ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಶ್ವಧಾಟೀ ಕೃಷ್ಣನೆ ಎಮ್ಮನು ಪ ಕಾಯ ನಂಬಿದೆ ನಿನ್ನನುಅ.ಪ ಸಾರ ಮಾರ್ಗದ ದಾರಿ ಕಾಣದೆ ಸಾರಿ ಬೇಡುವೆ ನಿನ್ನನು ನೀರಜಾಕ್ಷನೆ ಘೋರಭವದಿ ಪಾರುಗಾಣಿಸೊ ಎಮ್ಮನು 1 ದುಷ್ಟನಾಶಕ ಶಿಷ್ಟಪಾಲಕ ಶ್ರೇಷ್ಠಮೂರುತಿದೇವನೆ ಕಷ್ಟಓಡಿಸಿ ಇಷ್ಟಪಾಲಿಸೊ ಅಷ್ಟಕರ್ತನೆ ಬೇಗನೆ 2 ವೇದಗೋಚರ ಯಾದವೇಂದ್ರ ಸುಧಾಮ ರಕ್ಷಕ ಕೃಷ್ಣನೆ ನಂದಗೋಪ ಸುಕಂದ ನಾಮಕ ರಾಧೆವಂದಿತ ಚರಣನೆ 3 ಗೋಪಿ ಮೋಹಕ ಪಾಪಮೋಚಕ ತಾಪಸ ಪ್ರಿಯರೂಪನೆ ಕೋಪಮಾಡದೆ ಪಾಪಿ ಎನಗೆ ರೂಪ ತೋರಿಸೊ ಬೇಗನೆ 4 ದೋಷದೂರ ವಿನಾಶವರ್ಜಿತ ಕೇಶಿ ಸೂದನ ಶೂರನೆ ಕ್ಲೇಶ ಓಡಿಸಿ ದಾಸನೆನಿಸೊ ಬಿಂಬನೆ 5 ವೇಣುನಾದ ವಿನೋದ ಸುಂದರ ಜಾಣೆ ರುಕ್ಮಿಣಿ ಅರಸನೆ ಸಾನುರಾಗದಿ ಜ್ಞಾನದಂಬಕ ದಾನ ಮಾಡೊ ದಾನಿಯೆ6 ಶ್ಯಾಮಸುಂದರ ಮಾಮನೋಹರ ಭೀಮ ವಿಕ್ರಮ ಭೂತಿಯೆ ಸಾಮಸನ್ನುತ ರಾಮಚಂದಿರ ಕಾಮಜನಕನೆ ಕಲ್ಕಿಯೆ 7 ಸಿಂಧು ಶಯನನೇ ಬಂಧಮೋಚಕ ಮಂದರಾದ್ರಿಧಾರನೇ ಬಿಂಧುಮಾಧವ ಮಂದಹಾಸದ ಸುಂದರಾಂಗ ರೂಪನೆ8 ಲಕ್ಷ್ಮಣಾಗ್ರಜ ಪಕ್ಷಿವಾಹನ ಅಕ್ಷರೇಡ್ಯ ಸುಲಕ್ಷಣ ಮೋಕ್ಷದಾಯಕ ಲಕ್ಷ್ಮಿರಮಣನೆ ರಕ್ಷಿಸಯ್ಯ ಸರ್ವದಾ 9 ವಾರಿಜನೇತ್ರ ವಾರಿಜನಾಭ ವಾರಿಜಾಸನ ವಂದ್ಯನೆ ಸೂರಿ ಶೇಖರ ಮೇರೆಗಾಣದ ಮಹಿಮನೆ 10 ಸರ್ವವ್ಯಾಪ್ತನೆ ಸರ್ವವಂದ್ಯನೆ ಸರ್ವವಾಚ್ಯದ ಈಶನೆ 11 ಪೂರ್ಣಗುಣನೆ ಪೂರ್ಣಶಕ್ತನೆ ಪೂರ್ಣಭೋಧರ ಪ್ರಿಯನೆ ಪೂರ್ಣರೂಪನೆ ಪೂರ್ಣಪೂರ್ಣನೆ ಪೂರ್ಣ ತಂತ್ರ ಸ್ವತಂತ್ರನೆ12 ಬಾಲ ಲೀಲ ಕಲಾವಿಭೂಷಿತ ಲೀಲ ಮಾನುಷ ವಿಗ್ರಹ ಲೋಲ ಸುಂದರ ಜಾಲ ಮೋಹಕ ಕಾಲನಾಮಕ ಪುರುಷ 13 ಕಾಳಿಮರ್ಧನ ಕಾಳಿವರದ ಕಾಳಿಯನುಜ ಕೇವಲ ಮೌಳಿಯಿಂದಲಿ ಕಾಲಿಗೆರಗುವೆ ಪಾಲಿಸಯ್ಯ ಈಗಲೇ 14 ಭಂಜನ ನಿಕಟ ಸರ್ವರ ಕುಟಿಲ ವರ್ಜಿತ ಶ್ರೇಷ್ಟನೆ ನಕ್ರತರಿದ ಚಕ್ರಪಾಣಿಯೆ ಫಕ್ಕನೊಲಿಯೊ ಶುಕ್ರನೇ 15 ವಿಪ್ರಸತಿಯರ ಕ್ಷಿಪ್ರದಿಂದಲಿ ತಪ್ಪದೆ ಪೊರೆದಾತನೆ ತಪ್ಪುನೋಡದೆ ಒಪ್ಪಿಕೊಂಡು ಅಪ್ಪ ಒಲಿಯೊ ವೆಂಕಟ 16 ಪಾಂಡವ ಪ್ರಿಯ ಪುಂಡಮರ್ದನ ಅಂಡಜಾಧಿಪ ಅಂಡಗ ಭಂಡನೆನಿಸದೆ ತೊಂಡನೆನಿಸೊ ಪಾಂಡುರಂಗ ವಿಠ್ಠಲಾ 17 ಸೋಮಶೇಖರ ಭಾಮೆ ಪೂಜಿತ ಕಾಮಿತ ಪ್ರದಸಾಮನೆ ತಾಮಸಾರಿಯ ನೇಮದಿಂದಲಿ ನಾಮನುಡಿಸೊ ಶೀಲನೆ 18 ಸೋಮಕಾಂತಕ ಭಾಮ ರೂಪದಿ ಸೋಮಹಂಚಿದ ಜಾಣನೆ ವಾಮದೇವಗೆ ಭ್ರಮೆಯ ಮಾಡಿದ ಶ್ರೀಮನೋಹರವಾಮನ 19 ಇಂದ್ರಗೊಲಿದ ವೀಂದ್ರವಾಹನ ನಂದಗೋಕುಲ ಚಂದ್ರನೆ ಬಂಧನಪ್ರದ ಬಂಧು ಸರ್ವರ ತಂದೆ ಕಾಯೋ ಬೇಗನೆ 20 ವಿಜಯಸಾರಥಿ ವೃಜಿಜನಾರ್ದನ ಅಜಭವಾದಿ ಪೂಜಿತ ತ್ರಿಜಗವಂದಿತ ಭುಜಗಶಯನನೆ ಅಜಿತ ಶಾಶ್ವತ ವಿಷ್ಣುವೆ 21 ಕಳತ್ರ ಅನೀಕನೆ ವಾಕು ಲಾಲಿಸು ನೂಕುಭವವನು ಏಕರೀತಿಲಿಮೆರೆವನೆ 22 ಜೀವ ಪ್ರೇರಕ ಜೀವಭಾಸರ ಜೀವರಾಶ್ರಯ ಭಿನ್ನನೇ ದೇವದೇವನೆ ಕಾವುದೆಮ್ಮನು ಕೋವಿದಪ್ರಿಯ ಕಪಿಲನೆ 23 ಅನ್ನನಾಮಕ ಅನ್ನದಾಯಕ ಅನ್ನುಉಂಬುವ ಅತಿಥಿಯೆ ಮಾನ್ಯಮಾನದ ಜ್ಞಾನಿಗಮ್ಯನೆ ಬೆನ್ನುಬಿದ್ದೆ ಅನಂತನೆ 24 ಸಾರ ಉಣ್ಣುವ ಗಾರು ಉಣ್ಣದ ಮಾರುತೀಶನೆ ಸ್ವರತನೆ ಧೀರ ಜಯಮುನಿ ವಾಯು ಅಂತರ ಮೆರೆವ ಸಿರಿಪತಿ ಕೃಷ್ಣವಿಠಲನೆ ಬಿಂಬನೆ 25
--------------
ಕೃಷ್ಣವಿಠಲದಾಸರು
