ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(32ನೇ ವರ್ಷದ ವರ್ಧಂತಿ) ಶ್ರೀಶ ಆಶಾಪಾಶದಿಂದಲಿ ಘಾಸಿಯಾದೆ ಬರಿದೆ ವಾಸವಾರ್ಜಿತ ಪಾದಪಂಕಜ ದಾಸಪೋಷಣ ಭೂಷಣಾಚ್ಯುತ ಪ. ಮತ್ತೆರಡು ಮೂವತ್ತು ವರುಷಗಳುತ್ತಮ ಕೃತ್ಯದಲಿ ಸತ್ಯ ಶೌಚಾಚಾರ ಭಕ್ತಿಗಳಿತ್ತು ಕೃಪಾರಸದಿ ಭೃತ್ಯನನು ಪೊರೆದಿತ್ತ ಮೋಹದ ಕತ್ತಲೆಯ ವಶಕಿತ್ತು ಬಿಡುವುದೇ ಶ್ರೀಶ 1 ನಿನ್ನ ಚರಣಾನನ್ಯ ಶರಣರ ಮುನ್ನ ಪೊರೆದ ತೆರದಿ ಇನ್ನು ಪೊರೆವುದಕೇನುಪೇಕ್ಷ ಪ್ರ- ಪನ್ನ ಪಾಲಯದಿ ಚಿನ್ಮಯಿನಂದೈಕ ಭರಿತ ಮ- ಭವ ಮಾಧವ 2 ಕೂರ್ಮ ವರಾಹ ನರಹರಿ ವಾಮನ ಭಾರ್ಗವನೆ ರಾಮಕೃಷ್ಣ ಜನಾದಿ ಮೋಹನೆ ಕಾಮಗಾಶ್ವ ಚರನೆ ರಾಮ ವಿಧುರಿತ ಪಾಪಚಯ ಕಮ- ಲಾ ಮನೋಹರ ಸುಂದರಾನನ 3 ಕಾಲ ಕರ್ಮವಿದೂರ ಯಮುನಾಕೂಲ ಕೇಳೀಲೋಲಾ ಮಂದ ಮರಾಳಗಮನ ಶೀಲಾ ನೀಲ ಮೇಘ ನಿಭಾಂಗ ಪಂಕಜ ಮಾಲಯದುಕುಲಬಾಲ ಪಾಲಯ 4 ನೀರಜಾಸನ ನಿಮ್ನನಾಭ ಸುರಾರಿವನ ಕುಠಾರಾ ಜಾರ ಚೋರ ವಾರಿಜಾಸನ ವಂದ್ಯ ಕರುಣಾ ಪೂರ ಸುರಪರಿವಾರ ಪಾಲಯ 5 ತಂದೆ ತಾಯಿ ಗುರು ಬಂಧು ಸೋದರನಂದನ ಸಖನೆಂದು ಮುಂದೆ ಭವಭಯದಿಂದ ನಿನ್ನನು ಹೊಂದಿದೆ ನಾ ಬಂದು ಹಿಂದೆ ಮಾಡಿದ ಕುಂದನೆಣಿಸದೆ ಇಂದು ಕರಪಿಡಿ ಎಂದು ಬಯಸುವೆ 6 ವಿನುತ ಚರಣಾ ಏಸು ಪೇಳುವುದಿನ್ನು ಎನ್ನನು ಪೋಷಿಸು ಬಹು ಕರುಣಾ ಶೇಷಗಿರಿ ನಿಲಯಾಕುವರದ ಕೃ- ಪಾಶ್ರಯನೆ ತವದಾಸ ಪಾಲಿಸು 7
--------------
ತುಪಾಕಿ ವೆಂಕಟರಮಣಾಚಾರ್ಯ
ಕೂಸನು ಕಂಡೀರ್ಯಾ ಸುಪ್ರ-ಹ್ಲಾದನ ಕಂಡೀರ್ಯಾ ನಮ್ಮಕೂಸನು ಕಂಡೀರ್ಯಾ ಪ ರಾಕ್ಷಸ ಕುಲದಲಿ ಜನಿಸಿತು ಕೂಸುರಾಧಾಕೃಷ್ಣನ ಭಜಿಸಿತು ಕೂಸುರಾಗ ದ್ವೇಷಗಳ ಬಿಟ್ಟಿತು ಕೂಸುರಾಮ ಪಾದವ ನೆನೆಯುವ ಕೂಸು 1 ಘನ ಹರಿ ಕಂಬದಿ ತೋರಿತು ಕೂಸುಗಳಿಸಿತು ಕೃಷ್ಣನ ಪ್ರೇಮವ ಕೂಸುಘನ ಪಂಪಾಲಯದಿ ವಾಸಿಪ ಕೂಸುಗಣೆ ಗೋಪಾಲನ ಪ್ರೀತಿಯ ಕೂಸು2 ಪ್ರಸಿದ್ಧ ವ್ಯಾಸರಾಯರೆಂಬ ಕೂಸುಪ್ರವೀಣ ವಿದ್ಯೆಯೊಳೆನಿಸಿದ ಕೂಸುಪ್ರಹ್ಲಾದನೆಂಬುವ ಆಹ್ಲಾದ ಕೂಸುಪ್ರಸನ್ನ ಕಾಗಿನೆಲೆಯಾದಿಕೇಶವನ ಕೂಸು3
--------------
ಕನಕದಾಸ