ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಕ್ಷ್ಮೀ ದೇವಿ ಕಾದಿರುವಳು ರುಕ್ಮಿಣಿ ಕೃಷ್ಣ ಬರುವನೆಂದು ಪ. ಕರವ ಪಿಡಿವನೆಂದು ಅ.ಪ. ವಿಪ್ರನ್ನ ಕಳುಹಿರುವೆನು ಕ್ಷಿಪ್ರದೊಳು ಗುಡಿಯೊಳಿಹೆನು ಅಪ್ರಮೇಯ ನಿನ್ನಡಿಗಳನ್ನು ಸುಪ್ರಕಾಶ ನಂಬಿರುವೆನೆಂದು 1 ಶಿಶುಪಾಲನೊಲ್ಲೆನೆಂದು ವಸುಧೀಶ ನೀನೆ ಗತಿಯೆಂದು ಹಸುಳೇಯ ಸಲಹು ಎಂದು ಬೆಸಸಿಹೆನು ಪತ್ರವೆಂದು 2 ರಥವೇರಿ ಬರುತಲಿಹನೊ ಪಥದೊಳು ಕಾದಿರುವನೊ ರತಿಪತೀ ಪಿತನ ಪದವ ಅತಿಶಯದಲಿ ಕಾಣುವ ತವಕದಿ 3 ಶಂಕಾತುರಂಗಳಿಂದ ಶಂಕರೀಯಪೂಜೆಗೈದು ಕಿಂಕಿಣಿಯ ನಾದದಿಂದ ಶಂಕರಾದಿವಂದ್ಯ ಬರುವ ಪಥದಿ ಬಂದು 4 ಬಂದಾನೋ ಬಾರನೋ ಎನುತಾ ಇಂದಿರೆಯ ಅರಸನ್ಹೊರತು ಪೊಂದಲಾರೆನನ್ಯರನೆನುತ ಸುಂದರೀಮಣಿ ಕೃಷ್ಣನಾಗಮ ನೋಡುತ 5 ದ್ವಾರಕಿಯಾ ನಾಥ ಬಂದು ಪಾರುಗಾಣಿಸುವನೆಂದು ಚಾರುಕರದೊಳೆತ್ತಿ ಎನ್ನ ದ್ವಾರಕೆಗೊಯ್ವ ಶ್ರೀ ಶ್ರೀನಿವಾಸನೆಂದು 6
--------------
ಸರಸ್ವತಿ ಬಾಯಿ
ಚಪ್ಪಾಳೆನಿಕ್ಕೆಲೊ ಕೃಷ್ಣಮ್ಮ ಚಪಲ ಬಾಲ ರಂಗಮ್ಮಕಾಪುರುಷರ ಚಪ್ಪಾಳೆ ಮಾಳ್ಪ ಚಪ್ಪಾಳೆ ಪ.ತುಪ್ಪ ಬೆಣ್ಣೆ ಪಾಲನೊಲ್ಲೆ ಹೆಪ್ಪನಿಟ್ಟ ದಧಿಯೊಲ್ಲೆಗೋಪಿಯರೊಡನೆ ಕೇಳಿಗೊಪ್ಪಿದ ಚಪ್ಪಾಳೆ 1ಪಾಯಸವುಣ್ಣಲೊಲ್ಲೆ ಕಜ್ಜಾಯ ಸಕ್ಕರೆಯನೊಲ್ಲೆಆಯತಾಕ್ಷಿಯರ ಮೇಲೆ ಸ್ನೇಹದ ಚಪ್ಪಾಳೆ 2ತನಿವಣ್ಣ ಮೆಲ್ಲಲೊಲ್ಲೆ ಮನೆಯ ಸೇರಲೊಲ್ಲೆ ಪ್ರಸನ್ನ ವೆಂಕಟಾದ್ರಿಲಿ ಕುಣಿವ ಚಪ್ಪಾಳೆ 3
--------------
ಪ್ರಸನ್ನವೆಂಕಟದಾಸರು