ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅಂ) ಪಾರ್ವತೀದೇವಿ ಉಮಾ ಕಾತ್ಯಾಯನೀ ಗೌರಿ ದಾಕ್ಷಾಯಣಿ | ಹಿಮವಂತ ಗಿರಿಯ ಕುಮಾರಿ ಪ ನಿತ್ಯ | ಅಮರವಂದಿತೆ ಗಜಗಮನೆ ಭವಾನಿ ಅ. ಪ. ಪನ್ನಗಧರನ ರಾಣಿ ಪರಮಪಾವನಿ | ಪುಣ್ಯಫಲ ಪ್ರದಾಯಿನಿ || ಪನ್ನಗವೇಣಿ ಶರ್ವಾಣಿ ಕೋಕಿಲವಾಣಿ | ಉನ್ನತ ಗುಣಗಣ ಶ್ರೇಣಿ | ಎನ್ನ ಮನದ ಅಭಿಮಾನ ದೇವತೆಯೆ | ಸ್ವರ್ಣಗಿರಿ ಸಂಪನ್ನೆ ಭಾಗ್ಯ ನಿಧಿ || ನಿನ್ನ ಮಹಿಮೆಯನು ಬಿನ್ನಾಣದಲಿ ನಾ | ಬಣ್ಣಿಸಲಳವೆ ಪ್ರಸನ್ನ ವದನಳೆ 1 ಮುತ್ತಿನ ಪದಕ ಹಾರ ಮೋಹನ ಸರ | ಉತ್ತಮಾಂಗದಲಂಕಾರ || ಜೊತ್ಯಾಗಿ ಇಟ್ಟ ಪಂಜರದೋಲೆ ವಯ್ಯಾರ | ರತ್ನಕಂಕಣದುಂಗುರ || ತೆತ್ತೀಸ ಕೋಟಿ ದೇವತೆಗಳ್ ಪೊಗಳುತ | ಸತ್ತಿಗೆ ಚಾಮರವೆತ್ತಿ ಪಿಡಿಯುತಿರೆ || ಸುತ್ತಲು ಆಡುವ ನರ್ತನ ಸಂದಣಿ | ಎತ್ತ ನೋಡಿದರತ್ತ ಕಥ್ಥೈ ವಾದ್ಯ2 ಕಂಚುಕ ತಿಲಕ | ನಾಸಿಕ || ಕಳಿತ ಮಲ್ಲಿಗೆ ಗಂಧಿಕ ಮುಡಿದ ಸೂಸುಕ | ಸಲೆ ಭುಜ ಕೀರ್ತಿಪಾಠಿಕ || ಇಳೆಯೊಳು ಮಧುರಾ ಪೊಳಲೊಳು ವಾಸಳೆ | ಅಳಿಗಿರಿ ವಿಜಯವಿಠ್ಠಲ ಕೊಂಡಾಡುವ || ಸುಲಭ ಜನರಿಗೆಲ್ಲ ಒಲಿದು ಮತಿಯನೀವ | ಗಳಿಕರ ಶೋಭಿತೆ ಪರಮಮಂಗಳ ಹೇ 3
--------------
ವಿಜಯದಾಸ
ಪಾರ್ವತೀದೇವಿಯ ಸ್ತುತಿ (ಮಂಗಳೂರು ಮಂಗಳಾದೇವಿ) ಮಹಾಮಾಯೆ ದಯದೋರೆಲೆ ತಾಯೆ ಪ. ಸದರದೊಳೆಬ್ಬಿಸುತಿದಿರಾದ ಮದನಾಂಬಾ ಮುದ ದಾಯಿ ಶುಭಪದದಾಯಿ 1 ದೇವತೆಗಳ ಸೇರಿರುವಾ ಮನೋಹರ ತನುವಾಗಿ ನಿಕರ ಮಹಿಷಾಸುರನಾ ಮೃಗಪತಿಗಮನಾ 2 ಖಂಡ್ಯಧಾರೆಯೊಳ್ದಿಂಡರಿದೂ ಖಂಡಿಸುತಾ ರಣ ಮಂಡಲದಿ ಬ್ರಹ್ಮಾಂಡ ನಿದಾನಿ 3 ತ್ರಿಗುಣಜಮಲವು ದಾನವಾರಿಗಳ ಮಾನಿಸಿ ದಿತಿಜರ ಹಾನಿಗೊಳಿಸುವದು ಹರಿಪರವು ಮಹಭರವು ಮನದಿರವೂ 4 ರಕ್ಷಿಸು ಪುರುಕರುಣಿ ಕ್ಷಮೆಯಿಂದಂ ಭರಣಿ ಖೂಳ ವೈರಿಗಳನೇಳದಂತೆ ಪಾತಾಳಕೆ ಕೆಡಹಿಸು ಮಮ ಜನನಿನೀಲ ಮೇಘ ನಿಭ ವೆಂಕಟರಾಜನ ಲೋಲಕಟಾಕ್ಷಸದಾಕರುಣಿ 5
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀ ಪಾರ್ವತೀದೇವಿ ಗೌರಿ ದೇವಿಗೆ ಸಖಿ ತಾರೆ ಆರುತಿಪ ಮುನಿಜನ ವಂದಿತೆ ಮನದಭಿ ಮಾನಿಯೆ | ಗಣಪತಿ ಷಣ್ಮುಖ ಜನನಿ ದೇವಿಗೆ 1 ಶಂಕರಿ ಭಕ್ತಸುಶಂಕರಿ ದೈತ್ಯ ಭ ಯಂಕಾರಿಯಾದ ಶಶಾಂಕ ಮುಖಿಗೆ 2 ಪತಿ ಸಹ ನೇಮದಿ ಪಠಿಸುವ ಹೈಮಾವತಿಗೆ 3
--------------
ಶಾಮಸುಂದರ ವಿಠಲ
ಪಾರ್ವತೀದೇವಿ ಸ್ತೋತ್ರ137ಪಾರ್ವತಿ ದಕ್ಷಕುಮಾರಿ ನಿನ್ನ | ಸಾರ್ವೆ ಸಂತತ ಕುಜನಾರೀ ||ಆಹಾ||ದೂರ್ವಾಸನರ್ಧಾಂಗಿ ಸರ್ವಜೆÕ ಯನ್ನಯ ||ಚಾರ್ವಾಕ ಮತಿ ಕೀಳಿ ತೋರ್ವದು ಸುಪಥವ ಪದುರ್ಗೆ ಭವಾನಿ ರುದ್ರಾಣಿ ಗೌರಿ | ಸ್ವರ್ಗಜಿನಾರಾಧ್ಯ-ಮಾನಿ || ಸೇರೆದುರ್ಗುಣದವರ ಸುಜ್ಞಾನಿ | ಭಕ್ತವರ್ಗ ಪೋಷಕ ಶುಕ-ವಾಣೀ ||ಆಹಾ||ನಿರ್ಗುಣರಾದುತ್ತಮರ್ಗೆವೊಲಿವ ಅಪ |ವರ್ಗದ ನಾಳೆ ನರರ್ಗೆ ಮಣಿಸದಿರೆ 1ಚಂಡಿ ಕಾತ್ಯಾಯಿನಿ ಉಮ್ಮಾ ನಾಲ್ಕು | ಮಂಡೆಯವನಸೊಸೆ | ಯಮ್ಮಾ | ನಾಡೆಕಂಡು ಭಜಿಪೆನಿತ್ಯನಿಮ್ಮ |ಪಾದಪುಂಡರೀಕದ್ವಯವಮ್ಮಾ ||ಆಹಾ||ಉಂಡು ವಿಷವ ನಿನ್ನಗಂಡಬಳಲಿ ಕೈ |ಕೊಂಡೌಷಧ ತಂಡ ತಂಡದಲೆನಗೀಯೆ 2ಪಾವಕನೊಳು ಪೊಕ್ಕ ಪತಿವ್ರತೆ | ಯಾವಾಗ ಮಾನಿಸತ್ಕಥೆ | ಯಲ್ಲಿಭಾವನೆ ಕೊಡೆಪ್ರತಿಪ್ರತಿ | ಜಾವ ಜಾವಕೆ ಷಣ್ಮುಖಮಾತೆ ||ಆಹಾ||ಕೋವಿದರೊಡತಿ ಕೇಳಾವಾಗ ವೈರಾಗ್ಯ |ವೀವದು ದುರಾಪೇಕ್ಷೆ ನಾವೊಲ್ಲೆನೆಂದೆಂದೂ 3ಬೇಡಿದಭೀಷ್ಟವ ಕೊಡುವೆ | ದಯ ಮಾಡಿ ಭಕ್ತರಕರಪಿಡಿವೆ | ದೋಷಕಾಡುಳಿಯದಂತೆ ಸುಡುವೆ | ನಿನ | ಗೀಡೆ ಮಹದ್ಭಯಕಡಿವೆ ||ಆಹಾ||ರೊಢೀಶ ಶಿವನೆಂದು ಆಡಿಸದಿರು ಬುದ್ಧಿ |ಗೇಡಿ ದಾನವರಂತೆ ನೀಡು ಶ್ರೀಹರಿ ಸೇವೆ 4ಮೇಶ ಪ್ರಾಣೇಶ ವಿಠ್ಠಲನೆ | ಜಗದೀಶನೆಂಬುವ ದಿವ್ಯ-ಜ್ಞಾನೆ | ಕೊಟ್ಟು |ಪೋಷಿಪುದೆನ್ನ ಸುಜಾಣೆ | ನೀನುದಾಸಿಸೆ ನಾನಾರಕಾಣೆ ||ಆಹಾ||ಈಶೆ ಪಂಚ ಮಹಾದೋಷಿ ಬಿಡದೆ ನಿತ್ಯಾ |ಈ ಶರೀರದೊಳಿಹ್ಯಘಾಸಿಮಾಡುವನನ್ನು 5
--------------
ಪ್ರಾಣೇಶದಾಸರು
ಶ್ರೀ ಪಾರ್ವತೀದೇವಿ79ಮಂಗಳಗೌರೀ ಪಾರ್ವತಿ ಅಂಬಾ ಶಿವಾನಮಸ್ತೆ ಪಾಲಯಂ ಮಾಂ ಪಗೌರವರ್ಣಾವರಪೀತಾಂಬರಧರಾವರಅಭಯಕರಾ ಪಾಲಯ ಮಾಂ1ಧ್ಯಾಯಾಮಿತ್ವಮ್ ಮಂಗಳ ಶುಭದಾಭಾಗ್ಯದಾ ಸಂತತಂ ಪಾಲಯ ಮಾಂ 2ವೃತತಿಜಾಸನಪಿತ ಪ್ರಸನ್ನ ಶ್ರೀನಿವಾಸಭಕ್ತೀಂ ದೇಹಿ ಮೇ ಕೃಪಯಾ ಅಂಬಾ 3
--------------
ಪ್ರಸನ್ನ ಶ್ರೀನಿವಾಸದಾಸರು