ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಸುದೇವಸುತನಿಗೆ ನಮೋ ನಮೋ ನಮ್ಮ ವಸುಧೆ ಪಾಲಕನಿಗೆ ನಮೋ ನಮೋ ಪ ಮಚ್ಚಾವತಾರಗೆ ಮೊದಲೆ ಮಂಗಳವೆಂದು ಸಾಕ್ಷಾತ ಕೂರ್ಮಗೆ ನಮೋ ನಮೋ ಸುತ್ತಿ ಸುರುಳಿ ಭೂಮಿ ಒಯ್ದಿ ್ಹರಣ್ಯಾಕ್ಷಕನ ವರಾಹ ನಮೋ ನಮೋ1 ಕೂಸು ಕರೆಯೆ ಕಂಬದಿಂದ ಬಂದ್ಹಿರಣ್ಯ- ಕಶ್ಯಪನ ಕೊಂದ್ಹರಿಗೆ ನಮೋ ನಮೋ ಆಕಾಶವ್ಹಿಡಿಯದೆ ಬೆಳದು ಬಲಿಯ ಭಾಗ್ಯ ಆಕ್ರಮಿಸಿದಾತಗೆ ನಮೋ ನಮೋ 2 ಪೊತ್ತು ಕೊಡಲಿ ಕ್ಷತ್ರಿಯರ ಕಡಿದ ಸ- ಮರ್ಥ ಭಾರ್ಗವ ನಮೋ ನಮೋ ಹತ್ತು ಶಿರಗಳ ಕೊಂದು ಸೀತಾಸಮೇತನಾದ ಪೃಥಿವಿ ಪಾಲಕ ರಾಮ ನಮೋ ನಮೋ 3 ಬೆರಳಲಿ ಗೋವರ್ಧನ ಎತ್ತ್ಯಾಕಳಕಾಯ್ದ ಕೊಳಲನೂದುವ ಕೃಷ್ಣ ನಮೋ ನಮೋ ತರಳರೂಪದಿ ತ್ರಿಪುರದ ದುರುಳರನೆಲ್ಲ ಮರುಳು ಮಾಡಿದ ಬೌದ್ಧ ನಮೋ ನಮೋ 4 ಮುದ್ದು ತೇಜಿಯನೇರಿ ಕಲಿಗಳ ಕಡಿದಂಥ ಕಲ್ಕ್ಯಾವತಾರಗೆ ನಮೋ ನಮೋ ಶುದ್ಧ ವೈಷ್ಣವರಿಗೆ ಸುಲಭದಿಂದೊಲಿದು ಮುಕ್ತಿ ಕೊಡುವೊ ಭೀಮೇಶ ಕೃಷ್ಣಗೆ ನಮೋ ನಮೋ 5
--------------
ಹರಪನಹಳ್ಳಿಭೀಮವ್ವ
ಬೆಳಗಿರೆ ಗೋಪಾಲ ಬಾಲಗೆ | ಬೆಳಗಿರೆ ಗೋಪಾಲಕೃಷ್ಣಗೆ ಆರುತಿ | ಬೆಳಗಿರೆ ಗೋಪಿಯ ಕಂದಗೆ ಪ ಗೋಪಿ ಮನೋಹರಗೆ ಗೋಪಾಲಕನಿಗೆ ಆಕಳಕಾಯ್ವನಿಗೆ 1 ನಂದಕುವರಗೆ ಶಿಂಧುಶಯನಗೆ ಇಂದೀವರಾನನಗೆ 2 ಶಾಮಸುಂದರಗೆ | ದಾಮೋದರಗೆ | ಪ್ರೇಮದಿಂದಲಿ ಕಮಲಾಕ್ಷಗೆ ಬೇಗ 3
--------------
ಶಾಮಸುಂದರ ವಿಠಲ
ಯಜ್ಞೋಪವೀತವೀವೆನೊ ನಿನಗೆ ಸ್ವಾಮಿ ಪ ಯಜ್ಞಪುರಷ ಮುನಿ ಯಜ್ಞಪಾಲಕನಿಗೆ ಅ.ಪ ಅಜ್ಞ್ಯಮನೋರಥನು ನಾನು | ಕಿಂ ಚಿಜ್ಞನೆಂದಿಗು ನಿನ್ನ ಪೊಂದಿದೆನು ಸುಜ್ಞಾನವೆಂಬುದು ಸ್ವಪ್ನದೊಳರಿಯೆ | ಸ ರ್ವಜ್ಞ ನಿನ್ನವನೆಂದು ವಿಜ್ಞಾನ ಪಾಲಿಸು 1 ಸಾಧು ಜನಪ್ರಿಯ ಸರೋಜಾಕ್ಷ ಪೂರ್ಣ ಬೊಧಾಮೃತ ಮಯದಿವಿಜ ಪಕ್ಷಾ ಕಾದುಕೊಂಡಿರುವೆ ಅನಾದಿಯಿಂದಲಿ ನಮ್ಮ ನಿ- ರಾದರಣೆ ಮಾಡದೆ ನೀ ದಯದಿಂದ ಸಲಹೊ 2 ಮುಕುತಿದಾಯಕ ದೇವಾಧಿದೇವಾ ನಿಜ ಭಕುತ ಜನರಿಗೆ ನೀನೇ ಸಂಜೀವಾ | ಆ ಯುಕುತ ಮಾತುಗಳಿದಲ್ಲ ವೇದಾಂತ ರಹಸ್ಯ ಸಕಲಾಧಾರನೆ ಶ್ರೀ ಗುರುರಾಮವಿಠಲ 3
--------------
ಗುರುರಾಮವಿಠಲ