ಇಂದಿರೇಶ ಭವಬಂಧನ ಬಿಡಿಸೊ ನಿನ್ನಾನಂದದೊಳಿರಿಸೊ ಪ ಸಿಂಧುಶಯನ ಗೋವಿಂದ ಮುರಾರೆ ಅಚಿಂತ್ಯಾದ್ಭುತ ಶೌರೆ ಅ.ಪ. ತಾಳಲಾರೆನೊ ಈ ತಾಪತ್ರಯ ಹರಿಸೊ ನಿನ್ನವನೆನಿಸೊ ಕಾಲಕರ್ಮ ಕೋಟಲೆ ತಪ್ಪದಲ್ಲ ನೀ ಕೇಳೆನ್ನ ಸೊಲ್ಲ ವಾಕು ಪಾಲಿಸಿ ಎನ್ನನು ಪಾರುಗಾಣಿಸೊ ಫಣಿರಾಜಶಯ್ಯ 1 ಪರಿಪರಿಯಿಂದಲಿ ಜನ್ಮ ಧರಿಸಿ ಕರೆದುತಂದೆ ಈ ಜನ್ಮದಿ ನಿಂದೆ ಅರಿಯದವರಂತಿರುವರೆ ಕಾಯುವ ಕರುಣಿ ನೀನು ದೀನಜನ ಸುರಧೇನು 2 ಅಂಬರ ಮಣಿಯಂತೆ ಬಿಂಬ ಮೊಳಗ್ಹೊಳೆದು ದುರಂತ ಕರ್ಮಂಗಳ ಕಳೆದು ಹಂಬಲಿಸುವ ಭಕುತರ ಬೆಂಬಲಿಗನೆನಿಸಿ ಸಂತತ ನಿನ್ನ ಸುಖಸಿರಿಯ ಸುರಿಸೊ 3 ಬಿಂಬವು ಒಲಿದರೆ ಪ್ರತಿಬಿಂಬ ಫಲಸುವದುಂಟು ಈ ಮಾತು ನಿಘಂಟು ಬಾಂಬೊಳೆ ಹರಿಸಿದ ಹರಿ ಮಾನಿಧಿವಿಠಲ ನೀನಲ್ಲದಿನ್ಯಾರೋ ದೇವರ ದೇವಾ 4
--------------
ಮಹಾನಿಥಿವಿಠಲ
ತಾಮರಸ ಇನ್ನು ಕಾಂಬುವದೆಂದುಪನ್ನಗಾತನ ವಾಹನಾ ಪ ಕಣ್ಣು ಕಾಣದ ಹೀನ ಮಾನವನು ನಾನಾದೆಉನ್ನಂತ ಗುಣ ಪೂರ್ಣ ಕಾಯೋ ಯೆನ್ನ ಅ.ಪ. ಕರಿ ಮಕರಿ ಸೆಣಸ್ಯಾಡಿಹರುಷ ಕುಗ್ಗುತ ಮರುಕದೀ |ಹರಿ ಹರಿ ಹರಿ ಎಂದು | ಕರಿರಾಜ ಮೊರೆಯಿಡಲುತ್ವರದಿಂದ ನೀಯವನ | ಎಡರ ಹರಿಸಿದೆ ದೇವ 1 ಕುರುರಾಜ ಸಭೆಯಲಿ | ತರುಳೆ ದ್ರೌಪದಿ ಸೀರೆಕೌರವಾನುಜ ಸೆಳೆಯಲೂ |ನಾರಿಮಣಿ ನಿಜಪತಿಗಳೈ | ವರಲಿ ಮನ ತಿಳಿದುಹಿರಿಯ ಸಭಿಕರಿಗರುಹಲೂ | ವರ ವೃದ್ಧ ಭೀಷ್ಮಾದಿ |ಬಹುಮಂದಿ ಇರುತ ಕಾಲವ ಕಳೆಯಲು |ಆರಾದರೂ ಬಂದು ಪಾರು ಮಾಡಿದರೇನೊಶೌರಿ ನಿನ್ನನು ಕರೆಯೆ | ಪಾರು ಮಾಡಿದ ದೇವ 2 ಪಾರುಗಾಣಿಸೊ ಎನ್ನ | ಮೂರು ವಿಧ ತಾಪಗಳಮಾರ ಜನಕನೆ ಪ್ರಾರ್ಥಿಪೇ ದೂರ ಮಾಡಿಸೊ ಹರಿಯೆ | ಮೂರು ಗುಣದಿಂದೆನ್ನಬಾರಿ ಬಾರಿಗು ಬೇಡುವೆ |ದುರುಳ ತತ್ವರ ಕಾರ್ಯ | ಕಡೆಗೈಸಿ ಶ್ರೀ ಹರಿಯೆಸುರರ ಸಹಕಾರ ನೀಡೊ |ಗುರುಗಳಂತರ್ಯಾಮಿ | ಗುರು ಗೋವಿಂದ ವಿಠಲನೆಕರುಣದಲಿ ತವ ಚರಣ | ಸರಸಿಜವ ತೋರೋ 3
--------------
ಗುರುಗೋವಿಂದವಿಠಲರು
ನಂಬಿದೆ ನಾನಿನ್ನ ನಾರಾಯಣ ವಿಶ್ವಂಭರ ಮೂರುತಿಯೇ ಕಂಬುಧರ ಕಮಲಾಂಬಕ ಶ್ರೀಹರಿ ಪಾರ್ಥನ ಸಾರಥಿಯೇ ಪ ವಾರಿಜನಾಭನೆ ಪಾರುಗಾಣಿಸೊ ಸಂ- ಮಾರಮಣನೆ ಮೊರೆಹೊಕ್ಕೆ ಲಾಲಿಸೊ ಮುರಹರ ಗೋವಿಂದ 1 ಪುಣ್ಯುಪುರುಷ ಲಾವಣ್ಯ ನಿಧಿಯೆ ಕಾ- ವನಜಾಪ್ತವಂಶ ಚಂದ್ರ 2 ಕಾಮ ಜನಕ ಸುತ್ರಾಮವಿನುತ ಶುಭ- ನಾಮಸುಜನಪ್ರೇಮಿ ತಾಮಸದೂರ ಸುಧಾಮವರದ ಗುರು- ರಾಮವಿಠಲಸ್ವಾಮಿ 3
--------------
ಗುರುರಾಮವಿಠಲ
ಪಾರುಗಾಣಿಸೊ ಎನ್ನ ಪಾವನಕಾಯ ಶ್ರೀ ಗುರು ರಾಘವೇಂದ್ರಾರ್ಯನೇ ಪ. ಶ್ರೀ ರಮಾಪತಿ ಗುಣವ ನೀ ಮನದೊಳು ತಿಳಿಸಿ ಭವ ಬಂಧ ಬಿಡಿಸೋ ಅ.ಪ. ಮಿಂಚಿನಂತಿಹ ಎನ್ನ ಚಂಚಲ ಮನದಲ್ಲಿ ಸಂಚಿತನೆ ಎನೆ ನೆಲಸೋ ಸಂಚಿತಾಗಮಿಗಳು ಕೊಂಚ ಉಳಿಯದ ತೆರದಿ ಪಂಚ ಭೇದಾರ್ಥ ತಿಳಿಸೊ ಪಂಚವಕ್ತ್ರನ ತಾತ ಮಿಂಚಿನಂದದಿ ಪೊಳೆವೊ ಹಂಚಿಕೆಯ ಎನಗೆ ತೋರೋ | ಮನಕ್ಹರುಷ ಬೀರೋ 1 ಶ್ರೀ ನರಹರಿ ಕೃಷ್ಣ ರಾಮ ವ್ಯಾಸರ ಪದವ ನೀ ನಿರ್ಮಲದಲಿ ನೆನೆವೆ ಮಾನನಿಧಿ ಮುರಹರಿಯ ಧಾಮತ್ರಯಗಳ ಮಾರ್ಗ ಕಾಮಿಸಿದ ಭಕ್ತಗೀವೆ ನಾನಧಮೆ ನಿನ್ನಡಿಗೆ ಬಾಗಿ ಭಜಿಸುವೆ ಗುರುವೆ ನೀನಿತ್ತ ನೋಡಿ ಪೊರೆಯೊ | ನೀ ದಯವ ಗರೆಯೊ 2 ತರಳತನದಲಿ ಶ್ರೀ ನರಹರಿಯ ಭಜಿಸುತ್ತ ಉರುತರದಿ ಭಾದೆ ಸಹಿಸಿ ಹರಿಯು ಸರ್ವತ್ರ ವ್ಯಾಪಕನೆಂಬೊ ಮಹಿಮೆಯ ಉರ್ವಿಯೊಳಗೆಲ್ಲ ನೆಲಸಿ ಸಿರಿ ಕೃಷ್ಣನಾ ಭಜಿಸಿ ಮರುತ ಮತವನೆ ಸ್ಥಾಪಿಸಿ | ಗುರುರಾಯನೆನಸಿ 3 ತುಂಗ ತೀರದಿ ನಿಂದು ಮಂಗಳರೂಪದಲಿ ಪಂಗು ಬಧಿರರ ಸಲಹುತ ಸಂಗೀತ ಪ್ರಿಯನೆನಿಸಿ ಶೃಂಗಾರರಾಮನ ಮಂಗಳರೂಪ ಭಜಿಸಿ ಹಿಂಗದೇ ಸುಜನರಿಗೆ ವರವ ಕೊಡುವೊ ಬಿರುದು ರಂಗನಾ ಪದದೊಲುಮೆಯೋ | ನಿನ್ನಯ ಮಹಿಮೆಯೋ 4 ಗೋಪಾಲಕೃಷ್ಣವಿಠ್ಠಲನ ಪರಿಪರಿಯಿಂದ ಪಾದ ಮೌಳಿ ನೋಳ್ಪೆ ಶ್ರೀ ಪತಿಯ ತೋರೆನಗೆ ಪಾಪ ಕಲುಷವ ಕಳದು ತಾಪಪಡಲಾರೆ ಭವದಿ ಕಾಪಾಡುವವರಿಲ್ಲ ನೀ ಕೃಪಾನಿಧಿಯೆಂದು ಪರಿ ಕೇಳ್ದೆ ಗುರುವೆ | ಭಕ್ತರ ಕಲ್ಪ ತರುವೆ5
--------------
ಅಂಬಾಬಾಯಿ
ಸ್ವೀಕರಿಸೈ ಕರುಣಾಕರ ಶ್ರೀವರ ಲೋಕವಂದಿತ ಪ್ರಭುವೆ ಪ ಮಾಕಮಲಾಸನ ನಾಕಪಾಲವಂದ್ಯ ಮಾತುಳಾಂತಕ ಮಧುಸೂದನ ಶ್ರೀಹರಿ ಅ.ಪ ಮಾವು ಮಾದಳ ದ್ರಾಕ್ಷ ಬಾಳೆ ಕಿತ್ತಳೆ ಮೊದಲಾದ ಫಲಗಳೆಲ್ಲ ಮಾಧವ ನೀನಿದನಾರೋಗಣೆ ಮಾಡು ಶ್ರೀ ರಮಣಿಯ ಪ್ರಿಯ ಶ್ರೀನಿವಾಸನೆ ಬೇಗ 1 ನಾನಾ ವಿಧದ ಫಲ ಹಾಲು ಸಕ್ಕರೆ ಬೆಣ್ಣೆ ನಾರಾಯಣ ನಿನಗೆ ಬಾಲೆ ಲಕುಮಿ ಪರಮಾದರದಿಂದಲಿ ಸೇವೆಗೆ ಪರಮಾನ್ನವನರ್ಪಿಸುವಳು2 ತನುವೆಂಬೊ ತಟ್ಟೆಯೊಳಿರಿಸಿ ಫಲವ ನಿ- ರ್ಮಲಮನವೆಂಬ ವಸ್ತ್ರವನ್ಹೊದಿಸಿ ಸನ್ಮತವೆಂಬ ಸಾರಣೆಮಾಡಿ ನಮ್ಮ ಗುರುಕರುಣದ ರಂಗವಲಿಯನ್ಹಾಕುವೆ 3 ನವವಿಧ ಭಕುತಿಯ ನಳನಳಿಸುವ ವೀಳ್ಯ ಚಲುವ ಶ್ರೀ ಹರಿ ನಿನಗೆ ಸವಿನಯ ನುಡಿಗಳ ಮಂತ್ರ ಪುಷ್ಪಗಳು ಸನಕಾದಿವಂದ್ಯ ಸರ್ವೇಶ ಶ್ರೀ ಕೃಷ್ಣ 4 ಕ್ಷೀರ ಸಾಗರವಾಸಿ ಶ್ರೀ ಭೂರಮಣನೆ ಮಾರಜನಕ ಹರಿಯೆ ಕಾರುಣ್ಯಸಾಗರ ಕಮಲನಾಭ ವಿಠ್ಠಲ ಪಾರುಗಾಣಿಸೊ ಭವಸಾಗರದಿಂದಲಿ5
--------------
ನಿಡಗುರುಕಿ ಜೀವೂಬಾಯಿ