ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೋರು ನಿಜಜ್ಞಾನ ಸುಖವ ಮಾರನಯ್ಯ ಮರೆಯ ಬಿದ್ದೆ ಪ ಪಾರಮಾರ್ಥ ಪರಮ ಸವಿ ಚಾರಮೆನಿಪ ಪಾವನ ಸುಪಥ ಅ.ಪ ತೀರದಂಥ ಅಪಾರಭವದ ವಾರಧಿ ಈಸಿ ಘೋರಬಡುವೆ ನೀರಜಾಕ್ಷ ನಿಗಮವಿನುತ ಪಾರುಮಾಡು ಕಾರುಣ್ಯಶರಧಿ 1 ವಿಷಯಲಂಪಟ ಮುಸುಕು ಮುಸುಕಿ ವ್ಯಸನಚಿತೆಯೋಳ್ ಬಸವಳಿದೆ ಅಸಮಹಿಮ ತವಪಾದ ಕುಸುಮ ಮರೆದು ಕೆಟ್ಟೆನಭವ 2 ನಾಶಮತಿಯಿಂದಾಸೆಗೈದ ದೋಷಗಳನ್ನು ಕ್ಷಮಿಸಿ ಬೇಗ ಪೋಷಿಸಿಭವ ಶ್ರೀಶ ಶ್ರೀರಾಮ ದಾಸಜನರುಲ್ಲಾಸ ಪ್ರಭು 3
--------------
ರಾಮದಾಸರು
ನೋಡಿದ್ಯಾ ಗುರುರಾಯರ ನೋಡಿದ್ಯಾ ಪ ನೋಡಿದ್ಯಾ ಮನವೆ ನೀನಿಂದು - ಕೊಂ - ಡಾಡಿದ್ಯ ಪುರದಲ್ಲಿ ನಿಂದು - ಆಹಾ ಮಾಡಿದ್ಯ ವಂದನೆ ಬೇಡಿದ್ಯ ವರಗಳ ಈಡು ಇಲ್ಲದೆ ವರ ನೀಡುವೊ ಗುರುಗಳ ಅ.ಪ ಸುಂದರ ತಮ ವೃಂದಾವನದಿ ತಾನು ನಿಂದು ಪೂಜೆಯ ಕೊಂಬ ಮುದದಿ - ಭಕ್ತನೀ ನಂದ ನೀಡುವೆನೆಂದು ತ್ವರದಿ ಇಲ್ಲಿ ಬಂದು ನಿಂತಿಹನು ಪ್ರಮೋದಿ ಆಹಾ ಹಿಂದಿನ ಮಹಿಮವು ಒಂದೊಂದೆ ತೋರುವಾ ಮಂದಜನರ ಹೃ - ನ್ಮಂದಿರಗತರನ್ನ 1 ದೂರದಿಂದಲಿ ಬಂದ ಜನರ - ಮಹ ಘೋರ ವಿಪತ್ಪರಿಹಾರಾ - ಮಾಡಿ ಸಾರಿದಭಿಷ್ಟವು ಪೂರಾ - ನೀಡಿ ಪಾರುಮಾಡುವ ತನ್ನ ಜನರಾ - ಆಹಾ ಆರಾಧಿಸುವರ ಸಂ -ಸಾರವಾರಿಧಿಯಿಂದ ಸೂರಿ ಕೊಡುವೊರನ್ನ 2 ಪಾದ - ಯುಗ ಸತ್ಯಪೂರ್ವಕದಿ ನಂಬೀದ - ನಿಜ ಭೃತ್ಯನಪೇಕ್ಷಮಾಡೀದ - ಕಾರ್ಯ ಸತ್ಯಮಾಡುವ ಪೂಜ್ಯಪಾದ - ಆಹಾ ಮತ್ರ್ಯಾದಿ ಸುರರೊಳು - ಎತ್ತ ನೋಡಿತಗಿನ್ನು ಉತ್ತುಮರಾರಯ್ಯ - ಭತ್ಯವತ್ಯಲರನ್ನ 3 ಅಂತರದಲಿ ತಾನು ನಿಂತು ಜನ ಸಂತತ ಕಾರ್ಯಗಳಿಂತು - ಮಾಡಿ ಕಂತುಪಿತಗೆ ಅರ್ಪಿಸ್ಯಂತು ತಿಳಿಸ ದಂತೆ ಎಮ್ಮೊಳಗಿರೊವೊ ತಂತು - ಆಹಾ ಸಂತತ ಕರ್ಮಗಳಂತು ಮಾಡುತ ಜೀವ ರಂತೆ ಗತಿಯು ತಾ ಪ್ರಾಂತಕ್ಕೆ - ನೀಡುವರ 4 ಅಗಣಿತ ಮಹಿಮವಗಾಧಾ - ಬಹು ಸುಗುಣನಿಧಿ ಮಹಾ ಭೋಧ - ನಾನು ಪೊಗಳುವದೇನು ಸಮ್ಮೋದ - ತೀರ್ಥ ಮೊದಲಾದ ಸುರರ ಪ್ರಮೋದ - ಆಹಾ ಮೊಗದಿಂದ ಶ್ರೀಗುರು ಜಗನ್ನಾಥ ವಿಠಲ ಸಂ ಮೊಗನಾದ ಕಾರಣ ಜಗದಿ ಮೆರೆವೊರನ್ನ 5
--------------
ಗುರುಜಗನ್ನಾಥದಾಸರು
ಪಿಡಿಯೆನ್ನ ಕೈಯ ಬಿಡಬೇಡೆನ್ನಯ್ಯ ಮೃಡನ ಭಕ್ತರ ಒಡೆಯ ಪಂಢರಿರಾಯ ಪ ಘೋರ ಬಡುವೆ ಸಂಸಾರಶರಧಿಯೊಳು ಮೀರಿತು ಈ ಬಾಧೆ ಸೈರಿಸೆ ಮಹರಾಯ 1 ಹಲವು ವಿಧದಿ ಕಷ್ಟಕ್ಕೊಳಗಾಗಿ ಅತಿಶಯ ಬಳಲುವ ಬಾಲನ ಉಳಿಸಿಕೊ ಮಹರಾಯ 2 ಬರುವ ಸಂಕಟದೆನ್ನ ಪಾರುಮಾಡುವಂಥ ಭಾರನಿನ್ನದು ಸರ್ವಧೀರ ಶ್ರೀರಾಮಯ್ಯ 3
--------------
ರಾಮದಾಸರು
ರಾಮಚಂದ್ರನೆ ನಿನ್ನ ನಾಮಮೃತವು ಎನ್ನ ನಾಲಿಗೆಯೊಳು ನಿಲಿಸು ಪ ದಾನವಾಂತಕ ನಿನ್ನ ಧ್ಯಾನ ಬಿಡದೆ ಇತ್ತು ದೀನ ರಕ್ಷಕ ಹರಿ ಜಾನಕಿ ರಮಣನೆ ಅ.ಪ ಕ್ಷೀರವಾರಿಧಿ ಶಯನ ಶ್ರೀ ಹರಿಯನು ಸ್ಮರಿಸುತ ಧ್ಯಾನವ ಮಾಡಿ ಭಕುತಿಲಿ ನಾರದ ಹರ ಬ್ರಹ್ಮಾದಿ ಋಷಿ ಗಂಧರ್ವರು ಸುರರೆಲ್ಲರು ಕೂಡಿ ಮಾರಮಣನ ಕೊಂಡಾಡುತ ಸ್ತೋತ್ರವ ಮಾಡಿ ಪಾರುಮಾಡು ಜಗದೀಶನೆ ಎನುತಲಿ ತವಕದಿ ಶ್ರೀ ಭೂರಮಣನು ದೀನರ ನುಡಿಗಳ ಕೇಳುತ ಆಲೋಚಿಸುತಲಿ ಬೇಗದಿ ಭೂನಾಥನ ಮನೆಯೊಳಗವತರಿಸುವೆ ಎನ್ನುತವರಿಗೆಲ್ಲಾಭಯವ ನೀಡಿದ 1 ದಶರಥನುದರದಿ ಜನಿಸಲು ನಾಲ್ವರು ಅಂದು ಯಾಗಕೆ ಕೌಶಿಕನಲ್ಲಿ ವಿದ್ಯೆಗಳನ್ನು ಕಲಿಯುತ ಬಂದು ಶಶಿಮುಖ ಜಾನಕಿ ಕರಪಿಡಿದನು ತಾನಂದು ಅಯೋದ್ಯದಿ ಎಸೆವ ಸಿಂಹಾಸನವೇರುವ ಸಮಯದಿ ಬಂದು ರಸಕಸಿ ಮಾಡಲು ಕೈಕೇಯಿಯು ತಾ ಶಶಿಮುಖ ಸೀತೆಯ ಒಡಗೂಡುತಲಿ ಬಿಸಿಲು ಗಾಳಿಮಳೆಯೊಳು ವನಚರಿಸುತ ಸತಿಯು ಬೇಡೆ ಮಾಯಮೃಗವ ಬೆನ್ನಟ್ಟಿದ 2 ಶಶಿಮುಖ ಸೀತೆಯ ದಶಶಿರನೊಯ್ಯಲು ಕೇಳಿ ದಶರಥಸುತ ಅರಸುತ ಬಲು ಶೋಕವ ತಾಳಿ ಚಿಂತಿಸಿ ಎಸೆವ ಗಿರಿ ಗುಹೆಗಳ ಹುಡುಕಲು ಮಾರುತಿ ನೋಡಿ ಮುದ್ರಿಕೆ ವಸುಧೆ ತನಯಳಿಗರ್ಪಿಸೆ ಆಕೆಯು ಮುದ ತಾಳಿ ಚೂಡಾಮಣಿ ಕೊಡಲು ಶ್ರೀ ರಘುವೀರನು ಸೇತುವೆ ಕಟ್ಟುತ ಕ್ರೂರ ಖಳರನು ಸಂಹರಿಸಿದ ಕಮಲ-ನಾಭ ವಿಠ್ಠಲ ಅಯೋದ್ಯದಿ ಮೆರೆಯುವ 3
--------------
ನಿಡಗುರುಕಿ ಜೀವೂಬಾಯಿ