಕ್ರಧರಾ ವೆಂಕಟೇಶ ನಿಮಗೆ | ಕುಂಕುಮ ಹಚ್ಚುವೆ ಪಂಕಜಾಕ್ಷಿ ನಾ 1 ನಂದಗೋಪಿಕಂದ ಹಚ್ಚುವೆ ಗಂಧ ಹಚ್ಚುವೆ ಸುಗಂಧ | ಮುಕುಂದಗೆ 2 ಯಶೋದೆಯ ಬಾಲಾ ಕಾಮಿತಶೀಲಾ ಹಾಕುವೆನು ಮಾಲಾ ಗೋಪಾಲಗೆ 3 ಪೊಡವಿ ಪಾಲಿಪಾ | ಕಡಲಶಯನಾ | ಕೊಡುವೆನು ವಿಡಾ ಪಿಡಿ ಬೇಗನೆ 4 ಪೊಡವಿ ಪಾಲಿಪಾ ಕಡಲಶಯನಾ | ವಂದಿಸಿ ಪ್ರಾರ್ಥನೆಗೈಯುವೆನಾ 5
--------------
ಶಾಮಸುಂದರ ವಿಠಲ
ಪಾಲಯಮಾಂ ಶ್ರೀ ರಾಮಾ ಮೂಲ ಸುಗುಣ ಶೀಲನೆ ಪ ನೀಳ್ಗರೆವ ಹೃದಯನಿವಾಸಾ ಕಾಲಾಂತಕ ಕರ್ಮನಾಶಾ ಚಾಳಿಕ ಚಿನ್ಮಯ ಸುರೇಶ ಹರೀ ಲೋಲಗುಣಾತೀತನೆ 1 ಚಂಡಕಿರಣ ಕುಲಜರಾಘವಾ ಸುಂದರಶ್ರೀ ಸೀತಾಧವಾ ಛಂಧ ನಿಜಾನಂದ ವೀಯುವಾ ಬಂದಭಯನಿವಾರನೇ ನೀ 2 ದಶಮುಖರಾವಣ ನಿವಾರಣಾ ಅಸುರಾಸುರ ನಿಕ್ರಂದ ನಾ ಋಷಿಯಾಗವ ಕಾಯ್ದ ದೇವಾ 3 ಅಂಬುಜಾಕ್ಷಾನಂತರೂಪಾ ತುಂಬಿಹ ಸದ್ಗುರು ಸ್ವರೂಪಾ ನಂಬಿದ ಭಕ್ತರನೆ ಪಾಲಿಪಾ ಚಿದಂಬರ ಶಾಂತಿದಾಯಕಾ 4
--------------
ಶಾಂತಿಬಾಯಿ
ಬಾಲಲೀಲ ಲೋಲ ಕೃಷ್ಣನ|ನೆನೆವೆನಾ| ಬಾಲಲೀಲ ಲೋಲ ಕೃಷ್ಣ ಈ ಲೋಕಾಳಿ ಪಾಲಿಪಾ|ವಿ- ಶಾಲ ಬಾಲ ನೀಲಗಾತ್ರನಾ|ನೆನೆವೆನಾ ಪ ಪಡುಲ ಕರಿಯಕಣ್ಣಲಿಟ್ಟರು|ಒಡನೆ ಕೇಳಿ ಕರ್ತನೃಪನ| ಮಡದಿ ಜನಕನಹಿತ ಸರಿಕನಾ|ವೈರಿಯ ಒಡಲಲುದಿಸಿದಾತ್ಮಭವನ|ಸಡಗರದಿ ಕಿರಿಯ ತಮ್ಮನ ಪಡೆದ ಜನನಿಯಣ್ಣ ಕಂದನಾ||ನೆನೆವನಾ 1 ಮುದದಲಿಂದ ಮಸುಧೆಯನ್ನು|ಎದೆಯಲೊತ್ತಿ ನಡೆವನಿಂದ| ಒದಗಿ ತನ್ನ ಶರೀರ ತೊರೆದನಾ|ತಂದೆಯಾ ವಿದಿತ ಮುತೈಯ್ಯನ ಮಗನ|ಚದುರತಮ್ಮನರಸಿ ಪಡೆದ ಉರದಿ ಮಗಳ ಪ್ರಾಣದರಸನಾ||ನೆನೆವೆನಾ 2 ನೃಪನಬಿಂಕ ಶಿಷ್ಯರಿಂದ|ಅಪಹರಿಸಿದವನ ಮಗನ| ಚಪಲ ಬಾಣ ಬರಲು ಸ್ಥಳವನು|ತಪ್ಪಿಸಿ ವಿಷದ ಹರಿಸಿ ಕಾಯ್ದೆನೈವರ|ನಿಪುಣ ಮಹೀಪತಿನಂದನ| ಕೃಪೆಲಿ ಪೊರೆವ ಉತ್ತುಮೊತ್ಮನಾ||ನೆನೆವೆನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶುಭ ಮಂಗಳಂ ಭಯ ನಿವಾರಣಮಾಳ್ಪ ಶ್ರೀದೇವಗ ಪ ಭವದ ಭಯ ಭಂಗಂಗೆ ಸರ್ವಾತರಂಗಗೆ ರವಿಕೋಟಿ ಭಾಗಂಗೆ ಸುರತುಂಗಗೆ ತವಕದಿ ಅನಂಗಗ ಪಡೆದಯಮಂಗಗ ಅವನಿರಿಸಿಸಂಗಗ ಶ್ರೀರಂಗಗ 1 ಮಾಯಾ ಅತೀತಗ ಅನಾಥನಾಥಗ ದಯಭರಿತಗ ಅನುಪಮಚರಿತಗ ಅಜನದ್ವೈತಗ ರಣತನಿರ್ಭರಿತಗ ಅವಧೂತಗ 2 ವಿಹಗ ಧ್ವಜ ಛಂದಗ ದೇವಕಿಯ ಕಂದಗ ಮಹಾನಿಗಮ ತಂದಗ ಮುಕುಂದಗ ಮಹಿಪತಿ ನಂದನು ಪಾಲಿಪಾನಂದಗ ಇಹಪರಾವಂದ್ಯಗ ಗೋವಿಂದಗ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು